11:52 PM (IST) Sep 10

Karnataka News Live:ಇದು ಉಕ್ಕಲಿರುವ ಹಾಲು, ಸಾಂಬಾರ್ ಉಳಿಸಿದ್ದು ಹೌದಾ? ಟಿವಿ ಜಾಹೀರಾತು ಮಹಿಳಾಮಣಿಗಳ ಫ್ರೆಂಡಾ, ದುಶ್ಮನ್ನಾ?

ಎದುರು ಮನೆ, ಪಕ್ಕದ ಮನೆ ಹೆಂಗಸರಲ್ಲಿ ಶೀತಲ ಸಮರ ಶುರುವಾಗಿರುತ್ತದೆ. ಗಂಡ ಮನೆಗೆ ಬರೋದೆ ತಡ, ಮನೆಯಲ್ಲಿ ಟಿವಿ ಸದಾ ಆನ್ ಇರುತ್ತದೆ. ಜಾಹಿರಾತು ಬರುವುದೇ ತಡ, ಹೆಂಡತಿ ದೊಡ್ಡ ದನಿಯಲ್ಲಿ ,ಪಕ್ಕದ ಮನೆ ಪದ್ಮಕ್ಕನ ಮನೆಲ್ಲಿರೋದು ಇದೆ ಫ್ರಿಜ್..ಎದುರುಗಡೆ ಮನೆ ಹೇಮನ ಮನೆಯಲ್ಲಿರೋದು..

Read Full Story
11:21 PM (IST) Sep 10

Karnataka News Live:ದಾವಣಗೆರೆ ಪಾರ್ಕ್‌ನಲ್ಲಿ ಇದ್ದಕ್ಕಿದ್ದಂತೆ ಎದ್ದು ಹೊಡೆದಾಡಿಕೊಂಡ ಜೋಡಿ; ವಿಡಿಯೋ ವೈರಲ್

ದಾವಣಗೆರೆಯ ವಾಟರ್ ಟ್ಯಾಂಕ್ ಪಾರ್ಕ್‌ನಲ್ಲಿ ಯುವಕ-ಯುವತಿಯರ ಜಗಳದ ವಿಡಿಯೋ ವೈರಲ್ ಆಗಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಈ ಜಗಳ ನಡೆದಿದೆ ಎನ್ನಲಾಗಿದ್ದು, ಯುವಕ ಯುವತಿಯ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದ ಎನ್ನಲಾಗಿದೆ. ಪೂರ್ತಿ ಮಾಹಿತಿಗಾಗಿ ವಿಡಿಯೋ ನೋಡಿ.

Read Full Story
10:59 PM (IST) Sep 10

Karnataka News Live:100ಕ್ಕೆ 63 ಜನ ಸರ್ಕಾರಿ ಕಚೇರಿಯಲ್ಲಿ ಲಂಚ ಕೊಡುತ್ತಿದ್ದಾರೆ - ಸಚಿವ ಎಚ್.ಕೆ. ಪಾಟೀಲ್ ಬೇಸರ

ನಮ್ಮ ರಾಜ್ಯ ಎಷ್ಟೇ ಅಭಿವೃದ್ಧಿ ಆಗಿದೆ ಎಂದು ನಾವು ಹೇಳಿಕೊಂಡರೂ, 100ಕ್ಕೆ 63ರಷ್ಟು ಜನ ಸರ್ಕಾರಿ ಕಚೇರಿ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುತ್ತಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ? ಎಂದು ಸಚಿವ ಎಚ್.ಕೆ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.

Read Full Story
10:28 PM (IST) Sep 10

Karnataka News Live:ಗಣೇಶ ವಿಸರ್ಜನೆ ಗಲಾಟೆಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ - ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲ ಕ್ರಮವನ್ನೂ ಸರ್ಕಾರ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

Read Full Story
10:24 PM (IST) Sep 10

Karnataka News Live:ಧರ್ಮಸ್ಥಳ ಬುರುಡೆ ಕೇಸ್ - ಸುಳ್ಳು ಹೇಳೋದ್ರಲ್ಲಿ ಸುಜಾತಾ ಭಟ್ ಮೀರಿಸಿದ ಯೂಟೂಬರ್ ಸುಮಂತ್!

