11:33 PM (IST) Mar 31

India Latest News Live 31 March 2026IPL 2026 - ಗುಜರಾತ್‌ ಟೈಟಾನ್ಸ್‌ಗೆ ಶಾಕ್ ಕೊಟ್ಟ ಪಂಜಾಬ್ ಕಿಂಗ್ಸ್!

ಕೂಪರ್ ಕೊನೊಲಿ ಅವರ ಅಜೇಯ ಅರ್ಧಶತಕ ಮತ್ತು ವೈಶಾಕ್ ವಿಜಯ್‌ಕುಮಾರ್ ಅವರ ಮಾರಕ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. 163 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್, ಕೊನೊಲಿ ಅವರ 72 ರನ್‌ಗಳ ಏಕಾಂಗಿ ಹೋರಾಟದಿಂದಾಗಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.
Read Full Story
10:47 PM (IST) Mar 31

India Latest News Live 31 March 2026ಪಿಂಕ್ ಫೋಟೋಶೂಟ್‌ನಲ್ಲಿ ಭಾಗಿಯಾದ ಆನೆ ನಾಲ್ಕೇ ತಿಂಗಳಿಗೆ ನಿಗೂಢ ಸಾವು - ಬಣ್ಣ ಹಾಕಿದ್ದಕ್ಕೆ ಪ್ರಾಣಿಪ್ರಿಯರ ತೀವ್ರ ಆಕ್ರೋಶ

ಜೈಪುರದಲ್ಲಿ ವಿದೇಶಿ ಕಲಾವಿದೆಯೊಬ್ಬರು ಆನೆಗೆ ಪಿಂಕ್ ಬಣ್ಣ ಬಳಿದು ನಡೆಸಿದ ಫೋಟೋಶೂಟ್ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ಚಂಚಲ್ ಹೆಸರಿನ ಆನೆ ಸಾವನ್ನಪ್ಪಿದ್ದು,, ಅದರ ಸಾವಿಗೆ ಫೋಟೋಶೂಟ್ ಕಾರಣ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

Read Full Story
08:56 PM (IST) Mar 31

India Latest News Live 31 March 2026ಸಿಎಸ್‌ಕೆ ಸೋಲಿಸಲು ಬರ್ತ್‌ಡೇ ಕೇಕ್ ಕಟ್ಟಿಂಗ್ ತ್ಯಾಗ ಮಾಡಿದ ವೈಭವ್ ಸೂರ್ಯವಂಶಿ

ಸಿಎಸ್‌ಕೆ ಸೋಲಿಸಲು ಬರ್ತ್‌ಡೇ ಕೇಕ್ ಕಟ್ಟಿಂಗ್ ತ್ಯಾಗ ಮಾಡಿದ ವೈಭವ್ ಸೂರ್ಯವಂಶಿ, 15 ರ ಪೋರ ಮೊದಲ ಪಂದ್ಯದಲ್ಲೇ ಅತೀವೇಗದ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದು ಮಾತ್ರವಲ್ಲ, ರಾಜಸ್ಥಾನಕ್ಕೆ ಭರ್ಜರಿ ಗೆಲುವು ನೀಡಿದ್ದಾರೆ.

Read Full Story
08:27 PM (IST) Mar 31

India Latest News Live 31 March 2026ಹಾರ್ಮುಜ್ ಜಲಸಂಧಿಯಿಂದ ಭಾರತದ ಕರಾವಳಿಗೆ ಹಡಗು ತಲುಪಲು ಎಷ್ಟು ದಿನ ಬೇಕು? ಇಂಧನದ ಖರ್ಚು ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ!

