Asianet Suvarna News Asianet Suvarna News

17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ

17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದೆ. ಮಂಗಳವಾರ ಕೇಂದ್ರ ಚುನಾವಣೆ ಆಯೋಗ ಚುನಾವಣೆ ಡೇಟ್‌ ಫಿಕ್ಸ್ ಮಾಡಿದೆ. ಈ ಬಗ್ಗೆ ಇನ್ನಷ್ಟು ವಿವರ ಈ ಕೆಳಗಿನಂತಿದೆ.

Rajya Sabha elections for 55 seats on March 26
Author
Bengaluru, First Published Feb 25, 2020, 2:53 PM IST

ನವದೆಹಲಿ, (ಫೆ.25):ಇದೇ ಏಪ್ರಿಲ್‌ನಲ್ಲಿ ಸದಸ್ಯರ ಅವಧಿ ಕೊನೆಗೊಳ್ಳುವ 17 ರಾಜ್ಯಗಳ 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ಆಯೋಗ ಮಂಗಳವಾರ ಚುನಾವಣಾ ದಿನಾಂಕ ಪ್ರಕಟಿಸಿದೆ.

ಎಲ್ಲ 55 ಸ್ಥಾನಗಳಿಗೆ ಮಾರ್ಚ್ 26 ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣೆಗೆ ಮಾರ್ಚ್ 6 ರಂದು ಆಯೋಗ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಮಾರ್ಚ್ 13ರಂದು ಕೊನೆಯ ದಿನಾಂಕವಾಗಿದೆ.

ರಾಜ್ಯಸಭೆ ಬಾವಿಗೆ ಇಳಿವವರಿಗೆ ಮತ ಹಕ್ಕು ಬೇಡ: ಶಿಫಾರಸು

ಮಾರ್ಚ್ 16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 18 ರಂದು ಕೊನೆಯ ದಿನಾಂಕವಾಗಿದೆ.ಇನ್ನು ಚುನಾವಣೆ ನಡೆದ ದಿನವೇ ಸಂಜೆ 5 ಗಂಟೆಯಿಂದ ಮತದಾನ ಎಣಿಕೆ ಆರಂಭವಾಗಲಿದೆ.

ಏಪ್ರಿಲ್ 2 ಕ್ಕೆ ಮಹಾರಾಷ್ಟ್ರದಲ್ಲಿ 7, ಒಡಿಶಾದಲ್ಲಿ 4, ತಮಿಳುನಾಡಿನಲ್ಲಿ 6 ಮತ್ತು ಪಶ್ಚಿಮ ಬಂಗಾಳದಲ್ಲಿ 5 ಸ್ಥಾನಗಳು ತೆರವಾಗಲಿವೆ.

ಆಂಧ್ರಪ್ರದೇಶ ಮತ್ತು ಗುಜರಾತ್‌ನಲ್ಲಿ ತಲಾ 4 ಸ್ಥಾನಗಳು, ತೆಲಂಗಾಣ, ಹರಿಯಾಣ, ಜಾರ್ಖಂಡ್ ಮತ್ತು ಚತ್ತೀಸ್‌ಗಢದಲ್ಲಿ ತಲಾ 2, ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ತಲಾ 3, ಬಿಹಾರದಲ್ಲಿ 5 ಹಾಗೂ ಮಣಿಪುರ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ 1 ಸ್ಥಾನಗಳ ಅವಧಿ ಏಪ್ರಿಲ್ 9 ಕ್ಕೆ ಕೊನೆಗೊಳ್ಳಲಿದೆ.  ಇನ್ನು ಮೇಘಾಲಯದಲ್ಲಿ 1ಸ್ಥಾನದ ಅವಧಿ ಏಪ್ರಿಲ್ 12 ರಂದು ಕೊನೆಗೊಳ್ಳಲಿದೆ.

Follow Us:
Download App:
  • android
  • ios