ದಿಗ್ವಿಜಯ್ ಹೊಗಳಿಕೆ ಬೆನ್ನಲ್ಲೇ RSSನ್ನು ಅಲ್ ಖೈದಾ ಉಗ್ರ ಸಂಘಟನೆ ಎಂದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಆರ್‌ಎಸ್‌ಎಸ್ ಬಿಜೆಪಿ ಹೊಗಳಿಗೆ ಕಾಂಗ್ರೆಸ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಭಾರಿ ವಿವಾದ ಕಿಡಿ ಹೊತ್ತಿದ್ದಾರೆ.
ನವದೆಹಲಿ (ಡಿ.28) ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಕಟ್ಟಾ ವಿರೋಧಿ. ಹೀಗಾಗಿಯೇ 2011ರ ಮುಂಬೈನ ದಾಳಿಯ್ನು ಆರ್‌ಎಸ್‌ಎಸ್ ಷಡ್ಯಂತ್ರ ಎಂದು ಪುಸ್ತಕ ಬರೆದಿದ್ದರು. ಇದಕ್ಕೆ ಸಾಕ್ಷಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್ ಕೈಯಲ್ಲಿದ್ದ ಕೆಂಪು ದಾರ. ಇಂತಹ ಕಟ್ಟರ್ ಆರ್‌ಎಸ್‌ಎಸ್ ವಿರೋಧಿ ದಿಗ್ವಿಜಯ್ ಸಿಂಗ್ ಆರ್‌ಎಸ್‌ಎಸ್ ಹೊಗಳಿ ಫೋಟೋ ಪೋಸ್ಟ್ ಮಾಡಿದ್ದರು. ಇದು ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ಬಳಿಕ ದಿಗ್ಜಿಜಯ್ ಸಿಂಗ್ ಯೂರ್ನ್ ಹೊಡೆದು ಆಗಿದೆ.ಆದರೆ ಇದೇ ವಿಚಾರದ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಮುಖ ನಾಯಕ ಮಣಿಕಂ ಠಾಗೋರ್ ಭಾರಿ ವಿವಾದ ಸೃಷ್ಟಿಸಿದ್ದಾರೆ. ಆರ್‌ಎಸ್ಎಸ್ ಸಂಘಟನೆ ಅಲ್ ಖೈದಾ ಉಗ್ರ ಸಂಘಟನೆ ಎಂದಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಅಲ್ ಖೈದ ಸಂಘಟನೆಯಿಂದ ನಾವೇನು ಕಲಿಯೋದಿದೆ?
ದಿಗ್ಜಿಜಯ್ ಸಿಂಗ್ ಹೊಗಳಿಕೆ ಪೋಸ್ಟ್ ವಿವಾದ ಬಳಿಕ ನಾವು ಸಂಘಟನೆಯನ್ನು ಕಲಿಯಬೇಕಿದೆ. ಇದು ಸಂಘಟನೆ ಶಕ್ತಿ ಎಂದು ದಿಗ್ವಿಜಯ್ ಸಿಂಗ್ ಸ್ಪಷ್ಟನೆ ನೀಡಿದ್ದರು. ಆದರೆ ಇದೇ ವಿಚಾರದ ಕುರಿತು ಮಾತನಾಡಿದ ಮಣಿಕಂ ಠಾಕೋರ್, ಆರ್‌ಎಸ್‌ಎಸ್ ಸಂಘಟನೆ ದ್ವೇಷವನ್ನೇ ಹುಟ್ಟುಹಾಕುವ ಸಂಘಟನೆ. ಈ ಆರ್‌ಎಸ್ಎಸ್ ಸಂಘಟನೆಯಲ್ಲಿ ದೇಷ ಬಿಟ್ಟರೆ ಇನ್ನೇನು ಇಲ್ಲ. ಧರ್ಮ, ಜಾತಿಗಳ ನಡುವೆ ದ್ವೇಷ ಬಿತ್ತುವ ಈ ಸಂಘಟನೆಯಿಂದ ನಾವೇನು ಕಲಿಯೋಕೆ ಇದೆ. ಅಲ್ ಖೈದಾ ಉಗ್ರ ಸಂಘಟನೆಯಿಂದ ನಾವೇನಾದರು ಕಲಿಯುತ್ತೇವಾ? ಎಂದು ಮಣಿಕಂ ಠಾಗೋರ್ ಪ್ರಶ್ನಿಸಿದ್ದಾರೆ. ಈ ಮೂಲಕ ದಿಗ್ವಿಜಯ್ ಸಿಂಗ್‌ಗೆ ಉಲ್ಟಾ ಹೊಡೆದಿದ್ದಾರೆ.
ಕಾಂಗ್ರೆಸ್ ಹೋಲಿಕೆಗೆ ಭಾರಿ ವಿರೋಧ
ಕಾಂಗ್ರೆಸ್ ನಾಯಕ ಮಣಿಕಂ ಠಾಗೋರ್ ನೀಡಿದ ಹೇಳಿಕೆ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಆರ್‌ಎಸ್ಎಸ್ ಸಾಮಾಜಿಕ, ಶೈಕ್ಷಣಿ ಕ್ಷೇತ್ರದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ಸಂಘಟನೆ. ಆದರೆ ಈ ಸಂಘಟೆಯನ್ನು ಅಲ್ ಖೈದಾ ಉಗ್ರ ಸಂಘಟನೆಗೆ ಹೋಲಿಕೆ ಮಾಡಲಾಗಿದೆ ಎಂದು ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಹೇಳಿಕೆ ವಿರೋಧಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ, ಮತಕ್ಕಾಗಿ ಕಾಂಗ್ರೆಸ್ ಪಾತಾಳಕ್ಕೆ ಇಳಿಯಲು ಸಿದ್ದ. ಸನಾತನ, ಹಿಂದೂ, ದೇವಸ್ಥಾನ, ದೇಶ ಎಲ್ಲವನ್ನು ಟಾರ್ಗೆಟ್ ಮಾಡಿದ ಕಾಂಗ್ರೆಸ್ ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು ಟಾರ್ಗೆಟ್ ಮಾಡಿದೆ ಎಂದು ಪೂನವಾಲ ಹೇಳಿದ್ದಾರೆ.
ಕಳೆದ 100 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಕೆಲಸ ಮಾಡುತ್ತಿದೆ. ನಿರಂತರವಾಗಿ ನಿಸ್ವಾರ್ಥ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರಿಗೆ ಉಗ್ರ ಸಂಘಟನೆ ರೀತಿ ಕಾಣುತ್ತಿದೆ. ಕಾಂಗ್ರೆಸ್ ನಾಯಕರಿಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರವ ಹಿಂದೂಗಳ ಮೇಲಿನ ದಾಳಿ ಕಾಣಿಸುತ್ತಿಲ್ಲ ಎಂದು ಪೂನವಾಲ ಹೇಳಿದ್ದಾರೆ.


