ಇತ್ತೀಚೆಗೆ ಘಟಿಸಿದ ರಾಹು ಗ್ರಸ್ಥ ಚಂದ್ರಗ್ರಹಣ ಬಹುತೇಕರು ನೋಡಿದ್ದಾರೆ. ಈ ಚಂದ್ರಗ್ರಹಣವನ್ನು ವಿಜ್ಞಾನಿಗಳು ಟೆಲಿಸ್ಕೋಪ್ ಮೂಲಕ ಅಧ್ಯಯನಕ್ಕಾಗಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆದರೆ ಈ ಗ್ರಹಣದ ವೇಳೆ ಆಗಸದಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿದೆ.
ನವದೆಹಲಿ (ಸೆ.10) ರಕ್ತ ಚಂದ್ರಗ್ರಹಣ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸಂಭವಿಸಿತ್ತು. ರಾಹು ಗ್ರಸ್ತ ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ನೋಡಲು ಸಾಧ್ಯವಾಗಿತ್ತು. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಚಂದ್ರ ಗ್ರಹಣ ವೀಕ್ಷಣೆಗೆ ಉಚಿತ ವ್ಯವಸ್ಥೆ ಮಾಡಲಾಗಿತ್ತು. ವಿಜ್ಞಾನಿಗಳು ಈ ವಿಶೇಷ ಘಳಿಗೆಯನ್ನು ಒಂದು ಕ್ಷಣ ಬಿಡದೇ ಅಧ್ಯಯನ ಮಾಡಿದ್ದಾರೆ. ಟೆಲಿಸ್ಕೋಪ್ ಮೂಲಕ ಸಂಪೂರ್ಣ ಚಂದ್ರಗ್ರಹಣ ವೀಕ್ಷಿಸಿ ಅಧ್ಯಯನ ಮಾಡಿದ್ದಾರೆ. ಹೀಗೆ ಆಗಸದತ್ತ ಟೆಲಿಸ್ಕೋಪ್ ಹಿಡಿದು ಚಂದ್ರಗ್ರಹಣ ವೀಕ್ಷಣೆ ಮಾಡುತ್ತಿದ್ದ ವಿಜ್ಞಾನಿಗಳಿಗೆ ಆಗಸದಲ್ಲಿ ನಿಗೂಢ ಅಂತರ ತಾರ ವಸ್ತುವೊಂದು ಪತ್ತೆಯಾಗಿದೆ. ನೀಲಿ ಹಾಗೂ ಹಸಿರು ಬೆಳಕಿನಿಂದ ಕಂಗೊಳಿಸುತ್ತಿದ್ದ ಪ್ರಕಾಶಮಾನವಾದ ನಕ್ಷತ್ರದ ರೀತಿಯಲ್ಲಿ ಈ ವಸ್ತು ಕಾಣಿಸಿದೆ. ಇದೀಗ ಭಾರಿ ಕುತೂಹಲ ಕೆರಳಿಸಿದೆ.
