ಮದುವೆಯ ಆರತಕ್ಷತೆಯೊಂದರಲ್ಲಿ, ವರನ ಮಾಜಿ ಗೆಳತಿ ವೇದಿಕೆ ಮೇಲೆ ಬಂದು ವರನ ಕೈಗೆ ಮುತ್ತಿಡಲು ಯತ್ನಿಸಿದ್ದಾಳೆ. ಇದರಿಂದ ಕೋಪಗೊಂಡ ನವವಧು, ಆಕೆಯನ್ನು ವೇದಿಕೆಯಿಂದ ಕೆಳಗೆಳೆದು ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಮದುವೆ ಮನೆಯಲ್ಲಿ ನಡೆಯುವ ಕೆಲ ಡ್ರಾಮಾಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗ್ತಿರ್ತವೆ. ಕೊನೆಕ್ಷಣದಲ್ಲಿ ಮದುವೆ ಮುರಿದು ಬೀಳೋದು, ಅಥವಾ ಮೊದಲ ಪತ್ನಿ ಅಲ್ಲಿಗೆ ಬಂದು ಆತ ನನ್ನ ಗಂಡ ಎಂದು ಹೇಳಿ ಮದುವೆ ಮುರಿಯುವುದು ಈಗ ಸಾಮಾನ್ಯ ಎನಿಸಿದೆ. ಹಾಗೆಯೇ ಇಲ್ಲೊಂದು ಕಡೆ ಆರತಕ್ಷತೆಗೆ ವಧು ವರ ನಿಂತಿದ್ದ ವೇಳೆ ವರನ ಮಾಜಿ ಗರ್ಲ್‌ಫ್ರೆಂಡ್ ಎಂಟ್ರಿ ಕೊಟ್ಟಿದ್ದಾಳೆ. ಆದರೆ ಆಕೆ ಅಲ್ಲಿ ಜಗಳ ಮಾಡಿಲ್ಲ, ಬದಲಾಗಿ ನವವಧುವಿಗೆ ಹೊಟ್ಟೆ ಉರಿಸುವುದಕ್ಕೆ ಹೋಗಿದ್ದಾಳೆ. ವೇದಿಕೆ ಮೇಲೆ ಬಂದವಳೇ ವರನ ಪಕ್ಕ ನಿಂತು ಫೋಟೋಗೆ ಪೋಸ್ಟ್ ಕೊಟ್ಟು ವರನ ಕೈಗೆ ಮುತ್ತು ಕೊಡಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಸಿಟ್ಟಿಗೆದ್ದು ಭದ್ರಕಾಳಿಯಂತದ ವಧು ಆಕೆಯನ್ನು ಎಳೆದು ನೆಲಕೆ ಕೆಡವಿ ಬಾರಿಸಿದ್ದಾಳೆ. ಈ ಘಟನೆಯ ವೀಡಿಯೋ ಈಗ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಭಾರಿ ವೈರಲ್ ಆಗ್ತಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ, ಮತ್ತೊಂದು ಏಷ್ಯಾದ ರಾಷ್ಟ್ರ ಇಂಡೋನೇಷ್ಯಾದಲ್ಲಿ.
ಇನ್ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಈ ವೀಡಿಯೋ ಭಾರಿ ವೈರಲ್ ಆಗುತ್ತಿದ್ದು, ವಧುವಿನ ಹಠಾತ್ ಪ್ರತಿಕ್ರಿಯೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. The Rakt ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವಂತೆ ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಮದುವೆ ಕಾರ್ಯಕ್ರಮವೂ ಸಹಜವಾಗಿ ನಡೆಯುತ್ತಿತ್ತು. ಮದುವೆಯ ಫೋಟೋ ಸೆಷನ್ ಸಮಯದಲ್ಲಿ ವರನ ಮಾಜಿ ಗರ್ಲ್‌ಫ್ರೆಂಡ್ ವಧುವರರಿದ್ದ ವೇದಿಕೆ ಮೇಲೆ ಬಂದಿದ್ದಾಳೆ. ವರನ ಸಮೀಪ ಬಂದು ಫೋಟೋಗೆ ಪೋಸ್ ನೀಡಿದ ಆಕೆ ನಂತರ ಆತನ ಕೈಯನ್ನು ತನ್ನ ಕೈಗೆ ತೆಗೆದುಕೊಂಡು ಮುತ್ತಿಕ್ಕಲು ಪ್ರಯತ್ನಿಸಿದ್ದಾಳೆ. ಇದನ್ನೂ ನೋಡಿದ ವಧು ಒಂದು ಕ್ಷಣವೂ ತಡ ಮಾಡದೇ ಆಕೆಯ ಕೂದಲು ಹಿಡಿದು ನೆಲಕ್ಕೆ ಕೆಡವಿ ಬಾರಿಸಿದ್ದಾಳೆ.
ಇದನ್ನೂ ಓದಿ: ಭಾವನ ವಿರುದ್ಧ ಸುಳ್ಳು ರೇಪ್ ಕೇಸ್ ದಾಖಲಿಸಿದ ಮಹಿಳೆಗೆ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ
ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಒಳ್ಳೆ ಕೆಲಸ ಮಾಡಿದೆ ಹುಡುಗಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಸರಿಯಾದ ಕೆಲಸ ಮಾಡಿದ್ದಾಳೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದರೆ, ಯಾಕೆ ಮಾಜಿ ಗೆಳತಿಯನ್ನು ಮದುವೆಗೆ ಕರೆದಿದ್ದಾರೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಆಕೆಗೆ ಹಾಗೆಯೇ ಆಗಬೇಕು, ಮುತ್ತು ಕೊಡುವ ಅಗತ್ಯ ಏನಿತ್ತು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಸರಿಯಾಗೇ ಮಾಡಿದ್ದಾಳೆ. ಯಾರೂ ಕೂಡ ತಮ್ಮ ಮದುವೆ ದಿನ ತಮ್ಮ ಪತಿಗೆ ಆತನ ಮಾಜಿ ಗೆಳತಿ ಮುತ್ತು ಕೊಡುವುದನ್ನು ಬಯಸುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸ್ಮಾರ್ಟ್‌ಫೋನ್‌ಗಳ ಈ ಯುಗದಲ್ಲಿ ಸಣ್ಣ ಸಣ್ಣ ಖಾಸಗಿ ವಿಚಾರಗಳು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...
ಇದನ್ನೂ ಓದಿ: ಮಗುವನ್ನು ಎಲ್ಲಾದರು ಬಿಟ್ಟು ಬಿಡು: ಮಗು ಬೇಕೋ ಅಥವಾ ನಾನೋ ಪತಿಯೇ ಆಯ್ಕೆ ನೀಡಿದಾಗ ಆಗಿದ್ದೇನು?