ಧರ್ಮಸ್ಥಳ ಪ್ರಕರಣದಲ್ಲಿ ಯೂಟ್ಯೂಬರ್ ಚಂದನ್ ಗೌಡ ಬುರುಡೆ ಗ್ಯಾಂಗ್‌ನಿಂದ ಹಣ ಪಡೆದಿದ್ದಾನೆ ಎಂದು ಸುಮಂತ್ ಹೇಳಿದ್ದನು. ಆದರೆ, ಇದೀಗ ಚಂದನ್‌ರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಸುಮಂತ್ ಹೇಳಿರುವ ಆಡಿಯೋ ಒಂದು ವೈರಲ್ ಆಗಿದ್ದು, ಇದೀಗ ಧರ್ಮಸ್ಥಳದ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

Read Full Story
10:07 PM (IST) Sep 10

Karnataka News Live:ಗಣೇಶ ಮೆರವಣಿಗೆ ವೇಳೆ ಪ್ರಚೋದಿಸುವವರನ್ನು ದೂರವಿಡಿ - ಸಚಿವ ಚಲುವರಾಯಸ್ವಾಮಿ

ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸಲ್ಮಾನರು ದೂರ ಇರುವುದು ಒಳ್ಳೆಯದು. ಪ್ರಚೋದನೆ ನೀಡುವವರನ್ನೂ ಪೊಲೀಸರಿಗೆ ಹಿಡಿದುಕೊಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

Read Full Story
09:40 PM (IST) Sep 10

Karnataka News Live:ರಾಜ್ಯದಲ್ಲಿ ಔರಂಗಜೇಬ್ ಸರ್ಕಾರ - ಸಿದ್ಧರಾಮಯ್ಯ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ!

ರಾಜ್ಯದಲ್ಲಿ ಔರಂಗಜೇಬ ಸರ್ಕಾರ ಇದ್ದಂತಿದೆ. ಚಿತ್ರದುರ್ಗ ಜಿಲ್ಲೆಯೇನೂ ಪಾಕಿಸ್ತಾನ ಅಲ್ಲ ಎಂದು ಶರಣ್ ಪಂಪ್‌ವೆಲ್‌ಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

Read Full Story
09:32 PM (IST) Sep 10

Karnataka News Live:ಗಣಪತಿ ಹುಂಡಿಯಲ್ಲಿ ಸೌಜನ್ಯಾ ಜಪ! ಧರ್ಮಸ್ಥಳವನ್ನು ಕಾಪಾಡಪ್ಪಾ ಎಂದು ಚೀಟಿ ಬರೆದ ಭಕ್ತರು!

ಚಿಕ್ಕಮಗಳೂರಿನ ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆಯಲ್ಲಿ ಹಣದ ಜೊತೆಗೆ ಸೌಜನ್ಯಾ ಪ್ರಕರಣದ ನ್ಯಾಯ, ಧರ್ಮಸ್ಥಳದ ರಕ್ಷಣೆ ಕುರಿತ ಭಕ್ತರ ಪತ್ರಗಳು ಪತ್ತೆಯಾಗಿವೆ. ಹಲವು ಪತ್ರಗಳ ಬೇಡಿಕೆ ಇಲ್ಲಿವೆ ನೋಡಿ..

Read Full Story
09:15 PM (IST) Sep 10

Karnataka News Live:ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ - ಕಾಂಗ್ರೆಸ್ ತುಷ್ಟಿಕರಣ ರಾಜಕೀಯಕ್ಕೆ ಸಂಸದ ರಾಘವೇಂದ್ರ ಕಿಡಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಸ್ವಚ್ಛಂದವಾಗಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳು ಅತ್ಯಂತ ಆತಂಕಕಾರಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Read Full Story
09:09 PM (IST) Sep 10

Karnataka News Live:ಚಂದ್ರ ಗ್ರಹಣ ವೀಕ್ಷಣೆ ವೇಳೆ ಆಗಸದಲ್ಲಿ ಪತ್ತೆಯಾದ ನಿಗೂಢ ವಸ್ತು, ದಿಕ್ಕು ಬದಲಿಸಿದ ಅಧ್ಯಯನ

ಇತ್ತೀಚೆಗೆ ಘಟಿಸಿದ ರಾಹು ಗ್ರಸ್ಥ ಚಂದ್ರಗ್ರಹಣ ಬಹುತೇಕರು ನೋಡಿದ್ದಾರೆ. ಈ ಚಂದ್ರಗ್ರಹಣವನ್ನು ವಿಜ್ಞಾನಿಗಳು ಟೆಲಿಸ್ಕೋಪ್ ಮೂಲಕ ಅಧ್ಯಯನಕ್ಕಾಗಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆದರೆ ಈ ಗ್ರಹಣದ ವೇಳೆ ಆಗಸದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದೆ.

