ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಾಲಿವುಡ್ ಗಣ್ಯರು ಶುಭಾಶಯ ಕೋರಿದ್ದಾರೆ. ಇದೇ ವೇಳೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯು 20 ಶಾಲೆಗಳನ್ನು ಸುಧಾರಿಸುವ ಪ್ರತಿಜ್ಞೆ ಮಾಡುವ ಮೂಲಕ ವಿಭಿನ್ನವಾಗಿ ಉಡುಗೊರೆ ನೀಡಿದ್ದಾರೆ. ಶಾರುಖ್, ಸಲ್ಮಾನ್, ಕಂಗನಾ ಮತ್ತು ಹೇಮಾ ಮಾಲಿನಿ ಕೂಡ ಪ್ರಧಾನಿಗೆ ಶುಭ ಹಾರೈಸಿದ್ದಾರೆ.

ನಿನ್ನೆ ಅರ್ಥಾತ್​ ಸೆಪ್ಟೆಂಬರ್ 17ರಂದು ಇಡೀ ದೇಶವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಿತು. ದೇಶ-ವಿದೇಶಗಳಿಂದ ಗಣ್ಯರು ಶುಭಾಶಯ ಕೋರಿದರು. ಬಾಲಿವುಡ್ ಸೆಲೆಬ್ರಿಟಿಗಳು ಸಹ ಇದರಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿ ಕಾರ್ಯಕರ್ತರು ವಿವಿಧ ರೀತಿಯಲ್ಲಿ ಈ ದಿನವನ್ನು ಆಚರಿಸಿದರು. ಆದರೆ ಎಲ್ಲಕ್ಕಿಂತಲೂ ಭಿನ್ನ ಎನ್ನಿಸುವಂಥ ಕಾರ್ಯ ಒಂದನ್ನು ಕಾಡುವ ಮೂಲಕ ತಾರಾ ಜೋಡಿ, ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್​, ಶ್ಲಾಘನೆಗೆ ಅರ್ಹರಾಗಿದ್ದಾರೆ. ಈ ಜೋಡಿ, 20 ಶಾಲೆಗಳನ್ನು ಸುಧಾರಿಸುವುದಾಗಿ ಪ್ರತಿಜ್ಞೆ ಮಾಡುವ ಮೂಲಕ ಸೇವಾ ಸಂಕಲ್ಪ್ ಅಭಿಯಾನಕ್ಕೆ ಬೆಂಬಲ ನೀಡಿದರು. ಈ ಮೂಲಕ ಪ್ರಧಾನಿ ಹುಟ್ಟುಹಬ್ಬಕ್ಕೆ ವಿಭಿನ್ನ ರೀತಿಯ ಗಿಫ್ಟ್​ ನೀಡಿದರು.

ಇದೇ ವೇಳೆ, ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಸಂದೇಶವನ್ನು ಹಂಚಿಕೊಂಡ ಆಲಿಯಾ, "ನಮ್ಮ ಗೌರವಾನ್ವಿತ ಪ್ರಧಾನಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು! ಮುಂಬರುವ ವರ್ಷವು ಆರೋಗ್ಯ ಮತ್ತು ಸಂತೋಷದಿಂದ ತುಂಬಿರಲಿ. ಸೇವಾ ಸಂಕಲ್ಪ ಅಭಿಯಾನದ ಮನೋಭಾವವು ಸಾಮೂಹಿಕ ಪ್ರಯತ್ನ ಮತ್ತು ಸಮಾಜಕ್ಕೆ ಮರಳಿ ನೀಡುವ ಅದ್ಭುತ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಈ ದಿನವನ್ನು ಆಚರಿಸಲು ಮತ್ತು ಈ ಉದಾತ್ತ ಉದ್ದೇಶವನ್ನು ಬೆಂಬಲಿಸಲು, ರಣಬೀರ್ ಮತ್ತು ನಾನು 20 ಶಾಲೆಗಳನ್ನು ಸುಧಾರಿಸಲು ಪ್ರತಿಜ್ಞೆ ಮಾಡುತ್ತಿದ್ದೇವೆ, ನಮ್ಮ ಮಕ್ಕಳು ಕಲಿಯಲು ಮತ್ತು ಅಭಿವೃದ್ಧಿ ಹೊಂದಲು ಉತ್ತಮ ಮತ್ತು ಹೆಚ್ಚು ಸುಸಜ್ಜಿತ ಸ್ಥಳಗಳನ್ನು ರಚಿಸುತ್ತೇವೆ." ಇದನ್ನು ಆರಂಭದಲ್ಲಿ BMC ಯ ಉಪಕ್ರಮದ ಮೇಲೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಆಲಿಯಾ ಜೊತೆಗೆ, ಇತರ ಹಲವಾರು ಸೆಲೆಬ್ರಿಟಿಗಳು ಸಹ ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ಅವರನ್ನು ಅಭಿನಂದಿಸಿದರು. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ 76 ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಗುರುವಾರ, ಸಲ್ಮಾನ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ, "ಜನ್ಮದಿನದ ಶುಭಾಶಯಗಳು, ಗೌರವಾನ್ವಿತ ಪ್ರಧಾನಿ ಸರ್. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು, ನರೇಂದ್ರ ಭಾಯಿ ಮೋದಿ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

ಶಾರುಖ್​, ಸಲ್ಮಾನ್​ ಹಾರೈಕೆ

ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರಧಾನಿ ಅವರನ್ನು "ಗೌರವಾನ್ವಿತ ಪ್ರಧಾನಿ" ಎಂದು ಸಂಬೋಧಿಸುತ್ತಾ, ಅವರಿಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಜೀವನದಲ್ಲಿ ಯಶಸ್ಸನ್ನು ಹಾರೈಸಿದರು. ಶಾರುಖ್ ಖಾನ್ ಇನ್ಸ್ಟಾಗ್ರಾಮ್ ನಲ್ಲಿ "ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇನ್ನೂ ಹಲವು ವರ್ಷಗಳ ಕಾಲ ಉತ್ತಮ ಆರೋಗ್ಯ, ಸಂತೋಷ ಮತ್ತು ತೃಪ್ತಿಗಾಗಿ. ನಿಮ್ಮ ಶಕ್ತಿ ಮತ್ತು ಸಕಾರಾತ್ಮಕತೆಯಿಂದ ನೀವು ಯಾವಾಗಲೂ ರಾಷ್ಟ್ರವನ್ನು ಪ್ರೇರೇಪಿಸಲಿ" ಎಂದು ಬರೆದಿದ್ದಾರೆ.

ವಿವಿಧ ಸೆಲೆಬ್ರಿಟಿಗಳಿಗೆ ಶುಭಾಶಯ

ಏತನ್ಮಧ್ಯೆ, ಸಂಸದೆ ಮತ್ತು ನಟಿ ಕಂಗನಾ ರಣಾವತ್​ ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದು "ಆಶೀರ್ವಾದ ದೀಪ" ಬೆಳಗಿಸುವುದಾಗಿ ಮತ್ತು ಅವರಿಗೆ ಆರೋಗ್ಯಕರ, ದೀರ್ಘ ಮತ್ತು ಶಕ್ತಿಯುತ ಜೀವನವನ್ನು ಹಾರೈಸುವುದಾಗಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ಪ್ರಧಾನ ಮಂತ್ರಿಯವರ 25 ವರ್ಷಗಳ ರಾಷ್ಟ್ರ ಸೇವೆಯನ್ನು ಉಲ್ಲೇಖಿಸಿದ ಕಂಗನಾ ರಣಾವತ್​, "ಸೇವಾ ಸಂಕಲ್ಪ ಅಭಿಯಾನ"ದ ಮೂಲಕ ದೇಶಾದ್ಯಂತ ಸೇವೆ ಮತ್ತು ಸಾರ್ವಜನಿಕ ಕಲ್ಯಾಣದ ಸಂದೇಶವನ್ನು ಹರಡುವಂತೆ ಮನವಿ ಮಾಡಿದರು.

ನಟಿ ಮತ್ತು ಸಂಸದೆ ಹೇಮಾ ಮಾಲಿನಿ ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ತಮ್ಮ ಕ್ಷೇತ್ರವಾದ ಮಥುರಾದ ಜನರು ಮತ್ತು ಇಡೀ ದೇಶದ ಜನರು ಪ್ರಧಾನಿಯವರಿಗೆ ದೀರ್ಘಾಯುಷ್ಯ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ಹಾರೈಸುತ್ತಾರೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿಯವರ ನಾಯಕತ್ವ ಮತ್ತು ದೇಶಕ್ಕಾಗಿ ಅವರು ಮಾಡಿದ ಕೆಲಸವನ್ನು ಉಲ್ಲೇಖಿಸಿ ಹೇಮಾ ಮಾಲಿನಿ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದರು.