ಫೆ. 7 ರಂದು Ola, Uber, Rapido ಮುಷ್ಕರ: 6 ಗಂಟೆ ಸಿಗಲ್ಲ ವಾಹನ, ಚಾಲಕರ ಬೇಡಿಕೆಗಳು ಏನು?
ಫೆಬ್ರವರಿ 7 ರಂದು, ಓಲಾ, ಉಬರ್ ಮತ್ತು ರಾಪಿಡೋ ಚಾಲಕರು ಮುಷ್ಕರ ನಡೆಸಲಿದ್ದಾರೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ, ಕನಿಷ್ಠ ದರ ನಿಗದಿ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ.

ಓಲಾ, ಉಬರ್ ಮತ್ತು ರಾಪಿಡೋ ಮುಷ್ಕರ
ಇದೇ ಫೆಬ್ರವರಿ 7ರಂದು ಓಲಾ, ಉಬರ್ ಮತ್ತು ರಾಪಿಡೋದಂತಹ ಕ್ಯಾಬ್, ಬೈಕ್ ಮತ್ತು ಆಟೋ ಸರ್ವಿಸ್ ಅಪ್ಲಿಕೇಶ್‌ನಗಳ ಮೂಲಕ ಕೆಲಸ ಮಾಡುವ ಚಾಲಕರು ಪ್ರತಿಭಟೆನೆಗ ಮುಂದಾಗಿದ್ದಾರೆ. ಶನಿವಾರದಂದು ಮುಷ್ಕರಕ್ಕೆ ಕರೆ ನೀಡಿರುವ ಪರಿಣಾಮ ಆಪ್ ಆಧರಿಸಿತ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟ ಈ ಮುಷ್ಕರವನ್ನು ಮುನ್ನಡೆಸಲಿದ್ದು, ಫೆಬ್ರವರಿ 7 ರಂದು ಆರು ಗಂಟೆಗಳ ಕಾಲ ಚಾಲಕರ ಆಪ್‌ನಿಂದ ಆಫ್‌ಲೈನ್ ಆಗಲಿದ್ದಾರೆ
ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು
ದೇಶಾದ್ಯಂತ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು ಕನಿಷ್ಠ ದರ ಅಧಿಸೂಚನೆಯತ್ತ ಸರ್ಕಾರದ ಗಮನ ಸೆಳೆಯಲು ಈ ಮುಷ್ಕರವನ್ನು ನಡೆಸಲಾಗುತ್ತಿದೆ. ಈ ಹಿಂದೆ ಆಹಾರ ವಿತರಣಾ ಮತ್ತು ತ್ವರಿತ ವಾಣಿಜ್ಯ ಕಾರ್ಮಿಕರ ಇದೇ ರೀತಿಯ ಪ್ರತಿಭಟನೆ ನಡೆಸಿದ್ದರು. ಡಿಸೆಂಬರ್‌ನಲ್ಲಿ ಜೊಮಾಟೊ, ಬ್ಲಿಂಕಿಟ್, ಜೆಪ್ಟೊ, ಇನ್‌ಸ್ಟಾಮಾರ್ಟ್ ಮತ್ತು ಸ್ವಿಗ್ಗಿ ಅಂತಹ ಆಪ್ ಆಧರಿತ ಗಿಗ್ ವರ್ಕರ್ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.
ಚಾಲಕರಿಂದ ಪ್ರತಿಭಟನೆ ಯಾಕೆ?
ನಿಯಮಗಳ ಪ್ರಕಾರ, 2025 ರ ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳ ಪ್ರಕಾರ ದರ ನಿಗದಿ ಮಾಡಬೇಕಾಗುತ್ತದೆ. ಆದ್ರೆ ಆಪ್‌ಗಳು ಮನಸೋಯಿಚ್ಛೆ ದರಗಳನ್ನು ನಿಗದಿಪಡಿಸುತ್ತವೆ. ಅಷ್ಟೆಲ್ಲಾ ಈ ಮುಷ್ಕರದ ಮೂಲಕ ಚಾಲಕರು ಎದುರಿಸುತ್ತಿರುವ ಇತರೆ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಲು ಮುಂದಾಗಿದ್ದಾರೆ.
