ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತೀಯ ಮಹಿಳಾ ತಂಡ, 3ನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ತಂಡದ ಅಗ್ರ ಆಟಗಾರ್ತಿಯರ ಭರ್ಜರಿ ಫಾರ್ಮ್ ನಲ್ಲಿರುವ ಸ್ಪಿನ್ನರ್ ವೈಷ್ಣವಿ ಶರ್ಮಾ ಉತ್ತಮ ಪ್ರದರ್ಶನವು ಮುಂಬರುವ ವಿಶ್ವಕಪ್ ತಯಾರಿಗೆ ಬಲ ತುಂಬಿದೆ.
India News Live: ಮಹಿಳಾ ಟಿ20 - ಸರಣಿ ಜಯದ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!

ನವದೆಹಲಿ (ಡಿ.26): ದೀಪು ಚಂದ್ರದಾಸ್ ಎಂಬ ಹಿಂದು ವ್ಯಕ್ತಿಯನ್ನು ಹ*ತ್ಯೆಗೈದು, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಭೀಕರ ಘಟನೆ ಮಾಸುವ ಮುನ್ನವೇ ಬಾಂಗ್ಲಾದೇಶ ದಲ್ಲಿ ಮತ್ತೊಬ್ಬ ಹಿಂದು ಯುವಕನನ್ನು ಗುಂಪೊಂ ದು ಹತ್ಯೆಗೈದಿದೆ. ಮೃತ ವ್ಯಕ್ತಿಯನ್ನು ಅಮೃತ್ ಮಂಡಲ್ ಗುರುತಿಸಲಾಗಿದೆ. ಕಳೆದ 5 ದಿನಗಳಲ್ಲಿ ಮೂರು ಕಡೆ 7 ಹಿಂದುಗಳ ಮನೆಗೆ ಬೆಂಕಿ ಹಾಕಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 26th December:ಮಹಿಳಾ ಟಿ20 - ಸರಣಿ ಜಯದ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!
India News Live 26th December:ವಿಜಯ್ ಹಜಾರೆ ಟೂರ್ನಿ - ಕೇರಳ ಎದುರು ಕರ್ನಾಟಕಕ್ಕೆ 2ನೇ ಜಯದ ಗುರಿ!
India News Live 26th December:ರಾಗಾ-ವೈಷ್ಣವ್ ಉದ್ಯೋಗ ಸೃಷ್ಟಿ ‘ಕ್ರೆಡಿಟ್ ವಾರ್’
ಫಾಕ್ಸ್‌ಕಾನ್ ಐಫೋನ್ ಘಟಕ 8 ತಿಂಗಳಲ್ಲಿ 30 ಸಾವಿರ ನೌಕರರ ನೇಮಿಸಿಕೊಂಡಿದೆ. ಇದು ಕಾಂಗ್ರೆಸ್ ಸರ್ಕಾರದ ಶ್ರಮದ ಫಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಗಳಿದ್ದಾರೆ. ಆದರೆ ಇದು ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಶ್ರಮದ ಫಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿರುಗೇಟು ನೀಡಿದ್ದಾರೆ.
India News Live 26th December:ಅರುಣಾಚಲದ ಮೇಲೆ ಚೀನಾ ಕಣ್ಣು : ಅಮೆರಿಕ
ತೈವಾನ್‌ನಂತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವಾಗಿಸಿಕೊಳ್ಳುವುದನ್ನು ಪ್ರಮುಖ ಆಸಕ್ತಿಗಳಲ್ಲೊಂದು ಎಂದು ಪರಿಗಣಿಸಿರುವುದಾಗಿ ಅಮೆರಿಕದ ವರದಿ ಹೇಳಿದೆ. ‘ತೈವಾನ್, ದಕ್ಷಿಣ ಚೀನಾ ಸಮುದ್ರ, ಸೆಂಕಾಕು ದ್ವೀಪಗಳ ಜತೆ ಅರುಣಾಚಲವನ್ನೂ ಸೇರಿಸಿಕೊಂಡು, 2047ರ ಹೊತ್ತಿಗೆ ಅಖಂಡ ಚೀನಾವನ್ನು ನಿರ್ಮಿಸುವ ಗುರಿ
India News Live 26th December:370ನೇ ವಿಧಿ ರದ್ದತಿ ಬಿಜೆಪಿಯ ಹೆಮ್ಮೆ : ಪ್ರಧಾನಿ ಮೋದಿ ಹರ್ಷ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳನ್ನು ಸಾರಿ ಹೇಳುವ ‘ರಾಷ್ಟ್ರೀಯ ಪ್ರೇರಣಾ ಸ್ಥಳ’ವನ್ನು, ಅವರ 101ನೇ ಜನ್ಮದಿನದಂದು ಲಖನೌದಲ್ಲಿ ಗುರುವಾರ ಲೋಕಾರ್ಪಣೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಮಾರಕವನ್ನು ಉದ್ಘಾಟಿಸಿದರು.
India News Live 26th December:ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಬರ್ಬರ ಹತ್ಯೆ
ದೀಪು ಚಂದ್ರದಾಸ್ ಎಂಬ ಹಿಂದು ವ್ಯಕ್ತಿಯನ್ನು ಹತ್ಯೆಗೈದು, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಭೀಕರ ಘಟನೆ ಮಾಸುವ ಮುನ್ನವೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನನ್ನು ಗುಂಪೊಂದು ಹತ್ಯೆಗೈದಿದೆ. ಮೃತ ವ್ಯಕ್ತಿಯನ್ನು ಅಮೃತ್ ಮಂಡಲ್ ಎಂದು ಗುರುತಿಸಲಾಗಿದೆ.
India News Live 26th December:3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ
3500 ಕಿ.ಮೀ ದೂರದವರೆಗೆ ತಲುಪಬಲ್ಲ ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಬಂಗಾಳಕೊಲ್ಲಿಯಲ್ಲಿ ಬೀಡುಬಿಟ್ಟಿರುವ 6000 ಟನ್ ತೂಕದ ಐಎನ್‌ಎಸ್ ಅರಿಘಾತ್ ಸಬ್‌ಮರೀನ್‌ನಿಂದ ಇದು ಕ್ಷಿಪಣಿಯ 2ನೇ ಪರೀಕ್ಷೆಯಾಗಿದೆ.
India News Live 26th December:₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್ ಹತ್ಯೆ
ಒಡಿಶಾದಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ತಲೆಗೆ 1.1 ಕೋಟಿ ರು. ಬಹುಮಾನ ಹೊಂದಿದ್ದ ಗಣೇಶ್ ಉಯಿಕೆ (69) ಸೇರಿದಂತೆ 6 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಇದು ಇನ್ನು 3 ತಿಂಗಳಲ್ಲಿ ದೇಶವನ್ನು ನಕ್ಸಲ್ ಮುಕ್ತ ಮಾಡುವ ಕೇಂದ್ರ ಸರ್ಕಾರ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದೆ.