ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್‌ಗಳಲ್ಲಿ 'ಸಂಚಾರ್ ಸಾಥಿ' ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಪ್ರೀ-ಇನ್‌ಸ್ಟಾಲ್ ಮಾಡಲು ದೂರಸಂಪರ್ಕ ಇಲಾಖೆ (DoT) ಆದೇಶಿಸಿದೆ. ಈ ಆ್ಯಪ್ ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು, ವಂಚನೆಗಳನ್ನು ವರದಿ ಮಾಡಲು ಸಹಾಯ ಮಾಡುತ್ತದೆ
- Home
- News
- India News
- India Latest News Live: ಏನಿದು ಸಂಚಾರ್ ಸಾಥಿ? ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೀಇನ್ಸ್‌ಟಾಲ್ ಆಗಿರಬೇಕು ಎಂದು ಕೇಂದ್ರ ಹೇಳಿದ್ದೇಕೆ?
India Latest News Live: ಏನಿದು ಸಂಚಾರ್ ಸಾಥಿ? ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೀಇನ್ಸ್‌ಟಾಲ್ ಆಗಿರಬೇಕು ಎಂದು ಕೇಂದ್ರ ಹೇಳಿದ್ದೇಕೆ?

ಜೈಪುರ: ಬಾಬ್ರಿ ಮಸೀದಿ ಧ್ವಂಸದ ದಿನವಾದ ಡಿಸೆಂಬರ್ 6 ಅನ್ನು ಶಾಲೆಗಳಲ್ಲಿ 'ಶೌರ್ಯ ದಿವಸ್' ಎಂದು ಆಚರಿಸಿ ಎಂದು ರಾಜಸ್ಥಾನ ಶಿಕ್ಷಣ ಮತ್ತು ಪಂಚಾಯತ್ ರಾಜ್ ಸಚಿವ ಮದನ್ ದಿಲಾವರ್ ಸೂಚನೆ ನೀಡಿ ವಿವಾದಕ್ಕೀಡಾಗಿದ್ದಾರೆ. ಅವರ ಸೂಚನೆಗೆ ಆಕ್ರೋಶ ವ್ಯಕ್ತವಾದ ಕಾರಣ, ಕೇವಲ 12 ತಾಸಿನಲ್ಲಿ ಆದೇಶವನ್ನು ರಾಜಸ್ಥಾನ ಶಿಕ್ಷಣ ಇಲಾಖೆ ಭಾನುವಾರ ಬೆಳಗ್ಗೆ ಹಿಂತೆಗೆದುಕೊಂಡಿದೆ. 'ಡಿಸೆಂಬರ್ 6 ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವವಾಗಿದ್ದು, ಅದನ್ನು ಶಾಲೆಗಳಲ್ಲಿ ಶೌರ್ಯ ದಿನ ಎಂದು ಆಚರಿಸಿ' ಎಂದು ದಿಲಾವರ್ ಶನಿವಾರ ಆದೇಶಿಸಿದ್ದರು. ಇದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
India Latest News Live 1 December 2025ಏನಿದು ಸಂಚಾರ್ ಸಾಥಿ? ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೀಇನ್ಸ್‌ಟಾಲ್ ಆಗಿರಬೇಕು ಎಂದು ಕೇಂದ್ರ ಹೇಳಿದ್ದೇಕೆ?
India Latest News Live 1 December 2025ಗೋಡೆ ಕಂಡಾಗ ಕಾಲು ಅಗಲಿಸಿ ನಿಲ್ಲುವವರೇ ಹುಷಾರ್! ಮೂತ್ರ ಮಾಡಿದ್ರೆ ವಾಪಸ್ ಚಿಮ್ಮುತ್ತೆ ನಿಮ್ಮದೇ ನೀರು!
ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಮೂತ್ರ ಮಾಡುವವರಿಗೆ ಪಾಠ ಕಲಿಸಲು 'ಆ್ಯಂಟಿ ಯೂರಿನ್ ಪೇಂಟ್' ಎಂಬ ಹೊಸ ತಂತ್ರಜ್ಞಾನ ಬಂದಿದೆ. ಈ ಹೈಡ್ರೋಫೋಬಿಕ್ ಪೇಂಟ್ ಹಚ್ಚಿದ ಗೋಡೆಗೆ ಮೂತ್ರ ಮಾಡಿದರೆ, ಅದು ಮರಳಿ ಅವರ ಮೇಲೆಯೇ ಎರಚುತ್ತದೆ.
India Latest News Live 1 December 2025ಸ್ಮಾರ್ಟ್‌ಫೋನ್ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್ ಬೆಲೆ ಏರಿಸಿದ ಶಿಯೋಮಿ
RAM ಮತ್ತು ROM ಕಾಂಪೋನೆಂಟ್‌ಗಳ ಬೆಲೆ ಏರಿಕೆಯಿಂದಾಗಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಬೆಲೆ ಹೆಚ್ಚಾಗಿದೆ. Xiaomi, Vivo, ಮತ್ತು Realme ನಂತಹ ಬ್ರ್ಯಾಂಡ್‌ಗಳು ತಮ್ಮ ಜನಪ್ರಿಯ ಮಾದರಿಗಳ ಬೆಲೆಯನ್ನು 2,000 ರೂ.ವರೆಗೆ ಹೆಚ್ಚಿಸಿವೆ.
India Latest News Live 1 December 2025ಪುಟಿನ್ ಭೇಟಿ ವೇಳೆ ಮಹತ್ವದ ಚರ್ಚೆ ನಡೆಸಲಿದೆ ಭಾರತ, ಏರ್‌ಫೋರ್ಸ್‌ಗೆ ಸಿಗುತ್ತಾ ಸುಖೋಯ್ 57?
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಮುಂದಿನ ಪೀಳಿಗೆಯ Su-57 ಯುದ್ಧ ವಿಮಾನಗಳು ಮತ್ತು S-500 ಕ್ಷಿಪಣಿ ವ್ಯವಸ್ಥೆಯ ಕುರಿತು ಮಾತುಕತೆ ನಡೆಯಲಿದೆ. ವಿಳಂಬವಾಗಿರುವ S-400 ವ್ಯವಸ್ಥೆಯ ಪೂರೈಕೆ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆಯಾಗಲಿದೆ.
India Latest News Live 1 December 2025ಸಂಸತ್‌ಗೆ ಬೀದಿನಾಯಿಯನ್ನು ಕರೆದುಕೊಂಡು ಬಂದ ಕಾಂಗ್ರೆಸ್ ಸಂಸದೆ
ಚಳಿಗಾಲದ ಅಧಿವೇಶನದ ವೇಳೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ಸಂಸತ್ ಆವರಣಕ್ಕೆ ಬೀದಿ ನಾಯಿಮರಿಯನ್ನು ಕರೆತಂದು ವಿವಾದ ಸೃಷ್ಟಿಸಿದ್ದಾರೆ. ನಾಯಿಮರಿ ಸುರಕ್ಷತೆಗಾಗಿ ತಂದಿದ್ದಾಗಿ ಸಮರ್ಥಿಸಿಕೊಂಡ ಅವರು, 'ನಿಜವಾದ ನಾಯಿಗಳು ಸಂಸತ್ತಿನಲ್ಲಿವೆ' ಎಂದು ಹೇಳಿಕೆ ನೀಡಿದ್ದಾರೆ.
India Latest News Live 1 December 2025Brahmos Missile - ಮುಸ್ಲಿಂ ದೇಶಕ್ಕೆ ಕ್ಷಿಪಣಿ ಮಾರಲಿರುವ ಇಂಡಿಯಾ, ಚೀನಾ ಸುತ್ತ ಭಾರತದ ಬ್ರಹ್ಮೋಸ್ ಭದ್ರಕೋಟೆ!
Brahmos Missile: ಬ್ರಹ್ಮೋಸ್ ಕ್ಷಿಪಣಿ ಭಾರತದ ಇಲ್ಲಿಯವರೆಗಿನ ಅತ್ಯಂತ ಮಾರಕ ಅಸ್ತ್ರ. ಆಪರೇಷನ್ ಸಿಂಧೂರ್ ಸಮಯದಲ್ಲಿ ಇಡೀ ಜಗತ್ತು ಬ್ರಹ್ಮೋಸ್‌ನ ಶಕ್ತಿಯನ್ನು ಕಂಡಿತು. ಪಾಕಿಸ್ತಾನವು ತನ್ನ ದೇಶದ ಮೇಲೆ ಒಂದೇ ಒಂದು ಯುದ್ಧ ವಿಮಾನವನ್ನು ಹಾರಿಸದಂತೆ ಭಾರತ ಇದನ್ನು ಮಾಡಿತ್ತು.
India Latest News Live 1 December 2025ಟೆಸ್ಟ್ ಕ್ರಿಕೆಟ್ ನಿವೃತ್ತಿ ನಿರ್ಧಾರ ಹಿಂಪಡೆಯುತ್ತಾರಾ ರನ್ ಮೆಷಿನ್? ವಿರಾಟ್ ಕೊಹ್ಲಿ ಹೇಳಿದ್ದೇನು?
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ವರ್ಷದ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಆದರೆ ಇತ್ತೀಚೆಗೆ ಅವರು ನಿವೃತ್ತಿಯಿಂದ ಹಿಂತಿರುಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೊಹ್ಲಿ ಏನು ಹೇಳಿದ್ದಾರೆಂದು ನೋಡೋಣ ಬನ್ನಿ
India Latest News Live 1 December 2025ಮಹಿಳೆಯರಿಗೆ ಕಿರುಕುಳ ನೀಡ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ರಾಷ್ಟ್ರಮಟ್ಟದ ಬಾಡಿಬಿಲ್ಡರ್‌ನ ಹೊಡೆದು ಕೊಂದ ಗುಂಪು
Rohit Dhankhar death:ರಾಷ್ಟ್ರೀಯ ಮಟ್ಟದ ಪ್ಯಾರಾ-ಅಥ್ಲೀಟ್ ಮತ್ತು ಬಾಡಿಬಿಲ್ಡರ್ ರೋಹಿತ್ ಧಂಖರ್ ಅವರನ್ನು ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿ ಕೊಲೆ ಮಾಡಿದೆ. ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ವಿರೋಧಿಸಿದ್ದಕ್ಕೆ ಈ ಕೃತ್ಯವೆಸಗಲಾಗಿದೆ.
India Latest News Live 1 December 2025ಕೋಚ್ ಗೌತಮ್ ಗಂಭೀರ್ ಜತೆಗೆ ಹದಗೆಟ್ಟ ರೋಹಿತ್-ಕೊಹ್ಲಿ ಸಂಬಂಧ; ಬಿಸಿಸಿಐ ನಡೆ ಏನು?
ಬೆಂಗಳೂರು: ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಹಿರಿಯ ಆಟಗಾರರಿಗೆ ಗೇಟ್‌ಪಾಸ್ ನೀಡುವ ಕೆಲಸ ನಡೆಯುತ್ತಿದೆ ಎನ್ನುವ ಆರೋಪವಿದೆ. ಇದೆಲ್ಲದರ ನಡುವೆ ಇದೀಗ ಗಂಭೀರ್ ಹಾಗೂ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಡುವೆ ಶೀತಲ ಸಮರ ಜೋರಾಗಿದೆ.
