- Home
- News
- India News
- ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ
ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ
ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, ಮಂದಿರದ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಉರುಳಿದೆ. ಸತತ ದಾಳಿಗೆ ಎದೆಯೊಡ್ಡಿ ನಿಂತ ಸೋಮನಾಥ ಮಂದಿರ ಭಾರತದ ಇತಿಹಾಸ ಹೇಳುತ್ತಿದೆ. ಈ ಸ್ವಾಭಿಮಾನ ಪರ್ವದಲ್ಲಿ ಮೋದಿ ಪಾಲ್ಗೊಂಡಿದ್ದಾರೆ.

ಮೊದಲ ದಾಳಿಯಾಗಿ 1000 ವರ್ಷ
ಗುಜರಾತ್‌ನಲ್ಲಿರುವ ಸೋಮನಾಥ ಮಂದಿರದ ಮೇಲಿನ ದಾಳಿ ಬಗ್ಗೆ ಹಲವರಿಗೆ ತಿಳಿದಿದೆ. ಆದರೆ ಕ್ರೂರತೆ ಬಗ್ಗೆ ಸ್ಪಷ್ಟ ಅರಿವಿಲ್ಲ. ಸೋಮನಾಥ ಮಂದಿರದ ಮೇಲೆ ಮೊದಲ ದಾಳಿಯಾಗಿ 2026ನೇ ಇಸವಿಗೆ ಬರೋಬ್ಬರಿ 1000 ವರ್ಷಗಳು ಸಂದಿದೆ. ಮೊಹಮ್ಮದ್ ಘಜ್ನಿ, ಘೋರಿ ಸತತ ದಾಳಿಯಲ್ಲಿ ಸೋಮನಾಥ ಮಂದಿರ ಧ್ವಂಸಗೊಂಡಿದೆ. ಆದರೆ ಪ್ರತಿ ಬಾರಿ ಹಿಂದೂ ರಾಜ ಮಹಾರಾಜರು, ಜನಸಾಮಾನ್ಯರು ಹೋರಾಟ ಮಾಡಿ ಮತ್ತೆ ಮಂದಿ ಕಟ್ಟಿದ್ದಾರೆ. ಇದೀಗ ಸೋಮನಾಥ ಮಂದಿರ ಸ್ವಾಭಿಮಾನ ಪರ್ವ ಆಚರಿಸುತ್ತಿದೆ. ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ.
ಶೌರ್ಯ ಯಾತ್ರೆ ನಡೆಸಿದ ಮೋದಿ
ಸೋಮನಾಥ ಮಂದಿರದ ಮೇಲೆ ಆಕ್ರಮಣಕಾರರು ದಾಳಿ ನಡೆಸಿದಾಗ, ದೇವಸ್ಥಾನ ಉಳಿಸಲು ಹಲವರು ಹೋರಾಡಿ ವೀರ ಮರಣ ಅಪ್ಪಿದ್ದಾರೆ. ಹೀಗೆ ತ್ಯಾಗ ಬಲಿದಾನ ಮಾಡಿದ ವೀರರ ಪುತ್ಥಳಿಗೆ ಪ್ರಧಾನಿ ಮೋದಿಹೂವು ಅರ್ಪಿಸಿ ಶೌರ್ಯ ನೆನೆದಿದ್ದಾರೆ. ಈ ಶೌರ್ಯ ಯಾತ್ರೆಯಲ್ಲಿ ಸೋಮನಾಥ ಮಂದಿರಕ್ಕೆ ಹೋರಾಡಿದ ಪ್ರತಿಯೊಬ್ಬರ ನೆನೆದಿದ್ದಾರೆ.
