10:56 PM (IST) Sep 15

India Latest News Live 15 September 2026 ಯುಪಿಐ ವಹಿವಾಟಿಗೆ ಶುಲ್ಕ - ಬ್ಯಾಂಕ್, ಪೇಮೆಂಟ್‌ ಆಪ್‌ಗಳಿಗೆ ತಿಂಗಳಿಗೆ ₹2,400 ಕೋಟಿ ಲಾಭದ ನಿರೀಕ್ಷೆ

₹2,000 ಕ್ಕಿಂತ ಹೆಚ್ಚಿನ ಮೌಲ್ಯದ ಯುಪಿಐ ವರ್ತಕರ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರದಿಂದ ಬ್ಯಾಂಕ್‌ಗಳು ಮತ್ತು ಪೇಮೆಂಟ್ ಆಪ್‌ಗಳಿಗೆ ಭಾರಿ ಆದಾಯ ಬರುವ ನಿರೀಕ್ಷೆಯಿದೆ,.

Read Full Story
08:59 PM (IST) Sep 15

India Latest News Live 15 September 2026 ಈ ಎರಡು ಕಾರಣಗಳಿಗೆ Suzuki e-Access ಬೆಟರ್, ಬೆಸ್ಟ್ ಸ್ಕೂಟರ್‍‌ ಅಂದ್ರೆ ಇದೇ

ಭಾರತದ ಮಾರುಕಟ್ಟೆಗೆ ಸುಜುಕಿಯ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ ಇ-ಆಕ್ಸೆಸ್ ಬಿಡುಗಡೆಯಾಗಿದೆ. ಇದು ಆರಾಮದಾಯಕ ಸವಾರಿ, ಸುರಕ್ಷಿತ LFP ಬ್ಯಾಟರಿ ತಂತ್ರಜ್ಞಾನ ಮತ್ತು ನಿಖರವಾದ ರೇಂಜ್ ತೋರಿಸುವ 'True Range Indicator' ನಂತಹ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ದೈನಂದಿನ ನಗರ ಬಳಕೆಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
Read Full Story
08:11 PM (IST) Sep 15

India Latest News Live 15 September 2026 ಸುರಕ್ಷತೆಯಲ್ಲಿ ನಂ.1 ಪಟ್ಟಕ್ಕೇರಿದ ಮಹೀಂದ್ರಾ XUV 7XO - ಕ್ರ್ಯಾಶ್ ಟೆಸ್ಟ್‌ನಲ್ಲಿ ಭರ್ಜರಿ 5-ಸ್ಟಾರ್ ರೇಟಿಂಗ್!

ಮಹೀಂದ್ರಾ ಸಂಸ್ಥೆಯ ನೂತನ 'XUV 7XO' ಎಸ್‌ಯುವಿ, ಭಾರತ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ಅತ್ಯುನ್ನತ '5-ಸ್ಟಾರ್' ಸುರಕ್ಷತಾ ರೇಟಿಂಗ್ ಪಡೆದು ದಾಖಲೆ ನಿರ್ಮಿಸಿದೆ. ಈ ಕಾರು ಹಿರಿಯರ ಸುರಕ್ಷತೆ (AOP) ಮತ್ತು ಮಕ್ಕಳ ಸುರಕ್ಷತೆ (COP) ಎರಡೂ ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ.

Read Full Story
07:48 PM (IST) Sep 15

India Latest News Live 15 September 2026 ಅಯೋಧ್ಯೆ ರಾಮ ಮಂದಿರ ಕುರಿತು ವಿಶೇಷ ಪೋಸ್ಟ್ ಮಾಡಿದ ಪಾಕಿಸ್ತಾನದ ವ್ಯಕ್ತಿ.. ಆತನ ಆಸೆ ಈಡೇರುತ್ತಾ?

ಪಾಕಿಸ್ತಾನದ ಹಿಂದೂ ವ್ಯಕ್ತಿಯೊಬ್ಬರು ತಮ್ಮ ಬಹುದಿನಗಳ ವಿಶೇಷ ಕನಸನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಅವರಿಗೆ ಅಯೋಧ್ಯೆ ಶ್ರೀರಾಮನ ಮೇಲೆ ಎಲ್ಲಿಲ್ಲದ ಭಕ್ತಿ. ಇದೀಗ ಅವರ ಆಸೆ ಈಡೇರುತ್ತಾ ಎಂಬ ಚರ್ಚೆ ಶುರುವಾಗಿದೆ.