ನಮೀಬಿಯಾದಲ್ಲಿ ವಿಜ್ಞಾನಿಗಳಾದ ಮೈಕಲ್ ಜಾಗರ್ ಹಾಗೂ ಗೆರಾಲ್ಡ್ ರೆಹಮಾನ್ ಅತ್ಯಾಧುನಿಕ ತಂತ್ರಜ್ಞಾನದ ಟಿಲಿಸ್ಕೋಪ್ ಮೂಲಕ ಚಂದ್ರಗ್ರಹಣ ವೀಕ್ಷಿಸಿದ್ದಾರೆ. ತಮ್ಮ ಅಧ್ಯಯನ ಹಾಗೂ ಆಗಸದ ಕೌತುಕವನ್ನು ಕ್ಷಣ ಕ್ಷಣಕ್ಕೂ ದಾಖಲಿಸಿಕೊಳ್ಳುತ್ತಾ ವೀಕ್ಷಿಸಿದ್ದಾರೆ ಈ ವೇಳೆ ಆಗಸದಲ್ಲಿ ಈ ನಿಗೂಢ ವಸ್ತು ಪತ್ತೆಯಾಗಿದೆ. ಚಂದ್ರಗ್ರಹಣ ಸಮಯದಲ್ಲಿ ಇತರ ಗ್ರಹಗಳು, ನಕ್ಷತ್ರಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾರಣ ಚಂದ್ರನ ಕಿರಣಗಳು ಇಲ್ಲದೇ ಇರುವಾಗ ಆಗಸ ಮತ್ತಷ್ಟು ಕತ್ತಲಲ್ಲಿ ತುಂಬಿರುತ್ತದೆ. ಈ ವೇಳೆ ಆಗಸದ ಪ್ರತಿ ಗ್ರಹ, ನಕ್ಷತ್ರಗಳು ಸ್ಪಷ್ಟವಾಗಿ ಕಾಣುತ್ತದೆ. ಹೀಗೆ ಇಬ್ಬರು ವಿಜ್ಞಾನಿಗಳ ಕಣ್ಣಿಗೆ ಈ ನಿಗೂಢ ವಸ್ತು ಪತ್ತೆಯಾಗಿದೆ.
ಚಂದ್ರ ಗ್ರಹಣದ ವೇಳೆ ಪ್ರಯಾಣ ಮಾಡಬಹುದಾ? ಶಾಸ್ತ್ರ-ವಿಜ್ಞಾನ ಹೇಳುವುದೇನು?
ಆಗಸದಲ್ಲಿ ಪತ್ತೆಯಾದ 3I/ATLAS
ಮೈಕಲ್ ಜಾಗರ್ ಹಾಗೂ ಗೆರಾಲ್ಡ್ ರೆಹಮಾನ್ ತಮ್ಮ ಅಧ್ಯಯನದ ವೇಳೆ ಪತ್ತೆಯಾಗ ನಿಗೂಢ ವಸ್ತುವಿಗೆ 3I/ATLAS ಎಂದು ಹೆಸರಿಟ್ಟಿದ್ದಾರೆ. ಇದು ನೀಲಿ, ಹಸಿರು ಹಾಗೂ ಕೆಂಪು ಬಣ್ಣಗಳಿಂದ ಕಂಗೊಳಿಸುತ್ತಿದ್ದ ಈ ನಿಗೂಢ ವಸ್ತು ಇದೀಗ ಹಲವರ ಗಮನಸೆಳೆದಿದೆ. ಇದುವರೆಗೂ ಪತ್ತೆಯಾದ ಈ ನಿಗೂಢ ವಸ್ತುವಿನ ಅಧ್ಯಯನಗಳು ನಡೆಯುತ್ತಿದೆ.
ಈ ವಿಶೇಷ ಹಾಗೂ ನಿಗೂಢ ವಸ್ತು ಭೂಮಿಯತ್ತ ಚಲಿಸುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಡಿಸೆಂಬರ್ 19, 2025ರ ವೇಳೆಗೆ ಈ ನಿಗೂಢ ವಸ್ತು ಭೂಮಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದಿದ್ದಾರೆ. ಡಿಸೆಂಬರ್ 19ಕ್ಕೆ ಭೂಮಿಯಿಂದ 169 ಮಿಲಿಯನ್ ಮೈಲು ದೂರದಲ್ಲಿ ಈ ನಿಗೂಢ ವಸ್ತು ಕಾಣಿಸಿಕೊಳ್ಳಲಿದೆ ಎಂದಿದ್ದಾರೆ. ಮಂಗಳ ಗ್ರಹಕ್ಕೂ ಭೂಮಿಗೂ ಇರುವ ದೂರದಲ್ಲೇ ಈ ನಿಗೂಢ ವಸ್ತುವಿನ ಅಂತರ ಇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
