ಭಾರತಕ್ಕೆ ಅಮೆರಿಕಾ ಅಧ್ಯಕ್ಷರ ಗಿಫ್ಟ್: ಮೂರು ಪ್ರಮುಖ ಒಪ್ಪಂದಕ್ಕೆ ಸಹಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಭಾರತ ಪ್ರವಾಸ ಇಂದು ಕೊನೆಯಾಗಲಿದೆ. ಸೋಮವಾರ ಅಹಮದಾಬಾದ್​ನ ಮೊಟೆರಾ ಸ್ಟೇಡಿಯಂ ಉದ್ಘಾಟನೆ ವೇಳೆ ಭಾರತದೊಂದಿಗೆ ಮಹತ್ವದ ರಕ್ಷಣಾ ಒಪ್ಪಂದದ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದರು. ಅದರಂತೆ ಇಂದು ಒಟ್ಟು 3 ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸಹಿ ಹಾಕಿದ್ದಾರೆ.

ಮದುವೆ ಸಂಭ್ರಮದಲ್ಲಿ ನಿವೇದಿತಾ - ಚಂದನ್; ನವಜೋಡಿಗಳು ಕಂಗೊಳಿಸುತ್ತಿರುವುದು ಹೀಗೆ!


ಬಿಗ್ ಬಾಸ್‌ ಸೀಸನ್‌-5 ಸ್ಪರ್ಧಿಗಳಾದ Rapper ಚಂದನ್‌ ಶೆಟ್ಟಿ ಹಾಗೂ ಸೋಷಿಯಲ್‌ ಮೀಡಿಯಾ ಸ್ಟಾರ್‌ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ  ಕಾಲಿಡಲು ಸಜ್ಜಾಗುತ್ತಿದ್ದಾರೆ.

ಭಾರತದಲ್ಲಿ 2022ರ ಕಾಮನ್ವೆಲ್ತ್‌ ಶೂಟಿಂಗ್‌


2022ರಲ್ಲಿ ಭಾರತ ಕಾಮನ್ವೆಲ್ತ್‌ ಶೂಟಿಂಗ್‌ ಹಾಗೂ ಆರ್ಚರಿ ಚಾಂಪಿಯನ್‌ಶಿಪ್‌ಗಳಿಗೆ ಆತಿಥ್ಯ ವಹಿಸಲಿದೆ ಎಂದು ಸೋಮವಾರ ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್‌) ಘೋಷಿಸಿತು.

17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ 

ಇದೇ ಏಪ್ರಿಲ್‌ನಲ್ಲಿ ಸದಸ್ಯರ ಅವಧಿ ಕೊನೆಗೊಳ್ಳುವ 17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ಆಯೋಗ ಮಂಗಳವಾರ ಚುನಾವಣಾ ದಿನಾಂಕ ಪ್ರಕಟಿಸಿದೆ.

ಪಾಟೀಲ್ ಪುಟ್ಟಪ್ಪನವರು ಆರೋಗ್ಯವಾಗಿದ್ದಾರೆ: ವೈದ್ಯರ ಸ್ಪಷ್ಟನೆ

ಹಿರಿಯ ಸಾಹಿತಿ, ನಾಡೋಜ ಪಾಟೀಲ್ ಪುಟ್ಟಪ್ಪ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಪಾಪುರವರು ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. 

ಕೊನೆಗೂ ಅಳೆದು ತೂಗಿ KPCC ಅಧ್ಯಕ್ಷರ ಆಯ್ಕೆ: ಅಧಿಕೃತ ಘೋಷಣೆಯೊಂದೇ ಬಾಕಿ

ಹಲವು ದಿನಗಳಿಂದ ಕಗ್ಗಂಟಾಗಿ ಉಳಿದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷರನ್ನ ಕೊನೆಗೂ ಫೈನಲ್ ಮಾಡಲಾಗಿದೆ.ಹೈಕಮಾಂಡ್‌ ಅಳೆದು ತೂಗಿ ಕೆಪಿಸಿಸಿ ಅಧ್ಯಕ್ಷರನ್ನ ಆಯ್ಕೆ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಎಲ್ಲ ಗುಲ್ಲುಗಳಿಗೆ ತೆರೆ ಎಳೆದ ಸ್ವೀಟಿ ತಾವೇ ಬಿಚ್ಚಿಟ್ರು ಮದುವೆ ಗುಟ್ಟು!

ಅನುಷ್ಕಾ ಉತ್ತರ ಭಾರತ ಮೂಲದ ಕ್ರಿಕೆಟ್ ಆಟಗಾರನ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ವತಃ ಅನುಷ್ಕಾ ಅವರೇ ಸ್ಪಷ್ಟನೆ  ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟಿಗ ಯೂಸುಫ್‌ಗೆ 7 ವರ್ಷ ನಿಷೇಧ..! 

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಲು ಯತ್ನಿಸಿದ್ದ ಒಮಾನ್‌ನ ಕ್ರಿಕೆಟಿಗ ಯೂಸುಫ್‌ ಅಬ್ದುಲ್‌ ರಹೀಂರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) 7 ವರ್ಷಗಳ ಕಾಲ ನಿಷೇಧಿಸಿದೆ. 

ವಾಟ್ಸಾಪ್ ದೂರು ನೋಡಿ ಪರಿಶೀಲನೆಗೆ ಬಂದ ಸಚಿವರು..!

ಹಲವು ಸಾರಿ ಹಿಂದೆ ಅಲೆದು ಮನವಿ ಸಲ್ಲಿಸಿದರೂ ಕ್ಯಾರೇ ಅನ್ನದವರ ಮಧ್ಯೆಯೇ ವಾಟ್ಸಾಪ್ ಮೆಸೇಜ್ ನೋಡು ಪರಿಶೀಲನೆಗೆ ಬಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ.

ಗ್ರಾಹಕರೇ ಗಮನಿಸಿ, ಚಿನ್ನದ ದರದಲ್ಲಿ ಭಾರೀ ಬದಲಾವಣೆ!

ಚಿನ್ನದ ದರ ಗಗನಮುಖಿಯಾಗಿದ್ದು, ಸೋಮವಾರ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಮ್‌ಗೆ 4,388 ರು. ತಲುಪಿದೆ!