ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪದಡಿ ಕ್ರಿಕೆಟಿಗನಿಗೆ ಐಸಿಸಿ 7 ವರ್ಷಗಳ ನಿಷೇಧ ಹೇರಿದೆ. ಯಾರು ಆ ಆಟಗಾರ? ಯಾವ ದೇಶದವ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ದುಬೈ(ಫೆ.25): ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಲು ಯತ್ನಿಸಿದ್ದ ಒಮಾನ್‌ನ ಕ್ರಿಕೆಟಿಗ ಯೂಸುಫ್‌ ಅಬ್ದುಲ್‌ ರಹೀಂರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) 7 ವರ್ಷಗಳ ಕಾಲ ನಿಷೇಧಿಸಿದೆ. 

Scroll to load tweet…

ಕ್ರಿಕೆಟ್‌ ಎನ್ನುವ ಜಂಟಲ್‌ಮನ್ ಕ್ರೀಡೆಗೆ ಕಳಂಕ ತಂದು ಮಣ್ಣು ತಿನ್ನುವ ಕೆಲಸ ಮಾಡಿದ ಆಟಗಾರನಿಗೆ ಐಸಿಸಿ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಫಿಕ್ಸಿಂಗ್‌ ನಡೆಸಲು ಯತ್ನಿಸಿದ್ದಾಗಿ ಯೂಸುಫ್‌ ತಪ್ಪೊಪ್ಪಿಕೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ. 

Scroll to load tweet…

3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್‌ ಕ್ರಿಕೆಟಿಗರ ಹನಿಟ್ರ್ಯಾಪ್‌!

2019ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಅರ್ಹತಾ ಟೂರ್ನಿ ವೇಳೆ ಯೂಸುಫ್‌ ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿದ್ದರು. ಜತೆಗೆ ಇತರ ಆಟಗಾರರನ್ನು ಭ್ರಷ್ಟಾಚಾರದಲ್ಲಿ ತೊಡಗುವಂತೆ ಪ್ರಚೋದಿಸಿದ್ದರು ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.