MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು

ವಿದ್ಯಾ ಬಾಲನ್​ಗೆ 'ಪನೌತಿ' ಪಟ್ಟ! ಚಿತ್ರರಂಗದಿಂದಲೇ ಔಟ್​- ಹೊರಗೆ ಹಾಕಿದವರೇ ನಟಿಯ ಕಾಲಿಗೆ ಬಿದ್ದರು

ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್, ತಮ್ಮ ವೃತ್ತಿಜೀವನದ ಆರಂಭದಲ್ಲಿ 'ಪನೌತಿ' ಅಥವಾ 'ಅಪಶಕುನಿ' ಎಂಬ ಪಟ್ಟವನ್ನು ಎದುರಿಸಿದ್ದರು. ಮಲಯಾಳಂ ಚಿತ್ರವೊಂದು ನಿಂತುಹೋದ ಕಾರಣ,  9 ಚಿತ್ರಗಳಿಂದ ಕೈಬಿಡಲಾಗಿತ್ತು.  ಅವರು 'ಪರಿಣೀತಾ' ಮತ್ತು 'ಡರ್ಟಿ ಪಿಕ್ಚರ್' ನಂತಹ ಚಿತ್ರಗಳ ಮೂಲಕ ಸ್ಟಾರ್ ಆಗಿ ಬೆಳೆದರು.

2 Min read
Author : Suchethana D
Published : Mar 31 2026, 07:29 PM IST
Share this Photo Gallery
  • FB
  • TW
  • Linkdin
  • Whatsapp
17
ಬಾಲಿವುಡ್ ಸುಂದರಿ ವಿದ್ಯಾ ಬಾಲನ್
Image Credit : instagram

ಬಾಲಿವುಡ್ ಸುಂದರಿ ವಿದ್ಯಾ ಬಾಲನ್

ಬಾಲಿವುಡ್ ಸುಂದರಿ ವಿದ್ಯಾ ಬಾಲನ್ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಮಾತ್ರವಲ್ಲದೆ ತಮ್ಮ ದಿಟ್ಟ ಹೇಳಿಕೆಗಳಿಂದಲೂ ಸದಾ ಸದ್ದು ಮಾಡುತ್ತಿರುತ್ತಾರೆ. ಅವರು ಬ್ಯಾಕ್​ ಟು ಬ್ಯಾಕ್​ ಐದು ಸತತ ವಾಣಿಜ್ಯ ಯಶಸ್ಸಿನಲ್ಲಿ ಹೆಡ್ ಸ್ಟ್ರಾಂಗ್ ಮಹಿಳೆಯಾಗಿ ನಟಿಸಿದರು. ಪಾ (2009), ಇಷ್ಕಿಯಾ (2010), ಥ್ರಿಲ್ಲರ್‌ಗಳಾದ ನೋ ಒನ್ ಕಿಲ್ಡ್ ಜೆಸ್ಸಿಕಾ (2011) ಮತ್ತು ಕಹಾನಿ (2012), ಮತ್ತು ಬಯೋಪಿಕ್​ ದಿ ಡರ್ಟಿ ಪಿಕ್ಚರ್ (2011) ಸಾಕಷ್ಟು ಹೆಸರು ತಂದುಕೊಟ್ಟವು. ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿತು. ತುಮ್ಹಾರಿ ಸುಲು (2017) ಮತ್ತು ಮಿಷನ್ ಮಂಗಲ್ (2019) ನಲ್ಲಿ ಕೆಲಸ ಮಾಡುತ್ತಲೇ ಕುಟುಂಬ ಜೀವನವನ್ನೂ ನಡೆಸಿದರು. ಮಂಗಲ್​ ಮಿಷನ್​ ವಿದ್ಯಾ ಅವರ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಬಳಿಕ ಅಮೆಜಾನ್ ಪ್ರೈಮ್ ವಿಡಿಯೋ ಚಿತ್ರಗಳಾದ ಶಕುಂತಲಾ ದೇವಿ (2020), ಶೆರ್ನಿ (2021), ಮತ್ತು ಜಲ್ಸಾ (2022) ನಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ.

