ಈ ಕೆಟ್ಟ ವ್ಯವಸ್ಥೆಯಲ್ಲಿ ಆಗಲ್ಲ, 4 ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಕಂಪನಿ ವಿದೇಶಕ್ಕೆ ಶಿಫ್ಟ್ ಆಗುತ್ತಿದೆ. ಹೊಸ ವರ್ಷಕ್ಕೆ ಕಂಪನಿ ಬೆಂಗಳೂರು ತೊರೆದು ವಿದೇಶದಲ್ಲಿ ಆರಂಭಗೊಳ್ಳುತ್ತಿದೆ. ಇದಕ್ಕ ಕಾರಣವನ್ನು ಕಂಪನಿ ಸಂಸ್ಥಾಪಕ ಬಹಿರಂಗಪಡಿಸಿದ್ದಾರೆ.
ಬೆಂಗಳೂರು (ಡಿ.28) ಬೆಂಗಳೂರಿನ ಯುವ ಉದ್ಯಮಿ, ಕಂಪನಿ ಸಂಸ್ಥಾಪಕ ಭಾರತದ ವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ. ಪ್ರಮುಖವಾಗಿ ತೆರಿಗೆ ವ್ಯವಸ್ಥೆ, ಭ್ರಷ್ಟಾಚಾರ, ನಿಯತ್ತಾಗಿ ನಿಯಮ ಪಾಲಿಸಿದರೂ ಅಧಿಕಾರಿಗಳ ಮೇಲಿಂದ ಮೇಲೆ ಎಚ್ಚರಿಕೆ, ನೋಟಿಸ್‌ಗಳಿಂದ ಇದೀಗ ತಮ್ಮ ಕಂಪನಿಯನ್ನು ಬೆಂಗಳೂರಿನಿಂದ ಬೇರೆ ರಾಜ್ಯಕ್ಕಲ್ಲ, ವಿದೇಶಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ. 2026ರ ಹೊಸ ವರ್ಷಕ್ಕೆ ಕಂಪನಿ ಬೆಂಗಳೂರಿನಿಂದ ವಿದೇಶಕ್ಕೆ ಶಿಫ್ಟ್ ಆಗುತ್ತಿದೆ.ಹೌದು, ಯುವ ಉದ್ಯಮಿ ರೋಹಿತ್ ಶ್ರಾಫ್ ತಮ್ಮ ಅಫ್ಲಾಗ್ ಗ್ರೂಪ್ (Aflog Group) ಕಂಪನಿಯನ್ನು ಬೆಂಗಳೂರನಿಂದ ವಿದೇಶಕ್ಕೆ ಸ್ಥಳಾಂತರಿಸುತ್ತಿದ್ದಾರೆ.
18 ತಿಂಗಳಲ್ಲಿ 4 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದೇನೆ
ರೋಹಿತ್ ಶ್ರಾಫ್ ತಮ್ಮ ನಿರ್ಧಾರವನ್ನು ಲಿಂಕ್ಡನ್‌ಇನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ 18 ತಿಂಗಳಲ್ಲಿ ನಾನು 4 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದೇನೆ. ಸಮಸ್ಯೆ ಇದಲ್ಲ. ನಿಯತ್ತಾಗಿ ತೆರಿಗೆ ಕಟ್ಟಿದ್ದೇನೆ. ಆದರೆ ಅಧಿಕಾರಿಗಳು ಸುಖಾಸುಮ್ಮನೆ ನೋಟಿಸ್ ಕಳುಹಿಸುತ್ತಿದ್ದಾರೆ. ಇದಕ್ಕೆ ಇಲ್ಲಸಲ್ಲದ ಕಾರಣಗಳನ್ನು ನೀಡುತ್ತಾರೆ. ಒಂದಷ್ಟು ಹಣ ನೀಡಿದರೆ ಎಲ್ಲವೂ ಸುಖಾಂತ್ಯಗೊಳ್ಳಲಿದೆ. ಇದು ಯಾವ ವ್ಯವಸ್ಥೆ. ನಾವು ನಿಯತ್ತಾಗಿ ತೆರಿಗೆ ಕಟ್ಟಿದರೂ ನಮ್ಮನ್ನೂ ಬಾಕಿ ಉಳಿಸಿಕೊಂಡವರ ರೀತಿ, ಅಕ್ರಮ ನಡೆಸಿದವರ ರೀತಿ ನಡೋಲಾಗುತ್ತದೆ. ಹೀಗಾಗಿ ಭಾರತದ ವ್ಯವಸ್ಥೆ ಸಾಕಪ್ಪ ಸಾಕು ಎಂದಿದ್ದಾರೆ.
ಹಲವು ಹಂತದಲ್ಲಿ ಈ ಪರಿಶೀಲನೆ, ಬೆದರಿಸುವಿಕೆ ನಡೆಯತ್ತದೆ. ಸ್ಥಳೀಯ ಜಿಎಸ್‌ಟಿ ಅಧಿಕಾರಿಗಳು, ರಾಷ್ಟ್ರೀಯ ಆದಾಯ ತೆರಿಗೆ ಇಲಾಖೆ, ಇತರ ಸಂಬಂಧ ಪಟ್ಟ ಇಲಾಖೆಗಳು, ಅಧಿಕಾರಿಗಳು ಎಲ್ಲರೂ ಸಣ್ಣ ಸಣ್ಣ ಕಂಪನಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಈ ಕಂಪನಿಗಳು ಸಮಯಕ್ಕೆ ಸರಿಯಾಗಿ ಯಾವುದೇ ಅಕ್ರಮವಿಲ್ಲದೆ ತೆರಿಗೆ, ಜಿಎಸ್‌ಟಿ ಎಲ್ಲವನ್ನೂ ಕಟ್ಟುತ್ತಾರೆ. ದೊಡ್ಡ ದೊಡ್ಡ ಕಂಪನಿಗಳು, ಅಕ್ರಮ ನಡೆಸುವ ಕಂಪನಿಗಳ ವಿರುದ್ದ ಒಂದು ಮಾತು ಆಡಲ್ಲ, ನೋಟಿಸ್ ಇರುವುದಿಲ್ಲ. ನಾವು ಎನೇ ಮಾಡಿದರೂ ನೋಟಿಸ್ ಕಳುಹಿಸುತ್ತಾರೆ. ದಿನವಿಡಿ ಈ ನೋಟಿಸ್, ಇದಕ್ಕೆ ಸಂಬಂಧಪಟ್ಟ ವಿಚಾರಗಳಲ್ಲೇ ದಿನ ಕಳೆಯುತ್ತಿದೆ ಎಂದು ರೋಹಿತ್ ಶ್ರಾಫ್ ನೋವು ತೋಡಿಕೊಂಡಿದ್ದಾರೆ.
ಈ ವ್ಯವಸ್ಥೆಯಲ್ಲಿ ಉದ್ಯಮಿಗಳಿಗೆ ಲಾಭವಿಲ್ಲ
ಈ ಕೆಟ್ಟ ವ್ಯವಸ್ಥೆಯಲ್ಲಿ ಉದ್ಯಮಿಗಳಿಗೆ ಲಾಭವಿಲ್ಲ. ತಮ್ಮ ಆದಾಯ, ಲಾಭಾಂಶ ಎಲ್ಲವೂ ಜಿಎಸ್‌ಟಿ ಫೈಲಿಂಗ್, ಟ್ಯಾಕ್ಸ್ ಫೈಲಿಂಗ್, ಬಳಿಕ ನೋಟಿಸ್, ಕಾನೂನು ಹೋರಾಟಕ್ಕೆ ಮೀಸಲಿಡಬೇಕು. ಸಣ್ಣ ಕಂಪನಿಗಳು ಈ ವ್ಯವಸ್ಥೆಯಲ್ಲಿ ಸಿಲುಕಿ ಒದ್ದಾಡುತ್ತದೆ. ಹಲವರು ಭಾರತ ತೊರೆದು ಬೇರೆ ದೇಶದಲ್ಲಿ ಯಶಸ್ವಿಯಾಗಿ ಉದ್ಯಮ ನಡೆಸುತ್ತಿದ್ದಾರೆ. ಹಲವರು ಭಾರತದಲ್ಲಿ ಉದ್ಯಮ ಆರಂಭಿಸುತ್ತಾರೆ. ವಿದೇಶಕ್ಕೆ ವಿಸ್ತರಿಸುತ್ತಾರೆ. ಬಳಿಕ ಭಾರತದ ತೊರೆದು ವಿದಶಕ್ಕೆ ತೆರಳುತ್ತಾರೆ. ಹಣ ಬಂದಾಗ ಭಾರತ ತೊರೆದರು ಅನ್ನೋದು ಇಲ್ಲಿ ಕಾರಣವಲ್ಲ. ಭಾರತದ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಗಿ ಅಲ್ಲ. ಇಲ್ಲಿನ ವ್ಯವಸ್ಥೆಯಲ್ಲಿ ಉದ್ಯಮ ನಡೆಸಲು ಸಾಧ್ಯವಾಗದ ಕಾರಣ ಭಾರತ ತೊರೆಯುತ್ತಾರೆ ಎಂದಿದ್ದಾರೆ.
ನಾನು ಸುಸ್ತಾದೆ, ಇಲ್ಲಿ ಸಾಕು
ನಾನು ಈ ಹೋರಾಟದಲ್ಲಿ ಸುಸ್ತಾದನೆ, ನನಗೆ ಇಲ್ಲಿ ಸಾಕು. 2026ರಲ್ಲಿ ನನ್ನ ಗೋಲ್ ಕಂಪನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವದು. ಇದು ಭಾರತೀಯತೆ, ದೇಶಭಕ್ತಿಯ ವಿಚಾರವಲ್ಲ, ನೈಜತೆ. ಇಲ್ಲಿ ಉದ್ಯಮ ನಡೆಸುವಾಗ ಎದುರಾಗುವ ಸವಾಲು ಮೆಟ್ಟಿ ನಿಲ್ಲಲು ವ್ಯವಸ್ಥೆಗಳೇ ಈ ರೀತಿ ಇರುವಾಗ ಸಾಧ್ಯವಿಲ್ಲ ಎಂದಿದ್ದಾರೆ.