Read Full Story
05:47 PM (IST) Sep 15

India Latest News Live 15 September 2026 ಮೋದಿ ತಂತ್ರಕ್ಕೆ ಪಾಕಿಸ್ತಾನ ಕಂಗಾಲು, ಒಪ್ಪಂದ ಮುರಿದು ಹೌಥಿಸ್ ತಡೆಯಲು ಇಸ್ರೇಲ್ ಮೊರೆ ಹೋದ ಸೌದಿ

ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ತಂತ್ರಕ್ಕೆ ಇದೀಗ ಪಾಕಿಸ್ತಾನ ಬೆವತು ಹೋಗಿದೆ. ಮೆಕ್ಕಾ ಒಪ್ಪಂದ ಮಾಡಿಕೊಂಡು ಎದೆಯುಬ್ಬಿಸಿದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ತಿರುಗೇಟು ನೀಡಿದೆ. ಇದೀಗ ಪಾಕ್ ಬದಲು ಇಸ್ರೇಲ್ ನೆರವು ಕೇಳಿದೆ.

Read Full Story
05:45 PM (IST) Sep 15

India Latest News Live 15 September 2026 ಒಂದು ಕಾಲದಲ್ಲಿ ಕೆಲಸವೂ ಇರಲಿಲ್ಲ, ಕೈಯಲ್ಲಿ ಹಣವೂ ಇರಲಿಲ್ಲ, ಈಗ ₹270 ಕೋಟಿ ಹಿಟ್ ಸಿನಿಮಾ ನೀಡಿದ ನಟ ಯಾರು?

ಐಐಟಿ ಪದವೀಧರ ಜಿತೇಂದ್ರ ಕುಮಾರ್, ನಟನೆಗಾಗಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದರು. ಆರಂಭಿಕ ವೈಫಲ್ಯಗಳ ನಂತರ, TVF ವೆಬ್ ಸಿರೀಸ್‌ಗಳ ಮೂಲಕ 'ಜೀತು ಭಯ್ಯಾ' ಆಗಿ ಜನಪ್ರಿಯತೆ ಗಳಿಸಿ, ಇದೀಗ ₹270 ಕೋಟಿ ಗಳಿಸಿದ 'ಮಿರ್ಜಾಪುರ' ಸಿನಿಮಾದ ಭಾಗವಾಗಿದ್ದಾರೆ.
Read Full Story
05:07 PM (IST) Sep 15

India Latest News Live 15 September 2026 ದೇಶದಲ್ಲಿ 1 ಬಿಲಿಯನ್ ಡಾಲರ್ ಬಿಸಿನೆಸ್ ಮಾಡಿ ದಾಖಲೆ ಬರೆದ ಅಮೆಜಾನ್ ನೌ - ಪಡುಬಿದ್ರಿ, ಧಾರವಾಡಕ್ಕೂ ಸೇವೆಯ ಲಗ್ಗೆ!

ಆನ್‌ಲೈನ್ ಶಾಪಿಂಗ್ ದೈತ್ಯ ಅಮೆಜಾನ್‌ನ 'ಅಮೆಜಾನ್ ನೌ' ಸೇವೆಯು ಕಳೆದ ಮೂರು ತಿಂಗಳಲ್ಲಿ 1 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ದಾಟಿದೆ. ಈ ಅತಿವೇಗದ ಡೆಲಿವರಿ ಸೇವೆಯು ಇದೀಗ ಧಾರವಾಡ, ಪಡುಬಿದ್ರಿಯಂತಹ 60ಕ್ಕೂ ಹೆಚ್ಚು ಸಣ್ಣ ನಗರಗಳಿಗೂ ವಿಸ್ತರಿಸಿದ್ದು, ಅಮೆಜಾನ್ ಇಂಡಿಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿದೆ.
Read Full Story
05:05 PM (IST) Sep 15

