ಬಾಲಿವುಡ್ ನೃತ್ಯ ಸಂಯೋಜಕಿ ಗೀತಾ ಕಪೂರ್, 'ಗೀತಾ ಮಾ' ಎಂದೇ ಖ್ಯಾತರಾಗಿದ್ದು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಾನು 52ನೇ ವಯಸ್ಸಿನಲ್ಲಿ ಮದುವೆಯಾಗದಿದ್ದರೂ ಕನ್ಯೆಯಲ್ಲ, ದೈಹಿಕ ತೃಪ್ತಿಗೆ ಮದುವೆಯೇ ಆಗಬೇಕೆಂದಿಲ್ಲ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳ ವೈಯಕ್ತಿಯ ಲೈಫ್​ ಯಾವಾಗಲೂ ಚರ್ಚೆಯಲ್ಲಿಯೇ ಇರುತ್ತದೆ. ಹಲವರ ಜೊತೆಗಿನ ದೈಹಿಕ ಸಂಬಂಧ, ಆ ಬಳಿಕ ಯಾರದ್ದೋ ಜೊತೆ ಮದುವೆ, ಡೇಟಿಂಗ್​, ಗಾಸಿಪ್​,ಅದೂ ಇದೂ ಎಲ್ಲವೂ ಮಾಮೂಲೇ. ಕೆಲವೊಬ್ಬರು ತಮ್ಮ ವಿಷಯವನ್ನು ಓಪನ್​ ಆಗಿಯೇ ಹೇಳಿಕೊಂಡರೆ, ಮತ್ತೆ ಕೆಲವರು ಅದನ್ನು ಗುಟ್ಟು ಮಾಡುತ್ತಾರೆ. ಆದರೆ, ಇದೀಗ ಬಾಲಿವುಡ್​ ಅಮ್ಮಾ ಎಂದೇ ಫೇಮಸ್​ ಆಗಿರೋ 52 ವರ್ಷದ, ನೃತ್ಯ ಸಂಯೋಜಕಿ ಗೀತಾ ಕಪೂರ್ ಒಂದು ಸ್ಟೇಟ್​ಮೆಂಟ್​ ಕೊಟ್ಟು ಈಗ ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದೆ.

ಅತ್ಯುತ್ತಮ ನೃತ್ಯ ಸಂಯೋಜಕಿ

ಅಷ್ಟಕ್ಕೂ ಅತ್ಯುತ್ತಮ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿರುವ ನೃತ್ಯ ಸಂಯೋಜಕಿ ಗೀತಾ ಕಪೂರ್​ (Geeta Kapoor) ಹಲವಾರು ನೃತ್ಯ ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಹಲವರು ಪ್ರೀತಿಯಿಂದ "ಗೀತಾ ಮಾ" ಎಂದೇ ಕರೆಯುತ್ತಾರೆ. ಆದರೆ ಅಮ್ಮಾ ಎಂದ ಮಾತ್ರಕ್ಕೆ ತಮ್ಮ ವೈಯಕ್ತಿಯ ಜೀವನದಲ್ಲಿ ದೈಹಿಕ ತೃಪ್ತಿ ಹೊಂದದೇ ಇರಬೇಕೆಂದೇನೂ ಇಲ್ಲ ಎನ್ನುವ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ ಗೀತಾ ಕಪೂರ್​. ಅವರು ತಮ್ಮ ಸೆ*ಕ್ಸ್​ ಜೀವನ ಮತ್ತು ಸಂಬಂಧಗಳ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದರಿಂದ ಕೆಲವರು ಟ್ರೋಲ್​ ಕೂಡ ಮಾಡುತ್ತಿದ್ದರೆ, ಮತ್ತೆ ಕೆಲವರು ಓಪನ್​ ಆಗಿಯೇ ಎಲ್ಲವನ್ನೂ ಹೇಳಿಕೊಂಡಿರುವುದಕ್ಕೆ ಭೇಷ್​ ಎನ್ನುತ್ತಿದ್ದಾರೆ.

'ಮಾ' ಟ್ಯಾಗ್​ಲೈನ್​ ಹೊತ್ತು...

ಅಷ್ಟಕ್ಕೂ ಗೀತಾ ಕಪೂರ್ ಸಂದರ್ಶನವೊಂದರಲ್ಲಿ, ಡೇಟಿಂಗ್ ಮತ್ತು ದೈಹಿಕ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ನಾನು ವಿವಾಹಿತೆ ಅಲ್ಲ. ಆದರೆ ಕನ್ಯೆಯಾಗಿ ಉಳಿದಿಲ್ಲ. ಏಕೆಂದರೆ, ನಾನು ಸನ್ಯಾಸಿ ಅಲ್ಲ. ಗೀತಾ ಮಾ ಎಂದು ಎಲ್ಲರೂ ಕರೆದ ಮಾತ್ರಕ್ಕೆ ಇದು ನನಗೆ ವೈಯಕ್ತಿಕ ಜೀವನ ಇಲ್ಲ ಎಂದು ಅರ್ಥವಲ್ಲ. ನಾನು ಸಾಮಾನ್ಯ ಜೀವನ ನಡೆಸುತ್ತೇನೆ. ನಾನು ಎಲ್ಲರಂತೆ ಸಾಮಾನ್ಯ ವ್ಯಕ್ತಿ. ನನಗೆ ನೀಡಲಾಗಿರುವ ಅಮ್ಮಾ ಎನ್ನುವ ಟ್ಯಾಗ್‌ನಿಂದಾಗಿ, ನನ್ನ ಜೀವನದಲ್ಲಿ ಅಂತಹದ್ದೇನೂ ಇರಲು ಸಾಧ್ಯವಿಲ್ಲ ಎಂದು ನೀವು ಭಾವಿಸಬಹುದು, ಆದರೆ ಎಲ್ಲರಿಗೂ ಭಾವನೆಗಳಿವೆ, ಅದರಲ್ಲಿ ಯಾವುದೇ ತಪ್ಪಿಲ್ಲ. ನಾನು ಜನರನ್ನು ಭೇಟಿಯಾಗುತ್ತೇನೆ, ಡೇಟ್ ಮಾಡುತ್ತೇನೆ ಮತ್ತು ನನ್ನ ಕ್ಷಣಗಳನ್ನು ಕಂಡುಕೊಳ್ಳುತ್ತೇನೆ, ತೃಪ್ತಿ ಪಡುತ್ತೇನೆ ಎಂದಿದ್ದಾರೆ.

ಮದುವೆ ಒಂದೇ ಅಲ್ಲ

ಹಾಗೆಂದು ಮದುವೆ ಎನ್ನೋದು ಒಂದೇ ಅನ್ಯೋನ್ಯತೆ ಎನ್ನುವುದರಲ್ಲಿ ಅರ್ಥವಿಲ್ಲ, ಮದುವೆಯಿಲ್ಲದೆ ಯಾರೊಂದಿಗೂ ಅನ್ಯೋನ್ಯವಾಗಿರಲು ಸಾಧ್ಯವಿಲ್ಲ ಅಥವಾ ತನಗೆ ವೈಯಕ್ತಿಕ ಜೀವನವಿಲ್ಲ ಎನ್ನೋದು ಸರಿಯಲ್ಲ. ಮದುವೆಯಿಲ್ಲದೇ ನಾನು ಎಲ್ಲವುಗಳಿಂದ ತೃಪ್ತಳಾಗಿದ್ದೇನೆ. ದೈಹಿಕ ತೃಪ್ತಿ ಪಡೆಯುತ್ತಿದ್ದೇನೆ. ದೈಹಿಕವಾಗಿ ಸಂತೋಷವಾಗಿರುವುದಕ್ಕೆ ಮದುವೆಯೇ ಆಗಬೇಕೆಂದೇನೂ ಇಲ್ಲ ಎಂದಿದ್ದಾರೆ.