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದಿಂದ ಹಾರ್ಮುಜ್ ಜಲಸಂಧಿಯ ಮಾರ್ಗವು ಅನಿಶ್ಚಿತವಾಗಿದೆ. ಈ ಲೇಖನವು ಹಾರ್ಮುಜ್‌ನಿಂದ ಭಾರತದ ಕರಾವಳಿಗೆ, ವಿಶೇಷವಾಗಿ ಗುಜರಾತ್ ಮತ್ತು ಮುಂಬೈಗೆ, ಹಡಗು ತಲುಪಲು ಬೇಕಾಗುವ ಸಮಯ, ಇಂಧನ ಬಳಕೆ ಮತ್ತು ಪ್ರಯಾಣದ ದುಬಾರಿ ವೆಚ್ಚದ ಬಗ್ಗೆ ವಿವರಿಸುತ್ತದೆ.
Read Full Story
08:11 PM (IST) Mar 31

India Latest News Live 31 March 2026'ಗುಣಪಡಿಸುವ' ಹೆಸರಲ್ಲಿ ಕಾಮದಾಟ - ಮಂತ್ರ ಪಠಿಸುತ್ತಲೇ ಮಹಿಳೆಯರ ಖಾಸಗಿ ಅಂಗ ಮುಟ್ಟುವ ಕಾಮುಕ ಬಾಬಾಗಳು!

ದಿವ್ಯಶಕ್ತಿ ಮತ್ತು ಪವಾಡದ ಹೆಸರಿನಲ್ಲಿ ನಕಲಿ ಬಾಬಾಗಳು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಕರಾಳ ಸತ್ಯವನ್ನು ಈ ಲೇಖನ ಅನಾವರಣಗೊಳಿಸುತ್ತದೆ. ಇಬ್ಬರು ಸಂತ್ರಸ್ತೆಯರ ಭಯಾನಕ ಅನುಭವವನ್ನು ಸುದ್ದಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.

Read Full Story
07:29 PM (IST) Mar 31

India Latest News Live 31 March 2026ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು

ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್, ತಮ್ಮ ವೃತ್ತಿಜೀವನದ ಆರಂಭದಲ್ಲಿ 'ಪನೌತಿ' ಅಥವಾ 'ಅಪಶಕುನಿ' ಎಂಬ ಪಟ್ಟವನ್ನು ಎದುರಿಸಿದ್ದರು. ಮಲಯಾಳಂ ಚಿತ್ರವೊಂದು ನಿಂತುಹೋದ ಕಾರಣ, 9 ಚಿತ್ರಗಳಿಂದ ಕೈಬಿಡಲಾಗಿತ್ತು. ಅವರು 'ಪರಿಣೀತಾ' ಮತ್ತು 'ಡರ್ಟಿ ಪಿಕ್ಚರ್' ನಂತಹ ಚಿತ್ರಗಳ ಮೂಲಕ ಸ್ಟಾರ್ ಆಗಿ ಬೆಳೆದರು.

Read Full Story
06:30 PM (IST) Mar 31

India Latest News Live 31 March 2026ಸುತ್ತಲೂ ಸ್ನೇಹಿತರೇ ಇದ್ದರೂ ಆತ ಮುಳುಗಿದ್ದು ಒಬ್ಬರಿಗೂ ಗೊತ್ತಾಗೇ ಇಲ್ಲ - ಈಜುಕೊಳದಲ್ಲಿ ಮುಳುಗಿ ಯುವಕ ಸಾವು

ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಘಾತಕಾರಿ ಸಂಗತಿ ಎಂದರೆ, ಸ್ನೇಹಿತರು ಜೊತೆಯಲ್ಲಿದ್ದರೂ ಆತ ಮುಳುಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ, ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.
Read Full Story
06:29 PM (IST) Mar 31

India Latest News Live 31 March 2026ಗ್ಯಾಸ್‌ ಸಿಲಿಂಡರ್ ಬೇಡವೇ ಬೇಡ! ವೇಸ್ಟ್ ಎಂಜಿನ್ ಆಯಿಲ್‌ನಲ್ಲೇ ಜಿಲೇಬಿ ಸುಡುವ 'ಮ್ಯಾಜಿಕ್ ಸ್ಟೌವ್' ಕಂಡುಹಿಡಿದ ವ್ಯಾಪಾರಿ

ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ ಕೊರತೆಗೆ ಪರಿಹಾರವಾಗಿ, ಬಳಸಿ ಎಸೆದ ಎಂಜಿನ್ ಆಯಿಲ್‌ನಿಂದ ಉರಿಯುವ 'ಮ್ಯಾಜಿಕ್ ಸ್ಟೌವ್' ಅನ್ನು ಕಂಡುಹಿಡಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವಲಂಬನೆಯಿಲ್ಲದೆ ತಮ್ಮ ಜಿಲೇಬಿ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.