India Latest News Live 15 September 2026 ಷೇರು ಮಾರುಕಟ್ಟೆ ಪ್ರಿಯರಿಗೆ ಬಂಪರ್ ಸುದ್ದಿ - ಸೆ.17 ರಿಂದ ಭಾರತದ ಅತಿದೊಡ್ಡ NSE ಐಪಿಒ ಆರಂಭ

ಭಾರತದ ಅತಿದೊಡ್ಡ ಷೇರು ವಿನಿಮಯ ಕೇಂದ್ರವಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE), ತನ್ನ ಬಹುನಿರೀಕ್ಷಿತ ಸಾರ್ವಜನಿಕ ಉದ್ಯಮ ಕೊಡುಗೆಯ (IPO) ದಿನಾಂಕವನ್ನು ಪ್ರಕಟಿಸಿದೆ. ಸೆಪ್ಟೆಂಬರ್ 17 ರಿಂದ ಆರಂಭವಾಗುವ ಈ ಐಪಿಒಗೆ ಪ್ರತಿ ಷೇರಿಗೆ ₹1,700 ರಿಂದ ₹1,785 ರ ಪ್ರೈಸ್ ಬ್ಯಾಂಡ್ ನಿಗದಿಪಡಿಸಲಾಗಿದೆ.
Read Full Story
04:34 PM (IST) Sep 15

India Latest News Live 15 September 2026 ಕೃತಕ ಸೂರ್ಯನ ನಿರ್ಮಾಣದ ಸನಿಹ ಭಾರತ, ಗುಜರಾತ್‌ನಲ್ಲಿ ಅತ್ಯಾಧುನಿಕ ಗೈರೊಟ್ರಾನ್ ತಂತ್ರಜ್ಞಾನ ಯಶಸ್ವಿ

ಭಾರತದ 'ಕೃತಕ ಸೂರ್ಯ' ಯೋಜನೆಯು ಗುಜರಾತ್‌ನ ಪ್ಲಾಸ್ಮಾ ಸಂಶೋಧನಾ ಸಂಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇಲ್ಲಿನ 'ಎಸ್ಎಸ್‌ಟಿ-1 ಟೋಕಾಮ್ಯಾಕ್' ಯಂತ್ರದಲ್ಲಿ ಹೊಸ, ಶಕ್ತಿಶಾಲಿ 'ಗೈರೊಟ್ರಾನ್' ಸಾಧನವನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.

Read Full Story
04:03 PM (IST) Sep 15

India Latest News Live 15 September 2026 ಟಾಟಾ ಸಮೂಹದ ಅನಿರೀಕ್ಷಿತ ತಿರುವು, ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ನಿರ್ಧಾರ

ಟಾಟಾ ಸನ್ಸ್ ಅನ್ನು ಶೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವಂತೆ ಆರ್‌ಬಿಐ ನೀಡಿದ ಆದೇಶ ಮತ್ತು ಸರ್ ರತನ್ ಟಾಟಾ ಟ್ರಸ್ಟ್ (SRTT) ಮಂಡಳಿ ಸಭೆಗಳ ಮೇಲಿನ ತಡೆಯಾಜ್ಞೆಯಿಂದಾಗಿ ಟಾಟಾ ಸಮೂಹವು ದ್ವಿಮುಖ ಕಾನೂನು ಸವಾಲನ್ನು ಎದುರಿಸುತ್ತಿದೆ. ಈ ಎರಡೂ ವಿಷಯಗಳನ್ನು ಪ್ರಶ್ನಿಸಿ, ಟಾಟಾ ಟ್ರಸ್ಟ್‌ಗಳು ಮತ್ತು ಟಾಟಾ ಸನ್ಸ್ ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಸಜ್ಜಾಗಿವೆ.
Read Full Story
02:38 PM (IST) Sep 15

India Latest News Live 15 September 2026 12 ವರ್ಷ ದುಡಿದ, ಬೆಸ್ಟ್ ಎಂಪ್ಲಾಯಿ ಪಡೆದ 'ಒರಾಕಲ್' ಉದ್ಯೋಗಿಯ ಹಠಾತ್ ವಜಾ - ಪತ್ನಿಯ ಕಣ್ಣೀರಿನ ಪೋಸ್ಟ್ ವೈರಲ್!

ಒರಾಕಲ್ ಕಂಪನಿಯಲ್ಲಿ 12 ವರ್ಷಗಳ ಕಾಲ ನಿಷ್ಠೆಯಿಂದ ದುಡಿದ ಸೌರಭ್ ಎಂಬ ಉದ್ಯೋಗಿಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ವಜಾಗೊಳಿಸಲಾಗಿದೆ. ಅವರ ಪತ್ನಿ ಪೂಜಾ ಸಾಹು, ತಮ್ಮ ಪತಿಯ ತ್ಯಾಗ ಮತ್ತು ಕಂಪನಿಯ ಕಠೋರ ನಡವಳಿಕೆಯ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದ ಪೋಸ್ಟ್, ಕಾರ್ಪೊರೇಟ್ ಜಗತ್ತಿನ ಕರಾಳ ಸತ್ಯವನ್ನು ಬಯಲು ಮಾಡಿದೆ.
Read Full Story
01:49 PM (IST) Sep 15

India Latest News Live 15 September 2026 Diwali Airfare - ದೀಪಾವಳಿಗೆ ಊರಿಗೆ ಹೋಗ್ತಿದ್ದೀರಾ? ಟಿಕೆಟ್ ರೇಟ್ ಕೇಳಿದ್ರೆ ಶಾಕ್ ಆಗ್ತೀರಾ! ರಿಟರ್ನ್ ಟಿಕೆಟ್‌ಗೆ ₹18,000!

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿವೆ. ನವೆಂಬರ್ 6 ರಿಂದ 8ರ ನಡುವೆ ದೆಹಲಿ, ಮುಂಬೈ, ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಪ್ರಯಾಣ ದರ ಗಗನಕ್ಕೇರಿದೆ. ದರ ಏರಿಕೆಗೆ ಕಾರಣವೇನು?

Read Full Story
01:35 PM (IST) Sep 15

India Latest News Live 15 September 2026 19ರ ಯುವಕನಿಗೆ iphone 17 ಗಿಫ್ಟ್ ಕೊಟ್ಟ 22 ವಯಸ್ಸಿನ ಗೆಳತಿ; ದುಬಾರಿ ಗಿಫ್ಟ್, ತಗೋಳೋದಾ ಬೇಡ್ವಾ?

19 ವರ್ಷದ ಯುವಕನೊಬ್ಬ ತನ್ನ 22 ವರ್ಷದ ಗೆಳತಿ ನೀಡಿದ ದುಬಾರಿ ಐಫೋನ್ 17 ಉಡುಗೊರೆಯನ್ನು ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದಾನೆ. ಈ ಉಡುಗೊರೆಯು ತಮ್ಮ ಸಂಬಂಧದ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡಬಹುದೆಂಬ ಆತಂಕದಿಂದ, ಆತ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಸಲಹೆ ಕೇಳಿದ್ದಾನೆ.
Read Full Story
01:11 PM (IST) Sep 15

India Latest News Live 15 September 2026 ಕಿವಿ ಕೇಳಲ್ಲ, ಮಾತು ಬರಲ್ಲ - ಅಮ್ಮನಿಗೆ ಮಗನೇ ಶಿಕ್ಷಕನಾದ, 22 ವರ್ಷಗಳ ನಂತರ SSLC ಪರೀಕ್ಷೆಯಲ್ಲಿ ಶೇ.82 ಅಂಕ ಗಳಿಸಿದ ತಾಯಿ

ಇದೊಂದು ಸ್ಫೂರ್ತಿದಾಯಕ ಕತೆ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಕನಸುಗಳಿಗೆ ಎಕ್ಸ್‌ಪೈರಿ ಡೇಟ್‌ ಇಲ್ಲ ಎಂಬ ಮಾತಿದೆ. ಈ ಕತೆಯಲ್ಲಿ ಅಮ್ಮನ ಕನಸುಗಳಿಗೆ ಮಗನೇ ಶಿಕ್ಷಕನಾದ. ರಿಸಲ್ಟ್‌ ಏನು ಅಂದರೆ 22 ವರ್ಷಗಳ ಹಿಂದೆ ಅರ್ಧಕ್ಕೆ ನಿಂತಿದ್ದ ಅಮ್ಮನ ಕನಸು ಇಂದು ನನಸಾಗಿದೆ. ಏನದು ಸ್ಟೋರಿ.. ಇಲ್ಲಿದೆ ಕಂಪ್ಲೀಟ್‌ ಮಾಹಿತಿ..

Read Full Story
01:07 PM (IST) Sep 15

India Latest News Live 15 September 2026 ತಮಿಳುನಾಡು ದೇವಾಲಯಗಳಿಂದ ಮ್ಯಾನ್‌ಹ್ಯಾಟನ್ ಗ್ಯಾಲರಿವರೆಗೆ - ಬೃಹತ್ ವಿಗ್ರಹ ಕಳ್ಳನಿಗೆ ಈ ನಿಯಮವೇ ವರ! ಜರ್ಮನಿಗೆ ವಾಪಸ್

ಜಾಗತಿಕ ಕಲಾ ಕಳ್ಳಸಾಗಣೆದಾರ ಸುಭಾಷ್ ಕಪೂರ್, ಒಂದು ಪ್ರಕರಣದಲ್ಲಿ ಶಿಕ್ಷೆ ಮುಗಿದ ನಂತರ, ಹಸ್ತಾಂತರ ಒಪ್ಪಂದದ ಕಾರಣದಿಂದಾಗಿ ಭಾರತದಲ್ಲಿನ ಇತರ ಪ್ರಕರಣಗಳಿಂದ ತಾತ್ಕಾಲಿಕವಾಗಿ ಪಾರಾಗಿದ್ದಾನೆ. ಮದ್ರಾಸ್ ಹೈಕೋರ್ಟ್ ಆತನನ್ನು ಜರ್ಮನಿಗೆ ವಾಪಸ್ ಕಳುಹಿಸಲು ಆದೇಶಿಸಿದ್ದು, ಇದು ಕಾನೂನು ಮತ್ತು ರಾಜತಾಂತ್ರಿಕತೆಯ ಸಂಕೀರ್ಣತೆಯನ್ನು ಎತ್ತಿ ತೋರಿಸುತ್ತದೆ.
Read Full Story
12:42 PM (IST) Sep 15

India Latest News Live 15 September 2026 ವೋಟು ಹಾಕಿದ ಬೆನ್ನಲ್ಲೇ ಮೃತಪಟ್ಟ ತಾಯಿ, ಎಲೆಕ್ಷನ್‌ನಲ್ಲಿ ಒಂದೇ ಮತದಿಂದ ಗೆದ್ದು ಕಣ್ಣೀರಿಟ್ಟ ಮಗ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ಚುನಾವಣೆ ದಿನ ಹಿರಿಯ ತಾಯಿ ಮತ ಹಾಕಿದ ಬೆನ್ನಲ್ಲೇ ಮೃತಪಟ್ಟಿದ್ದಾರೆ. ಫಲಿತಾಂಶ ಬಂದಾಗ ದುಃಖ ಇಮ್ಮಡಿಯಾಗಿದೆ. ಮಗ ಕೇವಲ ಒಂದು ಮತದಿಂದ ಗೆದ್ದ ಘಟನೆ ನಡೆದಿದೆ.

Read Full Story
12:22 PM (IST) Sep 15

India Latest News Live 15 September 2026 ಅಫ್ಘಾನಿಸ್ತಾನದಲ್ಲಿ ಭಾರತದ ಮಹಿಳಾ ವ್ಲಾಗರ್‌ ಅರೆಸ್ಟ್ - ‌ ತಾಲಿಬಾನಿಗಳ ಆ ರೂಲ್ಸ್‌ ಬ್ರೇಕ್‌ ಮಾಡಿ ನರಳಾಟ, ಏನದು?

ಅಫ್ಘಾನಿಸ್ತಾನದಲ್ಲಿ ಹೆಣ್ಮಕ್ಕಳಿಗೆ ವಿಚಿತ್ರ ವಿಚಿತ್ರ ರೂಲ್ಸ್‌. ಅದ್ರಲ್ಲೂ ಈಗಿನ ತಾಲಿಬಾನಿ ಸರ್ಕಾರವಂತೂ ಏನೇನೋ ನಿಯಮಗಳನ್ನು ತಂದಿದೆ. ರೂಲ್ಸು, ಗಿಲ್ಸೂ ಏನೂ ಗೊತ್ತಿಲ್ಲದೇ ಒಬ್ಬಂಟಿಯಾಗಿ ತಾಲಿಬಾನಿ ನೆಲದಲ್ಲಿ ಪ್ರಯಾಣಿಸುತ್ತಿದ್ದ ಭಾರತದ ಟ್ರಾವೆಲ್‌ ವ್ಲಾಗರ್‌ ಒಬ್ಬರನ್ನು ಅರೆಸ್ಟ್‌ ಮಾಡಲಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನೋದು ಈ ಸ್ಟೋರಿಯಲ್ಲಿದೆ. ಓದಿ..

Read Full Story
11:51 AM (IST) Sep 15

India Latest News Live 15 September 2026 ಚಹಾಗೆ 20ರೂ, ಚಾಟ್ಸ್ 100, ದಿನಸಿ 1000, ನಿಮ್ಮ ಪಾವತಿ ಮೇಲೆ ಯುಪಿಐ ₹2000 ನೀತಿ ಪರಿಣಾಮವೇನು?

ಯುಪಿಐ ಪಾವತಿಗಳ ಕುರಿತು ಮಹತ್ವದ ಅಧಿಸೂಚನೆ ಹೊರಬಿದ್ದಿದೆ. 2000 ರೂಪಾಯಿ ವರೆಗೆ ಯುಪಿಐ ವಹಿವಾಟು ಫ್ರೀ. ಅದಕ್ಕಿಂತ ಮೇಲೆ ಶುಲ್ಕ ವಿಧಿಸಲು ಸಾಧ್ಯವಿದೆ. ಹಾಗಾದರೆ ಈ ನೀತಿ ನಿಮ್ಮ ಹಣಕಾಸಿನ ಮೇಲೆ ಬೀರುವ ಪರಿಣಾಮವೇನು?

Read Full Story
11:35 AM (IST) Sep 15

India Latest News Live 15 September 2026 IND vs AFG - ಪ್ಲೇಯಿಂಗ್ XIನಿಂದ ಸೂರ್ಯವಂಶಿ ಡ್ರಾಪ್, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಶ್ರೀಕಾಂತ್ ವಿರುದ್ಧ ಪತ್ನಿ ಕೆಂಡಾಮಂಡಲ

ಟೀಂ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಶ್ರೀಕಾಂತ್, ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದ್ದಕ್ಕೆ ಟೀಂ ಮ್ಯಾನೇಜ್‌ಮೆಂಟ್‌ ವಿರುದ್ಧ ಕಿಡಿಕಾರಿದ್ದಾರೆ. ಆಟಗಾರರೊಂದಿಗೆ ಈ ರೀತಿ ನಡೆದುಕೊಳ್ಳುವುದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಮತ್ತು ಇದು ತಪ್ಪು ಸಂದೇಶ ನೀಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Read Full Story
11:22 AM (IST) Sep 15

India Latest News Live 15 September 2026 ಆರ್‌ಬಿಐ 1 ಲಕ್ಷ ಕೋಟಿ ಬಾಂಡ್ ಮಾರಾಟ, ಚಿಲ್ಲರೆ ಹೂಡಿಕೆದಾರರಿಗೂ ಖರೀದಿಗೆ ಇದೆ ಅವಕಾಶ

ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಮೂರು ಹಂತಗಳಲ್ಲಿ ಸರ್ಕಾರಿ ಸೆಕ್ಯೂರಿಟಿ ಮಾರಾಟ ಮಾಡಲು ಮುಂದಾಗಿದೆ. ಈ ಬಾಂಡ್ 2029 ಹಾಗೂ 2032ಕ್ಕೆ ಮೆಚ್ಯೂರಿಟಿ ಪಡೆದುಕೊಳ್ಳಲಿದೆ. ಸೆ.17ಕ್ಕೆ ಹರಾಜು ನಡೆಯಲಿದೆ.

Read Full Story