ನಿಂದಿಸಿದ ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಕೇಸ್, ಜನಾಂಗೀಯ ನಿಂದನೆ ಜೊತೆಗೆ ದ್ವಷದ ಕಾರಣದಿಂದ ಕೆಲಸದಿಂದ ವಜಾ ಮಾಡಿದ ವಿರುದ್ಧಭಾರತೀಯ ಮೂಲದ ಉದ್ಯೋಗಿ ಕಾನೂನು ಹೋರಾಟ ನಡೆಸಿದ್ದಾರೆ. ಇದೀಗ 81 ಲಕ್ಷ ರೂಪಾಯಿ ಪರಿಹಾರ ಪಡೆದಿದ್ದಾನೆ.
ಲಂಡನ್ (ಡಿ.28) ಭಾರತೀಯ ಮೂಲದ ಉದ್ಯೋಗಿ ನಡೆಸಿದ ಕಾನೂನು ಹೋರಾಟಕ್ಕೆ ಫಲ ಸಿಕ್ಕಿದೆ. ಜನಾಂಗೀಯ ನಿಂದನೆ ಮಾಡಿ ದ್ವೇಷದ ಕಾರಣದಿಂದ ಕೆಲಸದಿಂತ ಕಿತ್ತು ಹಾಕಿದ ಕೆಎಫ್‌ಸಿ ರೆಸ್ಟೋರೆಂಟ್ ಮ್ಯಾನೇಜರ್ ವಿರುದ್ದ ಪ್ರಕರಣ ದಾಖಲಿಸಿ ಸತತ ಹೋರಾಟ ನಡೆಸಿದ ಭಾರತೀಯ ಮೂಲದ ಉದ್ಯೋಗಿ ಇದೀಗ 81 ಲಕ್ಷ ರೂಪಾಯಿ ಪರಿಹಾರ ಪಡೆದ ಘಟನೆ ಲಂಡನ್‌ನಲ್ಲಿ ನಡೆದಿದೆ. ಮಾಧೇಶ್ ರವಿಚಂದ್ರನ್ ಈ ಪರಿಹಾರ ಮೊತ್ತ ಪಡೆದಿದ್ದಾರೆ.
ಏನಿದು ಪ್ರಕರಣ?
ತಮಿಳುನಾಡು ಮೂಲದ ಮಾಧೇಶ್ ರವಿಚಂದ್ರನ್ 2023ರಿಂದ ಲಂಡನ್‌ನ ಜನಪ್ರಿಯ ಕೆಎಫ್‌ಸಿ ಕೇಂದ್ರದಲ್ಲಿ ಉದ್ಯೋಗಿ ಕೆಲಸ ಮಾಡುತ್ತಿದ್ದ.ಈ ಕೇಂದ್ರದಲ್ಲಿ ಮ್ಯಾನೇಜರ್ ಆಗಿ ಶ್ರೀಲಂಕಾ ಮೂಲದ ಕಾಜನ್ ನೇಮಕಗೊಂಡಿದ್ದ. ಕಾಜನ್ ಅಢಿಯಲ್ಲಿ ಮಾಧೇಶ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಮಾಧೇಶ್ ಟಾರ್ಗೆಟ್ ಮಾಡಿದ್ದ ಕಾಜನ್, ಹೆಚ್ಚುವರಿ ಸಮಯ ದುಡಿಸಿಕೊಳ್ಳುತ್ತಿದ್ದ. ಇಷ್ಟೇ ಅಲಲ್ ಇಲ್ಲ ಸಲ್ಲದ ಕಾರಣ ನೀಡಿ ನೋಟಿಸ್ ನೀಡಿದ್ದ. ಗ್ರಾಹಕರ ದೂರು, ನಿರ್ಲಕ್ಷ್ಯ ಹೀಗೆ ಹಲವು ಕಾರಣಗಳನ್ನು ಮಾಧೇಶ್‌ಗೆ ನೋಟಿಸ್ ನೀಡಿದ್ದ. ಮಾಧೇಶ್ ವಿರುದ್ದ ದ್ವೇಷ ಸಾಧಿಸುತ್ತಿದ್ದ ಕಾಜನ್ ವಿರುದ್ದ ಮಾತಿನ ಚಕಮಕಿಗಳು ಆರಂಭಗೊಂಡಿದೆ. ಇತ್ತ ಕಾಜನ್ ಹೆಚ್ಚುವರಿ ಸಮಯ ದುಡಿಸಿಕೊಂಡಿದ್ದ ಮಾತ್ರವಲ್ಲ, ಭಾರತೀಯರು ಗುಲಾಮರು. ಭಾರತೀಯರು ವಂಚಕರು ಎಂದು ನಿಂದಿಸಿದ್ದಾನೆ.
ಕೆಲಸದಿಂದ ವಜಾ ಮಾಡಿದ ಮ್ಯಾನೇಜರ್
ನಿಂದಿಸುತ್ತಿದ್ದಂತೆ ಮಾಧೇಸ್ ಪ್ರತಿಭಟಿಸಿದ್ದಾನೆ. ಮ್ಯಾನೇಜರ್ ನಿಂದಿಸುತ್ತಿರುವುದನ್ನು ಇತರ ಸಿಬ್ಬಂದಿಗಳು ಕೇಳಿಸಿಕೊಂಡಿದ್ದಾರೆ. ಗ್ರಾಹಕರು ಕೇಳಿಸಿಕೊಂಡಿದ್ದಾರೆ. ಇದರ ವಿರುದ್ದ ಖಡಕ್ ಪ್ರತಿಕ್ರಿಯೆ ನೀಡಿದ ಮಾಧೇಶ್‌ನನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದರ ಬೆನ್ನಲ್ಲೇ ಮಾಧೇಶ್ ರವೀಚಂದ್ರನ್ ಕಾನೂನು ಹೋರಾಟಕ್ಕೆ ಇಳಿದಿದ್ದು. ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಪ್ರಕರಣ ದಾಖಲಿಸಿ ಹೋರಾಟ ಆರಂಭಗೊಂಡಿತ್ತು.
ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿ ಕಾನೂನು ಹೋರಾಟ ಆರಂಭಿಸಿದ ಮಾಧೇಶ್ ರವಿಚಂದ್ರನ್ ಪರವಾಗಿ ತೀರ್ಪು ಬಂದಿದೆ. ಜನಾಂಗೀಯ ನಿಂದನೆ ಮಾಡಿರುವುದು ಸ್ಪಷ್ಟವಾಗಿದೆ. ಇದೇ ವೇಳೆ ದ್ವೇಷದ ಕಾರಣದಿಂದ ಹೆಚ್ಚವರಿ ಕೆಲಸ ನೀಡಲಾಗಿದೆ. ಹೆಚ್ಚುವರಿ ಸಮಯ ದುಡಿಸಿಕೊಳ್ಳಲಾಗಿದೆ. ಜೊತೆಗೆ ಕೆಲಸದಿಂದ ಕಿತ್ತು ಹಾಕಲಾಗಿದೆ. ಈ ಮೂಲಕ ಹಲವು ನಿಯಮ ಉಲ್ಲಂಘಿಸಲಾಗಿದೆ ಎಂದು ತೀರ್ಪು ನೀಡಿದೆ. ಇದೇ ವೇಳೆ ಪರಿಹಾರವಾಗಿ ಮಾಧೇಶ್ ರವಿಚಂದ್ರನ್‌ಗೆ 67,000 ಪೌಂಡ್ ಮೊತ್ತ ಅಂದರೆ ಭಾರತೀಯ ರೂಪಾಯಿಗಳಲ್ಲಿ 81 ಲಕ್ಷ ರೂಪಾಯಿ ನೀಡಲು ಆದೇಶಿಸಿದೆ.


