ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಸುವೆಂದು ಅದಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬರೋಬ್ಬರಿವ 252 ಮದರಸಗಳಿಗೆ ಬೀಗ ಹಾಕಿದೆ. 100ಕ್ಕೂ ಹೆಚ್ಚು ಮದರಸಗಳಿಗೆ ಶೋಕಾಸ್ ನೋಟಿಸ್ ನೀಡಿದೆ.

ಕೋಲ್ಕತಾ (ಸೆ.13) ಪಶ್ಚಿಮ ಬಂಗಾಳದಲ್ಲಿ ಸುವೆಂದು ಅಧಿಕಾರಿಯ ಬಿಜೆಪಿ ಸರ್ಕಾರ ಹಲವು ಬದಲಾವಣೆ ತಂದಿದೆ. ಆಡಳಿತ, ನಿಯಮ, ಯೋಜನೆ ಸೇರಿದಂತೆ ಹಲವು ರೀತಿಯಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಿದೆ. ಇದೀಗ ಮದರಸಗಳ ಪರಿಶೀಲನೆ ನಡೆಸಿರುವ ಸರ್ಕಾರ ಬರೋಬ್ಬರಿ 252 ಮದರಸಗಳಿಗೆ ಬೀಗ ಜಡಿದಿದೆ. ರಾಜ್ಯದಲ್ಲಿರುವ ಅಧಿಕೃತ ನೋಂದಣಿ ಮದರಸಗಳ ಸರ್ವೆ ವರದಿ ಆಧರಿಸಿ ಮುಖ್ಯಮಂತ್ರಿ ಸುವೆಂದು ಅದಿಕಾರಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ 100ಕ್ಕೂ ಮದರಸಗಳಿಗೆ ಶೋಕಾಸ್ ನೀಟಿಸ್ ಜಾರಿಗೊಳಿಸಿದ್ದಾರೆ.

ಸರ್ವೆ ವರದಿ ಆಧರಿಸಿ ಕ್ರಮ

ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಗಳ ಕುರಿತು ಸಮೀಕ್ಷೆ ನಡೆಸಲು ಸುವೆಂದು ಅದಿಕಾರಿ ಇತ್ತೀಚೆಗೆ ಆದೇಶ ನೀಡಿದ್ದರು. ಇದರಂತೆ ಸದಸ್ಯರ ಸಮಿತಿ ಸರ್ವೆ ನಡೆಸಿದೆ. ನೋಂದಣಿ ಮದರಸಾ, ನೋಂದಣಿ ಇಲ್ಲದ ಮದರಸ, ಮದರಸ ನಡೆಯುವ ರೀತಿ, ಇರಬೇಕಾದ ದಾಖಲೆ ಪತ್ರಗಳು, ಚಟುವಟಿಕೆ ಸೇರಿದಂತೆ ಹಲವು ಆಯಾಮಗಳಲ್ಲಿ ಸರ್ವೆ ನಡೆಸಲಾಗಿತ್ತು. ಈ ಸರ್ವೆಯ ವರದಿ ಬಂದ ಬೆನ್ನಲ್ಲೇ ಇದೀಗ ಸುವೇಂದು ಅಧಿಕಾರಿ ಕ್ರಮ ಕೈಗೊಂಡಿದ್ದಾರೆ.

ಮೊದಲ ಹಂತದಲ್ಲಿ 252 ಮದರಸಗಳನ್ನು ಬಂದ್ ಮಾಡಿಸಲಾಗಿದೆ. ಹಲವು ಮದರಸಗಳು ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇನ್ನು ಅಕ್ರಮ ಚುಟವಟಿಕೆ, ಕಾನೂನು ಬಾಹಿರ ನಡೆಗಳ ಕಾರಣ ಮೊದಲ ಹಂತದಲ್ಲಿ 252 ಮದರಸಗಳನ್ನು ಬಂದ್ ಮಾಡಿಸಲಾಗಿದೆ. ಇದೇ ವೇಳೆ 100ಕ್ಕೂ ಹೆಚ್ಚು ಮದರಸಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ದಾಖಲೆ ಪತ್ರಗಳೊಂದಿಗೆ ಉತ್ತರಿಸಲು ಸೂಚಿಸಿಲಾಗಿದೆ.

ಬಂಗಾಳದಲ್ಲಿರುವ 2396 ಮದರಸಗಳಿಗೆ ನೋಂದಣಿ ಇಲ್ಲ

ಸರ್ವೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಬಯಲಾಗಿದೆ. ಪಶ್ಚಿಮ ಬಂಗಾಳದಲ್ಲಿರುವ 2396 ಮದರಸಗಳಿಗೆ ಯಾವುದೇ ನೋಂದಣಿ ಇಲ್ಲ. ಅಧಿಕೃತವೂ ಅಲ್ಲ. ನೋಂದಣಿಯಾಗಿ, ಸರ್ಕಾರದ ಅಧಿಕೃತ ಇಲಾಖೆಯಿಂದ ಎಲ್ಲಾ ಪರವಾನಗೆ ಪಡೆದು ನಡೆಯುತ್ತಿರುವ ಮದರಸಾಗಳ ಸಂಖ್ಯೆ 2,132 ಎಂದು ಅಧ್ಯಯನ ವರದಿ ಹೇಳಿದೆ.

ಮದರಸಾಗೆ ಬೀಗ, ರಾಜಕೀಯ ಹೋರಾಟ ತೀವ್ರ

ಮದರಸಾಗೆ ಸುವೇಂದು ಅಧಿಕಾರಿ ಬೀಗ ಜಡಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಆರೋಪ ತೀವ್ರಗೊಂಡಿದೆ. ಟಿಎಂಸಿ ಸೇರಿದಂತೆ ಇತರ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಅಲ್ಪಸಂಖ್ಯಾತರ ಮೇಲೆ ಬಿಜೆಪಿ ಸವಾರಿ ಮಾಡುತ್ತಿದೆ ಎಂದು ಆರೋಪಿಸಿದೆ. ಇದೇ ವೇಳೆ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಟಾರ್ಯ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಕ್ರಮ ಚಟುವಟಿಕೆ, ದೇಶ ವಿರೋಧಿಗಳ ತಾಣಗಳನ್ನು ಮುಚ್ಚಲಾಗಿದೆ. ಪರವಾನೆಗೆ ಪಡೆದು ಸರಿಯಾದ ಮಾರ್ಗದಲ್ಲಿರುವ ಮದರಸಾಗಳು ನಡೆಯುತ್ತಿದೆ ಎಂದಿದ್ದಾರೆ.