ದಿಢೀರ್ ಕುಸಿದು ಬಿದ್ದು ಇಂಡಿಯನ್ ಐಡೋಲ್ ವಿನ್ನರ್, ಪಾತಾಳ ಲೋಕ ಖ್ಯಾತಿಯ ನಟ ಸಾವು
ದಿಢೀರ್ ಕುಸಿದು ಬಿದ್ದು ಇಂಡಿಯನ್ ಐಡೋಲ್ ವಿನ್ನರ್, ಗಾಯಕ ಹಾಗೂ ನಟ ಪ್ರಶಾಂತ್ ತಮಂಗ ಮೃತಪಟ್ಟಿದ್ದಾರೆ. ಅಪ್ಪನ ಸಾವಿನಿಂದ ಮುದ್ದಿನ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಿವುಡ್ ಸಿನಿಮಾದಲ್ಲೂ ಮಿಂಚಿದ್ದ ನಟ ಸಾವು ಹಲವರಿಗೆ ಶಾಕ್ ನೀಡಿದೆ.

ಅಸ್ವಸ್ಥಗೊಂಡ ಗಾಯಕ-ನಟ ಪ್ರಶಾಂತ್ ತಮಂಗ್ ಸಾವು
ಇಂಡಿಯನ್ ಐಡೋನ್ ಮೂರನೇ ಆವೃತ್ತಿ ಗೆಲ್ಲುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದ ಗಾಯಕ ಹಾಗೂ ನಟ ಪ್ರಶಾಂತ್ ತಮಂಗ್ ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ತಮ್ಮ ನಿವಾಸದಲ್ಲಿರುವಾಗಲೇ ಘಟನೆ ನಡೆದಿದೆ. ಹೃದಯಾಘಾತದಿಂದ ಕುಸಿದು ಬಿದ್ದ ಗಾಯಕ ನಟನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬದುಕುಳಿಯಲಿಲ್ಲ.
ಪತ್ನಿ-ಮಗಳ ಆಕ್ರಂದನ
ಪ್ರಶಾಂತ್ ತಮಂಗ್ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ತಮ್ಮ ಮ್ಯೂಸಿಕ್ ಬ್ಯಾಂಡ್ ಜೊತೆ ಹಲವು ಸಂಗೀತ ಕಾರ್ಯಕ್ರಮಗಳ ಮೂಲಕ ಗಮನಸೆಳೆದಿದ್ದಾರೆ. ಹೃದಯಾಘಾತದಿಂದ 43ರ ಹರೆಯದ ತಮಂಗ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರಶಾಂತ್ ತಮಂಗ್ ಪತ್ನಿ ಹಾಗೂ ಮುದ್ದಿನ ಮಗಳ ಆಕ್ರಂದನ ಮುಗಿಲು ಮುಟ್ಟಿದೆ.
ಆರೋಗ್ಯವಾಗಿದ್ದ ಪ್ರಶಾಂತ್ ತಮಂಗ್
ಪ್ರಶಾಂತ್ ತಮಂಗ ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದಲ್ಲಿ ಲೈವ್ ಕಾನ್ಸರ್ಟ್ ಮುಗಿಸಿ ಮರಳಿದ್ದರು. ಆರೋಗ್ಯವಾಗಿದ್ದ ಪ್ರಶಾಂತ್ ತಮಂಗ್ ಯಾವುದೇ ಅಸ್ವಸ್ಥತೆ ಇರಲಿಲ್ಲ. ಆದರೆ ಏಕಾಕಿ ಹೃದಯಾಘಾತಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದಾರೆ. ಇದಕ್ಕೂ ಮೊದಲು ಒಂದು ಬಾರಿಯೂ ಪ್ರಶಾಂತ್ ತಮಂಗ್ ಗಂಭೀರ ಆರೋಗ್ಯ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಎದುರಿಸಿರಲಿಲ್ಲ.
