ಭಾರತದ ಮಾರುಕಟ್ಟೆಗೆ ಸುಜುಕಿಯ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ ಇ-ಆಕ್ಸೆಸ್ ಬಿಡುಗಡೆಯಾಗಿದೆ. ಇದು ಆರಾಮದಾಯಕ ಸವಾರಿ, ಸುರಕ್ಷಿತ LFP ಬ್ಯಾಟರಿ ತಂತ್ರಜ್ಞಾನ ಮತ್ತು ನಿಖರವಾದ ರೇಂಜ್ ತೋರಿಸುವ 'True Range Indicator' ನಂತಹ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ದೈನಂದಿನ ನಗರ ಬಳಕೆಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಗೇನಿದ್ರೂ ಎಲೆಕ್ಟ್ರಿಕ್ ವಾಹನಗಳ ಜಮಾನ. ಎಲೆಕ್ಟ್ರಿಕ್ ಕಾರು, ಬೈಕ್ ಒಂಥರಾ ಫ್ಯಾಷನ್ ಆಗಿದ್ದು, ಎಲೆಕ್ಟ್ರಿಕ್ ಗಾಡಿಗಳಿಗೆ ಡಿಮ್ಯಾಂಡ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈ ನಡುವೆ ಭಾರೀ ಸಂಚಲನ ಮೂಡಿಸಿರುವ Suzuki e-Access ಸ್ಕೂಟರ್ ಕೊನೆಗೂ ಭಾರತದಲ್ಲಿ ಬಿಡುಗಡೆ ಆಗಿದೆ.

ವಿಶೇಷ ಅಂದ್ರೆ Suzuki e-Access ಕಂಪನಿಯ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ನೋಡಲು ಇದು ಪೆಟ್ರೋಲ್ ಚಾಲಿತ ಎಕ್ಸೆಸ್ ಸ್ಕೂಟರ್ ಹೋಲುತ್ತದೆ. ಆದರೆ ಇದನ್ನು ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಅತ್ಯಂತ ನಂಬುಗೆಯ ಕಂಪನಿಯಾಗಿ ಗುರುತಿಸಿಕೊಂಡಿರುವ ಸುಜುಕಿ, ಆಕರ್ಷಕ ಫೀಚರ್ಸ್‌ ಮತ್ತು ಸ್ಪೀಡ್‌ಗೆ ತುಂಬಾನೇ ಮಹತ್ವ ನೀಡಿದೆ.ಜೊತೆಗೆ ದೀರ್ಘಕಾಲದ ನಂಬಿಕೆಗೆ ಮೊದಲ ಆದ್ಯತೆ ನೀಡಿದೆ. ಈ ಸ್ಕೂಟರ್ ಖರೀದಿಸಲು ಇಂಟ್ರೆಸ್ಟಿಂಗ್ ಆಗಿರುವ ಎರಡು ಪ್ರಮುಖ ವಿಚಾರಗಳಿವೆ.

ಆರಾಮದಾಯಕ ಸವಾರಿ

ನೀವು ಸಿಟಿಯಲ್ಲಿ ವಾಸಿಸುತ್ತಿರೋರಾಗಿದ್ರೆ ನಿಮ್ಮ ದೈನಂದಿನ ಪ್ರಯಾಣಕ್ಕೆ Suzuki e-Access ಬೆಸ್ಟ್. ಇದು ಅತ್ಯಂತ ಆರಾಮಾದಾಯಕ ವಾಹನ. ರೈಡಿಂಗ್ ಪೊಸಿಷನ್ ಅತ್ಯುತ್ತಮವಾಗಿದ್ದು, ಫ್ಲಾಟ್ ಶೀಟ್ ನೀಡಲಾಗಿದೆ. ಇದರಿಂದ ರೈಡರ್ ಮಾತ್ರವಲ್ಲದೇ ಹಿಂಬದಿ ಸವಾರನಿಗೆ ಕಂಫರ್ಟ್‌ ಫೀಲಿಂಗ್ ನೀಡುತ್ತದೆ. ಜೊತೆಗೆ ಲಾಂಗ್ ಜರ್ನಿಗೂ ಸಮಸ್ಯೆ ಆಗಲ್ಲ. ಆಯಾಸ ಆಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಸಸ್ಪೆನ್ಸನ್ ಸೆಟಪ್ ಕೂಡ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಭಾರತೀಯ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣ, ಪುಟ್ಟ ಗುಂಡಿಗಳ ಮೇಲೂ ಸಲೀಸಲಾಗಿ ಸವಾರಿ ಮಾಡಲು ಅನುಕೂಲ ಆಗುವ ರೀತಿಯಲ್ಲಿ ಸೆಟಪ್ ಮಾಡಲಾಗಿದೆ. ಜೊತೆಗೆ ಬಾಳಿಕೆ ಬರುವ ಬ್ಯಾಟರಿಯನ್ನೂ ನೀಡಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಇವಿ ಸ್ಕೂಟರ್‍‌ಗಳು ಎನ್‌ಎಂಸಿ ಬ್ಯಾಟರಿ ಬಳಸುತ್ತವೆ. ಆದರೆ ಸುಜುಕಿ LFP (Lithium Iron Phosphate) ಬ್ಯಾಟರಿ ತಂತ್ರಜ್ಞಾನವನ್ನು ಬಳಸಿದೆ. ಇದರ ಉದ್ದೇಶ ಏನೆಂದರ ಬ್ಯಾಟರಿ ಹೆಚ್ಚು ಬಿಸಿ ಆಗದಂತೆ ತಡೆಯೋದು, ಬೆಂಕಿ ಹೊತ್ತಿಕೊಳ್ಳುವ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

