- Home
- News
- India News
- India News Live: Breaking News - ಡ್ರಗ್ಸ್ ಸಮೇತ ಯುವ ನಟಿ, ಸಹ ನಿರ್ದೇಶಕಿ ಸೇರಿ 8 ಮಂದಿ ಅರೆಸ್ಟ್
India News Live: Breaking News - ಡ್ರಗ್ಸ್ ಸಮೇತ ಯುವ ನಟಿ, ಸಹ ನಿರ್ದೇಶಕಿ ಸೇರಿ 8 ಮಂದಿ ಅರೆಸ್ಟ್

ನವದೆಹಲಿ (ಫೆ.5): ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.ಆದರೆ ಘಟನೆ ನಡೆದಾಗ ಮೋದಿ ಸ್ಥಳದಲ್ಲಿ ಹಾಜರಿರದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಲಾಪವನ್ನೇ ಗುರುವಾರಕ್ಕೆ ಮುಂದೂಡಲಾಯಿತು. ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 5th February: Breaking News - ಡ್ರಗ್ಸ್ ಸಮೇತ ಯುವ ನಟಿ, ಸಹ ನಿರ್ದೇಶಕಿ ಸೇರಿ 8 ಮಂದಿ ಅರೆಸ್ಟ್
India News Live 5th February: ಮುಂಬೈ ವಿವಿ ಆಹ್ವಾನ ರದ್ದತಿಗೆ 'ವಿಶ್ವಗುರು' ಕಾರಣ - ನಟ ನಾಸಿರುದ್ದೀನ್ ಶಾ ಕಿಡಿ
India News Live 5th February: ನವ ವಿವಾಹಿತನ ಹಿಟ್& ರನ್ ಪ್ರಕರಣಕ್ಕೆ ಟ್ವಿಸ್ಟ್ - ಬಾಯ್‌ಫ್ರೆಂಡ್ ಜೊತೆ ಸೇರಿ ಗಂಡನ ಕತೆ ಮುಗಿಸಿದ ಹೆಂಡ್ತಿ
ರಾಜಸ್ಥಾನದಲ್ಲಿ, ಹಿಟ್ & ರನ್‌ನಂತೆ ಕಂಡುಬಂದ ನವವಿವಾಹಿತ ಅಶೀಶ್ ಸಾವಿನ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ಪೊಲೀಸರ ತನಿಖೆಯು ಇದು ಅಪಘಾತವಲ್ಲ, ಬದಲಿಗೆ ಆತನ ಪತ್ನಿ ಅಂಜು ತನ್ನ ಪ್ರಿಯಕರ ಸಂಜು ಮತ್ತು ಇತರರೊಂದಿಗೆ ಸೇರಿ ಮಾಡಿದ ಪೂರ್ವನಿಯೋಜಿತ ಕೊಲೆ ಎಂದು ಬಹಿರಂಗಪಡಿಸಿದೆ.
India News Live 5th February: ಅಕ್ರಮ ವಲಸಿಗರ ರಕ್ಷಣೆಗೆ ಮಮತಾ ಬ್ಯಾನರ್ಜಿ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ - ಪ್ರಧಾನಿ ಮೋದಿ
ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಅವರು ಆರೋಪಿಸಿದರು.
India News Live 5th February: ಬೆಂಗಳೂರಿನಲ್ಲಿ 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರದ ಅಪ್ಪ ಮಗನ ಬಂಧನ
24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ಕುಖ್ಯಾತ ಅಪ್ಪ-ಮಗನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಿಹಾರದ ಸ್ಪೆಷಲ್ ಟಾಸ್ಕ್ ಫೋರ್ಸ್, ಬೆಂಗಳೂರು ಪೊಲೀಸರ ಸಹಕಾರದೊಂದಿಗೆ, ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಮಣಿಕ್ ಸಿಂಗ್ ಮತ್ತು ಮನೋಜ್ ಸಿಂಗ್ ಅವರನ್ನು ಸೆರೆಹಿಡಿದಿದೆ.
India News Live 5th February: U19 World Cup - ಪಾಕಿಸ್ತಾನದ 19 ವರ್ಷಗಳ ಹಳೆಯ ದಾಖಲೆ ಧೂಳೀಪಟ ಮಾಡಿದ ಭಾರತ!
ಅಂಡರ್-19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಪಾಕಿಸ್ತಾನ ಹೆಸರಲ್ಲಿದ್ದ ದಾಖಲೆ ಮುರಿದಿದೆ.
India News Live 5th February: ಕೋವಿಡ್ನಲ್ಲಿ ಕೆಲಸ ಕಳಕೊಂಡ, ತನ್ನ ಪ್ರತಿಕೃತಿ ಮಾರಿ 9 ಸಾವಿರ ಕೋಟಿಯ ಒಡೆಯನಾದ ಇನ್ಫ್ಲುಯೆನ್ಸರ್!
India News Live 5th February: ತಮಗೆಯೇ ಗೊತ್ತಿಲ್ಲದೇ ಇಂದಿರಾ ಗಾಂಧಿಯನ್ನು ಫಾಲೋ ಮಾಡ್ತಿದ್ದಾರೆ ಬಿಜೆಪಿಯ ಕಂಗನಾ ರಣಾವತ್
India News Live 5th February: T20 World Cup 2026 - ಭಾರತದ ವಿರುದ್ಧ ಒಂದಾದ ಪಾಕ್-ಬಾಂಗ್ಲಾ; ನಮ್ಮ ಪರ ನಿಂತಿದ್ದಕ್ಕೆ ಥ್ಯಾಂಕ್ಸ್ ಎಂದ ಬಾಂಗ್ಲಾ!
India News Live 5th February: ಇಂದು ಭಾರತ ವಿಶ್ವದ ವಿಶ್ವಾಸ ಗಳಿಸಿರುವ ದೇಶವಾಗಿದೆ - ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
ರಾಷ್ಟ್ರಪತಿ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಆರ್ಥಿಕ ಶಕ್ತಿ, ಯುವ ಸಮುದಾಯದ ಬಲ ಮತ್ತು ಜಾಗತಿಕ ವಿಶ್ವಾಸದ ಬಗ್ಗೆ ವಿವರಿಸಿದರು. ಕಾಂಗ್ರೆಸ್ ಆಳ್ವಿಕೆಯ ತಪ್ಪುಗಳನ್ನು ಟೀಕಿಸಿದ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು.
India News Live 5th February: Thyroid Cancer - ದೇಹ ನೀಡುವ ಈ ಮುನ್ಸೂಚನೆಗಳನ್ನು ಕಡೆಗಣಿಸಬೇಡಿ
ಥೈರಾಯ್ಡ್ ಕೋಶಗಳ ಅನಿಯಂತ್ರಿತ ಬೆಳವಣಿಗೆಯೇ ಥೈರಾಯ್ಡ್ ಕ್ಯಾನ್ಸರ್. ಆರಂಭದಲ್ಲಿ, ಥೈರಾಯ್ಡ್ ಕ್ಯಾನ್ಸರ್ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರಬಹುದು ಹೀಗಿದ್ದರು ಈ ಕಾಯಿಲೆಯನ್ನು ಗುರುತಿಸುವುದು ಹೇಗೆ?
India News Live 5th February: ಪರ ಪುರುಷನ ಜೊತೆ ಮಲಗಿದ್ರೆ ಮಾತ್ರ ಮನೆಯೊಳಗೆ ಪ್ರವೇಶ - ದೂರಿನಲ್ಲಿ ಮಹಿಳೆ ಶಾಕಿಂಗ್ ವಿಷ್ಯ ಬಯಲು
India News Live 5th February: ಫೆ. 7 ರಂದು Ola, Uber, Rapido ಮುಷ್ಕರ - 6 ಗಂಟೆ ಸಿಗಲ್ಲ ವಾಹನ, ಚಾಲಕರ ಬೇಡಿಕೆಗಳು ಏನು?
India News Live 5th February: ಸರಾಯಿ ಅಂಗಡಿ ವಿರುದ್ಧ ರೊಚ್ಚಿಗೆದ್ದು ರಸ್ತೆಯಲ್ಲೇ ಮದ್ಯದ ಹೊಳೆ ಹರಿಸಿದ ನಾರಿಯರು - 15 ಲಕ್ಷ ಮೌಲ್ಯದ ಮದ್ಯ ಉಡೀಸ್
ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ, ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪುರುಷರಿಂದ ಬೇಸತ್ತ ನೂರಾರು ಮಹಿಳೆಯರು ಮದ್ಯದಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 15 ಲಕ್ಷ ಮೌಲ್ಯದ ಮದ್ಯವನ್ನು ರಸ್ತೆಗೆಸೆದು ನಾಶಪಡಿಸಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.
India News Live 5th February: ತಿರುವನಂತಪುರ ಬೇಕರಿಗೆ ಬಂದು ಚಿಪ್ಸ್ ತೆಗೆದುಕೊಂಡು ಹೋದ Ajit Doval, ಬಂದಿದ್ದು, ಹೋಗಿದ್ದು ಯಾರಿಗೂ ಗೊತ್ತೇ ಆಗ್ಲಿಲ್ಲ!
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಿರುವನಂತಪುರಂಗೆ ರಹಸ್ಯ ಭೇಟಿ ನೀಡಿದ್ದರು. ಈ ವೇಳೆ, ಅವರು ಸ್ಥಳೀಯ ಬೇಕರಿಯೊಂದರಲ್ಲಿ ಚಿಪ್ಸ್ ಖರೀದಿಸಿದ್ದಾರೆ. ಮಫ್ತಿಯಲ್ಲಿದ್ದ ಭದ್ರತಾ ಸಿಬ್ಬಂದಿ ಜೊತೆ ಸಾಮಾನ್ಯರಂತೆ ಬಂದ ದೋವಲ್, ಅಂಗಡಿಯಿಂದ ವಾಪಸ್ ಹೋಗುವ ವಿಡಿಯೋ ಈಗ ವೈರಲ್ ಆಗಿದೆ.
India News Live 5th February: ರವಿಚಂದ್ರನ್ ಯುಗಪುರುಷ ಸಿನಿಮಾ ಸ್ಟೈಲ್‌ನಲ್ಲಿ ಗಂಡನನ್ನು ಆಕ್ಸಿಡೆಂಟ್ ಮಾಡಿ ಕೊಂದ ಹೆಂಡ್ತಿ!
Rajasthan Honeymoon Murder: Wife Kills Husband with Boyfriend Help ಮೂರು ತಿಂಗಳ ಹಿಂದೆಯಷ್ಟೇ ಅಂಜು ಹಾಗೂ ಆಶಿಶ್ ಮದುವೆಯಾಗಿದ್ದರು. ಆದರ, ಮದುವೆಯ ಬಗ್ಗೆ ಅಂಜುಗೆ ಅತೃಪ್ತಿ ಇತ್ತು. ಕೆಲವೇ ದಿನದಲ್ಲಿ ಆಕೆ ತವರು ಮನೆಗೆ ವಾಪಸಾಗಿದ್ದರು ಎನ್ನಲಾಗಿದೆ.
India News Live 5th February: ಹೋಟೆಲ್ ರೂಮ್ ಕ್ಲೀನ್‌ರಿಗೆ ಕಂಡಿದ್ದು ಕಾಂಡೋಮ್ ರಾಶಿ; 1 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
ಹೋಟೆಲ್ ಒಂದರ ವಿಡಿಯೋ ವೈರಲ್ ಆಗಿದ್ದು, ಗ್ರಾಹಕರು ಖಾಲಿ ಮಾಡಿದ ಕೋಣೆಯ ಅವ್ಯವಸ್ಥೆಯನ್ನು ಹೌಸ್ ಕೀಪಿಂಗ್ ಸಿಬ್ಬಂದಿ ತೋರಿಸಿದ್ದಾರೆ. ಕೋಣೆಯಲ್ಲಿ ಊಟದ ಡಬ್ಬಗಳು, ಸಿಗರೇಟ್ ತುಂಡುಗಳ ಜೊತೆಗೆ ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
India News Live 5th February: ತನ್ನಿಂದ ಜನಿಸಿದವಳನ್ನೇ ಗರ್ಭಿಣಿ ಮಾಡಿದ ಪಾಪಿ - ಅತ್ಯಾ*ಚಾರವೆಸಗಿದ್ದು ಒಬ್ಬರು ಇಬ್ಬರು ಅಲ್ಲ - DNA ಟೆಸ್ಟ್ ನಡೆಸಿದಾಗ ಆಘಾತ
ಮುಂಬೈನಲ್ಲಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 20 ವರ್ಷದ ಯುವತಿಯ ಮೇಲೆ ಹಲವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆಕೆ ಐದು ತಿಂಗಳ ಗರ್ಭಿಣಿಯಾದ ನಂತರ ಘೋರ ಕೃತ್ಯ ಬೆಳಕಿಗೆ ಬಂದಿದ್ದು, ಡಿಎನ್‌ಎ ಪರೀಕ್ಷೆ ವರದಿ ನೋಡಿ ಕುಟುಂಬದವರು ಆಘಾತಕ್ಕೀಡಾಗಿದ್ದಾರೆ.
India News Live 5th February: ಕಂಪ್ಯೂಟ್ ಮತ್ತು ಅದರ ಅತೃಪ್ತಿಗಳು - ಕಾರ್ನೆಗಿ ಇಂಡಿಯಾದ ಜಾಗತಿಕ ತಂತ್ರಜ್ಞಾನ ಶೃಂಗಸಭೆ ಇನ್ನೋವೇಶನ್ ಡೈಲಾಗ್ ಪಾಠಗಳು
ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ AI ಅಭಿವೃದ್ಧಿಯ ಭವಿಷ್ಯದ ಕುರಿತು ಚರ್ಚಿಸಲಾಯಿತು. ಸಾರ್ವಭೌಮ ಕಂಪ್ಯೂಟ್ ಸಾಮರ್ಥ್ಯದ ಅಗತ್ಯತೆ, ಬಾಹ್ಯ ಅವಲಂಬನೆಯ ಅಪಾಯಗಳು, ಮತ್ತು AI ಮಾದರಿಗಳು ಸಾಂಸ್ಕೃತಿಕ ಮೌಲ್ಯಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬ ಪ್ರಮುಖ ವಿಷಯಗಳ ಮೇಲೆ ಈ ಚರ್ಚೆ ಬೆಳಕು ಚೆಲ್ಲಿದೆ.
India News Live 5th February: ದುಬೈನಲ್ಲಿ ಜನರಿಗೆ ಟ್ಯಾಕ್ಸ್ ಹೇಗಿದೆ? ಭಾರತದ ತೆರಿಗೆ ಬಗ್ಗೆ ಚರ್ಚೆಗೆ ಕಾರಣವಾಯ್ತು ಯುವಕನ ಪೋಸ್ಟ್
ಭಾರತ ಮತ್ತು ದುಬೈನಲ್ಲಿನ ತೆರಿಗೆ ವ್ಯವಸ್ಥೆ ಮತ್ತು ಜೀವನಶೈಲಿಯನ್ನು ಹೋಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದೆ. ಭಾರತದಲ್ಲಿ ಶೇ. 30ರಷ್ಟು ತೆರಿಗೆ ಪಾವತಿಸಿದರೂ ಕಳಪೆ ಸೌಲಭ್ಯಗಳು ಸಿಗುತ್ತಿವೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.