ನಟಿ ಅನನ್ಯಾ ಪಾಂಡೆ ಸೋದರಸಂಬಂಧಿ ಅಲನ್ನಾ ಪಾಂಡೆ ಮತ್ತು ಪತಿ ಐವರ್ ತಮ್ಮ ಹೊಸ 5BHK ಮನೆಗೆ ಶಾಪಿಂಗ್ ಮಾಡಿದ್ದಾರೆ. 1 ಕೋಟಿ ರೂ. ಮೌಲ್ಯದ ಸ್ಟೌವ್ ಮತ್ತು 63 ಲಕ್ಷ ರೂ. ಮೌಲ್ಯದ ಮಾರ್ಬಲ್‌ಗಳಂತಹ ಐಷಾರಾಮಿ ವಸ್ತುಗಳನ್ನು ನೋಡಿದ್ದು, ಅವುಗಳ ಬೆಲೆ ಕೇಳಿ ಜನ ದಂಗಾಗಿದ್ದಾರೆ.
ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೋದರ ಸಂಬಂಧಿ ಯೂಟ್ಯೂಬರ್ ಅಲನ್ನಾ ಪಾಂಡೆ ಮತ್ತು ಅವರ ಪತಿ ಐವರ್ ಮೆಕ್‌ಕ್ರೇ ಇತ್ತೀಚೆಗೆ ಹೊಸ 5ಬಿಎಚ್‌ಕೆ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ಹೊಸ ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿ ಮಾಡಲು ಇತ್ತೀಚೆಗೆ ಅವರು ಶಾಪಿಂಗ್‌ಗೆ ಹೋಗಿದ್ದರು. ಈ ವೇಳೆ ಅಲನ್ನಾ ಪಾಂಡೆ ಅದನ್ನು ವ್ಲಾಗ್ ಮಾಡುವ ಮೂಲಕ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ವ್ಲಾಗ್‌ಗಿಂಗ ಹೆಚ್ಚಾಗಿ ಮನೆಯ ವಸ್ತುಗಳನ್ನು ಖರೀದಿಸಲು ಅವರು ಮಾಡಿರುವ ಖರ್ಚು ಕೇಳಿಯೇ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಹೊಸ ಮನೆಗಾಗಿ ಮಾರ್ಬಲ್‌ಗಳು, ಫ್ರಿಜ್ ಹಾಗೂ ಸ್ಟೌವ್ ಖರೀದಿ ಮಾಡಲು ಹೋಗಿದ್ದರು. ಇವುಗಳ ಬೆಲೆ ಕಂಡು ಅಕ್ಷರಶಃ ವೀಕ್ಷಕರು ಅಚ್ಚರಿ ಪಟ್ಟಿದ್ದಾರೆ. ಏಕೆಂದರೆ, ಇವುಗಳಿಗಾಗಿ ಅವರು 60 ಲಕ್ಷದಿಂದ 1 ಕೋಟಿ ರೂಪಾಯಿಯವರೆಗೂ ಇದೆ.
ಪ್ರತಿಯೊಂದು ವಸ್ತುವಿನ ಬೆಲೆ ಎಷ್ಟು ಮತ್ತು ನಾವು ಮನೆ ಕಟ್ಟುವುದಕ್ಕಿಂತ ವಸ್ತುಗಳನ್ನು ಖರೀದಿಸಲು ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದೇವೆ ಎಂದು ಅಲಾನ್ನಾ ಹೇಳಿರುವುದು ದಾಖಲಾಗಿದೆ.
