ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಸಂಕಷ್ಟಗಳು ಹೆಚ್ಚಾಗುತ್ತಿದೆ. ದರ್ಶನ್ ಆಪ್ತನೆ ಮಾಫಿ ಸಾಕ್ಷಿಯಾಗಿ ತಿರುಗಿದ್ದಾನೆ. ಇತ್ತ ನಾಳೆ ಸಂಜೆ 4 ಗಂಟೆಗೆ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ.
ಬೆಂಗಳೂರು (ಸೆ.07) ರೇಣುಕಾಸ್ವಾಮಿ ಕೊಲೆ ಕೇಸ್ ನಟ ದರ್ಶನ್ ಪಾಲಿಗೆ ದಿನಂದ ದಿನಕ್ಕೆ ಸಂಕಷ್ಟ ಹೆಚ್ಚಿಸುತ್ತಲೇ ಇದೆ. ಎ14 ಪ್ರದೋಷ್ ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ನಾಳೆ ಸಂಜೆ 4 ಗಂಟೆದೆ ಆದೇಶ ಪ್ರಕಟಿಸಲಿದೆ. ಪ್ರದೋಷ್ ಮಾಫಿ ಸಾಕ್ಷಿ ಅರ್ಜಿಯನ್ನು 59ನೇ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತ್ತು. ನಾಳೆ (ಸೆ.08) ಸಂಜೆ ಆದೇಶ ಪ್ರಕಟಗೊಳ್ಳಳಿದೆ.
ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ಲೋಪ
ನ್ಯಾ.ನಾಗಪ್ರಸನ್ನ ಧಾರವಾಡ ಪೀಠದಿಂದ ಆದೇಶ ಪ್ರಕಟಿಸಲಿದ್ದಾರೆ. ಹೈಕೋರ್ಟ್‌ನಲ್ಲಿ ದರ್ಶನ್ ಪರವಾಗಿ ಹಷ್ಣತ್ ಪಾಷಾ ವಾದ ಮಂಡಿಸಿದ್ದರು. ಮಾಫಿ ಸಾಕ್ಷಿ ಅರ್ಜಿಯನ್ನ ಸೆಷನ್ಸ್ ಕೋರ್ಟ್ ಪರಿಗಣಿಸಿದೆ. ಆದರೆ ಮಾಪಿ ಸಾಕ್ಷಿ ಅರ್ಜಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂದು ಪಾಷಾ ವಾದ ಮಂಡಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿಯಾಗಿರುವ ದರ್ಶನ್ ಆಪ್ತ ಪ್ರದೋಶ್ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಅರ್ಜಿ ಸಲ್ಲಿಸಿದ್ದರು. 59ನೇ ಸಿಸಿಹೆಚ್ ಕೋರ್ಟ್ ಈ ಅರ್ಜಿಯನ್ನು ಪರಿಗಣಿಸಿತ್ತು. ಇಷ್ಟೇ ಅಲ್ಲ ಸೆಪ್ಟೆಂಬರ್ 2 ರಂದು ಕೋರ್ಟ್‌ಗೆ ಹಾದರಾಗಿ ಸಾಕ್ಷಿ ನುಡಿಯಲು ಸಮನ್ಸ್ ಜಾರಿ ಮಾಡಿತ್ತು. ಈ ಮೂಲಕ ಅಪ್ರೂವರ್ ಹೇಳಿಕೆ ದಾಖಲಿಸಲು ಪ್ರದೂಷ್ ಗೆ ಅವಕಾಶ ನೀಡಲಾಗಿತ್ತು.
ಸೆಷನ್ ಕೋರ್ಟ್ ಆದೇಶ ಪ್ರಶ್ಮಿಸಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ
ಪ್ರದೋಷ್ ಮಾಫಿ ಸಾಕ್ಷಿ ವಿಚಾರದಲ್ಲಿ ಸೆಷನ್ ಕೋರ್ಟ್ ಆದೇಶ ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಆದೇಶ ನಾಳೆಗೆ ಕಾಯ್ದಿರಿಸಿದೆ.
ದರ್ಶನ್ ಬೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ
ಕಾನೂನು ಹೋರಾಟದಲ್ಲಿ ಹಿನ್ನಡೆಯಾಗುತ್ತಿರುವ ನಡುವೆ ಪತ್ನಿ ವಿಜಯಲಕ್ಷ್ಮಿ ನಟ ದರ್ಶನ್ ಬೇಟಿ ಮಾಡಿ ಧೈರ್ಯ ತುಂಬಿದ್ದರು. ಪರಪ್ಪನ ಅಗ್ರಹಾರ ಜೈಲಿಗೆ ಬೇಟಿ ನೀಡಿದ ವಿಜಯಲಕ್ಷ್ಮಿ ಆರೋಗ್ಯ ವಿಚಾರಿಸಿ ಕಾನೂನು ಹೋರಾಟದ ಕುರಿತು ಚರ್ಚಿಸಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟ ಝೈದ್ ಖಾನ್ ಆಗಮಿಸಿದ್ದರು. ಹಣ್ಣು ಹಂಪಲು ಮೂಲಕ ಆಗಮಿಸಿದ ಝೈದ್ ಖಾನ್, ಜೈಲಿನಲ್ಲಿ ದರ್ಶನ್ ಬೇಟಿ ಮಾಡಿ ಆರೋಗ್ಯ ವಿಚಾರಿಸಿದರು.