108 ಕುದುರೆಗಳ ಶೌರ್ಯ ಯಾತ್ರೆ
ಸೋಮನಾಥ ಮಂದಿರದ ಮೇಲೆ ಮೊಹಮ್ಮದ್ ಘಜ್ನಿ 1026 AD ಮೊದಲು ದಾಳಿ ಮಾಡಿದ್ದ. ಈ ವೇಳೆ ವೀರ್ ಹಮೀರ್ಜಿ ಗೋಹಿಲ್ ಹಾಗೂ ವೇಗದಾಜಿ ಬಿಲ್ ಕುದರೆ ಮೇಲೆ ಭಾರಿ ಹೋರಾಟ ನಡೆಸಿದ್ದರು. ದೇವಸ್ಥಾನ ಉಳಿಸಲು ಉಗ್ರ ಯುದ್ಧವೇ ನಡೆದಿತ್ತು. ಇದರ ನೆನಪಿಗಾಗಿ ಪ್ರಧಾನಿ ಮೋದಿ ಶೌರ್ಯ ಯಾತ್ರೆಯಲ್ಲಿ 108 ಕುದುರೆಯ ಯಾತ್ರೆ ನಡೆಸಲಾಗಿದೆ.
ಸೋಮನಾಥನಿಗೆ ವಿಶೇಷ ಪೂಜೆ
ಸೋಮನಾಥ ಮಂದಿರದಲ್ಲಿ ಪ್ರಧಾನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಪ್ರಧಾನಿ ಮೋದಿ ಮಹತ್ವದ ಸಂದೇಶ ಸಾರಿದ್ದಾರೆ.ಭಾರತದ ಬಹುತೇಕ ಮಂದಿರಗಳ ಮೇಲೆ ಸತತ ದಾಳಿಯಾಗಿದೆ. ಹಲವು ಮಸೀದಿಗಳಾಗಿ ಪರಿವರ್ತನೆಯಾಗಿದೆ. ಆದರೆ ಕೆಲ ಮಂದಿಗಳು ಎದೆಯೊಡ್ಡಿ ನಿಂತು ಹೋರಾಟ ಎದುರಿಸಿದೆ. ಈ ಪೈಕಿ ಸೋಮನಾಥ ಮಂದಿರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಕಿಕ್ಕಿರಿದು ಸೇರಿದ ಭಕ್ತರು
ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೋಮನಾಥ ಮಂದಿರಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ನಾಯಕರು ಭಕ್ತರತ್ತ ಕೈಬೀಸಿ ಶುಭಕೋರಿದ್ದಾರೆ.
ಓಂಕಾರ ಮಂತ್ರ ಪಠಿಸಿದ ಮೋದಿ
ಜನವರಿ 10 ರಂದು ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಓಂಕಾರ ಮಂತ್ರ ಫಟಿಸಿದ್ದಾರೆ. ಸೋಮನಾಥನ ದರ್ಶನ ಪಡೆದ ಮೋದಿ, ರಾತ್ರಿ ವೇಳೆ ಡ್ರೋನ್ ಶೋ ಕಾರ್ಯಕ್ರಮ ವೀಕ್ಷಿಸಿದರು.
ದೇಶದ ಮೂಲೆ ಮೂಲೆಗಳಿಂದ ಭಕ್ತರ ಆಗಮನ
ಸೋಮನಾಥ ಮಂದಿರಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಸೋಮನಾಥನ ದರ್ಶನ ಪಡೆದಿದ್ದರೆ. ಇದೇ ವೇಳೆ ಪ್ರಧಾನಿ ಮೋದಿ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ದೇಶದ ಮೂಲೆ ಮೂಲೆಗಳಿಂದ ಭಕ್ತರ ಆಗಮನ
ಡಮರುಗ ಹಿಡಿದ ಮೋದಿ
ಶೌರ್ಯ ಯಾತ್ರೆಯಲ್ಲಿ ಮೋದಿ ಡಮರುಗ, ತ್ರಿಶೂಲ ಹಿಡಿದು ಗಮನಸೆಳೆದಿದ್ದರು. ಭಕ್ತರು ಸೋಮನಾಥನಿಗೆ ಜೈಕಾರ ಹಾಕುವ ಜೊತೆಗೆ ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದ್ದಾರೆ.
ಡಮರುಗ ಹಿಡಿದ ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

