19 ವರ್ಷದ ಯುವಕನೊಬ್ಬ ತನ್ನ 22 ವರ್ಷದ ಗೆಳತಿ ನೀಡಿದ ದುಬಾರಿ ಐಫೋನ್ 17 ಉಡುಗೊರೆಯನ್ನು ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದಾನೆ. ಈ ಉಡುಗೊರೆಯು ತಮ್ಮ ಸಂಬಂಧದ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡಬಹುದೆಂಬ ಆತಂಕದಿಂದ, ಆತ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಸಲಹೆ ಕೇಳಿದ್ದಾನೆ.

19 ವರ್ಷದ ಯುವಕನೋರ್ವ ತನ್ನ 22 ವರ್ಷದ ಗೆಳತಿ ಕೊಟ್ಟ ದುಬಾರಿ ಗಿಫ್ಟ್ ಕಂಡು ಗೊಂದಲಕ್ಕೆ ಒಳಗಾಗಿದ್ದಾನೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ನಾನು ಐಫೋನ್ 17 ಅನ್ನು ತಗೋಬೇಕಾ ಅಥವಾ ವಾಪಸ್ ನೀಡಬೇಕಾ ಎಂದು ಸಲಹೆ ಕೇಳಿದ್ದಾನೆ.

ಗೆಳತಿಯ ಐಫೋನ್ ಉಡುಗೊರೆ

ಹೌದು, ಸಾಮಾಜಿಕ ಜಾಲತಾಣದಲ್ಲಿ ರೆಡ್ಡಿಟ್‌ನಲ್ಲಿ ಈ ವಿಶೇಷ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. 17 ವಷದ ಯುವಕ ತನಗೆ ತನ್ನ ಗೆಳತಿ ಐಫೋನ್ 17 ಗಿಫ್ಟ್ ನೀಡಿದ್ದಾಳೆ. ಇದು ನಾನು ನನ್ನ ಜೀವನದಲ್ಲಿ ತೆಗೆದುಕೊಳ್ಳುತ್ತಿರುವ ಅತ್ಯಂತ ದುಬಾರಿಯಾದ ಗಿಫ್ಟ್ ಆಗಿದೆ. ಆದರೆ ನಾನು ಇದನ್ನು ತೆಗೆದುಕೊಳ್ಳಬೇಕಾ? ಅಥವಾ ವಾಪಸ್ ನೀಡಬೇಕಾ ಎಂಬ ಗೊಂದಲದಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾನೆ.

ಯುವಕನಿಗೆ ಶುರುವಾಯ್ತು ಚಿಂತೆ!

ನಮ್ಮ ಇಬ್ಬರ ನಡುವಿನ ಗೆಳೆತನ ಉತ್ತಮವಾಗಿದೆ. ಆದರೆ ನನ್ನ ಗೆಳತಿ ಅನೀರಿಕ್ಷಿತವಾಗಿ ಐಫೋನ್ 17 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ನನಗೆ ಇದುವರೆಗೂ ಸಿಕ್ಕ ದುಬಾರಿ ಉಡುಗೊರೆಯಾಗಿದೆ ಎಂದಿದ್ದಾನೆ. ಆದರೆ ಆತನಿಗೆ ಗಿಫ್ಟ್ ಸಿಗುತ್ತದಂತೆ ಸಂತೋಷ ಉಂಟಾಗುವ ಬದಲು, ಗೊಂದಲ ಎದುರಾಗಿದೆ.

ಏಕೆಂದರೆ ಈಗ ನಾನು ಹೆಚ್ಚು ಏನು ಸಂಪಾದನೆ ಮಾಡುತ್ತಿಲ್ಲ. ಆದ್ದರಿಂದ ಇಂತಹ ದುಬಾರಿ ಉಡುಗೊರೆ ತೆಗೆದುಕೊಳ್ಳುವುದು ಎಷ್ಟು ಸರಿ. ಇದರಿಂದ ನಮ್ಮ ಇಬ್ಬರ ನಡುವಿನ ಸಂಬಂಧದಲ್ಲಿ ಅನಿರೀಕ್ಷಿತಾ ಒತ್ತಡ ಅಥವಾ ನಿರೀಕ್ಷೆಗಳು ಉಂಟು ಮಾಡುತ್ತಾ ಎಂದು ಆತ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈ ಕಾರಣದಿಂದಲೇ ಗಿಫ್ಟ್ ವಾಪಸ್ ನೀಡುವ ಬಗ್ಗೆ ಯೋಚನೆ ಮಾಡಿದ್ದಾನಂತೆ.

ಇನ್ನು, ಆತನ ಪೋಸ್ಟ್ ನೋಡಿದ ಹಲವರು ತಮ್ಮದೇ ಆದ ಸಲಹೆಗಳನ್ನ ನೀಡಿ ಕಾಮೆಂಟ್ ಮಾಡುತ್ತಿದ್ದಾರೆ. ಇದರಲ್ಲಿ ಕೆಲವರು, ಯುವತಿ ತನ್ನ ದುಡಿಮೆಯ ಹಣದಿಂದ ಫೋನ್ ಖರೀದಿ ಮಾಡಿದ್ದರೆ ಯಾವುದೇ ಯೋಚನೆ ಇಲ್ಲದೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಆದರೆ ಇಂತಹ ದುಬಾರಿ ಗಿಫ್ಟ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ.

ಏಕೆಂದರೆ ಭವಿಷ್ಯದಲ್ಲಿ ನಿಮ್ಮ ಸಂಬಂಧದಲ್ಲಿ ಏರುಪೇರು ಉಂಟಾದರೆ, ಇಂತಹ ದುಬಾರಿ ಉಡುಗೊರೆಗಳು ನಿಮ್ಮ ನಡುವಿನ ಸ್ನೇಹವನ್ನು ಪತ್ತೆ ಮೂಡದಂತೆ ಮಾಡಬಹುದು. ಅನಗತ್ಯ ವಾದಗಳಿಗೂ ಇದು ಕಾರಣವಾಗಬಹುದು ಎಂದು ಸಲಹೆ ನೀಡಿದ್ದಾರೆ. ಮತ್ತೋರ್ವ ಬಳಕೆದಾರ, ದುಬಾರಿ ಉಡುಗೊರೆ ಪಡೆದುಕೊಂಡ ನಂತರ ಈ ರೀತಿ ಯೋಚನೆ ಮಾಡುವುದು ತಮಾಷೆಯಾಗಿ ಕಾಣುತ್ತಿದೆ. ಆಕೆ ನೀಡಿದ ಕೂಡಲೇ ಏನು ಮಾಡಬೇಕು ಅನ್ನಿಸಿತ್ತೋ ಅದನ್ನು ಮಾಡಿದ್ದರೆ ಉತ್ತಮವಾಗಿತ್ತು ಎಂದಿದ್ದಾರೆ.