ಕೋಟ್ಯಂತರ ರೂಪಾಯಿ ಪಡೆದು ಚಿತ್ರತಾರೆಯರು ಮತ್ತು ಕ್ರಿಕೆಟಿಗರು ಪಾನ್ ಮಸಾಲಾ, ಪಾನೀಯಗಳಂತಹ ಹಾನಿಕಾರಕ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತಾರೆ. ಈ ಜಾಹೀರಾತುಗಳನ್ನು ನಂಬಿ ವಿಷಕಾರಿ ವಸ್ತುಗಳನ್ನು ಸೇವಿಸುವ ಅಭಿಮಾನಿಗಳು ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಈ ಸೆಲೆಬ್ರಿಟಿಗಳು ತಾವು ಪ್ರಚಾರ ಮಾಡುವ ಉತ್ಪನ್ನಗಳನ್ನು ಬಳಸುವುದಿಲ್ಲ ಎನ್ನುವ ಸತ್ಯವನ್ನು ಈ ಲೇಖನ ಬಯಲು ಮಾಡುತ್ತದೆ.

ಅದೆಷ್ಟೋ ಮಂದಿಗೆ ಚಿತ್ರತಾರೆಯರು, ಕ್ರಿಕೆಟಿಗರು ಅಂದರೆ ಅಪ್ಪಟ ಅಭಿಮಾನ. ಕೆಲವರಿಗೆ ಅದೆಷ್ಟು ಅಭಿಮಾನ ಎಂದರೆ ಅವರನ್ನೇ ದೇವರು ಎಂದುಕೊಂಡುಬಿಟ್ಟಿರುತ್ತಾರೆ. ಅವರು ಮಾಡಿದ್ದೆಲ್ಲವನ್ನೂ ಪ್ರಸಾದ ಎಂದು ಸ್ವೀಕರಿಸುವವರೂ ಇದ್ದಾರೆ. ಅವರನ್ನು ನೋಡಲು ಪ್ರಾಣವನ್ನೂ ಪಣಕ್ಕಿಡುವ ಅಂಧಾಭಿಮಾನಿಗಳೂ ಕಡಿಮೆ ಏನಿಲ್ಲ. ಆದರೆ, ಇವರ ಪೈಕಿ ಅದೆಷ್ಟೋ ತಾರೆಯರು, ಜಾಹೀರಾತಿನ ಹೆಸರಿನಲ್ಲಿ, ಅದೇ ಅಭಿಮಾನಿಗಳನ್ನು ಸಾವಿನ ಬಾಯಿಗೆ ನೂಕುತ್ತಿದ್ದಾರೆ ಎನ್ನುವುದು ಬಹುಶಃ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕೋಟಿ ಕೋಟಿ ರೂಪಾಯಿ ಹಣವನ್ನು ಜಾಹೀರಾತು ಕಂಪೆನಿಗಳಿಂದ ಪಡೆದು ತಮ್ಮದೇ ಅಭಿಮಾನಿಗಳಿಗೆ ವಿಷವನ್ನು ನೀಡುತ್ತಿದ್ದಾರೆ ಕೆಲವರು.

ದುಡ್ಡು ಪಡೆದು ಅಭಿಮಾನಿಗಳಿಗೆ ವಿಷ ನೀಡುವವರು!

ಕೆಲವು ವಿದೇಶಿ ಪಾನೀಯಗಳ ಜಾಹೀರಾತುಗಳಲ್ಲಿ ನಟಿಸುವ ಚಿತ್ರ ನಟರು, ಕ್ರಿಕೆಟಿಗರನ್ನು ನೋಡಿ ಪ್ರತಿನಿತ್ಯ ವಿಷ ಸೇವನೆ ಮಾಡಿ ಕ್ಯಾನ್ಸರ್​ನಂಥ ಮಾರಕ ರೋಗಗಳಿಗೆ ಬಲಿಯಾಗುತ್ತಿರುವವರು ಅದೆಷ್ಟೋ ಮಂದಿ. ಇನ್ನು ದಿನನಿತ್ಯ ಬಳಸುವ ಪಾನೀಯ, ಶ್ಯಾಂಪೂ, ಪಾನ್​ ಮಸಾಲಾ, ಎಣ್ಣೆ, ಹಣ್ಣುಗಳ ಜ್ಯೂಸ್​, ಚಿಪ್ಸ್​, ಟೂಥ್​ಪೇಸ್ಟ್​... ಹೀಗೆ ಪ್ರತಿಯೊಂದಕ್ಕೂ ಸೆಲೆಬ್ರಿಟಿಗಳನ್ನು ಬಳಸಿಕೊಂಡು, ಅವರಿಗೆ ಕೋಟಿ ಕೋಟಿ ಹಣ ಕೊಟ್ಟು ಜಾಹೀರಾತು ಮಾಡಿ ಜನರನ್ನು ಮರಳು ಮಾಡುವ ತಂತ್ರ ಬಹುದೊಡ್ಡದಿದೆ.

ಅದನ್ನು ಕುಡಿದು, ಇದನ್ನು ತಿಂದು, ಮತ್ತೊಂದನ್ನು ಹಚ್ಚಿಕೊಂಡು!

ಪಾನ್​ ಮಸಾಲಾ ಆ್ಯಡ್​ ಮಾಡುವ ತಾರೆಯರು ಅಸಲಿಗೆ ಅದನ್ನು ಸೇವಿಸುವುದೇ ಇಲ್ಲ. ಈ ಶ್ಯಾಂಪೂ ಬಳಸಿದರೆ, ಕೂದಲು ಹೀಗಾಗುತ್ತದೆ ಎನ್ನುವ ನಟಿಯರು ಆ ಕೂದಲನ್ನು ಅಂದಗೊಳಿಸಲು ಗಂಟೆಗಟ್ಟಲೆ ಹೇಗೆ ಹೇರ್ ಸ್ಟೈಲಿಷ್​ ಮುಂದೆ ಕುಳಿತುಕೊಳ್ಳುತ್ತಾರೆ, ಬಿಯರ್​ ಜಾಹೀರಾತಿನಲ್ಲಿ ಪೆಟ್ರೋಲ್​ ಹೇಗೆ ಬಳಸಲಾಗುತ್ತದೆ, ಚಿಪ್ಸ್​ ಜಾಹೀರಾತಿನಲ್ಲಿ ಹೇಗೆ ನಕಲಿ ಚಿಪ್ಸ್​ ಬಳಸುತ್ತಾರೆ. ಅಡುಗೆ ಸಾಮಗ್ರಿ ಅಥವಾ ವಿವಿಧ ರೀತಿಯ ಅಡುಗೆ ಪುಡಿಗಳ ಬಳಕೆಯಲ್ಲಿ ಹೇಗೆ ಬೇರೆ ಬಣ್ಣಗಳನ್ನು ಬಳಸಿ ಜನರನ್ನು ಮರಳು ಮಾಡಲಾಗುತ್ತದೆ ಎನ್ನುವ ಬಗ್ಗೆ ಇದಾಗಲೇ ವಿಡಿಯೋ ಕೂಡ ವೈರಲ್​ ಆಗಿತ್ತು.

ಕ್ರಿಕೆಟ್​ ತಾರೆಯರು, ಸಿನಿಮಾ ಸ್ಟಾರ್​ ನಟರು ಬಳಸುವ ವಿದೇಶಿ ಪಾನೀಯಗಳಲ್ಲಿ ಇರುವ ಕ್ರಿಮಿ ನಾಶಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಫಾಸ್ಟ್​ ಫುಡ್​ಗಳಲ್ಲಿ ಬಳಸುವ ಅಪಾಯಕಾರಿ, ಕ್ಯಾನ್ಸರ್​ಗೆ ತುತ್ತಾಗುವ ವಿಷದ ಬಗ್ಗೆಯೂ ಸದ್ದು ಮಾಡಿತ್ತು. ಪ್ರಯೋಗಾಲಯಗಳಲ್ಲಿಯೇ ಇದನ್ನು ಸಾಬೀತು ಮಾಡಲಾಗಿತ್ತು. ಪಾನ್​ ಮಸಾಲಾ ತಿಂದರೆ ಬಾಯಿಯ ಕ್ಯಾನ್ಸರ್​ ಹೇಗೆ ಬರುತ್ತದೆ ಎನ್ನುವ ಸರ್ಕಾರಿ ಜಾಹೀರಾತುಗಳೂ ಬರುತ್ತವೆ, ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕ್ಯಾನ್ಸರ್​ ರೋಗಕ್ಕೆ ಇಂಥ ಜಾಹೀರಾತುಗಳು ಹಾಗೂ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳ ಕೊಡುಗೆ ಬಹುದೊಡ್ಡದು ಇದೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಭಾರಿ ಚರ್ಚೆಯೇ ನಡೆದಿತ್ತು.

ಈ ವೈರಲ್​ ವಿಡಿಯೋ ನೋಡಿ

ಇದೀಗ ಇಲ್ಲೊಂದು ವಿಡಿಯೋ ವೈರಲ್​ ಆಗಿದೆ ನೋಡಿ. ಇದು ಪಾನೀಯದ ಜಾಹೀರಾತು. ಇದರಲ್ಲಿ ಸೆಲೆಬ್ರಿಟಿಯೊಬ್ಬರು ಜಾಹೀರಾತಿನ ಶೂಟಿಂಗ್​ ಮಾಡುವಾಗ ಅದನ್ನು ಸೇವಿಸಿ, ಅತ್ತ ಕಟ್​ ಎನ್ನುತ್ತಿದ್ದಂತೆಯೇ ಅದನ್ನು ಉಗಿಯುವುದನ್ನು ನೋಡಬಹುದು. ಆದರೆ, ಅದೇ ಜಾಹೀರಾತು ಕಂಪೆನಿಗಳು ಇವರನ್ನು ತೋರಿಸಿ, ಆ ಪಾನೀಯದ ಮೇಲೆ ಅರೆಬರೆ ಡ್ರೆಸ್​ ಹಾಕಿರೋ ಇನ್ನೋರ್ವ ನಟಿಯನ್ನು ತೋರಿಸಿ ಆಕೆಯ ಕೈಯಲ್ಲಿ ಅದೇ ಪಾನೀಯದ ಬಾಟಲ್​ ಇಟ್ಟಿದೆ. ಇದನ್ನು ನೋಡಿದ ಅಭಿಮಾನಿಗಳು ಅದನ್ನು ಕುಡಿದು ತಾವೂ ಸೆಲೆಬ್ರಿಟಿ ಲೆವಲ್​ಗೆ ಹೋಗಿಬಿಟ್ಟೆವು ಎಂದು ಖುಷಿ ಪಡುತ್ತಾರೆ.

ಪಾನ್​​ ಮಸಾಲಾ ಆ್ಯಡ್​

ಕೆಲ ದಿನಗಳ ಹಿಂದೆ ಪಾನ್​ ಮಸಾಲಾ ಜಾಹೀರಾತಿನಿಂದ ನಟ ಅಕ್ಷಯ್​ ಕುಮಾರ್​ ಹಿಂದಕ್ಕೆ ಸರಿದಿದ್ದರು. ಆದರೆ ಶಾರುಖ್, ಟೈಗರ್​ ಟ್ರಾಫ್​ ಸೇರಿದಂತೆ ಇನ್ನೂ ಕೆಲವರು ಇಂಥ ಜಾಹೀರಾತು ಮಾಡುತ್ತಲೇ ಇದ್ದಾರೆ. ಯಾವುದೇ ಕಾರಣಕ್ಕೂ ಸುಲಭದಲ್ಲಿ ಸಿಗುವ ಕೋಟಿ ಕೋಟಿ ಹಣ ಬಿಡಲು ಮನಸ್ಸು ಬರಬೇಕಲ್ಲ! ಸ್ಯಾಂಡಲ್​ವುಡ್​ ನಟ ಯಶ್​ ಕೂಡ ಪಾನ್​ ಮಸಾಲಾ ಜಾಹೀರಾತನ್ನು ಒಪ್ಪಿಕೊಂಡಿರಲಿಲ್ಲ. ಈಚೆಗಷ್ಟೇ ಅನಿಲ್​ ಕಪೂರ್​ 10 ಕೋಟಿ ರೂಪಾಯಿ ಆಫರ್​ ರಿಜೆಕ್ಟ್​ ಮಾಡಿದ್ದು ಸದ್ದು ಮಾಡಿತ್ತು. ಆದರೆ ಎಲ್ಲಾ ಸೆಲೆಬ್ರಿಟಿಗಳೂ ಹೀಗೆಯೇ ಇರಬೇಕೆಂದೇನೂ ಇಲ್ಲ.

View post on Instagram