ಕಳೆದ ಎರಡು ವರ್ಷ ವಾಡಿಗೆಗಿಂತ ಹೆಚ್ಚು ಮಳೆ ಆಗಿದೆ.ರೈತರ ಬೆಳೆ ನಷ್ಟ ವಾಗಿದೆ, ಬಡವರ ಮನೆ ಬಿದ್ದಿವೆ. ಇಷ್ಟೆಲ್ಲಾ ಆದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಹಾವೇರಿ (ಸೆ.10): ಕಳೆದ ಎರಡು ವರ್ಷ ವಾಡಿಗೆಗಿಂತ ಹೆಚ್ಚು ಮಳೆ ಆಗಿದೆ.ರೈತರ ಬೆಳೆ ನಷ್ಟ ವಾಗಿದೆ, ಬಡವರ ಮನೆ ಬಿದ್ದಿವೆ. ಇಷ್ಟೆಲ್ಲಾ ಆದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ನಂತರ ಮಾತನಾಡಿದ ಅವರು, ಮೊನ್ನೆ ಕಾಟಾಚಾರಕ್ಕೆ ಒಂದು ಸಭೆ ಬಿಟ್ಟರೆ ಸಿಎಂ ಸಿದ್ದರಾಮಯ್ಯ ಏನೂ ಮಾಡಿಲ್ಲ. ಬೆಳೆ ನಷ್ಟದ ವ್ಯಾಪ್ತಿ, ಕ್ಷೇತ್ರದ ಬಗ್ಗೆ ಪ್ರಾಥಮಿಕ ಸಮೀಕ್ಷೆ ಸರಿಯಾಗಿ ಮಾಡೇ ಇಲ್ಲ. ಗ್ರಾ.ಪಂ ಮಟ್ಟದಲ್ಲಿ ವಿಲೇಜ್ ಅಕೌಂಟೆಂಟ್ ಸರ್ವೆ ಮಾಡಬೇಕು. ಅರ್ಜಿ ಕೊಟ್ಟಲ್ಲಿ ಮಾತ್ರ ಸರ್ವೆ ಮಾಡಿದ್ದಾರೆ, ವೈಜ್ಞಾನಿಕವಾಗಿ ಬೆಳೆಹಾನಿ ಸರ್ವೆ ಆಗೇ ಇಲ್ಲ ಎಂದರು.
ಹಾವೇರಿ ಜಿಲ್ಲೆಯಲ್ಲಿ 23,536 ಹೆಕ್ಟೇರ್ ಪ್ರದೇಶ ಹಾವೇರಿ ಜಿಲ್ಲೆಯಲ್ಲಿ ನಷ್ಟವಾಗಿದೆ. ಇದಕ್ಕಿಂತ ವ್ಯಾಪಕವಾಗಿ ನಷ್ಟವಾಗಿದೆ. ಕೃಷಿ ಇಲಾಖೆ ರೈತರ ಸಮಸ್ಯೆಗಳಿಗೆ ಸ್ಪಂದಿಸ್ತಿಲ್ಲ. ಮನೆ ಬಿದ್ದ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ನಮ್ ಸರ್ಕಾರ ಮನೆ ಬಿದ್ದರೆ 5 ಲಕ್ಷ ಕೊಡ್ತಾ ಇತ್ತು. ಎನ್‌ಡಿಆರ್‌ಎಫ್ ನಿಯಮದ ಪ್ರಕಾರವೂ ಪರಿಹಾರ ಕೊಟ್ಟಿಲ್ಲ. ಮನೆಗೆ ನೀರು ಹೊಕ್ಕಾಗ 10000 ಕೊಡಬೇಕು, ಇವರು ಕೊಟ್ಟೇ ಇಲ್ಲ. ಕೃಷಿ ಬಗ್ಗೆ ಅತ್ಯಂತ ನಿರ್ಲಕ್ಷ್ಯ ನಿಷ್ಕಾಳಜಿ ವಹಿಸಿದ್ದಾರೆ. ರೈತರಿಗೆ ನಾವು ಕೊಟ್ಟ ಕಾರ್ಯಕ್ರಮ ಬಂದ್ ಮಾಡಿದರು. ಬೀಜ ಗೊಬ್ಬರದ ವಿಚಾರದಲ್ಲಿ ಸಂಪೂರ್ಣವಾಗಿ ಮೋಸ ಮಾಡ್ತಿದಾರೆ.