27
ನಟಿಗೆ ಪನೌತಿ ಪಟ್ಟ
Image Credit : instagram

ನಟಿಗೆ ಪನೌತಿ ಪಟ್ಟ

ಆದರೆ, ಇಂತಿಪ್ಪ ವಿದ್ಯಾ ಬಾಲನ್​ ಅವರಿಗೆ ಪನೌತಿ (ಅಪಶಕುನ) ಪಟ್ಟ ಬಂದಿದ್ದರಿಂದ ಬರೋಬ್ಬರಿ 9 ಚಿತ್ರಗಳಿಂದ ಅವರನ್ನು ಹೊರಕ್ಕೆ ಹಾಕಲಾಗಿತ್ತಂತೆ! ಈ ಕುರಿತು ಅವರು ಸಂದರ್ಶನದಲ್ಲಿ ಇದೀಗ ರಿವೀಲ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳ ಕುರಿತು ಮಾತನಾಡಿದ್ದಾರೆ. ರಾತ್ರೋರಾತ್ರಿ ತಮ್ಮನ್ನು 9 ಸಿನಿಮಾಗಳಿಂದ ತೆಗೆದುಹಾಕಿದ್ದ ಬಗ್ಗೆ ಮಾತನಾಡಿದ್ದಾರೆ.

Related Articles

Related image1
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
Related image2
ಎಲ್ಲರೆದುರು ಅಮ್ಮನ ಎದೆಹಾಲು ಕುಡಿದ IPS ಅಧಿಕಾರಿ: ಭಾರಿ ಚರ್ಚೆ ಹುಟ್ಟುಹಾಕಿದೆ ವೈರಲ್​ ವಿಡಿಯೋ
37
ಅಪಶುಕನದ ನಟಿ
Image Credit : instagram

ಅಪಶುಕನದ ನಟಿ

ಅಷ್ಟಕ್ಕೂ, ಶಕುನ, ಅಪಶಕುನ ಎನ್ನುವುದು ಚಿತ್ರರಂಗವನ್ನೂ ಬಿಟ್ಟಿಲ್ಲ. ಇಂದು ದೊಡ್ಡ ಮಟ್ಟದ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡಿರೋ ಬಹುಭಾಷಾ ತಾರೆ ವಿದ್ಯಾ ಬಾಲನ್​ ಕೂಡ ಹಿಂದೊಮ್ಮೆ ಪನೌತಿ ಅಂದರೆ ಅಪಶಕುನ ನಟಿ ಎಂದು ಎನ್ನಿಸಿಕೊಂಡವರು. ಇದೇ ಕಾರಣಕ್ಕೆ ಅವರಿಗೆ ಚಿತ್ರಗಳಲ್ಲಿ ಅವಕಾಶವೂ ಸಿಕ್ಕಿರಲಿಲ್ಲ. ಈ ಬಗ್ಗೆ ಇದೀಗ ಖುದ್ದು ನಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ.

47
ಚಿತ್ರಗಳಿಂದಲೇ ಔಟ್​
Image Credit : instagram

ಚಿತ್ರಗಳಿಂದಲೇ ಔಟ್​

ಅಂದಹಾಗೆ ಅದು ಮಲಯಾಳಿ ಚಿತ್ರರಂಗದಲ್ಲಿ ಹುಟ್ಟಿಕೊಂಡಿರೋ ಕಳಂಕ. ಮೋಹನ್‌ಲಾಲ್‌ ಜೊತೆ ಮಲಯಾಳ ಚಿತ್ರದಲ್ಲಿ ವಿದ್ಯಾ ಬಾಲನ್​ ಆಯ್ಕೆಯಾಗಿದ್ದರು. ನಟ-ನಟಿಯೇನೋ ಆಯ್ಕೆಯಾದರು. ಆದರೆ ಈ ಚಿತ್ರ ಶೆಡ್ಯೂಲ್​ ಆಗಿದ್ದರೂ ಶೂಟಿಂಗ್​ ನಡೆಯಲೇ ಇಲ್ಲ. ಅದೂ ಮೋಹನ್​ಲಾಲ್​ ಚಿತ್ರ ಬೇರೆ. ಈಗ ಎಲ್ಲರ ಬೊಟ್ಟು ಹೋಗಿದ್ದು ವಿದ್ಯಾ ಬಾಲನ್​ ಕಡೆಗೆ. ಈ ಚಿತ್ರ ಬಿಡುಗಡೆಯಾಗದೇ ಇರುವುದಕ್ಕೆ ಕಾರಣ ವಿದ್ಯಾ ಬಾಲನ್​, ಈಕೆಯೊಬ್ಬ ಪನೌತಿ (ಅಪಶಕುನ) ಎಂದು ನುಡಿದ ಮಲಯಾಳಂ ಚಿತ್ರರಂಗ ವಿದ್ಯಾ ಅವರನ್ನು ಪ್ರಾಜೆಕ್ಟ್‌ಗಳಿಂದ ಹೊರಕ್ಕೆ ಹಾಕಿದ್ದರಂತೆ!