Read Full Story
08:58 PM (IST) Sep 10

Karnataka News Live:ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರದ ಅಭಯ, ಪೊಲೀಸರಿಗೂ ರಕ್ಷಣೆ ಇಲ್ಲ - ಸಂಸದ ಬೊಮ್ಮಾಯಿ ಆರೋಪ

ಕಳೆದ ಎರಡು ವರ್ಷ ವಾಡಿಗೆಗಿಂತ ಹೆಚ್ಚು ಮಳೆ ಆಗಿದೆ.ರೈತರ ಬೆಳೆ‌ ನಷ್ಟ ವಾಗಿದೆ, ಬಡವರ ಮನೆ ಬಿದ್ದಿವೆ. ಇಷ್ಟೆಲ್ಲಾ ಆದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

Read Full Story
08:58 PM (IST) Sep 10

Karnataka News Live:ಭಾರತದ ಹೊಸ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮಾಸಿಕ ಸಂಬಳವೆಷ್ಟು?

ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15 ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಮಾಸಿಕ ಸಂಬಳ, ಐಷಾರಾಮಿ ನಿವಾಸ, ಭದ್ರತೆ ಸೇರಿದಂತೆ ಹಲವು ಸವಲತ್ತುಗಳು ಲಭ್ಯವಾಗಲಿವೆ. ಹಾಗಾದರೆ, ಉಪರಾಷ್ಟ್ರಪತಿಗೆ ಮಾಸಿಕವಾಗಿ ಎಷ್ಟು ಸಂಬಳ ಇರುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
08:33 PM (IST) Sep 10

Karnataka News Live:ಮದ್ದೂರು ಗಲಾಟೆ - ತಪ್ಪಿತಸ್ಥರಿಗೆ ಯಾವುದೇ ರಕ್ಷಣೆ ಇಲ್ಲ - ಗೃಹ ಸಚಿವ ಪರಮೇಶ್ವರ್

ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಯಾರು ಕಾರಣಕರ್ತರಾಗಿದ್ದಾರೋ, ಯಾರು ತಪ್ಪಿತಸ್ಥರಿದ್ದಾರೋ ಅವರನ್ನು ಯಾವುದೇ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ.

Read Full Story
08:17 PM (IST) Sep 10

Karnataka News Live:ಕರ್ನಾಟಕದಲ್ಲಿ ಶೇ.3 ಅಧಿಕ ಮುಂಗಾರು ಮಳೆ; ಜೂ.1ರಿಂದ ಸೆ.10ರವರೆಗಿನ ಮಳೆ ವರದಿ ಇಲ್ಲಿದೆ ನೋಡಿ!

2025ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು KSNDMC ವರದಿ ಮಾಡಿದೆ. ಜೂನ್ ನಿಂದ ಸೆಪ್ಟೆಂಬರ್ 10ರವರೆಗೆ ವಾಡಿಕೆಯಂತೆ ಮಳೆಯಾಗಿದೆ. ಆಗಸ್ಟ್‌ನಲ್ಲಿ ಹೆಚ್ಚು ಸೆಪ್ಟೆಂಬರ್‌ನಲ್ಲಿ ಕೊರತೆಯಾಗಿದೆ. ಒಟ್ಟಾರೆ ಮಳೆ ಪ್ರಮಾಣವು ಸಾಮಾನ್ಯಕ್ಕಿಂತ ಶೇ.3ರಷ್ಟು ಹೆಚ್ಚಾಗಿದೆ.