ಮನೆಗಾಗಿ ಅವರು ಒಂದು ಸ್ಟೌವ್ ಅನ್ನು ನೋಡಿದ್ದು, ಅದರ ಬೆಲೆ ಸುಮಾರಿ 1 ಲಕ್ಷದ 20 ಸಾವಿರ ಡಾಲರ್. ಅಂದರೆ ಭಾರತೀಯ ರೂಪಾಯಿಯಲ್ಲಿ ಅಂದಾಜು 1 ಕೋಟಿ ರೂಪಾಯಿ. ಇನ್ನು ಅಮೃತಶಿಲೆಯ ಮಾರ್ಬಲ್‌ಅನ್ನು ಅವರು ಮನೆಗಾಗಿ ನೋಡಿದ್ದಾರೆ. ಅದರ ಒಂದು ಸ್ಲ್ಯಾಬ್‌ನ ಬೆಲೆಯೇ ಅಂದಾಜು 7 ಸಾವಿರ ಡಾಲರ್. ರೂಪಾಯಿಯಲ್ಲಿ ಸುಮಾರು 6 ಲಕ್ಷ ರೂಪಾಯಿ ಆಗಿದೆ. ಮನೆಯ ಕಿಚನ್ ಹಾಗೂ ಬಾತ್‌ರೂಮ್‌ಗೆ ಇಂಥ ಐದು ಸ್ಲ್ಯಾಬ್‌ಗಳ ಅಗತ್ಯ ಇದೆ ಎಂದು ಅಲಾನ್ನಾ ಹೇಳಿದ್ದು, ಈ ಮಾರ್ಬಲ್‌ನ ಒಟ್ಟು ವೆಚ್ಚವೇ ಅಂದಾಜು 63 ಲಕ್ಷ ರೂಪಾಯಿ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ಹಾಗೇನಾದರೂ ಇವುಗಳನ್ನು ನಾವು ಖರೀದಿಸಿದ್ದೇ ಆದಲ್ಲಿ, ಯೂಟ್ಯೂಬ್‌ನ ಹ್ಯಾಶ್‌ಟ್ಯಾಗ್ ಕೆಳಗೆ ದೇಣಿಗೆ ಲಿಂಕ್‌ಅನ್ನೂ ನೀಡಬೇಕಾಗುತ್ತದೆ ಎಂದು ಅಲಾನ್ನಾ ಅವರ ಪತಿ ಐವರ್ ಮೆಕ್‌ಕ್ರೇ ತಮಾಷೆಯಾಗಿ ಹೇಳಿದ್ದಾರೆ.
1 ಕೋಟಿಯ ಸ್ಟೌವ್ ಖರೀದಿ ಮಾಡಲು ಬಿಡದ ಗಂಡ!
ಹಾಗಂತ ಈ ಜೋಡಿ 1 ಕೋಟಿ ರೂಪಾಯಿ ಬೆಲೆಬಾಳುವ ಸ್ಟೌವ್‌ಅನ್ನು ಖರೀದಿ ಮಾಡುವ ಗೋಜಿಗೆ ಹೋಗಲಿಲ್ಲ. ಅಲಾನ್ನಾ ಇದನ್ನು ಖರೀದಿ ಮಾಡಲು ಬಯಸಿದರೂ, ಐವರ್ ಇದು ಮೂರ್ಖತನದ ನಿರ್ಧಾರ ಎಂದು ಪತ್ನಿಗೆ ಹೇಳಿದ್ದಾರೆ. ಕೊನೆಗೆ ಅಲಾನ್ನಾ ತನ್ನ ನಿರ್ಧಾರವನ್ನು ಬದಲಿಸಿದ್ದಾರೆ. ಕೊನೆಗೆ ಆಕೆ ಹೊಸ ಮನೆಗಾಗಿ 12 ಸಾವಿರ ಡಾಲರ್ ಕೊಟ್ಟು ಅಂದರೆ, 11 ಲಕ್ಷ ರೂಪಾಯಿ ನೀಡಿ ಸ್ಟೌವ್ ಖರೀದಿ ಮಾಡಿದ್ದಾರೆ.ಇನ್ನು ಮನೆಗೆ ಖರೀದಿ ಮಾಡಿರುವ ಫ್ರಿಜ್‌ನ ಬೆಲೆ 16 ಸಾವಿರ ಡಾಲರ್ (ಸುಮಾರು 14.4 ಲಕ್ಷ ರೂಪಾಯಿ) ಎಂದು ಹೇಳಿದ್ದಾರೆ. ತಮ್ಮ ಮನೆಯ ಫ್ರಿಜ್, ಕಾರ್‌ನಷ್ಟು ದುಬಾರಿಯಾಗಿ ಇರಲಿದೆ ಎಂದು ನಾನು ಭಾವಿಸಿರಲಿಲ್ಲ ಎಂದು ಐವರ್ ವಿಡಿಯೋದಲ್ಲಿ ಹೇಳಿದ್ದಾರೆ.
ತಮ್ಮ ಮನೆಗಾಗಿ ಈ ಜೋಡಿ ಪ್ರೀಮಿಯಂ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ಅಲಾನ್ನಾ ಹೇಳಿದ್ದು, ಇದು ಮನೆಯ ಮೌಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದು ತಮ್ಮ ಹೂಡಿಕೆ ಎಂದು ಹೇಳಿದ್ದಾರೆ.



