ಆರೋಗ್ಯದ ಕಾರಣದಿಂದ ಉದ್ಯೋಗಿ ಸಿಕ್ ಲೀವ್ ಕೇಳಿದರೆ, ಮನೆಯಿಂದ ಕೆಲಸ ಮಾಡಿ ಎಂದು ಮ್ಯಾನೇಜರ್ ಆರ್ಡರ್ ಮಾಡಿದ್ದಾರೆ. ಇಷ್ಟೇ ನೋಡಿ, ಉದ್ಯೋಗಿಯ ನಡೆಯಿಂದ ಮ್ಯಾನೇಜರ್ ಕಂಗಾಲು ಆಗಿದ್ದಾರೆ.

ಹಲವು ಕಂಪನಿಗಳಲ್ಲಿನ ವರ್ಕಿಂಗ್ ವಾತಾವರಣ ಭಾರಿ ಟೀಕೆಗೆ ಗುರಿಯಾಗುತ್ತದೆ. ಪ್ರಮುಖವಾಗಿ ಒತ್ತಡದ ಕೆಲಸ, ರಜೆ ಇಲ್ಲ, ಹುಷಾರಿಲ್ಲದಿದ್ದರೂ ಕೆಲಸ ಮುಗಿಸುವಂತೆ ಒತ್ತಡ ಸೇರಿದಂತೆ ಹಲವು ರೀತಿಯಿಂದ ಕಿರುಕುಳದ ಘಟನೆಗಳು ವರದಿಯಾಗಿದೆ. ಆದರೆ ಹಳೇ ಜಮಾನದಲ್ಲಿದ್ದ ಕೆಲಸ ರೀತಿಯಲ್ಲೇ ಈಗ ಸಾಧ್ಯವಿಲ್ಲ. ಜೆನ್‌ಝಿ ಉದ್ಯೋಗಿಗಳು ತಮ್ಮ ಕೆಲಸ, ಕೆಲಸದ ಸಮಯ, ವೈಯುಕ್ತಿಕ ಬದುಕು ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿ ಖಡಕ್. ಇದೇ ಜೆನ್‌ಝಿ ಉದ್ಯೋಗಿ ಆರೋಗ್ಯ ಸರಿಯಿಲ್ಲ, ಸಿಕ್ ಲೀವ್ ಕೊಡಿ ಎಂದು ಕೇಳಿದರೆ, ವರ್ಕ್ ಫ್ರಮ್ ಹೋಮ್ ಮಾಡಿ ಎಂದು ಸೂಚನೆ ನೀಡಿದ್ದಾನೆ. ಆದರೆ ಮ್ಯಾನೇಜರ್‌ಗೆ ಜೆನ್‌ಝಿ ಉದ್ಯೋಗಿ ಕೊಟ್ಟ ಶಾಕ್‌ಗೆ ಕಂಗಾಲಾಗಿದ್ದಾನೆ. ಇಷ್ಟೇ ಅಲ್ಲ ಇದೀಗ ಮ್ಯಾನೇಜರ್ ವಿರುದ್ದ ಕಂಪನಿ ಮ್ಯಾನೇಜ್ಮೆಂಟ್ ಗರಂ ಆಗಿದೆ.

ರಜೆ ಆಗಲ್ಲ, ಮನೆಯಿಂದಲೇ ಕೆಲಸ ಮಾಡಿ

ಶೀತಲ್ ಅನ್ನೋ ಸೋಶಿಯಲ್ ಮೀಡಿಯಾ ಯೂಸರ್ ಈ ಘಟನೆ ಹಂಚಿಕೊಂಡಿದ್ದಾರೆ. ಕಾರ್ಪೋರೇಟ್ ಕಂಪನಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ನನ್ನ ಗೆಳತಿ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಮ್ಯಾನೇಜರ್ ಆ್ಯಟಿಟ್ಯೂಡ್‌ನಿಂದ ಬೇಸತ್ತು ಹೋಗಿದ್ದಾಳೆ. ಆಕೆ ಕಂಪನಿಯಲ್ಲಿ ಜೆನ್‌ಝಿ ಉದ್ಯೋಗಿಯೊಬ್ಬರು ಆರೋಗ್ಯ ಸರಿ ಇರಲಿಲ್ಲ. ಕಚೇರಿಗೆ ತೆರಳಿ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ವೈದ್ಯರ ಸಂಪರ್ಕಿಸಿ ಔಷಧಿ ಪಡೆದುಕೊಂಡು ವಿಶ್ರಾಂತಿ ಪಡೆಯಲು ಮುಂದಾಗಿದ್ದಳು. ಇದಕ್ಕಾಗಿ ಸಿಕ್ ಲೀವ್ ಕೇಳಿದ್ದಾಳೆ. ರಜೆ ಸಾಧ್ಯವಿಲ್ಲ, ಮನೆಯಿಂದಲೇ ಕೆಲಸ ಮಾಡಿ ಎಂದು ಮ್ಯಾನೇಜರ್ ಸೂಚಿಸಿದ್ದಾನೆ.

ಕಂಗಾಲಾದ ಮ್ಯಾನೇಜರ್

ಒಂದು ದಿನದ ಸಿಕ್ ಲೀವ್ ಕೇಳಿದ ಜೆನ್‌ಝಿ ಉದ್ಯೋಗಿಗೆ ಮನೆಯಂದಲೇ ಕೆಲಸ ಮಾಡಲು ಆರ್ಡರ್ ಮಾಡಲಾಗಿತ್ತು. ಇದು ಜೆನ್‌ಝಿ ಉದ್ಯೋಗಿಯ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಮ್ಯಾನೇಜರ್ ಸೂಚನೆಗೆ ಯಾವ ರಿಪ್ಲೈ ನೀಡಲಿಲ್ಲ. ಇಷ್ಟೇ ಅಲ್ಲ ಮನೆಯಿಂದ ಕೆಲಸವನ್ನು ಮಾಡಲಿಲ್ಲ. ಮ್ಯಾನೇಜರ್ ಮೆಸೇಜ್ ಫೋನ್‌ಗಳಿಗೆ ಉತ್ತರವನ್ನು ನೀಡಲಿಲ್ಲ. ಒಂದು ದಿನ ವಿಶ್ರಾಂತಿಗೆ ಕೇಳಿದ್ದ ರಜೆ ಸಿಗಲಿಲ್ಲ. ಮ್ಯಾನೇಜರ್‌ಗೆ ಪಾಠ ಕಲಿಸಲು ಉದ್ಯೋಗಿ ಮತ್ತೆ ಎರಡು ದಿನ ಯಾರ ಬಳಿ ಕೇಳದೆ ರಜೆ ಹಾಕಿದ್ದಾರೆ. ಒಂದು ಮೇಸೇಜ್, ಇಮೇಲ್ ಯಾವುದೂ ಮಾಡದೇ ರಜೆ. ಬಳಿಕ ಬೇರೆ ಕಂಪನಿಗೆ ಸಂದರ್ಶನಕ್ಕೆ ತೆರಳಿ ಅಲ್ಲಿ ಆಯ್ಕೆಯಾಗಿದ್ದಾಳೆ. ಹೊಸ ಕಂಪನಿಯಿಂದ ಆಫರ್ ಲೆಟರ್ ಕೂಡ ಪಡೆದುಕೊಂಡಿದ್ದಾಳೆ.

ಮೂರನೇ ದಿನ ಕಂಪನಿಗೆ ಮರಳಿದಾಗ ಮ್ಯಾನೇಜರ್ ಗರಂ ಆಗಿದ್ದರು. ಅಶಿಸ್ತು, ಪ್ರಾಜೆಕ್ಟ್ ಇದ್ದರೂ, ಕೆಲಸ ಇದ್ದರೂ ಹೇಳದೆ ಕೇಳದೆ ರಜೆ ಹಾಕಲಾಗಿದೆ. ಜೊತೆಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಿದರೂ ಮಾಡಿಲ್ಲ ಎಂದೆಲ್ಲಾ ಒಂದಷ್ಟು ದೂರು ಹಿಡಿದು ಉದ್ಯೋಗಿಗೆ ನೋಟಿಸ್ ನೀಡಲಾಗಿತ್ತು. ಇದನ್ನೇ ಕಾಯುತ್ತಿದ್ದ ಆಕೆ ರಾಜೀನಾಮೆ ನೀಡಿದ್ದಾಳೆ. ಇಷ್ಟೇ ಅಲ್ಲ ನನ್ನ ಬಾಕಿ ಉಳಿದಿರುವ ರಜೆಯಲ್ಲಿ ನೋಟಿಸ್ ಪಿರಿಯೆಡ್ ಹೊಂದಿಸಿಕೊಳ್ಳಿ. ನಾಳೆಯಿಂದ ನಾನು ಬರಲ್ಲ ಎಂದಿದ್ದಾಳೆ.

ಒಂಜು ರಜೆ ಕೊಡದೆ ಒಬ್ಬ ಉದ್ಯೋಗಿಯನ್ನೇ ಕಂಪನಿ ಕಳೆದುಕೊಂಡಿತು. ನೋಟಿಸ್ ಮಾಡಿ ಎಂದು ಹೇಳಲು ಕಂಪನಿಗೆ ಸಾಧ್ಯವಾಗಲಿಲ್ಲ. ಕಾನೂನು ಪ್ರಕಾರ ಹೋದರೆ ಉದ್ಯೋಗಿ ಪರವಾಗಿ ತೀರ್ಪು ಬರಲಿದೆ ಎಂದು ಕಂಪನಿ ಕೂಡ ಏನೂ ಮಾಡಲು ಆಗದೆ ಪರದಾಡಿತು. ಇದರಿಂದ ಕಂಪನಿ ಮ್ಯಾನೇಜ್ಮೆಂಟ್ ಮ್ಯಾನೇಜರ್ ವಿರುದ್ಧ ಗರಂ ಆಗಿದೆ.