Read Full Story
06:01 PM (IST) Mar 31

India Latest News Live 31 March 2026ಬಿಹಾರದ ನಳಂದಾ ದೇಗುಲದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಭಾರಿ ಕಾಲ್ತುಳಿತ - 9 ಜನರು ಸಾವು

ಬಿಹಾರದ ನಳಂದ ಜಿಲ್ಲೆಯ ಶೀತಲಾ ಮಾತಾ ದೇವಾಲಯದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ನಿರೀಕ್ಷೆ ಮೀರಿ ಜನಸಂದಣಿ ಸೇರಿದ್ದರಿಂದ ಮತ್ತು ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ. 

Read Full Story
05:47 PM (IST) Mar 31

India Latest News Live 31 March 2026ಗಂಟೆಗಟ್ಟಲೆ ವರ್ಕೌಟ್, ಸಸ್ಯಾಹಾರದಲ್ಲೇ ದೈತ್ಯ ದೇಹ - ರಾಮ್ ಚರಣ್ ಲುಕ್ ನೋಡಿ ದಂಗಾದ ಫ್ಯಾನ್ಸ್!

'ಪೆದ್ದಿ' ಸಿನಿಮಾಗಾಗಿ ರಾಮ್ ಚರಣ್ ಸಂಪೂರ್ಣ ಸಸ್ಯಾಹಾರ ಸೇವಿಸಿ, 8 ತಿಂಗಳ ಕಠಿಣ ತಾಲೀಮಿನಿಂದ ದೈತ್ಯ ದೇಹವನ್ನು ಪಡೆದಿದ್ದಾರೆ. ಈ ಬಗ್ಗೆ ನಿರ್ದೇಶಕ ಬುಚಿ ಬಾಬು ಸನಾ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story
05:38 PM (IST) Mar 31

India Latest News Live 31 March 2026ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು

ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು, ಜೀವಂತ ಬೆಟ್ಟಾ ಮೀನುನ್ನು ಕಾಕ್‌ಟೇಲ್‌ನಲ್ಲಿ ಹಾಕಿ ಕೊಡಲಾಗುತ್ತಿತ್ತು. ಕಾಕ್‌ಟೇಲ್‌ನಲ್ಲಿ ಮೀನು ಹಾಕಿ ನೀಡುವುದೇಕೆ?

Read Full Story
05:25 PM (IST) Mar 31

India Latest News Live 31 March 2026ಜಾಹೀರಾತಲ್ಲಿ ಕಾಣಿಸಿಕೊಂಡು ನಿಮ್ಮನ್ನೂ ಪ್ರೇರೇಪಿಸುವ ಸೆಲೆಬ್ರಿಟಿಗಳು ಆಮೇಲೆ ಮಾಡೋದು ಇದನ್ನೇ ನೋಡಿ

ಕೋಟ್ಯಂತರ ರೂಪಾಯಿ ಪಡೆದು ಚಿತ್ರತಾರೆಯರು ಮತ್ತು ಕ್ರಿಕೆಟಿಗರು ಪಾನ್ ಮಸಾಲಾ, ಪಾನೀಯಗಳಂತಹ ಹಾನಿಕಾರಕ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತಾರೆ. ಈ ಜಾಹೀರಾತುಗಳನ್ನು ನಂಬಿ ವಿಷಕಾರಿ ವಸ್ತುಗಳನ್ನು ಸೇವಿಸುವ ಅಭಿಮಾನಿಗಳು ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಈ ಸೆಲೆಬ್ರಿಟಿಗಳು ತಾವು ಪ್ರಚಾರ ಮಾಡುವ ಉತ್ಪನ್ನಗಳನ್ನು ಬಳಸುವುದಿಲ್ಲ ಎನ್ನುವ ಸತ್ಯವನ್ನು ಈ ಲೇಖನ ಬಯಲು ಮಾಡುತ್ತದೆ.
Read Full Story
05:15 PM (IST) Mar 31

India Latest News Live 31 March 2026Kayadu Lohar - 'ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ' - ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್!