Read Full Story
08:13 PM (IST) Sep 10

Karnataka News Live:ಪ್ರತಿ ಬಾರಿ ಆ್ಯಪಲ್ 9.41ಕ್ಕೆ ಐಫೋನ್ ಲಾಂಚ್ ಮಾಡುವುದೇಕೆ? ರಹಸ್ಯ ಬಹಿರಂಗ

ಆ್ಯಪಲ್ ಐಫೋನ್ ಇರಲಿ ಯಾವುದೇ ಉತ್ಪನ್ನ ಇರಲಿ. ಲಾಂಚ್ ಅಥವಾ ಡಿಸ್‌ಪ್ಲೇ ಸಮಯ 9.41. ವರ್ಷ ಅದೆಷ್ಟೇ ಉರುಳಿದರೂ ಈ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಸಮಯದ ಹಿಂದಿನ ರಹಸ್ಯ ಬಯಲಾಗಿದೆ.

Read Full Story
07:34 PM (IST) Sep 10

Karnataka News Live:ಕಾಂಗ್ರೆಸ್ ಸರ್ಕಾರದಿಂದ ಮುಸಲ್ಮಾನ್ ರಾಜ್ಯ ಸ್ಥಾಪನೆ - ಕೆ.ಎಸ್‌.ಈಶ್ವರಪ್ಪ

ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುವುದಾದರೆ ದೇಶ ಬಿಟ್ಟು ತೊಲಗಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದರು.

Read Full Story
07:26 PM (IST) Sep 10

Karnataka News Live:ಅಕ್ಟೋಬರ್‌ನಿಂದ ದೇಶಾದ್ಯಂತ ಮತದಾರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ತಯಾರಿ

ಬಿಹಾರದಲ್ಲಿ ಕೋಲಾಹಲ ಎಬ್ಬಿಸಿದ ಮತದಾರರ ಪಟ್ಟಿ ಪರಿಷ್ಕರಣೆ (SIR) ಇದೀಗ ದೇಶ್ಯಾದ್ಯಂತ ನಡೆಯಲಿದೆ. ಅಕ್ಟೋಬರ್ ತಿಂಗಳಿನಿಂದ ದೇಶದಲ್ಲೇ ನಕಲಿ ಮತದಾರರು ಪಟ್ಟಿಯಿಂದ ಡಿಲೀಟ್ ಆಗಲಿದೆ.

Read Full Story
06:52 PM (IST) Sep 10

Karnataka News Live:ನಟ ಪ್ರಥಮ್‌ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿಗಳಾದ ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಬಂಧನ!

ನಟ ದರ್ಶನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ನಟ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ರೌಡಿಶೀಟರ್ ಬೇಕರಿ ರಘು ಮತ್ತು ಯಶಸ್ವಿನಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಈ ಬಂಧನ ನಡೆದಿದೆ.

Read Full Story
06:47 PM (IST) Sep 10

Karnataka News Live:ಐದು ಖ್ಯಾತ ನಿರ್ದೇಶಕರಿಂದ ‘ದೈವ’ ಚಿತ್ರದ ಟೀಸರ್ ಭರ್ಜರಿ ಲಾಂಚ್ - ಪಕ್ಕಾ ದೇಸಿ ಕಥಾಹಂದರವಂತೆ!

'ದೈವ' ಎಂದ ಕೂಡಲೇ ಇದು ಪೌರಾಣಿಕ ಚಿತ್ರವಲ್ಲ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಒಂದು ಕಮರ್ಷಿಯಲ್ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿದಿರುವ ಈ ಚಿತ್ರ ಈಗ ರೀರೆಕಾರ್ಡಿಂಗ್‌ನಿಂದ ಸಿಂಗಾರಗೊಳ್ಳುತ್ತಿದೆ.

Read Full Story
06:17 PM (IST) Sep 10

Karnataka News Live:ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಸಮರ್ಪಿಸಿದ ಸಂಗೀತ ಮಾಂತ್ರಿಕ ಇಳಯರಾಜ!

ಸಂಗೀತ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ಸಮರ್ಪಿಸಿದ್ದಾರೆ. ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನೂ ಅರ್ಪಿಸಿ, ದೇವಿಯ ಅನುಗ್ರಹದಿಂದ ತಮ್ಮ ಜೀವನದಲ್ಲಿ ನಡೆದ ಪವಾಡಗಳನ್ನು ಸ್ಮರಿಸಿಕೊಂಡರು.

Read Full Story