ಹೋಟೆಲ್ ರೂಮ್ ಕ್ಲೀನ್‌ರಿಗೆ ಕಂಡಿದ್ದು ಕಾಂಡೋಮ್ ರಾಶಿ; 1 ಮಿಲಿಯನ್ ವ್ಯೂವ್ ಪಡೆದ ವಿಡಿಯೋ
ಹೋಟೆಲ್ ಒಂದರ ವಿಡಿಯೋ ವೈರಲ್ ಆಗಿದ್ದು, ಗ್ರಾಹಕರು ಖಾಲಿ ಮಾಡಿದ ಕೋಣೆಯ ಅವ್ಯವಸ್ಥೆಯನ್ನು ಹೌಸ್ ಕೀಪಿಂಗ್ ಸಿಬ್ಬಂದಿ ತೋರಿಸಿದ್ದಾರೆ. ಕೋಣೆಯಲ್ಲಿ ಊಟದ ಡಬ್ಬಗಳು, ಸಿಗರೇಟ್ ತುಂಡುಗಳ ಜೊತೆಗೆ ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೋಟೆಲ್ ರೂಮ್
ಗೊತ್ತಿಲ್ಲದ ಊರಿಗೆ ಹೋದಾಗ ಜನರು ಉಳಿದುಕೊಳ್ಳಲು ಹೋಟೆಲ್ ರೂಮ್‌ಗಳನ್ನು ಬುಕ್ ಮಾಡಿಕೊಳ್ಳುತ್ತಾರೆ. ಪ್ರವಾಸಿ ಸ್ಥಳ ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಪ್ರವಾಸಿಗರಿಗಾಗಿಯೇ ಹಲವು ಹೋಟೆಲ್‌ಗಳಿರುತ್ತವೆ. ಗ್ರಾಹಕರು ರೂಮ್ ಖಾಲಿ ಮಾಡಿದ ತಕ್ಷಣವೇ ಅಲ್ಲಿಯ ಸಿಬ್ಬಂದಿ ಆ ಕೋಣೆಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ.
ಅಸ್ತವ್ಯಸ್ಥವಾದ ಕೋಣೆ
ಗ್ರಾಹಕರು ಖಾಲಿ ಮಾಡಿದ ನಂತರ ಅಸ್ತವ್ಯಸ್ಥವಾದ ಕೋಣೆಯನ್ನು ಸ್ವಚ್ಛಗೊಳಿಸಿ, ನಂತರ ಹಾಸಿಗೆ-ಹೊದಿಕೆ-ದಿಂಬು ಸೇರಿದಂತೆ ಬಳಕೆಯಾದ ಎಲ್ಲಾ ವಸ್ತುಗಳನ್ನು ಬದಲಿಸುವ ಕೆಲಸ ನಡೆಯುತ್ತದೆ. ಬಿಹಾರದ ಪಾಟ್ನಾ ನಗರದಲ್ಲಿನ ಹೋಟೆಲ್‌ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌಸ್ ಕೀಪಿಂಗ್ ಸಿಬ್ಬಂದಿ, ಗ್ರಾಹಕರು ಕೋಣೆಯನ್ನು ಹೇಗೆಲ್ಲಾ ಅವ್ಯವಸ್ಥೆ ಮಾಡಿರುತ್ತಾರೆ ಎಂಬುದನ್ನು ತೋರಿಸಿದ್ದಾರೆ.
ಹೋಟೆಲ್ ಸಿಬ್ಬಂದಿ
ಹೋಟೆಲ್ ಸಿಬ್ಬಂದಿ ಕೋಣೆಯ ಬಾಗಿಲು ತೆಗೆಯುತ್ತಿದ್ದಂತೆ ಅಲ್ಲಿಯ ದೃಶ್ಯವನ್ನು ಮೊಬೈಲ್ ಕ್ಯಾಮೆರಾ ಮೂಲಕ ತೋರಿಸುತ್ತಾರೆ. ಊಟ ಮಾಡಿದ ಡಬ್ಬಗಳೆಲ್ಲವೂ ಟೇಬಲ್ ಮೇಲೆಯೇ ಇರುತ್ತವೆ. ಸಿಗರೇಟ್ ಮತ್ತು ಬೆಂಕಿ ಕಡ್ಡಿ ತುಂಡುಗಳು ಅಲ್ಲಲ್ಲಿ ಬಿದ್ದಿರೋದನ್ನು ನೋಡಬಹುದು.
ನೀವೇ ಕಲ್ಪನೆ ಮಾಡಿಕೊಳ್ಳಿ
ಮುಂದುವರಿದು ಬೆಡ್ ಕೆಳಗೆ ನಾಲ್ಕೈದು ಕಾಂಡೋಮ್ ಪಾಕೆಟ್‌ಗಳು ಬಿದ್ದಿರೋದನ್ನು ತೋರಿಸುತ್ತಾರೆ. ನಂತರ ಮಂಚದ ಮತ್ತೊಂದು ಬದಿಗೆ ಹೋದಾಗ ಅಲ್ಲಿ ಬಳಕೆಯಾದ ಕಾಂಡೋಮ್ ಇರೋದನ್ನು ತೋರಿಸುವ ಸಿಬ್ಬಂದಿ, ಇಲ್ಲಿ ಏನು ನಡೆದಿದೆ ಎಂಬುದನ್ನು ನೀವೇ ಕಲ್ಪನೆ ಮಾಡಿಕೊಳ್ಳಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಒಂದು ವರ್ಷದಲ್ಲಿ ಮಾರಾಟವಾಗುವ ಮಹಿಳಾ ಕಾಂಡೋಮ್ ಸಂಖ್ಯೆ ಎಷ್ಟು?
10 ಲಕ್ಷಕ್ಕೂ ಅಧಿಕ ವ್ಯೂವ್
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ರೆ, 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿವೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಜೋಡಿಗಳು ಎಂಜಾಯ್ ಮಾಡಿದ್ದಾರೆ. ಇಂದು ಇಂತಹ ಸನ್ನಿವೇಶಗಳು ಸಾಮಾನ್ಯ ಎಂದಿದ್ದಾರೆ. ಈ ವಿಡಿಯೋವನ್ನು hotel__patna ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಕಾಂಡೋಮ್ ಇಲ್ಲದೇ ಸಂಪರ್ಕ ನಡೆಸಿದ್ರೂ ಆಗಲ್ಲ ಪ್ರೆಗ್ನೆಂಟ್; ಪುರುಷರಿಗಾಗಿ ಬರ್ತಿದೆ ಹೊಸ ಔಷಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