57
ಯಾವ ಚಿತ್ರವೂ ಸಿಗಲಿಲ್ಲ
Image Credit : instagram

ಯಾವ ಚಿತ್ರವೂ ಸಿಗಲಿಲ್ಲ

ಈ ಕುರಿತು ನಟಿ ಖುದ್ದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಆಯ್ಕೆಯಾದ ಮೇಲೆ ಏಳೆಂಟು ಚಿತ್ರಗಳಲ್ಲಿ ಆಫರ್​ ಸಿಕ್ಕಿದ್ದವು. ಆದರೆ ನನಗೆ ಎಲ್ಲಾ ಪ್ರಾಜೆಕ್ಟ್​ಳಿಂದ ಹೊರಕ್ಕೆ ಹಾಕಲಾಯಿತು. ನನ್ನದು ಐರನ್ ಲೆಗ್‌, ನಾನು ಕಾಲಿಟ್ಟರೆ ಚಿತ್ರ ಬಿಡುಗಡೆಯಾಗುವುದಿಲ್ಲ, ಈಕೆ ಅಪಶಕುನ ಎಂದೆಲ್ಲ ಸುದ್ದಿ ಹಬ್ಬಿತು. ಇದೇ ಕಾರಣಕ್ಕೆ ನನಗೆ ಯಾವ ಚಿತ್ರಗಳೂ ಸಿಗಲೇ ಇಲ್ಲ. ಇದರಿಂದ ನಾನು ಮೂರು ವರ್ಷ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಏಕೆಂದರೆ, ನನ್ನನ್ನು ಹಾಕಿಕೊಂಡು ಚಿತ್ರ ಮಾಡುವ ಧೈರ್ಯ ಯಾರೂ ಮಾಡಲೇ ಇಲ್ಲ. ಇದರಿಂದ ಧೃತಿಗೆಟ್ಟ ನಾನು ಸದಾ ಅಳುತ್ತಾ ಕುಳಿತುಕೊಳ್ಳುವಂತಾಯ್ತು ಎಂದು ವಿದ್ಯಾ ಈ ಸಂದರ್ಶನದಲ್ಲಿ ಹೇಳಿದ್ದಾರೆ.

67
ಪರಿಣೀತಾ ಹಿಟ್​
Image Credit : X

ಪರಿಣೀತಾ ಹಿಟ್​

ಪ್ರತಿದಿನವೂ ಅಳುವುದೇ ವಿದ್ಯಾ ಅವರಿಗೆ ಕೆಲಸವಾಯಿತಂತೆ. ಆದರೆ ಅವರ ಬದುಕಿನ ದಿಕ್ಕು ಬದಲಾದದ್ದು, ಪ್ರದೀಪ್‌ ಸರ್ಕಾರ್‌ ಅವರು ತಮ್ಮ ಕಭಿ ಆನಾ ತು ಮೇರಿ ಗಲಿ ವಿಡಿಯೋ ಆಲ್ಬಂನಲ್ಲಿ ವಿದ್ಯಾ ಬಾಲನ್​ ಅವರಿಗೆ ಅವಕಾಶ ನೀಡಿದಾಗ. ಅಲ್ಲಿಂದ ಮಿಂಚಿದ ವಿದ್ಯಾ ಅವರಿಗೆ ಪರಿಣೀತಾ ಚಿತ್ರದಿಂದ ಆಫರ್​ ಬಂತು. ಇದು ಕೂಡ ಹಿಟ್​ ಆಯಿತು. ಅದಾದ ಬಳಿಕ ವಿದ್ಯಾ ಬಾಲನ್​ ಅವರಿಗೆ ಒಂದರ ಮೇಲೊಂದಂತೆ ಸಿನಿಮಾ ಹುಡುಕಿ ಬಂದವು.