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, "ನೀವು ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ, ಆದರೂ ಯಾಕೆ ಇನ್ನೂ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಿದ್ದೀರಿ?" ಎಂದು ಕಯಾದುಗೆ ಪ್ರಶ್ನೆ ಕೇಳಿದರು.

Read Full Story
04:59 PM (IST) Mar 31

India Latest News Live 31 March 2026UAE ಬೇಸ್‌ನಲ್ಲಿದ್ದ 200 ಸಿಬ್ಬಂದಿಗಳ ಯುಎಸ್‌ ಕಮಾಂಡ್‌ ಸೆಂಟರ್‌ ಮೇಲೆ ಡ್ರೋನ್‌ ದಾಳಿ ಮಾಡಿದ ಇರಾನ್‌

ಯುಎಇಯಲ್ಲಿರುವ ಅಮೆರಿಕದ ಹಿರಿಯ ಕಮಾಂಡರ್‌ಗಳ ಸಭೆಯನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಇದಕ್ಕೂ ಮುನ್ನ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಈ ಸಂಘರ್ಷವು ಕೊಲ್ಲಿ ರಾಷ್ಟ್ರಗಳಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸಿದೆ.

Read Full Story
04:53 PM (IST) Mar 31

India Latest News Live 31 March 2026ಹಿಮಾಚಲದ ಗಾಳಿಯನ್ನು ಬಾಟಲ್‌ನಲ್ಲಿ ತುಂಬಿಸಿ ತಂದು ದೆಹಲಿಯಲ್ಲಿ ಮಾರಾಟ ಮಾಡಿದ ಯುವಕ - ವೀಡಿಯೋ ಭಾರಿ ವೈರಲ್

ದೆಹಲಿಯ ತೀವ್ರ ವಾಯು ಮಾಲಿನ್ಯವನ್ನೇ ಬಂಡವಾಳವಾಗಿಸಿಕೊಂಡ ಯುವಕನೊಬ್ಬ, ಹಿಮಾಲಯದ ಶುದ್ಧ ಗಾಳಿಯನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದಾನೆ. ಈತನ ವಿಶಿಷ್ಟ ಬ್ಯುಸಿನೆಸ್ ಐಡಿಯಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story
04:51 PM (IST) Mar 31

India Latest News Live 31 March 2026ಬಿರಿಯಾನಿ ಮಾಡ್ತಿದ್ದ ನಟ ಅಜಿತ್ ಕುಮಾರ್ ಪತ್ನಿ ಶಾಲಿನಿ ತಮಾಷೆ - ವೈರಲ್ ಆಯ್ತು ಕ್ಯೂಟ್ ವಿಡಿಯೋ!

ಅಜಿತ್ ಕುಮಾರ್ 'ಕಪಲ್ ಗೋಲ್ಸ್' ಎನಿಸುವಂತಹ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಜಿತ್ ತಮ್ಮ ಸ್ಪೆಷಲ್ ಬಿರಿಯಾನಿ ಮಾಡುತ್ತಿದ್ದಾಗ, ಪತ್ನಿ ಶಾಲಿನಿ ಅವರನ್ನು ತಮಾಷೆ ಮಾಡಿದ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.

Read Full Story
04:36 PM (IST) Mar 31

India Latest News Live 31 March 2026ಇಂಡಿಗೋಗೆ ಹೊಸ ಬಾಸ್ - ಬ್ರಿಟಿಷ್ ಏರ್‌ವೇಸ್ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ನೂತನ ಸಿಇಒ

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ 'ಇಂಡಿಗೋ' (IndiGo), ಜಾಗತಿಕ ವಾಯುಯಾನ ಕ್ಷೇತ್ರದ ದಿಗ್ಗಜ ವಿಲಿಯಂ ವಾಲ್ಷ್ ಅವರನ್ನು ತನ್ನ ನೂತನ ಸಿಇಒ (CEO) ಆಗಿ ನೇಮಕ ಮಾಡಿದೆ.ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಹಠಾತ್ ಆಗಿ ರಾಜೀನಾಮೆ ನೀಡಿದ ಮೂರು ವಾರಗಳ ಒಳಗೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ.