India Latest News Live 1 December 2025100 ರೂಪಾಯಿ ಕೇಳಿದ್ರೆ ಗಂಡನೂ ಕೊಡಲ್ಲ ಹೀಗಿರುವಾಗ ನೀವು ಸಿಎಂಗೆ ನಿಷ್ಠರಾಗಿರಬೇಕು - ಸಚಿವ
Majhi Ladki Bahin scheme: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಂತೆ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಎಂಬ ಯೋಜನೆ ಇದೆ. ಈ ಯೋಜನೆಯ ನೆಪದಲ್ಲಿ ವೋಟು ಕೇಳುವ ಬರದಲ್ಲಿ ಅಲ್ಲಿನ ಸಚಿವರೊಬ್ಬರು ನೀಡಿದ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ.
India Latest News Live 1 December 2025ಕಸ್ಟಡಿಯಲ್ಲಿದ್ದ ಮಹಿಳೆಗೆ ಡಿಎಸ್‌ಪಿಯಿಂದಲೇ ಲೈಂಗಿಕ ಕಿರುಕುಳ - ಸಹೋದ್ಯೋಗಿ ಸಾವಿನ ನಂತರ ಪ್ರಕರಣ ಬೆಳಕಿಗೆ
Kerala DSP suspended: ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಸಹೋದ್ಯೋಗಿ ಅಧಿಕಾರಿಯೊಬ್ಬರ ಆತ್ಮಹತ್ಯೆಯ ನಂತರ ಪ್ರಕರಣ ಬೆಳಕಿಗೆ ಬಂದಿದೆ.
India Latest News Live 1 December 2025ಕಾರು ಜಿಗ್‌ಜಾಗ್ ಚಲಾಯಿಸಿ ಮದುಮಗನ ಹುಚ್ಚಾಟ - ಬದುಕಿನ ಬಂಡಿ ಎಳೆಯಲು ಊರು ಬಿಟ್ಟು ಬಂದ 23ರ ಹರೆಯದ ಯುವಕ ಸಾವು
ದೆಹಲಿಯಲ್ಲಿ ತನ್ನದೇ ಮದುವೆ ಆರತಕ್ಷತೆ ಮುಗಿಸಿ ವಾಪಸಾಗುತ್ತಿದ್ದ ವರನೋರ್ವ ಮರ್ಸಿಡಿಸ್ ಕಾರನ್ನುಅತಿವೇಗದಿಂದ ಚಲಾಯಿಸಿ, ಆಟೋಗಾಗಿ ಕಾಯುತ್ತಿದ್ದ ಮೂವರು ಹೊಟೇಲ್ ಬಾಣಸಿಗರಿಗೆ ಡಿಕ್ಕಿ ಹೊಡೆದಿದ್ದು, ಈ ಅವಘಡದಲ್ಲಿ 23 ಹರೆಯದ ಬಾಣಸಿಗ ಮೃತಪಟ್ಟಿದ್ದಾನೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
India Latest News Live 1 December 2025ಕೊಹ್ಲಿ-ರೋಹಿತ್ ಅಬ್ಬರಿಸುತ್ತಿದ್ದಂತೆಯೇ ಗಂಭೀರ್-ಅಗರ್ಕರ್‌ಗೆ ದಿಢೀರ್ ಮೀಟಿಂಗ್ ಕರೆದ BCCI!
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ. ಇದರ ಬೆನ್ನಲ್ಲೇ ಗಂಭೀರ್-ಅಗರ್ಕರ್‌ಗೆ ಬುಲಾವ್ ನೀಡಿದೆ ಬಿಸಿಸಿಐ.
India Latest News Live 1 December 2025ಗೃಹಿಣಿಯ ಅನೈ*ತಿಕ ಸಂಬಂಧಕ್ಕೆ ಅನಾಥರಾದ ಮಕ್ಕಳು - ಕೆಲಸ ಮಾಡುವ ಮಹಿಳೆಯರ ಹಾಸ್ಟೆಲ್‌ನಲ್ಲೇ ಭೀಕರ ಕೊಲೆ
Selfie with dead body: ಪತಿಯನ್ನು ತೊರೆದು ಹಾಸ್ಟೆಲ್‌ನಲ್ಲಿದ್ದ ಪತ್ನಿಯನ್ನು ಆಕೆಯ ಪತಿಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆತ ಮೃತದೇಹದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ.
