- Home
- News
- India News
- India Latest News Live: ಚಿನ್ನ₹1.50 ಲಕ್ಷ, ಬೆಳ್ಳಿಗೆ ಬೆಲೆ 3 ಲಕ್ಷ: ಹೊಸ ದಾಖಲೆ, ಕಳೆದ 1 ವರ್ಷದಲ್ಲಿ ಚಿನ್ನದ ಬೆಲೆ 70000 ರು., ಬೆಳ್ಳಿ ಬೆಲೆ 2 ಲಕ್ಷ ರು. ಏರಿಕೆ
India Latest News Live: ಚಿನ್ನ₹1.50 ಲಕ್ಷ, ಬೆಳ್ಳಿಗೆ ಬೆಲೆ 3 ಲಕ್ಷ: ಹೊಸ ದಾಖಲೆ, ಕಳೆದ 1 ವರ್ಷದಲ್ಲಿ ಚಿನ್ನದ ಬೆಲೆ 70000 ರು., ಬೆಳ್ಳಿ ಬೆಲೆ 2 ಲಕ್ಷ ರು. ಏರಿಕೆ

ನವದೆಹಲಿ: ಚಿನ್ನ, ಬೆಳ್ಳಿ ದರ ಹೆಚ್ಚಳ ಪರ್ವ ಮುಂದುವರೆದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಿ ದರ ಕೇಜಿಗೆ 3,07,900 ರು.ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಮತ್ತೊಂದೆಡೆ ಚಿನ್ನದ ದರವೂ ಹೆಚ್ಚಳ ಕಂಡಿದ್ದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1, 7,550 ರು. ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1,50,000 ರು.ಗೆ ದರ ದಾಖಲಾಗಿದೆ.
ಶುಕ್ರವಾರಕ್ಕೆ ಹೋಲಿಸಿದರೆ ಚಿನ್ನ, ಬೆಳ್ಳಿ ದರ ಎರಡರಲ್ಲೂ ಏರಿಕೆಯಾಗಿದೆ. ಬೆಳ್ಳಿ ಶುಕ್ರವಾರ 2,98,700 ರು.ಇತ್ತು. ಆದರೆ ಸೋಮವಾರ 9200 ರು. ಹೆಚ್ಚಾಗಿದೆ. ಇನ್ನು 22 ಕ್ಯಾರೆಟ್ 10 ಗ್ರಾಂ ಚಿನ್ನ 1, 35,400 ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 1,47,700 ಇತ್ತು. ಆದರೆ ಸೋಮವಾರ ಕ್ರಮವಾಗಿ 2150, 2300 ರು. ಏರಿಕೆಯಾಗಿದೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ದರ ಏರಿಕೆಯಾಗಿದ್ದು ಬೆಳ್ಳಿ ಒಂದೇ ದಿನ 10,000 ಏರಿಕೆ ಕಂಡು 3,02,600 ರು.ಗೆ ತಲುಪಿದೆ. 10 ಗ್ರಾಂ ಚಿನ್ನ 1900 ರು. ಹೆಚ್ಚಳವಾಗಿ 1,48,100 ರು.ಗೆ ತಲುಪಿದೆ.
ಭರ್ಜರಿ ಏರಿಕೆ: ಕಳೆದ ಒಂದು ವರ್ಷದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 70000 ರು.ನಷ್ಟು ಏರಿಕೆಯಾಗಿದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 2 ಲಕ್ಷ ರು.ನಷ್ಟು ಹೆಚ್ಚಳವಾಗಿದೆ