ಚಾಲಕರ ಬೇಡಿಕೆಗಳು ಏನು?
- ತಮ್ಮ ಒಕ್ಕೂಟಗಳೊಂದಿಗೆ ಚರ್ಚಿಸಿ ಸಮಾಲೋಚಿಸಿದ ನಂತರವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ದರ ನಿಗದಿಪಡಿಸಬೇಕು.
- ವಾಣಿಜ್ಯ ಬಳಕೆಗಾಗಿ ಖಾಸಗಿ ವಾಹನಗಳ ದುರುಪಯೋಗ ಕೊನೆಗೊಳಿಸವಂತೆ ಒತ್ತಾಯ
- ಆಪ್‌ಗಳ ದರ ಏರಿಕೆ ತಮ್ಮ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
- ಇಂಧನ, ನಿರ್ವಹಣೆ ಸೇರಿದಂತೆ ಇತರೆ ವೆಚ್ಚಗಳ ಏರಿಕೆಯ ನಿಯಂತ್ರಣ
- ಕಾರ್ಮಿಕರ ಸುರಕ್ಷತೆ ಮತ್ತು ನ್ಯಾಯಯುತ ಆದಾಯ
ಇದನ್ನೂ ಓದಿ: ಸರಾಯಿ ಅಂಗಡಿ ವಿರುದ್ಧ ರೊಚ್ಚಿಗೆದ್ದು ರಸ್ತೆಯಲ್ಲೇ ಮದ್ಯದ ಹೊಳೆ ಹರಿಸಿದ ನಾರಿಯರು: 15 ಲಕ್ಷ ಮೌಲ್ಯದ ಮದ್ಯ ಉಡೀಸ್
ಭಾರತದಲ್ಲಿ ಗಿಗ್ ಆರ್ಥಿಕತೆ
2025-26 ರ ಆರ್ಥಿಕ ಸಮೀಕ್ಷೆ ಪ್ರಕಾರ, ಭಾರತದದಲ್ಲಿ ಗಿಗ್ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಆದ್ರೆ ಆದಾಯ ಹೆಚ್ಚು ಅಸ್ಥಿರವಾಗಿದೆ. 2021 ರ ಆರ್ಥಿಕ ವರ್ಷದಲ್ಲಿ ಗಿಗ್ ಕೆಲಸಗಾರರ ಸಂಖ್ಯೆ 7.7 ಮಿಲಿಯನ್ ಆಗಿತ್ತು. ಭವಿಷ್ಯದಲ್ಲಿ ಈ ಸಂಖ್ಯೆ ಶೇ.55ರಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಶೇಕಡಾ 40 ರಷ್ಟು ಗಿಗ್ ಕೆಲಸಗಾರರು ತಿಂಗಳಿಗೆ ₹15,000 ಕ್ಕಿಂತ ಆದಾಯ ಹೊಂದಿದ್ದಾರೆ. ಆದಾಯದ ಏರಿಳಿತದ ಗಮನಾರ್ಹ ಸಮಸ್ಯೆಯನ್ನು 2025-26 ರ ಆರ್ಥಿಕ ಸಮೀಕ್ಷೆ ಹೇಳಿದೆ.
ಇದನ್ನೂ ಓದಿ: ಇನ್ನು ಪ್ರಯಾಣಿಕರಿಗೆ ಇರಲ್ಲ 'ಸರ್ಜ್ ಪ್ರೈಸ್' ಕಾಟ; ಇಂದು ಆರಂಭವಾಗಲಿರುವ ಭಾರತ್ ಟ್ಯಾಕ್ಸಿಯಲ್ಲಿ ಸಾರಥಿಯೇ ಮಾಲೀಕ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

