ದೆಹಲಿಯ ತೀವ್ರ ವಾಯು ಮಾಲಿನ್ಯವನ್ನೇ ಬಂಡವಾಳವಾಗಿಸಿಕೊಂಡ ಯುವಕನೊಬ್ಬ, ಹಿಮಾಲಯದ ಶುದ್ಧ ಗಾಳಿಯನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದಾನೆ. ಈತನ ವಿಶಿಷ್ಟ ಬ್ಯುಸಿನೆಸ್ ಐಡಿಯಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗಾಳಿಯೂ ಆಯ್ತು ದುಬಾರಿ: ಯುವಕನ ವೀಡಿಯೋ ಭಾರಿ ವೈರಲ್

ಕೆಲ ದಿನಗಳ ಹಿಂದೆ ವೀಡಿಯೋವೊಂದು ಭಾರಿ ವೈರಲ್ ಆಗಿತ್ತು. ರಸ್ತೆ ಬದಿ ಸಿಕ್ಕ ಸಾಮಾನ್ಯವಾದ ಕಲ್ಲೊಂದನ್ನು ಯುವಕನೋರ್ವ ಕಲ್ಲು ಕಟ್ ಮಾಡುವ ಮೆಷಿನ್ ಬಳಸಿ ಅದಕ್ಕೊಂದು ಶೇಪ್ ನೀಡಿ ದೆಹಲಿಯಂತಹ ಮಹಾನಗರಿಯಲ್ಲಿ ಮಾರಾಟ ಮಾಡಿ 4 ಸಾವಿರ ರೂಪಾಯಿ ಗಳಿಸಿದ್ದ. ಯುವಕನ ವೀಡಿಯೋ ಆಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಘಟನೆ ಮಾಸುವ ಮೊದಲೇ ಈಗ ದೆಹಲಿಯಲ್ಲಿ ಇದೇ ರೀತಿಯ ಬ್ಯುಸಿನೆಸ್ ಟ್ರಿಕ್ ಹೊಂದಿರುವ ಯುವಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಮಾಚಲದ ಗಾಳಿ ದೆಹಲಿಯಲ್ಲಿ ಮಾರಿದ ಯುವಕ

ಹೌದು ದೆಹಲಿಯಲ್ಲಿ ವಾಯುಗುಣಮಟ್ಟ ತೀರ ಕುಸಿದಿರೋದು ನಿಮಗೆ ಗೊತ್ತೇ ಇದೆ. ಇದನ್ನೇ ಉದ್ಯಮವಾಗಿಸಿಕೊಂಡು ಯುವಕನೋರ್ವ ಹೊಸ ಉದ್ಯಮವನ್ನು ಆರಂಭಿಸಿದ್ದು, ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಿದ್ದರೆ ಆತ ಮಾಡಿದೇನು ನೀವೇ ನೋಡಿ. ಯುವಕನೋರ್ವ ಹಿಮಾಲಯದಲ್ಲಿನ ಬೆಟ್ಟದಲ್ಲಿ ಗಾಳಿಯನ್ನು ಬಾಟಲ್‌ಗಳಿಗೆ ತುಂಬಿಸುತ್ತಾನೆ. ಅದನ್ನು ತಂದು ದೆಹಲಿಯ ಬೀದಿಗಳಲ್ಲಿ ಬಾಟಲ್‌ಗೆ 50 ರೂಪಾಯಿಯಂತೆ ಮಾರಾಟ ಮಾಡ್ತಿದ್ದಾನೆ. ಇತ್ತ ದೆಹಲಿಯ ವಾಯುಗುಣಮಟ್ಟ ಎಷ್ಟು ಕುಸಿದಿದೆ ಎಂದರೆ ಕೆಲವರು ದೆಹಲಿಯನ್ನು ಬಿಟ್ಟು ಬೇರೆ ಪಟ್ಟಣಗಳಿಗೆ ಸ್ಥಳಾಂತರಗೊಳ್ಳುವುದಕ್ಕೆ ಯೋಚನೆ ಮಾಡ್ತಿರೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಈ ಯುವಕ ಈ ಗಾಳಿ ಮಾರಾಟ ಮಾಡ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ಯುವ ತರುಣನೋರ್ವ ಹಿಮಾಲಯದ ಗಾಳಿಯನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ತುಂಬಿಸಿ ಮಾರಾಟ ಮಾಡುವುದನ್ನು ಕಾಣಬಹುದಾಗಿದೆ. ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ ಹುಡುಗನೊಬ್ಬನಿಗೆ ಒಂದು ಅಸಾಮಾನ್ಯ ಐಡಿಯಾ ಬಂತು. ಪರ್ವತಗಳಿಂದ ಬಂದ ತಾಜಾ ಗಾಳಿಯನ್ನು ಸಂಗ್ರಹಿಸಲು ಅವನು ಪ್ರೆಶರ್ ಸ್ಪ್ರೇಯರ್ ಬಳಸಿ ಅದನ್ನು ಹಲವಾರು ಬಾಟಲಿಗಳಲ್ಲಿ ತುಂಬಿಸಿದ. ದೆಹಲಿಗೆ ಹಿಂದಿರುಗಿದ ನಂತರ, ಅಲ್ಲಿನ ಗಾಳಿಯು ಹಿಮಾಚಲದಿಂದ ಬಂದಿದೆ ಮತ್ತು ನಗರದ ಗಾಳಿಗಿಂತ ಭಿನ್ನವಾಗಿದೆ ಎಂದು ಜನರಿಗೆ ಹೇಳಿದ. ಕುತೂಹಲದಿಂದ, ಅನೇಕ ಜನರು ಅದನ್ನು ಪ್ರಯತ್ನಿಸಲು ಮತ್ತು ತಾಜಾತನವನ್ನು ಅನುಭವಿಸಲು ಮುಂದಾದರು. ಕೆಲವರು ಅದಕ್ಕೆ ಹಣವನ್ನು ಪಾವತಿಸಿದರು.

ಇದನ್ನೂ ಓದಿ: ಶಿರಸಿಯ ಗೌರಿ ಬಾವಿ ತೆಗೆದಂತೆ ಏಕಾಂಗಿಯಾಗಿ ನದಿ ಸ್ವಚ್ಛಗೊಳಿಸಿದ ಬಿಟ್ಟು : ಟೀಕಿಸಿದವರೇ ಮೆಚ್ಚಿದರು

ಸರಳವಾದ ಐಡಿಯಾ ಎಂದು ಪ್ರಾರಂಭವಾದದ್ದು ಬೇಗನೆ ಹಣ ಗಳಿಸುವ ಆಸಕ್ತಿದಾಯಕ ಮಾರ್ಗವಾಯಿತು, ಸುತ್ತಮುತ್ತಲಿನ ಎಲ್ಲರಿಗೂ ಇದು ಆಶ್ಚರ್ಯವನ್ನುಂಟುಮಾಡಿತು. ಗಾಳಿಯ ಅನುಭವ ತೆಗೆದುಕೊಂಡವರು ಆಹಾ ವಿಭಿನ್ನವಾಗಿದೆ ಚೆನ್ನಾಗಿದೆ ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡ್ತಿದ್ದಾರೆ. ಇದನ್ನು ಅದಾನಿ ಹಾಗೂ ಅಂಬಾನಿ ನೋಡಿದರೆ ಪಕ್ಕಾ ಒಂದು ಉದ್ಯಮ ಶುರು ಮಾಡ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಾದು ನೋಡಿ ಅಂಬಾನಿ ನಿಮಗೆ ಗಾಳಿಯನ್ನು ಖರೀದಿಸಲು ಮಾಸಿಕವಾಗಿ ಹಾಗೂ ವಾರ್ಷಿಕ ಪೇಮೆಂಟ್ ಯೋಜನೆಗಳನ್ನು ತಿಳಿಸುತ್ತಾರೆ. ಆದ್ದರಿಂದ ತಾಜಾ ಗಾಳಿಯನ್ನು ಖರೀದಿಸಲು ಸಿದ್ಧರಾಗಿ. ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂತರ ಅಗ್ಗದ ನಶೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಗೂಗಲ್ ನಲ್ಲಿ ವಾರ್ಷಿಕ 80 ಲಕ್ಷ ವೇತನ ಪಡೆಯುತ್ತಿರುವ 26 ವರ್ಷದ ತರುಣ: 2031ಕ್ಕೆ ರಿಟೈರ್ ಆಗ್ತಿನಿ ಎಂದ ಟೆಕ್ಕಿ

ಒಟ್ಟಿನಲ್ಲಿ ವಾಯುಮಾಲಿನ್ಯ ಹೆಚ್ಚುತ್ತಲೇ ಹೋದರೆ ಮುಂದೊಂದು ದಿನ ಶುದ್ಧ ಆಮ್ಲಜನಕಕ್ಕೂ ದುಡ್ಡು ನೀಡಬೇಕಾದ ದಿನ ದೂರವಿಲ್ಲ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...