Read Full Story
03:32 PM (IST) Mar 31

India Latest News Live 31 March 2026ಶಿರಸಿಯ ಗೌರಿ ಬಾವಿ ತೆಗೆದಂತೆ ಏಕಾಂಗಿಯಾಗಿ ನದಿ ಸ್ವಚ್ಛಗೊಳಿಸಿದ ಬಿಟ್ಟು - ಟೀಕಿಸಿದವರೇ ಮೆಚ್ಚಿದರು

ಮಧ್ಯಪ್ರದೇಶದ 20 ವರ್ಷದ ಯುವಕ ಬಿಟ್ಟು ತಬಾಹಿ, ತೀವ್ರ ಕಲುಷಿತಗೊಂಡಿದ್ದ ಅಜ್ನರ್ ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದಾರೆ. ಟೀಕೆಗಳನ್ನು ಮೆಟ್ಟಿನಿಂತ, ಅವರ ದೃಢ ಸಂಕಲ್ಪದಿಂದ ನದಿಗೆ ಮರುಜೀವ ಬಂದಿದ್ದು, ಟೀಕಿಸಿದವರೇ ಹೊಗಳುತ್ತಿದ್ದಾರೆ.

Read Full Story
03:16 PM (IST) Mar 31

India Latest News Live 31 March 2026'ಆ ಪ್ಲಾನ್ ಫೇಲ್ ಆಗಿದ್ರೆ ನಾನು ದಡ್ಡ ಆಗ್ತಿದ್ದೆ'; ಸಂಜು ಸ್ಯಾಮ್ಸನ್ ವಿಕೆಟ್ ರಹಸ್ಯ ಬಿಚ್ಚಿಟ್ಟ ರಿಯಾನ್ ಪರಾಗ್!

ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿಗೆ ಸಂಜು ಸ್ಯಾಮ್ಸನ್‌ರನ್ನು ಔಟ್ ಮಾಡಲು ರೂಪಿಸಿದ್ದ ವಿಶೇಷ ತಂತ್ರವನ್ನು ಬಹಿರಂಗಪಡಿಸಿದ್ದಾರೆ. ಸಂಜು ಅವರ ನೆಚ್ಚಿನ ಶಾಟ್‌ಗಳನ್ನು ಆಡಲು ಬಿಡದೆ, ಬೇರೆ ಶಾಟ್ ಆಡುವಂತೆ ಮಾಡಿ ವಿಕೆಟ್ ಪಡೆಯಲಾಯಿತು ಎಂದು ಅವರು ವಿವರಿಸಿದ್ದಾರೆ. ಈ ಪಂದ್ಯದಲ್ಲಿ ಸಿಎಸ್‌ಕೆ 127 ರನ್‌ಗಳಿಗೆ ಆಲೌಟ್ ಆಗಿದ್ದು, ರಾಜಸ್ಥಾನ ಸುಲಭವಾಗಿ ಜಯ ಸಾಧಿಸಿತು.
Read Full Story
03:13 PM (IST) Mar 31

India Latest News Live 31 March 2026ಗುರೂಜಿಯ 150 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್, ಪತ್ನಿಯರ ಸ್ವಾಪಿಂಗ್ ಬಯಲು

ಗುರೂಜಿಯ 150 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್, ಪತ್ನಿಯರ ಸ್ವಾಪಿಂಗ್ ಬಯಲು, ಪೂಜೆ, ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯರನ್ನು ಕಚೇರಿಯಲ್ಲೇ ಬಳಸಿಕೊಂಡ ಪ್ರಕರಣದಲ್ಲಿ ಇದೀಗ ಮತ್ತೊಂದ ಗಂಭೀರ ಆರೋಪ ಕೇಳಿಬಂದಿದೆ.

Read Full Story