ರೈತ ವಿರೋಧಿ ನಿಲುವು ತಾಳಿದ್ದಾರೆ. ತಪ್ಪಿತಸ್ಥ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ತಗೊಬೇಕು. ಬರುವ ಸೋಮವಾರ ರೈತರ ಸಮಸ್ಯೆಗಳ ವಿಚಾರವಾಗಿ ಬೃಹತ್ ಪ್ರತಿಭಟನೆ ಮಾಡ್ತೀವಿ ಎಂದರು. ಮದ್ದೂರು ಕಲ್ಲು ತೂರಾಟ ಪ್ರಕರಣ ವಿಚಾರವಾಗಿ ಕಾಂಗ್ರೆಸ್ನವರಿಗೆ ಓಲೈಕೆ ರಾಜಕೀಯ ಬಿಟ್ಟರೆ ಬೇರೆ ಗೊತ್ತಿಲ್ಲ. ಅದೇ ರಸ್ತೆಯಲ್ಲಿ ಈದ್ ಮಿಲಾದ್ ಆಯ್ತು, ಏನೂ ಆಗಲಿಲ್ಲ. ಆದರೆ ನಮಗೆ ವಿದ್ಯುತ್ ಬಂದ್ ಮಾಡಿ ಕಲ್ಲು ತೂರಾಟ ಮಾಡಿದರು. ಗೂಂಡಾಗಳಿಗೆ ಸರ್ಕಾರದ ಅಭಯ ಇದೆ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಆದ ಕೇಸ್ ತಗೆದರು. ಪೊಲೀಸರಿಗೇ ರಕ್ಷಣೆ ಇಲ್ಲ. ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆ.
ಬಿಜೆಪಿಗೂ ಕಲ್ಲು ತೂರಾಟಕ್ಕೆ ಎನ್ ಸಂಬಂಧ? ಕಲ್ಲು ತೂರಿದವರು ಯಾರು? ಪೂರ್ವ ನಿಯೋಜಿತ ಆದರೆ ಅದನ್ನ ಯಾಕೆ ತಡಿಲಿಲ್ಲ. ಜನರ ಸುರಕ್ಷತೆ ಅವರಿಗೆ ಮುಖ್ಯ ಅಲ್ಲ, ಇವರಿಗೆ ರಾಜಕಾರಣವೇ ಮುಖ್ಯ. ಮತಕ್ಕಾಗಿ ಏನ್ ಬೇಕಾದರೂ ಹೇಳ್ತಾರೆ. ಮತಕ್ಕೆ ಏನೂ ಬೇಕಾದರೂ ಮಾಡ್ತಾರೆ. ಓಲೈಕೆ ರಾಜಕಾರಣದ ಮಿತಿ ದಾಟಿದ್ದಾರೆ, ಸಂಗಮೇಶ್‌ಗೆ ಈಗಲೂ ಅವಕಾಶ ಇದೆ. ಅವರು ದಯವಿಟ್ಟು ಮುಸ್ಲಿಂಗೆ ಮತಾಂತರ ಆಗಲಿ ಎಂದು ಹೇಳಿದರು.
ಬಿಜೆಪಿಯವರು ಮನೆಲಿದ್ದರೆ ರಾಜ್ಯ ಶಾಂತವಾಗಿರುತ್ತೆ ಎಂಬ ಸಚಿವ ಮಹದೇವಪ್ಪ ಹೇಳಿಕೆ ವಿಚಾರವಾಗಿ, ಕಾಂಗ್ರೆಸ್‌ನವರು ಮನೆ ಹಿಡಿದರೆ ರಾಜ್ಯ ಅಭಿವೃದ್ಧಿ ಆಗುತ್ತೆ. ಬಿಜೆಪಿಯವರು ಯಾಕೆ ಮನೆಲಿ ಇರಬೇಕು? ಗಣೇಶ ವಿಸರ್ಜನೆ ಡಿಜೆ ಬಗ್ಗೆ ನಾನು ಎಸ್‌ಪಿಡಿಜಿ ಅವರ ಬಳಿ ಮಾತಾಡಿದೆ. ಡಿಜೆಗೆ ಪರ್ಮಿಷನ್ ಕೊಡಲ್ಲ ಅಂತ ಇದೆ, ಅವರೂ ಅದನ್ನೇ ಹೇಳಿದರು. ಸಂವಿಧಾನದಲ್ಲಿ ಎಲ್ಲಾ ಧರ್ಮಗಳಿಗೆ ಅವರವರ ಆಚರಣೆ ಮಾಡಲು ಅವಕಾಶ ಇದೆ. ಆ ಅವಕಾಶ ಯಾಕೆ ಕಸಿದುಕೊಳ್ತೀರಿ? ಈದ್ ಮಿಲಾದ್ ಸಂತೋಷದಿಂದ ಮಾಡಿದ್ದಾರೆ. ಶಿವಾನಂದ ಪಾಟೀಲ್ ಈ ಜಿಲ್ಲೆ ಉಸ್ತುವಾರಿ. ಅವರ ಉಸ್ತುವಾರಿಯಲ್ಲೇ ನಮ್ ಜಿಲ್ಲೆಗೆ ನ್ಯಾಯ ಕೊಡಿಸಲಿ ಎಂದು ಬೊಮ್ಮಾಯಿ ತಿಳಿಸಿದರು.
