- Home
- Sports
- Cricket
- ಬಾಂಗ್ಲಾದೇಶ ಮಾಜಿ ನಾಯಕನನ್ನು 'ಭಾರತದ ಏಜೆಂಟ್' ಎಂದು ಕರೆದ ನಜ್ರುಲ್ ಇಸ್ಲಾಂ! ಬಾಂಗ್ಲಾ ಮಂಡಳಿ ವಿರುದ್ದವೇ ತಿರುಗಿಬಿದ್ದ ಆಟಗಾರರು
ಬಾಂಗ್ಲಾದೇಶ ಮಾಜಿ ನಾಯಕನನ್ನು 'ಭಾರತದ ಏಜೆಂಟ್' ಎಂದು ಕರೆದ ನಜ್ರುಲ್ ಇಸ್ಲಾಂ! ಬಾಂಗ್ಲಾ ಮಂಡಳಿ ವಿರುದ್ದವೇ ತಿರುಗಿಬಿದ್ದ ಆಟಗಾರರು
ಢಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ತಿಕ್ಕಾಟ ಇದೀಗ ಮತ್ತೊಂದು ಹಂತ ತಲುಪಿದ್ದು, ಟಿ20 ವಿಶ್ವಕಪ್ ಟೂರ್ನಿಯಾಡಲು ನಾವು ಭಾರತಕ್ಕೆ ಬರುವುದಿಲ್ಲ ಎಂದು ಬಾಂಗ್ಲಾದೇಶ ಪಟ್ಟು ಹಿಡಿದಿದೆ. ಹೀಗಿರುವಾಗಲೇ ಬಾಂಗ್ಲಾದೇಶ ಮಾಜಿ ನಾಯಕನ ಮೇಲೆ ನಜ್ರುಲ್ ಇಸ್ಲಾಂ ಗಂಭೀರ ಆರೋಪ ಮಾಡಿದ್ದಾರೆ.

ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರಕ್ಕೆ ಬಿಸಿಬಿ ಪಟ್ಟು
ಬಿಸಿಸಿಐ ಸೂಚನೆ ಮೇರೆಗೆ ಮುಸ್ತಾಫಿಜುರ್ ರಹಮಾನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ರಿಲೀಸ್ ಮಾಡಿದ ಬೆನ್ನಲ್ಲೇ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಾಚೆ ಸ್ಥಳಾಂತರಿಸುವಂತೆ ಐಸಿಸಿ ಬಳಿ ಪಟ್ಟು ಹಿಡಿದಿದೆ.
ಬಾಂಗ್ಲಾದೇಶದ ಗ್ರೂಪ್ ಹಂತದ ಪಂದ್ಯಗಳಿಗೆ ಭಾರತ ಆತಿಥ್ಯ
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಭಾರತ ಹಾಗೂ ಶ್ರೀಲಂಕಾ ಜಂಟಿ ಅತಿಥ್ಯ ವಹಿಸಿವೆ. ಬಾಂಗ್ಲಾದೇಶದ ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಭಾರತದ ಈಡನ್ ಗಾರ್ಡನ್ಸ್ ಹಾಗೂ ವಾಂಖೇಡೆ ಮೈದಾನದಲ್ಲಿ ನಿಗದಿಯಾಗಿವೆ.
ತಮಿಮ್ ಇಕ್ಬಾಲ್ ಕಿವಿಮಾತು
ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಬಾಂಗ್ಲಾದ ಮಾಜಿ ನಾಯಕ ತಮೀಮ್ ಇಕ್ಬಾಲ್ ಕಿವಿ ಮಾತು ಹೇಳಿದ್ದಾರೆ.
ರಾಜಕೀಯ ಅಜೆಂಡಾಗೆ ಬಲಿಯಾಗಬೇಡಿ
‘ರಾಜಕೀಯ ಅಜೆಂಡಾಗೆ ಬಲಿಯಾಗಬೇಡಿ. ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಹೋಗುವುದಿಲ್ಲ ಎನ್ನುವ ಮೊದಲು ಕ್ರಿಕೆಟ್ ಜಗತ್ತಿನಲ್ಲಿ ಬಾಂಗ್ಲಾದೇಶದ ಸ್ಥಾನ ಏನು ಎನ್ನುವುದು ನಮಗೆ ತಿಳಿದಿರಬೇಕು’ ಎಂದು ತಮೀಮ್ ಹೇಳಿದ್ದಾರೆ.
ತಮಿಮ್ ಭಾರತದ ಏಜೆಂಟ್
ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಬಿ ನಿರ್ದೇಶಕ ನಜ್ರುಲ್ ಇಸ್ಲಾಂ, ತಮೀಮ್ ಒಬ್ಬ ಭಾರತೀಯ ಏಜೆಂಟ್ ಎಂದು ಕಿಡಿಕಾಡಿದ್ದಾರೆ.
ನಜ್ರುಲ್ ಮೇಲೆ ತಿರುಗಿ ಬಿದ್ದ ಬಾಂಗ್ಲಾ ಕ್ರಿಕೆಟಿಗರು
ಇದಕ್ಕೆ ಬಾಂಗ್ಲಾದ ಹಲವು ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, 15 ವರ್ಷ ದೇಶಕ್ಕಾಗಿ ಆಡಿದ ಆಟಗಾರನ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ನಜ್ರುಲ್ ಇಸ್ಲಾಂ ಹೇಳಿಕೆ ಖಂಡಿಸಿದ ಹಿರಿ-ಕಿರಿಯ ಆಟಗಾರರು
ಬಾಂಗ್ಲಾದೇಶ ತಂಡದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರಾದ ಟಸ್ಕಿನ್ ಅಹಮದ್, ಮೊಮಿನುಲ್ ಹಕ್ ಹಾಗೂ ತೈಜುಲ್ ಇಸ್ಲಾಂ ಸೇರಿದಂತೆ ಹಲವು ಕ್ರಿಕೆಟಿಗರು ಬಿಸಿಬಿ ನಿರ್ದೇಶಕ ನಜ್ರುಲ್ ಇಸ್ಲಾಂ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ತಮಿಮ್ ಇಕ್ಬಾಲ್ ಬಾಂಗ್ಲಾದೇಶ ಕ್ರಿಕೆಟ್ ಹೀರೋ!
36 ವರ್ಷದ ತಮಿಮ್ ಇಕ್ಬಾಲ್, ಬಾಂಗ್ಲಾದೇಶ ಪರ 70 ಟೆಸ್ಟ್, 243 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದು, ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಬಾಂಗ್ಲಾದೇಶ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

