ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ನ ಅಪಹರಿಸಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಘಟನೆ ವರದಿಯಾಗಿತ್ತು. ಇದೀಗ 54 ದಿನಗಳು ಆಸ್ಪತ್ರೆಯಲ್ಲಿ ಹೋರಾಡಿದ ಯುವತಿ ಮೃತಪಟ್ಟಿದ್ದಾಳೆ. ಏನಿದು ಘಟನೆ?

ಚಂಡೀಘಡ (ಆ.29) ಕಳೆದ 54 ದಿನಗಳಿಂದ ಆಸ್ಪತ್ಪೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ 28 ವರ್ಷದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮೃತಪಟ್ಟ ಘಟನೆ ಚಂಡೀಘಡದಲ್ಲಿ ನಡೆದಿದೆ. 28 ವರ್ಷದ ಮಂಜೀತ್ ಕೌರ್ ಅತೀವ ಸುಟ್ಟಗಾಯಗಳಿಂದ ಕಳೆದ 54 ದಿನಗಳಿಂದ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಪಿಜಿಐ ಆಸ್ಪತ್ರೆಯಲ್ಲಿ ಮಂಜೀತ್ ಕೌರ್ ಮೃತಪಟ್ಟಿದ್ದಾಳೆ. ಮಂಜೀತ್ ಕೌರ್ 7 ವರ್ಷದ ಮಗ ಅನಾಥನಾಗಿದ್ದಾನೆ.

ಮರಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ ದುರುಳರು

ಮಂಜೀತ್ ಕೌರ್ ನೀಡಿದ ದೂರಿನಲ್ಲಿ ಘಟನೆಯನ್ನು ವಿವರಿಸಿದ್ದಾರೆ. ಜುಲೈ 3 ರಂದು ಚಂಡೀಘಡದ ಸೆಕ್ಟರ್ 34ರ ಬಳಿ ಬರುವಂತೆ ಆಕೆಯ ಪರಿಚಿತರು ಕರೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಪ್ರಮೋಶನ್ ಹಾಗೂ ಕೆಲಸದ ನಿಮಿತ್ತ ತೆರಳಿದ ಮಂಜೀಕ್ ಕೌರ್‌ನ ರಾತ್ರಿಯೇ ಕೌರ್‌ನ ಅಪಹರಿಸಲಾಗಿದೆ. ಬಳಿಕ ಅಪಹರಣಕಾರರು ಮೊರಿಂಡಾ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಮರಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಮಂಜೀಕ್ ಕೌರ್ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಪಹರಣದ ಮಾಹಿತಿ ತಿಳಿದ ಮಂಜೀತ್ ಕೌರ್ ಪರಿಚಯಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಬೆಂಕಿ ನಂದಿಸಿ ಮೊರಿಂಡಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮೊಹಾಲಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ಪಿಜಿಐ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ದಿನದಿಂದ ದಿನಕ್ಕೆ ಮಂಜೀತ್ ಆರೋಗ್ಯ ಹದಗೆಟ್ಟಿತ್ತು. ಇದೀಗ ಮಂಜೀಕ್ ಕೌರ್ ಮೃತಪಟ್ಟಿದ್ದಾರೆ. ಇತ್ತ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಮಂಜೀಕ್ ಕೌರ್‌ಗೆ 7 ವರ್ಷದ ಮಗನಿದ್ದಾನೆ. ವಿವಾಹ ವಿಚ್ಚೇದನ ಪಡೆದಿದ್ದ ಮಂಜೀತ್ ಕೌರ್ ಪಂಜಾಬಿ ಹಾಗೂ ಹರಿಯಾಣ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಜನಪ್ರಿಯರಾಗಿದ್ದರು. 1.46 ಲಕ್ಷ ಫಾಲೋವರ್ಸ್ ಹೊಂದಿದ್ದ ಮಂಜೀಕ್ ದುರಂತ ಸಾವಿನಿಂದ ಕುಟುಂಬ ಕಂಗಾಲಾಗಿದೆ. ಇದೇ ವೇಳೆ ಪೊಲೀಸ್ ತನಿಖೆಯಲ್ಲೂ ಲೋಪಗಳಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಂಜೀತ್ ಕೌರ್‌ಗೆ ಪ್ರಜ್ಞೆ ಮರಳಿ ಬಂದ ಬಳಿಕ ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ.

ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆ ಕುರಿತು ತನಿಖೆ ನಡೆಯುತ್ತಿದೆ. ಕೆಲ ಇನ್‌ಫ್ಲುಯೆನ್ಸರ್ ಜೊತೆ ವಿವಾದಗಳು, ಒಬ್ಬನ ಜೊತೆ ಲೀವ್ ಇನ್ ರಿಲೇಶನ್‌ಶಿಪ್ ಇತ್ತು ಅನ್ನೋ ಮಾತುಗಳು ಕೇಳಿಬಂದಿದೆ.