ಬಿಹಾರದಲ್ಲಿ ಕೋಲಾಹಲ ಎಬ್ಬಿಸಿದ ಮತದಾರರ ಪಟ್ಟಿ ಪರಿಷ್ಕರಣೆ (SIR) ಇದೀಗ ದೇಶ್ಯಾದ್ಯಂತ ನಡೆಯಲಿದೆ. ಅಕ್ಟೋಬರ್ ತಿಂಗಳಿನಿಂದ ದೇಶದಲ್ಲೇ ನಕಲಿ ಮತದಾರರು ಪಟ್ಟಿಯಿಂದ ಡಿಲೀಟ್ ಆಗಲಿದೆ.

ನವದೆಹಲಿ (ಸೆ.10) ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ತೀವ್ರ ಕೋಲಾಹಲ ಸೃಷ್ಟಿಸಿತ್ತು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಈ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿತ್ತು. ಇತ್ತ ಇತರ ರಾಜ್ಯದಲ್ಲಿ ವಿಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಆಗ್ರಹಿಸಿತ್ತು. ಇದೀಗ ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಅಕ್ಟೋಬರ್ ತಿಂಗಳಿನಿಂದ ದೇಶದ ಪ್ರತಿ ರಾಜ್ಯದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದೆ.

ಸೆಪ್ಟೆಂಬರ್‌ನಲ್ಲಿ ತಯಾರಿ, ಅಕ್ಟೋಬರ್‌ನಲ್ಲಿ SIR

ಕೇಂದ್ರ ಚುನಾವಣಾ ಆಯೋಗ ಈಗಾಗಲೇ ರಾಜ್ಯಗಳ ಚುನಾವಣಾಧಿಕಾರಿಗಳ ಬೇಟಿಯಾಗಿ ರೂಪುರೇಶೆ ಸಿದ್ಧಪಡಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಇಡೀ ದೇಶದ ಮತದಾರ ಪಟ್ಟಿ ಪರಿಷ್ಕರಣೆಗೊಳ್ಳಲಿದೆ. ನಕಲಿ ಮತದಾರರು, ಮೃತಪಟ್ಟ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಹೊಸದಾಗಿ ಸೇರ್ಪಡೆಗಳು ಮಾಡಲಾಗುತ್ತದೆ.

ದೂರು ನೀಡಲು ಸಮಯ

ತಪ್ಪಾಗಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದ್ದರೆ, ಪುನರ್ ಸೇರಿಸಲು ಅವಕಾಶ ನೀಡಲಾಗುತ್ತದೆ. ಈ ಕುರಿತು ದೂರು ನೀಡಲು, ಅರ್ಜಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಸಂಪೂರ್ಣ ತಯಾರಿ ನಡೆಸಿಕೊಂಡಿದೆ.

ಮಹಾ ಚುನಾವಣೇಲಿ ಗೋಲ್ಮಾಲ್ ಎಂದಿದ್ದ ವಿಶ್ಲೇಷಕ ಈಗ ಉಲ್ಟಾ!

ಕೇಂದ್ರ ಚುನಾವಣಾ ಆಯೋಗ ಗ್ಯಾನೇಶ್ ಕುಮಾರ್ ಈ ಕುರಿತು ಸತತ ಸಭೆ ನಡೆಸಿದ್ದಾರೆ. ಗ್ರೌಂಡ್ ತಯಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ಮೂಲಕ ಗ್ಯಾನೇಶ್ ಕುಮಾರ್ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಬಿಹಾರದಲ್ಲಿ ಬಿರುಗಾಳಿ ಎಬ್ಬಿರಿಸಿದ SIR

ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದೆ. ಈ ವೇಳೆ ಕೋಲಾಹಲವೇ ಸೃಷ್ಟಿಯಾಗಿದೆ. ವಿಪಕ್ಷಗಳು ತೀವ್ರವಾಗಿ ನಡೆಯನ್ನು ವಿರೋಧಿಸಿತ್ತು. ಕೇಂದ್ರ ಚುನಾವಣಾ ಆಯೋಗ ಬಿಜೆಪಿಗೆ ನೆರವು ನೀಡುತ್ತಿದೆ. ಬಿಜಿಪಿಗೆ ಬೇಕಾದ ರೀತಿಯಲ್ಲಿ ಪಟ್ಟಿ ಪರಿಷ್ಕರಣೆ ಮಾಡುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ವಿರುದ್ದ ಇರವು ಮತದಾರರನ್ನು ಡಿಲೀಟ್ ಮಾಡಲಾಗಿದೆ ಸೇರಿದಂತೆ ಹಲವು ಆರೋಪಗಳನ್ನು ವಿಪಕ್ಷಗಳು ಮಾಡಿತ್ತು. ಅಕ್ರಮವಾಗಿ ಬೇರೆ ದೇಶಗಳಿಂದ ಬಂದು ಭಾರತದಲ್ಲಿ ನೆಲೆಸಿದವರು ಸೇರಿದಂತೆ ಹಲವರು ಮತದಾರರ ಚೀಟಿ ರದ್ದು ಮಾಡಲಾಗಿದೆ. ಇದೀಗ ಈ ಪರಿಷ್ಕರಣೆ ದೇಶಾದ್ಯಂತ ನಡೆಯಲಿದೆ.

ಕಾಂಗ್ರೆಸ್ ಸೇರಿದಂತೆ ವಿಪಕ್ಷ ಮತ ಕಳ್ಳತನ ಆರೋಪ ಮಾಡಿ ದೊಡ್ಡ ಅಭಿಯಾನ ನಡೆಸುತ್ತಿದೆ. ಬಿಹಾರದಲ್ಲಿ ಮತ ಅಧಿಕಾರ ಯಾತ್ರೆ ಸೇರಿದಂತೆ ಹಲವು ಪ್ರತಿಭಟನೆಗಳು, ಜಾಥಾ ನಡೆಸಲಿದೆ. ಇದರ ನಡುವೆ ಕೇಂದ್ರದ ಪರಿಷ್ಕರಣೆ ನಿರ್ಧಾರ ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾರಣವಾಗಲಿದೆ.