ಭಾರತ ವಿರೋಧಿ ಯುವ ಮುಖಂಡ ಉಸ್ಮಾನ್ ಹದಿ ಹತ್ಯೆಯು ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಹತ್ಯೆಯ ಪಾರದರ್ಶಕ ತನಿಖೆಗೆ ಆಗ್ರಹಿಸಿರುವ ಇನ್‌ಕಿಲಾಬ್ ಮಂಚ್ ಪಕ್ಷ, ಮಧ್ಯಂತರ ಸರ್ಕಾರವನ್ನು ಪದಚ್ಯುತಗೊಳಿಸುವ ಎಚ್ಚರಿಕೆ ನೀಡಿದೆ.
- Home
- News
- India News
- India Latest News Live: ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಪದಚ್ಯುತಗೊಳಿಸುವ ಎಚ್ಚರಿಕೆ
India Latest News Live: ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಪದಚ್ಯುತಗೊಳಿಸುವ ಎಚ್ಚರಿಕೆ

ನವದೆಹಲಿ: ಆಂತರಿಕ ಸಂಘರ್ಷ ಭುಗಿಲೆದ್ದಿರುವ ಬಾಂಗ್ಲಾದೇಶದಲ್ಲಿ ಭಾರತವಿರೋಧಿ ಮನಃಸ್ಥಿತಿಗೆ ತುಪ್ಪ ಸುರಿದು, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂಬ ಸ್ಫೋಟಕ ವಿಚಾರವನ್ನು ಭಾರತದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ.
ಪಾಕ್ ಗುಪ್ತಚರ ಸಂಸ್ಥೆಯಾದ ಐಎಸ್ಐ ಬೆಂಬಲಿತ ಶಕ್ತಿಗಳು ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಅವಾಮಿ ಲೀಗ್ ಪಕ್ಷಕ್ಕೆ ಭಾರತ ಬೆನ್ನೆಲುಬಾಗಿ ನಿಂತಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಬಾಂಗ್ಲಾ ನಾಗರಿಕರನ್ನು ಭಾರತದ ವಿರುದ್ಧ ಎತ್ತಿಕಟ್ಟಿ, ಭಾರತವು ಬಾಂಗ್ಲಾ ಮೇಲೆ ದಾಳಿ ಮಾಡುವಂತೆ ಪ್ರಚೋದಿಸುವುದು ಇವರ ಉದ್ದೇಶ. ಕಳೆದ ವರ್ಷ ಹಸೀನಾ ಭಾರತಕ್ಕೆ ಪಲಾಯನಗೈದ ದಿನಗಳಿಂದಲೇ ಐಎಸ್ಐ ಈ ಕೆಲಸದಲ್ಲಿ ನಿರತವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಮೂಲಕ ಭಾರತದ ವಿರುದ್ಧ ಇತರ ದೇಶಗಳನ್ನು ಎತ್ತಿಕಟ್ಟಿ ಮೈಕಾಯಿಸಿಕೊಳ್ಳುವ ಪಾಕಿಸ್ತಾನದ ಚಾಳಿ ಮತ್ತೊಮ್ಮೆ ಬಹಿರಂಗವಾಗಿದೆ.
India Latest News Live 24 December 2025ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಪದಚ್ಯುತಗೊಳಿಸುವ ಎಚ್ಚರಿಕೆ
India Latest News Live 24 December 2025ಕಾಂಗ್ರೆಸ್ ನಾಯಕರ ಕುಟುಂಬಕ್ಕೆ ಸಂಕಷ್ಟ - ಏನಿದು ಕೇಸ್?
ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ ನೀಡಿದ ಹಗರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧ ದೋಷಾರೋಪ ಹೊರಿಸಲು ದೆಹಲಿ ಕೋರ್ಟ್ ಆದೇಶಿಸಿದೆ. ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ವಿರುದ್ಧ ಇ.ಡಿ. ಸಲ್ಲಿಸಿದ್ದ ಆರೋಪಪಟ್ಟಿಯನ್ನು ಲಖನೌ ಕೋರ್ಟ್ ಸ್ವೀಕರಿಸಿದೆ.
India Latest News Live 24 December 2025ದೇಶದಲ್ಲಿ ಬಂಗಾರ, ಬೆಳ್ಳಿ ದಾಖಲೆ - ಬೆಲೆ ಏರಿಕೆ ಪರ್ವದ ಹಿಂದಿನ ರಹಸ್ಯ ಏನು?
ದೇಶದಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಏರಿಕೆ ಪರ್ವ ಮುಂದುವರಿದಿದ್ದು, 10 ಗ್ರಾಂ ಚಿನ್ನದ ಬೆಲೆ 1,40,850 ರು. ಹಾಗೂ 1 ಕೆಜಿ ಬೆಳ್ಳಿಯ ಬೆಲೆ 2,17,250 ರು.ಗೆ ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಆರ್ಥಿಕ ಅನಿಶ್ಚಿತತೆ, ಅಮೆರಿಕದ ಬಡ್ಡಿ ದರ ಇಳಿಕೆ ಚಿನ್ನದತ್ತ ಹೂಡಿಕೆದಾರರನ್ನು ಸೆಳೆಯುತ್ತಿದೆ