ದೇಶದಲ್ಲಿ ಅದೆಷ್ಟೋ ಮಂದಿ ಓಲಾ, ಉಬರ್ ಓಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇವರೆಲ್ಲ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನ ಸಂಪಾದಿಸಲ್ಲ. ಬಡ ಜೀವನ ಅಷ್ಟೇ. ಆದರೆ ಅಮೆರಿಕದ ಪರಿಸ್ಥಿತಿ ಹಾಗಿಲ್ಲ.
ದೇಶದಲ್ಲಿ ಕ್ಯಾಬ್, ಆಟೋ ಚಾಲಕರಾಗಿ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡವರಿದ್ದಾರೆ. ಅವರೆಲ್ಲರ ಆದಾಯ ತುಂಬಾ ಕಡಿಮೆ ಇದೆ. ವಾರ್ಷಿಕವಾಗಿ 1.8 ಲಕ್ಷದಿಂದ 3.6 ಲಕ್ಷವರೆಗೆ ಅವರ ಸರಾಸರಿ ಆದಾಯ ಇರುತ್ತದೆ. ಅದನ್ನೇ ತಿಂಗಳಿಗೆ ಲೆಕ್ಕಹಾಕಿದರೆ 15 ಸಾವಿರದಿಂದ 30 ಸಾವಿರದವರೆಗೆ ಸಿಗಬಹುದು. ದಿನಗೂಲಿ ಅಂತಾ ನೋಡೋದಾದ್ರೆ ದಿನಕ್ಕೆ 600 ರೂಪಾಯಿಯಿಂದ 1500 ರೂಪಾಯಿವರೆಗೆ ದುಡಿಯಬಹುದು.
ಆದರೆ ಅಮೆರಿಕದಂಥ ಶ್ರೀಮಂತ ದೇಶಗಳಲ್ಲಿ ಕ್ಯಾಬ್ ಚಾಲಕರ ಸಂಬಳ ದುಪ್ಪಟ್ಟಾಗಿರುತ್ತದೆ. ಅಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುವವರ ಸರಾಸರಿ ವಾರ್ಷಿಕ ವೇತನ 29 ಲಕ್ಷದಿಂದ 46 ಲಕ್ಷ ಇರುತ್ತದೆ. ಗಂಟೆಯ ಆಧಾರದ ಮೇಲೆ ಲೆಕ್ಕ ಹಾಕಿದರೆ ಸರಾಸರಿ ಗಂಟೆಗೆ 1500 ರಿಂದ 2150 ರೂಪಾಯಿ ಸಿಗಲಿದೆ.
ಕೆಲವು ಸಂಸ್ಥೆಗಳ ಮಾಹಿತಿ ಆಧರಿಸಿ ಹೇಳೋದಾದರೆ ಇಂಡೀಡ್ (Indeed) ಪ್ರಕಾರ.. ಅಮೆರಿಕದಲ್ಲಿ ಕಾರು ಡ್ರೈವರ್ ಹಾಗೂ ಡೆಲಿವರಿ ಡ್ರೈವರ್‌ಗಳಿಗೆ ಗಂಟೆಗೆ ಸರಾಸರಿ 1,650 ರಿಂದ 1,900 ರೂಪಾಯಿ ಹಣ ನೀಡಲಾಗುತ್ತದೆ. ಅನುಭವ ಹಾಗೂ ಕೆಲಸ ಮಾಡುವ ನಗರವನ್ನು ಆಧರಿಸಿ ಇದು ವಿಭಿನ್ನವಾಗಿರುತ್ತದೆ.
ಅದೇ ರೀತಿ Talent.com ಮಾಹಿತಿ ಪ್ರಕಾರ.. ಅಲ್ಲಿ ಕಾರು ಚಾಲಕರ ಸರಾಸರಿ ವಾರ್ಷಿಕ ಆದಾಯ 42.5 ಲಕ್ಷ ರೂಪಾಯಿ ಆಗಿದೆ. ಪ್ರಾರಂಭದಲ್ಲಿ 33 ಲಕ್ಷ ರೂಪಾಯಿ ಪಡೆದರೆ ಅನುಭವ ಹೊಂದಿರುವ ಕಾರು ಚಾಲಕರು ವರ್ಷಕ್ಕೆ 66 ಲಕ್ಷಕ್ಕಿಂತ ಹೆಚ್ಚು ಹಣವನ್ನು ಗಳಿಸುತ್ತಾರೆ ಎಂದು ವರದಿಯಾಗಿದೆ. ಯು.ಎಸ್. ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಪ್ರಕಾರ, ಕ್ಯಾಬ್ / ಟ್ಯಾಕ್ಸಿ ಡ್ರೈವರ್‌ಗಳು, ರೈಡ್-ಶೇರಿಂಗ್ (Uber/Lyft) ಹಾಗೂ ಲೈಟ್ ಡೆಲಿವರಿ ವಾಹನ ಚಾಲಕರ ಮಧ್ಯಮ ವೇತನ ವಾರ್ಷಿಕ 31.5 ಲಕ್ಷದಿಂದ ₹37.3 ಲಕ್ಷ.
ಗಳಿಕೆ ಹೇಗಿರುತ್ತದೆ?
Uber / Lyft (ರೈಡ್ ಶೇರಿಂಗ್)ನಲ್ಲಿ ತಿಂಗಳಿಗೆ ₹2.5 ಲಕ್ಷದಿಂದ ₹3.7 ಲಕ್ಷ ಗಳಿಸಬಹುದು. ಇಂಧನ, ಕಾರಿನ ನಿರ್ವಹಣೆ ಮತ್ತು ಇನ್ಶೂರೆನ್ಸ್ ವೆಚ್ಚವನ್ನು ಡ್ರೈವರ್ ಸ್ವತಃ ಭರಿಸಬೇಕಾಗುತ್ತದೆ. ಖಾಸಗಿ/ಪೆರ್ಸನಲ್ ಡ್ರೈವರ್‌ಗಳು ಎಷ್ಟು ಗಳಿಸುತ್ತಾರೆ ಎಂದು ನೋಡೋದಾದ್ರೆ ಉದ್ಯಮಿಗಳು ಅಥವಾ ವಿಐಪಿಗಳಿಗೆ ಕೆಲಸ ಮಾಡುವ ಡ್ರೈವರ್‌ಗಳಿಗೆ ವಾರ್ಷಿಕ ₹41.5 ಲಕ್ಷದಿಂದ ₹62.2 ಲಕ್ಷದವರೆಗೆ ವೇತನ ಸಿಗಲಿದೆ. ಹಾಗೆಯೇ ಟ್ಯಾಕ್ಸಿ ಮತ್ತು ಕ್ಯಾಬ್ ಡ್ರೈವರ್‌ಗಳ ವಾರ್ಷಿಕ ಸರಾಸರಿ ₹29 ಲಕ್ಷದಿಂದ ₹35 ಲಕ್ಷದವರೆಗೆ ಸಿಗಲಿದೆ. ಇನ್ನು ಡೆಲಿವರಿ ಡ್ರೈವರ್‌ಗಳು ಗಂಟೆಗೆ ₹1,570 ರಿಂದ ₹2,070 ರವರೆಗೆ ಗಳಿಸುತ್ತಾರೆ.
ರಾಜ್ಯದಿಂದ ರಾಜ್ಯದಲ್ಲಿ ವಿಭಿನ್ನ ಗಳಿಕೆ
ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಟೆಕ್ಸಾಸ್‌ನಂತಹ ದೊಡ್ಡ ರಾಜ್ಯಗಳಲ್ಲಿ ಒಂದು ಗಂಟೆಗೆ 2,070 ಕ್ಕಿಂತ ಹೆಚ್ಚಿರುತ್ತದೆ. ಇನ್ನೊಂದು ವಿಚಾರ ಏನಂದರೆ ವಾಣಿಜ್ಯ ಬಳಕೆಯ ದೊಡ್ಡ ಟ್ರಕ್ ಡ್ರೈವರ್‌ಗಳಿಗೆ (CDL License) ವಾರ್ಷಿಕ ₹50 ಲಕ್ಷದಿಂದ ₹75 ಲಕ್ಷಕ್ಕೂ ಹೆಚ್ಚು ಸಿಗಲಿದೆ.
ಭಾರತ vs ಅಮೆರಿಕ ವೇತನ ಹೋಲಿಕೆ
| ವಿವರ | ಭಾರತ (India) | ಅಮೆರಿಕ (USA) |
| ಸರಾಸರಿ ಮಾಸಿಕ ಆದಾಯ | ₹15,000 – ₹30,000 | ₹2.5 ಲಕ್ಷ – ₹3.8 ಲಕ್ಷ ($3,000–$4,500) |
| ವಾರ್ಷಿಕ ಆದಾಯ | ₹1.8 ಲಕ್ಷ – ₹3.6 ಲಕ್ಷ | ₹29 ಲಕ್ಷ – ₹46 ಲಕ್ಷ ($35,000–$55,000) |
| ಗಂಟೆಯ ದರ | ₹70 – ₹150/ಗಂಟೆಗೆ | ₹1,500 – ₹2,150/ಗಂಟೆಗೆ |


