ಶೂಟಿಂಗ್‌ ಕ್ರೀಡೆಯನ್ನು ಕಾಮನ್ವೆಲ್ತ್‌ ಕ್ರೀಡಾಕೂಟದಿಂದ ಕೈಬಿಟ್ಟ ಕಾರಣ ಇದೀಗ 2022ರಲ್ಲಿ ಶೂಟಿಂಗ್‌ ಹಾಗೂ ಆರ್ಚರಿ ಚಾಂಪಿಯನ್‌ಶಿಪ್‌ಗಳಿಗೆ ಭಾರತ ಆತಿಥ್ಯ ವಹಿಸಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಲಂಡನ್‌(ಫೆ.25): 2022ರಲ್ಲಿ ಭಾರತ ಕಾಮನ್ವೆಲ್ತ್‌ ಶೂಟಿಂಗ್‌ ಹಾಗೂ ಆರ್ಚರಿ ಚಾಂಪಿಯನ್‌ಶಿಪ್‌ಗಳಿಗೆ ಆತಿಥ್ಯ ವಹಿಸಲಿದೆ ಎಂದು ಸೋಮವಾರ ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್‌) ಘೋಷಿಸಿತು. 

2022ರಲ್ಲಿ ಭಾರತದಲ್ಲಿ ಕಾಮನ್ವೆಲ್ತ್‌ ಶೂಟಿಂಗ್‌?

ಈ ಎರಡು ಕೂಟಗಳಲ್ಲಿ ಸ್ಪರ್ಧಿಗಳು ಗಳಿಸುವ ಪದಕಗಳನ್ನು, 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಕ್ರೀಡಾಕೂಟದ ಪದಕ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸಿಜಿಎಫ್‌ ಸ್ಪಷ್ಟಪಡಿಸಿತು. ಆದರೆ ಕ್ರೀಡಾಕೂಟ ಮುಕ್ತಾಯಗೊಂಡ ಒಂದು ವಾರದ ಬಳಿಕ, ಪರಿಷ್ಕೃತ ಪದಕ ಪಟ್ಟಿಪ್ರಕಟಿಸಲಾಗುತ್ತದೆ ಎಂದು ಸಿಜಿಎಫ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಕಾಮನ್‌ವೆಲ್ತ್‌ಗೆ ಬಹಿಷ್ಕಾರ: ಐಒಎಗೆ ಹಿನ್ನಡೆ!

ಶೂಟಿಂಗ್‌ ಕ್ರೀಡೆಯನ್ನು ಕಾಮನ್ವೆಲ್ತ್‌ ಕ್ರೀಡಾಕೂಟದಿಂದ ಕೈಬಿಟ್ಟ ಕಾರಣ, ಕ್ರೀಡಾಕೂಟವನ್ನು ಬಹಿಷ್ಕರಿಸುವುದಾಗಿ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಎಚ್ಚರಿಸಿತ್ತು. ಭಾರತದ ಒತ್ತಡಕ್ಕೆ ಮಣಿದ ಸಿಜಿಎಫ್‌, ಪ್ರತ್ಯೇಕ ಕೂಟಗಳನ್ನು ನಡೆಸಿ ಪದಕಗಳನ್ನು ಕಾಮನ್ವೆಲ್ತ್‌ ಕ್ರೀಡಾಕೂಟದ ಪದಕ ಪಟ್ಟಿಗೆ ಸೇರಿಸಲು ಒಪ್ಪಿದೆ.