India Latest News Live 1 December 2025ಫಸ್ಟ್‌ನೈಟ್ ಕೋಣೆಯಿಂದ ಹೊರ ಬಂದ ವರ ಮಿಸ್ಸಿಂಗ್; ವಧು ಆಸೆ ನೆರವೇರಿಸಲು ಹೋದವ ಬರಲೇ ಇಲ್ಲ!
ಮೊದಲ ರಾತ್ರಿಯಂದೇ ವರನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ವಧು ಕೋಣೆಯಲ್ಲಿ ಲೈಟ್ ತರಲು ಕೇಳಿದಾಗ ಹೊರಹೋದ ಮೊಹಸಿನ್ ಎಂಬ ವರ ಮತ್ತೆ ಹಿಂತಿರುಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಗಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
India Latest News Live 1 December 2025ಹಿಟ್‌ಮ್ಯಾನ್‌ಗೆ ಬಿಸಿಸಿಐ ಸಂದೇಶ - ರೋಹಿತ್ ಶರ್ಮಾ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್?
ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಗೊಂದಲಗಳ ನಡುವೆ, ಬಿಸಿಸಿಐ ಅವರಿಗೆ ಪ್ರಮುಖ ಸಂದೇಶ ಕಳುಹಿಸಿದೆ. ಫಿಟ್ನೆಸ್ ಮತ್ತು ಪ್ರದರ್ಶನದ ಮೇಲೆ ಗಮನಹರಿಸಲು ಮತ್ತು ಭವಿಷ್ಯದ ಊಹಾಪೋಹಗಳನ್ನು ಕಡೆಗಣಿಸಲು ಸೂಚಿಸಿದೆ.
India Latest News Live 1 December 2025ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಜೊತೆ 3 ಹೊಸ ಪ್ಲಾನ್ ನೀಡಿದ ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮೂರು ವಿಶೇಷ ಪ್ಲಾನ್‌ಗಳನ್ನು ಘೋಷಿಸಿದೆ. ₹949, ₹195, ಮತ್ತು ₹100 ಬೆಲೆಯ ಈ ಪ್ಲಾನ್‌ಗಳು ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಬರುತ್ತವೆ, ಜೊತೆಗೆ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ನೀಡುತ್ತವೆ.
India Latest News Live 1 December 202552ನೇ ಏಕದಿನ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ರಾಂಚಿ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಈ ಕ್ಲಾಸಿಕ್ ಇನ್ನಿಂಗ್ಸ್‌ನೊಂದಿಗೆ, ಅವರು ಅತಿ ಹೆಚ್ಚು ಶತಕಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ ಅವರಂತಹ ದಿಗ್ಗಜರ ದಾಖಲೆಗಳನ್ನು ಮುರಿದಿದ್ದಾರೆ.
India Latest News Live 1 December 2025ಪಾಕಿಸ್ತಾನದ ಬೆನ್ನುಮೂಳೆ ಮುರಿದ ಬಲೂಚಿಸ್ತಾನ; 35 ಸಾವಿರ ಕೋಟಿ ಸಾಲ ಕೊಟ್ಟ ಅಮೆರಿಕಾಗೆ ಶಾಕ್
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ, ವಿದೇಶಿ ಗಣಿಗಾರಿಕೆ ಸಿಬ್ಬಂದಿ ವಾಸವಿದ್ದ ಕಾಂಪೌಂಡ್ ಮೇಲೆ ಬಲೂಚ್ ಲಿಬರೇಶನ್ ಫ್ರಂಟ್ (BLF) ಆತ್ಮಹತ್ಯಾ ದಾಳಿ ನಡೆಸಿದೆ. ಪಾಕಿಸ್ತಾನವು 'ಸುರಕ್ಷಿತ' ಎಂದು ಘೋಷಿಸಿದ್ದ ಸ್ಥಳ ದಲ್ಲಿ ದಾಳಿ ನಡೆದಿದೆ.