2029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?

2029ರ ಲೋಕಸಭಾ ಚುನಾವಣೆಯಲ್ಲಿ ಜೆನ್​ ಝೀ ಮತದಾರರೇ ನಿರ್ಣಾಯಕರಾಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ಹೊಸ ಪೀಳಿಗೆಯನ್ನು ಸೆಳೆಯುವುದು ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಾಗಿದ್ದು, ಇವರನ್ನು ಯಾರು ಗೆಲ್ಲುತ್ತಾರೋ ಅವರಿಗೆ ಅಧಿಕಾರ ಸಿಗಲಿದೆ. ತಮಿಳುನಾಡು ಚುನಾವಣೆಯ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿದೆ.

Share this Video
  • FB
  • Linkdin
  • Whatsapp

ಮುಂದಿನ ಲೋಕಸಭಾ ದಂಗಲ್‌ಗೆ ಇನ್ನೂ ಬೇಕಾದಷ್ಟು ಟೈಂ ಇದೆ. ಆದ್ರೆ ಈಗಲೇ 2029ರ ಲೋಕಸಭಾ ಚುನಾವಣೆ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಅದೊಂದು ಅಂಕಿ ಅಂಶ. ಅದ್ರ ಪ್ರಕಾರ ಮುಂದಿನ ಎಲೆಕ್ಷನ್ ವೇಳೆಗೆ ಜೆನ್​ ಝೀಗಳೇ ಕಿಂಗ್ ಮೇಕರ್ಸ್‌ಗಳು. ಯಾರ ಬೆನ್ನ ಹಿಂದೆ ಅವರು ಬಂದು ನಿಲ್ತಾರೋ ಅವರಿಗೇನೆ ಅಧಿಕಾರ. ಆದ್ರೆ ಜೆನ್​ ಝೀಗಳ ಮನಗೆಲ್ಲೋದು ಹೇಗೆ..? ಇದುವೇ ಈಗಿರುವ ರಾಜಕೀಯ ಪಕ್ಷಗಳ ಮುಂದಿರೋ ಮಹಾ ಸವಾಲು. ಹಾಗಿದ್ರೆ ಮುಂದಿನ ಲೋಕ ದಂಗಲ್‌ನಲ್ಲಿ ಜೆನ್​ ಝೀಗಳ ಪಾತ್ರ ಬಹಳ ಮುಖ್ಯವಾಗಿರೋದು ಹೇಗೆ? ಚುನಾವಣಾ ಪ್ರಚಾರದ ಚಿತ್ರಣವನ್ನೇ ಬದಲಿಸಿ ಬಿಡುತ್ತಾ ಈ ಹೊಸ ಜನರೇಷನ್​? ಇಲ್ಲಿ ಸೋಶಿಯಲ್​ ಮೀಡಿಯಾದ ಪಾತ್ರ ಅದೆಷ್ಟು ಮುಖ್ಯವಾಗಿರುತ್ತೆ?

2029ರ ಲೋಕಸಭಾ ಚುನಾವಣೆಯಲ್ಲಿ ಜೆನ್​​ ಝೀಗಳೇ ಕಿಂಗ್ ಮೇಕರ್ಸ್‌ಗಳು ಎನ್ನುವ ಚರ್ಚೆ ಜೋರಾಗಿದೆ. ಇದನ್ನ ಯಾವುದೇ ಕಾರಣಕ್ಕೂ ಅಲ್ಲಗಳೆಯೋಕೆ ಆಗಲ್ಲ. ಯಾಕೆಂದ್ರೆ ಇತ್ತೀಚಿಗೆ ನಡೆದ ತಮಿಳುನಾಡಿನ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸಿಸದ ರೀತಿಯ ಫಲಿತಾಂಶ ಹೊರಬಿದ್ದಿತ್ತು. ಆ ಅಚ್ಚರಿಯ ಫಲಿತಾಂಶದ ಹಿಂದಿದ್ದದ್ದು ಇದೇ ಜೆನ್ ಝೀಗಳು.

Related Video