- Home
- Sports
- Cricket
- ಗೋ ಟು ಹೆಲ್, ಗೆಳತಿಯೊಂದಿಗೆ ಡಿನ್ನರ್ ಡೇಟ್ ವೇಳೆ ಫ್ಯಾನ್ಸ್ ಬೈಗುಳ, ಹಾರ್ದಿಕ್ ಪಾಂಡ್ಯ ಮಾಡಿದ್ದೇನು?
ಗೋ ಟು ಹೆಲ್, ಗೆಳತಿಯೊಂದಿಗೆ ಡಿನ್ನರ್ ಡೇಟ್ ವೇಳೆ ಫ್ಯಾನ್ಸ್ ಬೈಗುಳ, ಹಾರ್ದಿಕ್ ಪಾಂಡ್ಯ ಮಾಡಿದ್ದೇನು?
ಗೆಳತಿ ಮಹೆಕಾ ಶರ್ಮಾ ಜೊತೆ ಡಿನ್ನರ್ ಡೇಟ್ ತೆರಳಿದ್ದ ಹಾರ್ದಿಕ್ ಪಾಂಡ್ಯಗೆ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದರ ನಡುವೆ ಅಭಿಯಾನಿಯೊಬ್ಬ ಗೋ ಟು ಹೆಲ್ ಎಂದು ಅವಾಚ್ಯವಾಗಿ ಬೈದಿದ್ದಾನೆ. ಈ ವೇಳೆ ಗೆಳತಿಯನ್ನು ಕಾರಿನ ಒಳಬಿಟ್ಟು ಹಾರ್ದಿಕ್ ಪಾಂಡ್ಯ ಮಾಡಿದ್ದೇನು?

ಪಾಂಡ್ಯ ಮುತ್ತಿಕೊಂಡ ಫ್ಯಾನ್ಸ್
ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಗೆಳತಿ ಮಹೆಕಾ ಶರ್ಮಾ ಜೊತೆ ಡಿನ್ನರ್ ಡೇಟ್ ತೆರಳಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಮಹೆಕಾ ಶರ್ಮಾ ಎಲ್ಲೆ ಕಾಣಿಸಿಕೊಂಡರೂ ಪಾಪರಾಜಿಗಳು ಮುತ್ತಿಗೆ ಹಾಕುತ್ತಾರೆ. ಇತ್ತೀಚೆಗೆ ಪಾಪರಾಜಿಗಳ ವಿರುದ್ಧ ಹಾರ್ದಿಕ್ ಪಾಂಡ್ಯ ಗರಂ ಆಗಿದ್ದರು. ಆದರೆ ಈ ಬಾರಿ ಪಾಂಡ್ಯ ಹಾಗೂ ಗೆಳತಿಯನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು.
ಪಾಂಡ್ಯ-ಶರ್ಮಾ ಮೇಲೆ ಮುಗಿಬಿದ್ದ ಫ್ಯಾನ್ಸ್
ಹಾರ್ದಿಕ್ ಪಾಂಡ್ಯ ಡಿನ್ನರ್ ಡೇಟ್ ಮುಗಿಸಿ ಮರಳಿ ಕಾರು ಹತ್ತಲು ಬಂದಾಗ ಅಭಿಮಾನಿಗಳು ಪಾಂಡ್ಯ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಹಲವು ದುಂಬಾಲು ಬಿದ್ದಿದ್ದರು. ಇದರಿಂದ ಹಾರ್ದಿಕ್ ಪಾಂಡ್ಯಗೆ ಗೆಳತಿಯನ್ನು ಕಾರಿನಲ್ಲಿ ಕೂರಿಸಲು ಅಡೆ ತಡೆ ಎದುರಾಗಿದೆ. ಅಭಿಮಾನಿಗಳ ನಡುವೆ ಹಾರ್ದಿಕ್ ಪಾಂಡ್ಯ ಸುರಕ್ಷಿತವಾಗಿ ಗೆಳತಿಯನ್ನು ಕಾರಿನಲ್ಲಿ ಕೂರಿಸಿದ್ದರೆ.
ಗೋ ಟು ಹೆಲ್
ಹಾರ್ದಿಕ್ ಪಾಂಡ್ಯ ಗೆಳತಿಯನ್ನು ಕಾರಿನಲ್ಲಿ ಕೂರಿಸಿ ಸೆಲ್ಫಿಗಾಗಿ ಅಭಿಮಾನಿಗಳಿಗೆ ಅವಕಾಶ ನೀಡಿದರು. ಆದರೆ ಸೆಲ್ಫಿಗಾಗಿ ಮುಗಿಬಿದ್ದ ವೇಳೆ ಅಭಿಮಾನಿಯೊಬ್ಬ ಗೋ ಟು ಹೆಲ್ (ನರಕಕ್ಕೆ ಹೋಗು) ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆದರೆ ಹಾರ್ದಿಕ್ ಪಾಂಡ್ಯ ತಾಳ್ಮೆಯಿಂದ ಅಭಿಮಾನಿಗಳಿಗೆ ಸೆಲ್ಫಿ ನೀಡಿದ್ದಾರೆ.
ಎಲ್ಲರ ಹೃದಯ ಗೆದ್ದ ಹಾರ್ದಿಕ್ ಪಾಂಡ್ಯ
ಅಭಿಮಾನಿಯೊಬ್ಬ ಬೈಗುಳದ ನಡುವೆಯೂ ಹಾರ್ದಿಕ್ ಪಾಂಡ್ಯ ತಾಳ್ಮೆ ಕಳೆದುಕೊಂಡಿಲ್ಲ. ಯಾರೊಂದಿಗೂ ಸಿಡುಕು ತೋರಲಿಲ್ಲ. ಅಭಿಮಾನಿಗಳಿಗೆ ಸೆಲ್ಫಿ ನಿರಾಕರಿಸಲಿಲ್ಲ. ಇಷ್ಟೇ ಅಲ್ಲ ಅಭಿಮಾನಿಗೆ ಯಾವುದೇ ಪ್ರತಿಕ್ರಿಯೆ ಕೂಡ ಕೊಡಲಿಲ್ಲ. ಹಾರ್ದಿಕ್ ಪಾಂಡ್ಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಎಲ್ಲರ ಹೃದಯ ಗೆದ್ದ ಹಾರ್ದಿಕ್ ಪಾಂಡ್ಯ
ಪಾಪಾರಾಜಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದ ಪಾಂಡ್ಯ
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಹಾಗೂ ಗೆಳತಿ ಮೆಹೆಕೆ ಶರ್ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಗೆಳತಿಯ ವಿಡಿಯೋಗಳನ್ನು ತೆಗೆದಿದ್ದರು. ಕೆಟ್ಟ ರೀತಿಯಲ್ಲಿ ವಿಡಿಯೋ ಶೂಟ್ ಮಾಡಿದ ಪಾಪರಾಜಿಗಳ ವಿರುದ್ದ ಹಾರ್ದಿಕ್ ಪಾಂಡ್ಯ ಗರಂ ಆಗಿದ್ದರು. ಖಾಸಗಿ ಸಮಯವನ್ನು ಗೌರವಿಸಿ, ಹೆಣ್ಣುಮಕ್ಕಳನ್ನು ಚಿತ್ರಿಸುವಾಗ ಗೌರವದಿಂದ ವರ್ತಿಸಿ ಎಂದು ಕಿವಿಮಾತು ಹೇಳಿದ್ದರು.
ಪಾಪಾರಾಜಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದ ಪಾಂಡ್ಯ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