True Range Indicator

ಮಾರುಕಟ್ಟೆಗೆ ತುಂಬಾ ಇವಿ ಸ್ಕೂಟರ್‍‌ಗಳು ಬಂದು ಹೋಗುತ್ತಿವೆ. ಆದರೆ Suzuki e-Access ತುಂಬಾ ಭಿನ್ನವಾಗಿದೆ. ನೀವು ನಂಬಬಹುದಾದ ರೆಂಜ್ ಇಲ್ಲಿ ಕಾಣಬಹುದು. ಬಹುತೇಕ ಇವಿ ಬೈಕ್‌ಗಳು ಡಿಸ್‌ಪ್ಲೇಯಲ್ಲಿ ತೋರಿಸುವ ರೇಂಜ್ ನೈಜ ವಾಹನ ಚಲಾಯಿಸುವಾಗ ದಿಢೀರನೆ ಕುಸಿಯುತ್ತದೆ. ಆದರೆ ಸುಜುಕಿ ಹಾಗಲ್ಲ. ಇನ್ನು, ನಿಮ್ಮ ಡ್ರೈವಿಂಗ್ ಶೈಲಿಗೆ ತಕ್ಕಂತೆ ಕ್ಯಾಲಿಬ್ರೇಟ್ ಆದ ನಂತರ, ಸ್ಕ್ರೀನ್ ಮೇಲೆ ತೋರಿಸುವ ರೇಂಜ್ ಅತ್ಯಂತ ನಿಖರ ಮತ್ತು ನಂಬಲರ್ಹವಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಕಂಪನಿಯು 95 ಕಿ.ಮೀ (IDC Claimed Range) ರೇಂಜ್ ನೀಡುವುದಾಗಿ ಹೇಳಿದೆ. ರಿಯಲ್ ವರ್ಲ್ಡ್ ಟೆಸ್ಟ್‌ನಲ್ಲಿ (Ride A ಮೋಡ್‌ನಲ್ಲಿ) ಇದು ಬರೋಬ್ಬರಿ 88 ಕಿ.ಮೀ ತನಕ ಮೈಲೇಜ್ ನೀಡಿದೆ. ಇದು ದಿನನಿತ್ಯದ ಆಫೀಸ್ ಅಥವಾ ನಗರ ಬಳಕೆಗೆ ಅತ್ಯಂತ ತೃಪ್ತಿದಾಯಕ ರೇಂಜ್ ಆಗಿದೆ.

ಈ ಸ್ಕೂಟರ್‍‌ನ ಮತ್ತೊಂದು ವಿಶೇಷತೆ ಏನು ಅಂದರೆ ಅತಿಯಾದ ಅಲಂಕಾರಿಕ ಫೀಚರ್‍‌ಗಳಿಗಿಂತ ಹೆಚ್ಚಾಗಿ ದೀರ್ಘಕಾಲ ಬಾಲಿಕೆ ಬರುವ ದೃಢವಾದ ಕ್ವಾಲಿಟಿಯನ್ನ ಸುಜುಕಿ ಹೊಂದಿದೆ. ನೀವು ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿದ್ದರೆ (Suzuki e-Access) ಖಂಡಿತವಾಗಿಯೂ ನಿಮ್ಮ ಮೊದಲ ಆಯ್ಕೆ ಮಾಡಿಕೊಳ್ಳಬಹುದು.