ಇದೊಂದು ಸ್ಫೂರ್ತಿದಾಯಕ ಕತೆ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಕನಸುಗಳಿಗೆ ಎಕ್ಸ್‌ಪೈರಿ ಡೇಟ್ ಇಲ್ಲ ಎಂಬ ಮಾತಿದೆ. ಈ ಕತೆಯಲ್ಲಿ ಅಮ್ಮನ ಕನಸುಗಳಿಗೆ ಮಗನೇ ಶಿಕ್ಷಕನಾದ. ರಿಸಲ್ಟ್ ಏನು ಅಂದರೆ 22 ವರ್ಷಗಳ ಹಿಂದೆ ಅರ್ಧಕ್ಕೆ ನಿಂತಿದ್ದ ಅಮ್ಮನ ಕನಸು ಇಂದು ನನಸಾಗಿದೆ. ಏನದು ಸ್ಟೋರಿ.. ಇಲ್ಲಿದೆ ಕಂಪ್ಲೀಟ್ ಮಾಹಿತಿ..
ಇದೊಂದು ಸ್ಫೂರ್ತಿದಾಯಕ ಕತೆ. ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಕನಸುಗಳಿಗೆ ಎಕ್ಸ್‌ಪೈರಿ ಡೇಟ್ ಇಲ್ಲ ಎಂಬ ಮಾತಿದೆ. ಈ ಕತೆಯಲ್ಲಿ ಅಮ್ಮನ ಕನಸುಗಳಿಗೆ ಮಗನೇ ಶಿಕ್ಷಕನಾದ. ರಿಸಲ್ಟ್ ಏನು ಅಂದರೆ 22 ವರ್ಷಗಳ ಹಿಂದೆ ಅರ್ಧಕ್ಕೆ ನಿಂತಿದ್ದ ಅಮ್ಮನ ಕನಸು ಇಂದು ನನಸಾಗಿದೆ. ಏನದು ಸ್ಟೋರಿ.. ಇಲ್ಲಿದೆ ಕಂಪ್ಲೀಟ್ ಮಾಹಿತಿ..
ಅದೊಂದು ಕನಸು.. ಅಮ್ಮನ ಮನಸ್ಸಿನಲ್ಲಿ ಬರೋಬ್ಬರಿ 22 ವರ್ಷಗಳಿಂದ ಕೊಳೆಯುತ್ತಿತ್ತು.. ಆದರೆ ಸಾಧನೆಗೆ ವಯಸ್ಸಿನ ಮಿತಿ ಇಲ್ಲ ನೋಡಿ.. ಅಂತೆಯೇ ಇಲ್ಲೊಬ್ಬ 45 ವರ್ಷದ ಮಹಿಳೆಯೊಬ್ಬರು ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ.. ಹೆಸರು ರೇಣು ಹನ್ಸ್. ಹುಟ್ಟಿನಿಂದಲೇ ಮಾತು ಬರಲ್ಲ, ಕಿವಿ ಕೇಳಿಲ್ಲ. ದೇಹದ ನ್ಯೂನತೆಗಳನ್ನ ಮೆಟ್ಟಿನಿಂತು 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 82 ಅಂಕಗಳಿಸಿ ಇಡೀ ದೇಶವೇ ಬೆರಗಾಗುವಂತೆ ಮಾಡಿದ್ದಾರೆ.
ಅಮ್ಮನ ಕನಸಿಗೆ ನೀರೆರೆದ ಮಗ
ರೇಣು ಹನ್ಸ್ ಮೂಲತಃ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಾವಲ್ಗಾಮ್ ಗ್ರಾಮದವರು. ಇವರು ಕಾಶ್ಮೀರಿ ಪಂಡಿತ್ ಕುಟುಂಬದವರು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಿಂದಾಗಿ ಜಮ್ಮುವಿಗೆ ವಲಸೆ ಬಂದು ನೆಲೆಸಿದರು. ಮದುವೆಗೂ ಮುನ್ನ ರೇಣು 10ನೇ ತರಗತಿ ಪರೀಕ್ಷೆ ಬರೆದಿದ್ದರು. ಅಂದಿನ ಪರಿಸ್ಥಿತಿಯಲ್ಲಿ ಅವರಿಗೆ ಪಾಸ್ ಮಾಡಲು ಆಗಿರಲಿಲ್ಲ. ನಂತರ ಮದುವೆ, ಸಂಸಾರದ ಜವಾಬ್ದಾರಿ, ಕುಟುಂಬದ ಕಷ್ಟಗಳ ನಡುವೆ ವಿದ್ಯಾಭ್ಯಾಸ ನಿಂತುಹೋಗಿತ್ತು. ಆದರೆ ಆ ತಾಯಿಗೆ ಕಲಿಯಬೇಕೆಂಬ ಆಸೆ ಜೀವಂತವಾಗಿತ್ತು.
ತಾಯಿಗೆ ಶಿಕ್ಷಕನಾದ ಮಗ
ಅಮ್ಮನ ಕನಸಿಗೆ ರೆಕ್ಕೆ ಕೊಟ್ಟಿದ್ದು ಪುತ್ರ ನಮನ್ ಕೌಲ್. ನನ್ನಮ್ಮ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಬಾರದು, ಶಿಕ್ಷಣ ಮುಗಿಸಿ ಸ್ವಾವಲಂಬಿಯಾಗಬೇಕು ಎಂಬುದು ಮಗನ ಹಂಬಲವಾಗಿತ್ತು. ಪಿಯುಸಿಯಲ್ಲಿ ಸೈನ್ಸ್ ಓದುತ್ತಿರುವ ನಮನ್, ತನ್ನ ಕಠಿಣ ಅಭ್ಯಾಸಗಳ ನಡುವೆಯೂ ಅಮ್ಮನಿಗೆ ಪಾಠ ಹೇಳಿಕೊಡಲು ನಿರ್ಧರಿಸಿದ. ಪ್ರತಿದಿನ ಸಂಜೆ ಮತ್ತು ರಾತ್ರಿ ಆಕೆಗೆ ಹೇಳಬೇಕಾಗಿದ್ದ ವಿಷಯವನ್ನು ತಿಳಿಸಿಕೊಡುತ್ತಿದ್ದ.
ಸಂಕೇತಗಳ ಮೂಲಕ, ಬರವಣಿಗೆಯ ಮೂಲಕ ತಾಯಿಯ ಪ್ರತಿಯೊಂದು ಸಂಶಯಗಳನ್ನು ಬಗೆಹರಿಸುತ್ತಿದ್ದ. ಒಂದೇ ಮನೆಯಲ್ಲಿ, ಒಂದೇ ಕೋಣೆಯಲ್ಲಿ ತಾಯಿ 10ನೇ ತರಗತಿಗೆ ಓದುತ್ತಿದ್ದರೆ, ಮಗ ಪಕ್ಕದಲ್ಲೇ ಕುಳಿತು 12ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಇನ್ನು, ರೇಣು ಅವರು ಪರೀಕ್ಷೆಗೆ ನೋಂದಾಯಿಸುವುದೂ ಕೂಡ ಅಷ್ಟು ಸುಲಭವಾಗಿರಲಿಲ್ಲ. ಜಮ್ಮು-ಕಾಶ್ಮೀರ ಶಾಲಾ ಶಿಕ್ಷಣ ಮಂಡಳಿ (JKBOSE) ಕಚೇರಿಗೆ ಅಲೆದಾಡಿ, ಹಳೆಯ ನಿಯಮಗಳ ಬದಲಾವಣೆಯ ನಡುವೆಯೂ ಹೇಗೋ ಪ್ರಯತ್ನಿಸಿ ಅಮ್ಮನಿಗೆ ಪರೀಕ್ಷೆ ಬರೆಸಲು ಅವಕಾಶ ಗಿಟ್ಟಿಸಿಕೊಂಡಿದ್ದ.
ಮುಂದೇನಾಯ್ತು?
ಕಳೆದ ಏಪ್ರಿಲ್‌ನಲ್ಲಿ 10ನೇ ತರಗತಿ ಪರೀಕ್ಷೆಗೆ ರೇಣು ಹಾಜರಾಗಿದ್ದರು. ಆರಂಭದಲ್ಲಿ ಸ್ವಲ್ಪ ಭಯಗೊಂಡರೂ ಮಗ ಆತ್ಮವಿಶ್ವಾಸ ತುಂಬಿದ್ದರಿಂದ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾದರು. ಕೊನೆಗೆ ಪರೀಕ್ಷೆಯ ರಿಸಲ್ಟ್ ಕೂಡ ಬಂತು. ಖುಷಿಯ ವಿಚಾರ, ಸ್ಫೂರ್ತಿದಾಯಕ ಸುದ್ದಿ ಏನೆಂದರೆ ಅವರು ಪರೀಕ್ಷೆಯಲ್ಲಿ ಶೇಕಡಾ 82 ಅಂಕ ಗಳಿಸಿದ್ದಾರೆ. ಪ್ರಸ್ತುತ ಜಮ್ಮುವಿನ ಲೋವರ್ ರೂಪ್ ನಗರದ ಸಣ್ಣ ಸರ್ಕಾರಿ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ಈ ಕುಟುಂಬ, ಬಡತನ ಮತ್ತು ದೈಹಿಕ ನ್ಯೂನತೆಗಳಿಂದ ಬದುಕುತ್ತಿದೆ. ರೇಣು ಪತಿ ಬಬ್ಲು ಕೌಲ್ ಕೂಡ ಶ್ರವಣ ಮತ್ತು ವಾಕ್ ದೋಷವುಳ್ಳವರಾಗಿದ್ದಾರೆ. ಮನೆಯಲ್ಲೇ ಟೈಲರಿಂಗ್ ಕೆಲಸ ಮಾಡಿ ಮುನ್ನಡೆಸುತ್ತಿದ್ದಾರೆ. 45ನೇ ವಯಸ್ಸಿನಲ್ಲಿ ರೇಣು ಗಳಿಸಿರುವ ಈ 82% ಅಂಕ ಕೇವಲ ಒಂದು ಅಂಕಪಟ್ಟಿಯಲ್ಲ. 22 ವರ್ಷಗಳ ಕಾಯುವಿಕೆ, ಕಠಿಣ ಪರಿಶ್ರಮ ಮತ್ತು ತಾಯಿ-ಮಗನ ನಡುವಿನ ಅಪರೂಪದ ಪ್ರೀತಿಗೆ ಸಂದ ಐತಿಹಾಸಿಕ ಜಯ ಎಂದು ಬಣ್ಣಿಸಲಾಗುತ್ತಿದೆ.


