ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ವೃಂದಾವನದ ಪ್ರೇಮಾನಂದ ಮಹಾರಾಜ್ ಆಶ್ರಮ ಭೇಟಿಯ ಹಿಂದೆ 5 ಕೋಟಿ ರೂ.ಗಳ ಡೀಲ್ ನಡೆದಿದೆ ಎಂದು ಫಲಾಹಾರಿ ಮಹಾರಾಜ್ ಗಂಭೀರ ಆರೋಪ ಮಾಡಿದ್ದಾರೆ. ಕೊಹ್ಲಿ ಭೇಟಿ ಬಗ್ಗೆ ಮಾಡಿದ ಆರೋಪ ಏನು? ಸ್ಟೋರಿ ಓದಿ.
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ (Virat Khli and Aushka Sarma) ಅವರು ಇತ್ತೀಚೆಗೆ ಶ್ರೀಕೃಷ್ಣನ ಪವಿತ್ರ ನಗರಿ ವೃಂದಾವನಕ್ಕೆ ಭೇಟಿ ನೀಡಿದ್ದರು. ಉತ್ತರ ಪ್ರದೇಶದ ಈ ವೃಂದಾವನಕ್ಕೆ ಭೇಟಿ ನೀಡಿ.. ಖ್ಯಾತ ಸಂತ ಪ್ರೇಮಾನಂದ ಮಹಾರಾಜ್ ಆಶ್ರಮ ( Premanand Ji Maharaj) ತಲುಪಿ ಗುರುಗಳ ಆರ್ಶೀವಾದ ಪಡೆದಿದ್ದರು. ಈ ವಿಚಾರ ಭಾರೀ ಕೆಲವು ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಇದೀಗ ಕೊಹ್ಲಿ ಅವರ ಭೇಟಿ ಬಗ್ಗೆ ಆಘಾತಕಾರಿ ಆರೋಪ ಒಂದು ಕೇಳಿಬಂದಿದೆ.
ಏನಿದು ಆರೋಪ?
ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ಅಧ್ಯಕ್ಷರಾಗಿರುವ ‘ಫಲಾಹಾರಿ ಮಹಾರಾಜ್’ (falahari maharaj) ಅವರು ಗಂಭೀರ ಆರೋಪ ಒಂದನ್ನು ಮಾಡಿ ಪ್ರೇಮಾನಂದ ಮಹಾರಾಜ್‌ಗೆ ಪತ್ರ ಬರೆದಿದ್ದಾರಂತೆ. ವಿರಾಟ್ ಕೊಹ್ಲಿ ಭೇಟಿ ವೇಳೆ ದೊಡ್ಡ ವ್ಯವಹಾರ ನಡೆದಿದೆ. ಜೊತೆಗೆ ಆಶ್ರಮದ ಸುತ್ತಮುತ್ತ ದೊಡ್ಡ ಮಾಫಿಯಾ ನಡೆಯುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.
ಕೊಹ್ಲಿ ಬಗ್ಗೆ ಪತ್ರದಲ್ಲಿ ಏನಿದೆ?
ಫಲಾಹಾರಿ ಮಹಾರಾಜ್ ಬರೆದಿದ್ದಾರೆ ಎನ್ನಲಾಗಿರುವ ಪತ್ರದ ಪ್ರಕಾರ.. ರಾಜಸ್ಥಾನ ಮೂಲದ ಕಂಪನಿಯೊಂದು ವಿರಾಟ್ ಕೊಹ್ಲಿ ಅವರನ್ನು ನಿಮ್ಮ ಆಶ್ರಮಕ್ಕೆ ಕರೆತಂದಿತ್ತು. ವಿರಾಟ್ ಕೊಹ್ಲಿಗೆ ಐದು ಕೋಟಿ ರೂಪಾಯಿ ನೀಡಿ ಆಶ್ರಮಕ್ಕೆ ಕರೆತಂದಿದೆ. ಕೊಹ್ಲಿಯನ್ನ ಕರೆತರಲು ಕಾರಣ ಪ್ರೇಮಾನಂದ ಮಹಾರಾಜರನ್ನು ಹೆಚ್ಚು ಪ್ರಸಿದ್ಧಿ ಮಾಡುವುದಾಗಿತ್ತು ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಕೊಹ್ಲಿಯನ್ನ ಕರೆ ತಂದಿದ್ದ ಅದೇ ಕಂಪನಿಯ ಜನರು ಇದೀಗ ಸಾಧು ಸಂತರ ವೇಷ ಧರಿಸಿ ಆಶ್ರಮಕ್ಕೆ ನುಗ್ಗುತ್ತಿದ್ದಾರೆ. ಸಂತರಂತೆ ನಟಿಸಿ ಆಶ್ರಮದೊಳಗೆ ನುಗ್ಗುತ್ತಿರುವ ಈ ವ್ಯಕ್ತಿಗಳು.. ಆಶ್ರಮದ ಸುತ್ತಮುತ್ತ ರಿಯಲ್ ಎಸ್ಟೇಟ್ ಹಾಗೂ ಜಮೀನು ದಂಧೆ ನಡೆಸುತ್ತಿದ್ದಾರೆ ಎಂದು ಫಲಾಹಾರಿ ಮಹಾರಾಜರು ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಮುಂದುವರಿದು.. ಪ್ರೇಮಾನಂದ ಬಾಬಾ ಅವರು ನಿಜವಾದ ಸಂತ. ಅನ್ನ, ನೀರು ಎಲ್ಲವನ್ನೂ ತ್ಯಜಿಸಿ ಕಠಿಣ ತಪ್ಪಸ್ಸು ಮಾಡುತ್ತಿರುವ ಸನ್ಯಾಸಿ. ಹಿಂದೂ ಧರ್ಮಕ್ಕೆ ಅವರ ಅಗತ್ಯ ನಿಜಕ್ಕೂ ಇದೆ. ನಾನು ಅವರ ಆರೋಗ್ಯಕ್ಕಾಗಿ ನನ್ನ ಕಿಡ್ನಿಯನ್ನೇ ದಾನ ಮಾಡಲು ಸಿದ್ಧನಿದ್ದೇನೆ. ಆದರೆ ಅವರ ಆಶ್ರಮದ ಸುತ್ತಮುತ್ತ ನಡೆಯುತ್ತಿರುವ ರಿಯಲ್ ಎಸ್ಟೇಟ್ ದಂಧೆಗಳು ಆಶ್ರಮದ ಪವಿತ್ರ ಹೆಸರನ್ನು ಹಾಳುಮಾಡುತ್ತಿದೆ. ಇದು ತುಂಬಾ ನೋವಿನ ವಿಚಾರ. ಹೀಗಾಗಿ ಅವರು ಈ ಮಾಫಿಯಾದಿಂದ ದೂರ ಇರಬೇಕು. ಅದಕ್ಕಾಗಿ ಅವರು ಗೋವರ್ಧನ ಗಿರಿರಾಜ್‌ಗೆ ಬಂದು ನೆಲೆಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಅಷ್ಟಕ್ಕೂ ವಿವಾದ ಏನು?
ಕೆಲವು ದಿನಗಳ ಹಿಂದೆ ಪ್ರೇಮಾನಂದ ಮಹಾರಾಜರ ಶಿಷ್ಯ ರಸಿಕ್ ದುಲಾರಿ ಶರಣ್ ಅನ್ನೋರು ಇದ್ದಕ್ಕಿದ್ದಂತೆ ಕಾಣೆಯಾಗಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರ ಅಸಹಜ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ವೃಂದಾವನದ ಶ್ರೀ ಹಿತ್ ರಾಧಾ ಕೇಲಿಕುಂಜ್ ಆಶ್ರಮದ ಸುತ್ತ ಸಂಶಯಗಳು ಮೂಡಿವೆ. ಇದರ ಜೊತೆಗೆ ವೃಂದಾವನ ಆಶ್ರಮದ ಕೆಲವು ಅಧಿಕಾರಿಗಳು ಕಳ್ಳ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಆಶ್ರಮದ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ ನಡೀತಿದೆ. ಜೊತೆಗೆ ಕಿಡ್ನಿ ಮಾರಾಟ, ಕಳ್ಳತನ, ಮಕ್ಕಳು ನಾಪತ್ತೆ ಪ್ರಕರಣಗಳು ದಾಖಲಾಗುತ್ತಿವೆ. ಇದೆಲ್ಲ ಗಂಭೀರವಾದ ಪ್ರಕರಣಗಳು ಎಂದು ಫಲಾಹಾರಿ ಮಹಾರಾಜರು ಆರೋಪಿಸಿದ್ದಾರೆ. ಇದೇ ಪತ್ರದಲ್ಲಿ ಪ್ರೇಮಾನದಂದ ಮಹಾರಾಜರಿಗೆ ಝೆಡ್ ಪ್ಲಸ್ ಸೆಕ್ಯೂರಿಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.