77
ಡರ್ಟಿ ಫಿಕ್ಚರ್​ನ ಹವಾ
Image Credit : X

ಡರ್ಟಿ ಫಿಕ್ಚರ್​ನ ಹವಾ

ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ಕೊಟ್ಟರು. ಕೊನೆಗೆ ಗೌರಮ್ಮ ಎಂದು ಎನಿಸಿಕೊಂಡಿದ್ದ ವಿದ್ಯಾ ಬಾಲನ್​ ಹಾಟೆಸ್ಟ್​ ಆಗಿ ಕಾಣಿಸಿಕೊಂಡಿದ್ದು ಡರ್ಟಿ ಫಿಕ್ಚರ್ ಮೂಲಕ. ಇಲ್ಲಿ ಇವರ ಹಾಟೆಸ್ಟ್​ ಅವತಾರಕ್ಕೆ ಬಾಲಿವುಡ್​ ಬೆಚ್ಚಿ ಬಿತ್ತು. ಜೊತೆಗೆ ರಾತ್ರೋರಾತ್ರಿ ವಿದ್ಯಾ ಸ್ಟಾರ್​ ಪಟ್ಟವನ್ನೂ ಗಿಟ್ಟಿಸಿಕೊಮಡರು. ಬಳಿಕ ಮಿಷನ್‌ ಮಂಗಲ್‌ ಕೂಡ ಸಕ್ಸಸ್ ತಂದಿತು. ಯಾರು ನಟಿಯನ್ನು ಅಪಶಕುನ ಎಂದು ಹೇಳಿದ್ದರೋ ಅವರೇ ಕಾಲ್​​ಷೀಟ್​ ಹಿಡಿದು ನಟಿಗಾಗಿ ಕಾದು ಕುಳಿತ ಘಟನೆಯೂ ನಡೆದಿರುವುದಾಗಿ ನಟಿ ನೆನಪಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
Now Playing
ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Recommended image2
ಕೆಡಿ ಧ್ರುವ ಸರ್ಜಾಗೆ ಸಮಂತಾ ಸವಾಲ್: ‘ಮಾ ಇಂಟಿ ಬಂಗಾರಂ’ ಕದನಕ್ಕಿಳಿದ ಸ್ಯಾಮ್
Recommended image3
ಕ್ರಿಶ್ಚಿಯನ್‌ ಸಂಪ್ರದಾಯದಂತೆ ಪ್ರಕಾಶ್‌ ರಾಜ್‌ ತಾಯಿ ಅಂತಿಮ ಸಂಸ್ಕಾರ, ಬೆಂಗಳೂರಲ್ಲಿ ಅಂತ್ಯಕ್ರಿಯೆ ನಡೆದಿದ್ದೆಲ್ಲಿ?
Related Stories
Recommended image1
ಇವ್ರು ಪ್ರಧಾನಿಯಾಗ್ಬೇಕು, ನಾನು ಅವರೊಟ್ಟಿಗೆ ಡೇಟಿಂಗ್​ ಮಾಡ್ಬೇಕು: ಕರೀನಾ ಕಪೂರ್ ಬಹುದೊಡ್ಡ ಆಸೆ
Recommended image2
ಎಲ್ಲರೆದುರು ಅಮ್ಮನ ಎದೆಹಾಲು ಕುಡಿದ IPS ಅಧಿಕಾರಿ: ಭಾರಿ ಚರ್ಚೆ ಹುಟ್ಟುಹಾಕಿದೆ ವೈರಲ್​ ವಿಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved