- Home
- News
- India News
- India Latest News Live: ಎರಡೇ ದಿನದಲ್ಲಿ ಮುಗಿದ ಪಂದ್ಯ - ಕ್ರಿಕೆಟ್ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಭಾರೀ ನಷ್ಟ!
LIVE NOW
India Latest News Live: ಎರಡೇ ದಿನದಲ್ಲಿ ಮುಗಿದ ಪಂದ್ಯ - ಕ್ರಿಕೆಟ್ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಭಾರೀ ನಷ್ಟ!

ಸಾರಾಂಶ
ಢಾಕಾ: ಬಾಂಗ್ಲಾದಲ್ಲಿ ಭಾರತ ವಿರೋಧಿ ಧೋರಣೆ ಮುಂದುವರೆದಿದ್ದು, ಅಲ್ಲಿನ ಹಿಂದೂಗಳನ್ನು ಭಾರತೀಯರೆಂದು ಅವಮಾನಿಸಲಾಗುತ್ತಿದೆ. ಜತೆಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿಂದೂಗಳನ್ನು ಕೆಲಸದಿಂದ ವಜಾಗೊಳಿಸಿರುವ ಆರೋಪವೂ ಕೇಳಿ ಬಂದಿದೆ. ಎನ್ಡೀವಿ ಬಾಂಗ್ಲಾದಲ್ಲಿ ಪ್ರತ್ಯಕ್ಷ ವರದಿ ನಡೆಸಿದ್ದು, ಈ ವೇಳೆ ಹಿಂದೂಗಳು ತಮ್ಮ ಅಸಹಾಯಕತೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
‘ ಇಸ್ಲಾಮಿಸ್ಟ್ಗಳು ನಮ್ಮನ್ನು ಹಿಂದೂಗಳೆಂದು ಕರೆಯುತ್ತಾರೆ. ಅವರನ್ನು ನಮ್ಮನ್ನು ಭಾರತಕ್ಕೆ ಮರಳಿ ಎನ್ನುತ್ತಾರೆ. ಸಮಾನವಾಗಿ ನೋಡುತ್ತಿಲ್ಲ. ಭಾರತದ ಏಜೆಂಟ್ ಎನ್ನುತ್ತಾರೆ. ನಾವು ಭಾರತೀಯರಲ್ಲ. ಬಾಂಗ್ಲಾದ ಹಿಂದೂಗಳು. ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇನೆ’ ಎಂದು ಢಾಕಾ ನಿವಾಸಿಯೊಬ್ಬರು ನೋವು ತೋಡಿಕೊಂಡಿದ್ದಾರೆ, ಇನ್ನು ಕೆಲವರು, ಹಿಂದೂಗಳು ಎನ್ನುವ ಕಾರಣಕ್ಕೆ ಸರ್ಕಾರಿ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
08:50 AM (IST) Dec 28
India Latest News Live 28 December 2025 ಎರಡೇ ದಿನದಲ್ಲಿ ಮುಗಿದ ಪಂದ್ಯ - ಕ್ರಿಕೆಟ್ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಭಾರೀ ನಷ್ಟ!
ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಕಾಂಗರೂಗಳ ನಾಡಿನಲ್ಲಿ 15 ವರ್ಷಗಳ (5468 ದಿನ) ಬಳಿಕ ಟೆಸ್ಟ್ ಗೆಲುವು ದಾಖಲಿಸಿದ್ದು, ಸರಣಿ ವೈಟ್ವಾಶ್ನಿಂದ ಪಾರಾಗಿದೆ. ಕೇವಲ ಎರಡು ದಿನಗಳಲ್ಲಿ ಪಂದ್ಯ ಮುಕ್ತಾಯಗೊಂಡಿದೆ.
Read Full Story