- Home
- News
- India News
- India news live: ರಜಿನಿಕಾಂತ್ ಅಪ್ಪಟ ಅಭಿಮಾನಿ ಆದಿತ್ಯ ಅಶೋಕ್ ಈಗ ಭಾರತ ಎದುರಾಳಿ! ಯಾರು ಈ ಕಿವೀಸ್ ಲೆಗ್‌ಸ್ಪಿನ್ನರ್?
India news live: ರಜಿನಿಕಾಂತ್ ಅಪ್ಪಟ ಅಭಿಮಾನಿ ಆದಿತ್ಯ ಅಶೋಕ್ ಈಗ ಭಾರತ ಎದುರಾಳಿ! ಯಾರು ಈ ಕಿವೀಸ್ ಲೆಗ್‌ಸ್ಪಿನ್ನರ್?

ಬಿಜೆಪಿ ನಾಯಕ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸತತ ಪ್ರತಿಭಟೆಗಳನ್ನು ಮಾಡುತ್ತಿರುವ ಸುವೆಂದು ಅಧಿಕಾರಿ ಕಾರು ಅಡ್ಡಗಟ್ಟಿ ದಾಳಿ ನಡೆಸಿದ ಘಟನೆ ಚಂದ್ರಕೋನಾದಲ್ಲಿ ನಡೆದಿದೆ. ಸುವೆಂದು ಬೆಂಗಾವಲು ವಾಹನಗಳನ್ನು ಅಡ್ಡಗಟ್ಟಿ ದಾಳಿ ಮಾಡಲಾಗಿದೆ. ಇದು ಟಿಎಂಸಿ ಪಕ್ಷದ ಗೂಂಡಾಗಳ ಕೃತ್ಯ ಎಂದು ಸುವೆಂದು ಅದಿಕಾರಿ ಆರೋಪಿಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಸೋಮನಾಥ ಮಂದಿರಕ್ಕೆ ಬೇಟಿ ನೀಡಿದ್ದಾರೆ. ಸೋಮನಾಥ ಮಂದಿರ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಸಂದಿದೆ. ಇದರ ಹಿನ್ನಲೆಯಲ್ಲಿ ಸೋಮನಾಥ ಸ್ವಾಭಿಮಾನ ಪರ್ವ ಆಚರಿಸಲಾಗುತ್ತಿದೆ.
India news live 10 Jan 2026ರಜಿನಿಕಾಂತ್ ಅಪ್ಪಟ ಅಭಿಮಾನಿ ಆದಿತ್ಯ ಅಶೋಕ್ ಈಗ ಭಾರತ ಎದುರಾಳಿ! ಯಾರು ಈ ಕಿವೀಸ್ ಲೆಗ್‌ಸ್ಪಿನ್ನರ್?
India news live 10 Jan 20263ನೇ ಮಹಾಯುದ್ಧಕ್ಕೆ ಮುನ್ನುಡಿ, ಗ್ರೀನ್‌ಲ್ಯಾಂಡ್ ಆಕ್ರಮಿಸಲು ಸಿದ್ಧರಾಗುವಂತೆ ಆರ್ಮಿ ಚೀಫ್‌ಗೆ ಸೂಚಿಸಿದ ಟ್ರಂಪ್!
ಗ್ರೀನ್‌ಲ್ಯಾಂಡ್‌ಗೆ ಆಕ್ರಮಣ ಯೋಜನೆಗಳನ್ನು ಸಿದ್ಧಪಡಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶೇಷ ಪಡೆಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಹಿರಿಯ ಮಿಲಿಟರಿ ನಾಯಕರು, ಕಾನೂನು ಹಾಗೂ ಯುಎಸ್ ಕಾಂಗ್ರೆಸ್‌ನ ಅಡೆತಡೆಯನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
India news live 10 Jan 2026ದಿಢೀರ್ ಕುಸಿದು ಬಿದ್ದು ಇಂಡಿಯನ್ ಐಡೋಲ್ ವಿನ್ನರ್, ಪಾತಾಳ ಲೋಕ ಖ್ಯಾತಿಯ ನಟ ಸಾವು
ದಿಢೀರ್ ಕುಸಿದು ಬಿದ್ದು ಇಂಡಿಯನ್ ಐಡೋಲ್ ವಿನ್ನರ್, ಗಾಯಕ ಹಾಗೂ ನಟ ಪ್ರಶಾಂತ್ ತಮಂಗ ಮೃತಪಟ್ಟಿದ್ದಾರೆ. ಅಪ್ಪನ ಸಾವಿನಿಂದ ಮುದ್ದಿನ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಿವುಡ್ ಸಿನಿಮಾದಲ್ಲೂ ಮಿಂಚಿದ್ದ ನಟ ಸಾವು ಹಲವರಿಗೆ ಶಾಕ್ ನೀಡಿದೆ.
India news live 10 Jan 2026ಬಾಂಗ್ಲಾದೇಶ ಮಾಜಿ ನಾಯಕನನ್ನು 'ಭಾರತದ ಏಜೆಂಟ್' ಎಂದು ಕರೆದ ನಜ್ರುಲ್ ಇಸ್ಲಾಂ! ಬಾಂಗ್ಲಾ ಮಂಡಳಿ ವಿರುದ್ದವೇ ತಿರುಗಿಬಿದ್ದ ಆಟಗಾರರು
ಢಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ತಿಕ್ಕಾಟ ಇದೀಗ ಮತ್ತೊಂದು ಹಂತ ತಲುಪಿದ್ದು, ಟಿ20 ವಿಶ್ವಕಪ್ ಟೂರ್ನಿಯಾಡಲು ನಾವು ಭಾರತಕ್ಕೆ ಬರುವುದಿಲ್ಲ ಎಂದು ಬಾಂಗ್ಲಾದೇಶ ಪಟ್ಟು ಹಿಡಿದಿದೆ. ಹೀಗಿರುವಾಗಲೇ ಬಾಂಗ್ಲಾದೇಶ ಮಾಜಿ ನಾಯಕನ ಮೇಲೆ ನಜ್ರುಲ್ ಇಸ್ಲಾಂ ಗಂಭೀರ ಆರೋಪ ಮಾಡಿದ್ದಾರೆ.
India news live 10 Jan 2026ಕಿವೀಸ್ ಎದುರು ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ಆರು ಬೌಲರ್‌ಗಳೊಂದಿಗೆ ಕಣಕ್ಕೆ!
ವಡೋದರಾದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಟಾಸ್ ಗೆದ್ದ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿರುವ ಭಾರತ. ಕಿವೀಸ್ ಪರ ಕ್ರಿಸ್ಟಿನ್ ಕ್ಲಾರ್ಕ್ ಪಾದಾರ್ಪಣೆ ಮಾಡಿದ್ದಾರೆ.
India news live 10 Jan 2026ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ
ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, ಮಂದಿರದ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಉರುಳಿದೆ. ಸತತ ದಾಳಿಗೆ ಎದೆಯೊಡ್ಡಿ ನಿಂತ ಸೋಮನಾಥ ಮಂದಿರ ಭಾರತದ ಇತಿಹಾಸ ಹೇಳುತ್ತಿದೆ. ಈ ಸ್ವಾಭಿಮಾನ ಪರ್ವದಲ್ಲಿ ಮೋದಿ ಪಾಲ್ಗೊಂಡಿದ್ದಾರೆ.
India news live 10 Jan 2026ಕುಟುಂಬದ ಕಂಪೆನಿ, ಆಸ್ತಿ ತ್ಯಜಿಸಿ ಪ್ರೀತಿ ಆಯ್ಕೆ, ಮದುವೆಯಾಗಿ ₹3000 ಕೋಟಿ ಉದ್ಯಮ ಕಟ್ಟಿದ ಸಾಹಸಿ
ಕುಟುಂಬದ ಕಪಂನಿ, ಆಸ್ತಿ ತ್ಯಜಿಸಿ ಪ್ರೀತಿ ಆಯ್ಕೆ, ಹಳೇ ಸಿನಿಮಾಗಳಲ್ಲಿರುವಂತೆ ಪೋಷಕರು, ಕುಟುಂಬಸ್ಥರು ಆಫರ್ ಮುಂದಿಟ್ಟದ್ದರು. ಒಂದೋ ನಿನ್ನ ಪ್ರೀತಿ, ಇಲ್ಲಾ ಉದ್ಯಮ ಒಂದೇ ಆಯ್ಕೆ ಕೊಟ್ಟಿದ್ದರು. ಪ್ರೀತಿ ಆಯ್ಕೆಮಾಡಿಕೊಂಡು ಯಶಸ್ವಿ ಉದ್ಯಮ ಕಟ್ಟಿದ ಸಾಧಕನ ಕತೆ ಇದು
India news live 10 Jan 2026ಏಕದಿನ ಸರಣಿಯಿಂದ ಪಂತ್ ಔಟ್; ಸಂಜು, ಇಶಾನ್ ಕಿಶನ್ ಬದಲಿಗೆ ಈ ವಿಕೆಟ್ ಕೀಪರ್‌ಗೆ ಬಿಸಿಸಿಐ ಬುಲಾವ್!
ವಡೋದರಾ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಹೀಗಿರುವಾಗಲೇ ಭಾರತ ತಂಡದಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಮತ್ತೊಬ್ಬ ವಿಕೆಟ್ ಕೀಪರ್ ತಂಡ ಕೂಡಿಕೊಂಡಿದ್ದಾರೆ.
India news live 10 Jan 2026ವರ್ಷದ ಆರಂಭದಲ್ಲೇ ಜಿಯೋ ಗ್ರಾಹಕರಿಗೆ ಲಾಟರಿ! 450 ರೂ.ಗೆ ಹಬ್ಬದ ಭರ್ಜರಿ ಆಫರ್ ಕೊಟ್ಟ ಕಂಪೆನಿ
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ರೂ.450 ರ ಹೊಸ ಹಬ್ಬದ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 36 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2 GB ಡೇಟಾ, ಅನಿಯಮಿತ ಕರೆಗಳನ್ನು ನೀಡುತ್ತದೆ. ಇದರ ಜೊತೆಗೆ, ಇನ್ನಷ್ಟು ಪ್ರಯೋಜನಗಳಿದ್ದು, ಅವುಗಳ ಡಿಟೇಲ್ಸ್ ಇಲ್ಲಿದೆ.
India news live 10 Jan 2026ದಿಢೀರ್ ಎನ್ನುವಂತೆ ಜಾನ್ ಜೆಲೆಜ್ನಿ ಜತೆ ಕೋಚಿಂಗ್ ಒಪ್ಪಂದ ಕೊನೆಗೊಳಿಸಿದ ನೀರಜ್ ಚೋಪ್ರಾ!
ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ಪ್ರದರ್ಶನ ಬೆನ್ನಲ್ಲೇ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ತಮ್ಮ ಕೋಚ್ ಬದಲಿಸಲು ನಿರ್ಧರಿಸಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
India news live 10 Jan 2026ಖೇಲೋ ಇಂಡಿಯಾ ಬೀಚ್ ಗೇಮ್ಸ್ - ಮತ್ತೆ ಚಿನ್ನ ಗೆದ್ದ ಧ್ರುಪದ್; ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕ
India news live 10 Jan 2026ಭಾರತ-ಕಿವೀಸ್ ಕದನ - ರೋ-ಕೋ ಅಬ್ಬರಕ್ಕೆ ವೇದಿಕೆ ಸಿದ್ಧ! ಮ್ಯಾಚ್ ಆರಂಭ ಎಷ್ಟು ಗಂಟೆಗೆ?
India news live 10 Jan 2026ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಶಾಕ್, ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರ
ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಶಾಕ್, ಜನವರಿ 11ರಿಂದ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ಆರಂಭಗೊಳ್ಳುತ್ತಿದೆ. ಆದರೆ ಪ್ಲೇಯಿಂಗ್ 11 ಆಯ್ಕೆ ಬಹುತೇಕ ಅಂತಿಮಗೊಂಡ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗ ಹೊರಬಿದ್ದಿದ್ದಾರೆ.
India news live 10 Jan 2026ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ, ಭೀಕರ ಸ್ಟ್ರೈಕ್‌ಗೆ ತತ್ತರಿಸಿದ ಸಿರಿಯಾ
ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ, ಸಿರಿಯಾದಲ್ಲಿ ಬೇರು ಬಿಟ್ಟಿರುವ ಐಸಿಸ್ ಉಗ್ರ ತಾಣಗಳ ಮೇಲೆ ಅಮೆರಿಕ ಸ್ಟ್ರೈಕ್ ನಡೆಸಿದೆ. ವಾಯುಪಡೆ, ನೌಕಾ ಪಡೆಗಳ ಮಿಸೈಲ್ ದಾಳಿಗೆ ಸಿರಿಯಾ ತತ್ತರಿಸಿದೆ.
India news live 10 Jan 2026ಟಿಎಂಸಿ ಧ್ವಜ ಹಿಡಿದು ಕಾರಿನ ಮೇಲೆ ದಾಳಿ ಎಂದ ನಾಯಕ
ಟಿಎಂಸಿ ಪಕ್ಷದ ಧ್ವದಜ ಹಿಡಿದ ಕೆಲ ಗೂಂಡಾಗಳು ಕಾರು ತಡೆದು ದಾಳಿ ಮಾಡಿದ್ದಾರೆ. ಬಜೆಪಿ ನಾಯಕರ ಟಾರ್ಗೆಟ್ ಮಾಡಿ ಟಿಎಂಸಿ ಗೂಂಡಾಗಳು ದಾಳಿ ನಡೆಸುತ್ತಿದ್ದಾರೆ. ಪದೇ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿದೆ ಎಂದು ಸುವೆಂದು ಅಧಿಕಾರಿ ಆರೋಪಿಸಿದ್ದಾರೆ.