ಇಂಡಿಯನ್ ಐಡೋಲ್ ವಿನ್ನರ್
2007ರಲ್ಲಿ ನಡೆದ ಇಂಡಿಯನ್ ಐಡೋಲ್ ಮೂರನೇ ಆವೃತ್ತಿಯಲ್ಲಿ ಪ್ರಶಾಂತ್ ಅದ್ಭುತ ಗಾಯನದ ಮೂಲಕ ಪ್ರಶಸ್ತಿ ಗೆದ್ದಿದ್ದರು. ಭಾರಿ ಜನಪ್ರಿಯತೆ ಪಡೆದಿದ್ದರು. ಬಳಿಕ ಧನ್ಯವಾದ್ ಸೇರಿದಂತೆ ಹಲವು ಆಲ್ಬಮ್ ಹಾಡುಗಳನ್ನು ಹೊರತಂದಿದ್ದರು. ಪ್ಲೇಬಾಕ್ ಸಿಂಗರ್ ಆಗಿ, ಲೈವ್ ಕಾನ್ಸರ್ಟ್ ಮೂಲಕವೂ ಭಾರಿ ಜನಪ್ರಿಯತೆ ಪಡೆದಿದ್ದರು.
ಪಾತಾಳ ಲೋಕ 2ನಲ್ಲಿ ಭಾರಿ ಮೆಚ್ಚುಗೆ
ಪಾತಾಳ ಲೋಕದ 2 ಸೀಸನ್‌ನಲ್ಲಿ ಪ್ರಶಾಂತ್ ತಮಂಗ್ ಅದ್ಭುತ ನಟನಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಡ್ಯಾನಿಯಲ್ ಲೆಚೋ ಪಾತ್ರದ ಮೂಲಕ ಗಮನಸೆಳೆದಿದ್ದರು. ಗೂರ್ಖಾ ಸಮುದಾಯದ ಪ್ರಶಾಂತ್ ತಮಂಗ್, ಹಲವು ಹಿಂದಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಗೋರ್ಖಾ ಪಲ್ಟಾನ್ ಸಿನಿಮಾ ಮೂಲಕ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಕಷ್ಟದಲ್ಲಿ ಬೆಳೆದು ಬಂದಿದ್ದ ತಮಂಗ್
ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಪ್ರಶಾಂತ್ ತಮಂಗ್ ಬಡತನದಲ್ಲಿ ಬೆಳೆದಿದ್ದರು. ಕೋಲ್ಕತಾ ಪೊಲೀಸ್ ಪೇದೆಯಾಗಿ ವೃತ್ತಿ ಸೇವೆ ಆರಂಭಿಸಿದ ಪ್ರಶಾಂತ್ ತಮಂಗ್, ಮ್ಯೂಸಿಕ್‌ನಲ್ಲಿನ ಆಸಕ್ತಿಯಿಂದ ಗಾಯನ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. 2007ರಲ್ಲಿ ಇಂಡಿಯನ್ ಐಡೋಲ್ ಗೆಲುವಿನ ಮೂಲಕ ಅದ್ಭುತ ಗಾಯಕನಾಗಿ ಗುರುತಿಸಿಕೊಂಡಿದ್ದರು.
ಕಷ್ಟದಲ್ಲಿ ಬೆಳೆದು ಬಂದಿದ್ದ ತಮಂಗ್
ಟಿವಿ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿದ್ದ ತಮಂಗ್
ಹಲವು ಟಿವಿ ಕಾರ್ಯಕ್ರಮಗಳಲ್ಲಿ ತಮಂಗ್ ಸಕ್ರಿಯರಾಗಿದ್ದು. ವೆಬ್ ಸೀರಿಸ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ತಮಂಗ್ ಕಾಣಿಸಿಕೊಂಡಿದ್ದರು. ಇನ್ನು ತಮಂಗ್ ಸಾವಿಗೆ ಹಲವು ಸೆಲೆಬ್ರೆಟಿಗಳು ಆಘಾತ ವ್ಯಕ್ತಪಡಿಸಿದ್ದಾರೆ.
ಟಿವಿ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿದ್ದ ತಮಂಗ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

