- Home
- Sports
- Cricket
- ಟೆಸ್ಟ್ ಕ್ರಿಕೆಟ್ ನಿವೃತ್ತಿ ನಿರ್ಧಾರ ಹಿಂಪಡೆಯುತ್ತಾರಾ ರನ್ ಮೆಷಿನ್? ವಿರಾಟ್ ಕೊಹ್ಲಿ ಹೇಳಿದ್ದೇನು?
ಟೆಸ್ಟ್ ಕ್ರಿಕೆಟ್ ನಿವೃತ್ತಿ ನಿರ್ಧಾರ ಹಿಂಪಡೆಯುತ್ತಾರಾ ರನ್ ಮೆಷಿನ್? ವಿರಾಟ್ ಕೊಹ್ಲಿ ಹೇಳಿದ್ದೇನು?
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ವರ್ಷದ ಮೇ ತಿಂಗಳಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಆದರೆ ಇತ್ತೀಚೆಗೆ ಅವರು ನಿವೃತ್ತಿಯಿಂದ ಹಿಂತಿರುಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೊಹ್ಲಿ ಏನು ಹೇಳಿದ್ದಾರೆಂದು ನೋಡೋಣ ಬನ್ನಿ

ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಾರಾ ಕೊಹ್ಲಿ?
ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ 135 ರನ್ ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಅವರ 52ನೇ ಶತಕಕ್ಕೆ ಫ್ಯಾನ್ಸ್ ಖುಷಿಯಾಗಿದ್ದರು. ಆದರೆ ಪಂದ್ಯದ ನಂತರ ಅವರ ಹೇಳಿಕೆ ನಿರಾಸೆ ಮೂಡಿಸಿದೆ. ಟೆಸ್ಟ್‌ಗೆ ಮರಳುವ ಬಗ್ಗೆ ಕೊಹ್ಲಿ ಏನು ಹೇಳಿದ್ದಾರೆಂದು ತಿಳಿಯೋಣ.
ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿಯ ಸ್ಫೋಟಕ ಆಟ
ನವೆಂಬರ್ 30ರ ಏಕದಿನ ಪಂದ್ಯದಲ್ಲಿ ಕೊಹ್ಲಿ 120 ಎಸೆತಗಳಲ್ಲಿ 135 ರನ್ ಗಳಿಸಿ ಫಾರ್ಮ್ ಸಾಬೀತುಪಡಿಸಿದರು. ಅವರ ಶತಕದಿಂದ ಭಾರತ 349 ರನ್ ಗಳಿಸಿತು. ಈ ಪಂದ್ಯವನ್ನು ಭಾರತ 17 ರನ್‌ಗಳಿಂದ ಗೆದ್ದಿತು. ಕೊಹ್ಲಿ ಪಂದ್ಯಶ್ರೇಷ್ಠರಾದರು.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಾರಾ?
ನಿವೃತ್ತಿ ನಿರ್ಧಾರ ಬದಲಿಸಿ ಟೆಸ್ಟ್‌ಗೆ ಮರಳುವಂತೆ ಬಿಸಿಸಿಐ ಕೇಳಬಹುದು ಎಂಬ ವರದಿಗಳಿದ್ದವು. ಪಂದ್ಯದ ನಂತರ ಹರ್ಷಾ ಭೋಗ್ಲೆ ಕೇಳಿದಾಗ, 'ನಾನು ಒಂದೇ ಮಾದರಿಯಲ್ಲಿ ಆಡುತ್ತೇನೆ, ಇದು ಹೀಗೆಯೇ ಇರುತ್ತದೆ' ಎಂದು ಕೊಹ್ಲಿ ಸ್ಪಷ್ಟಪಡಿಸಿದರು.
ಟೆಸ್ಟ್ ನಿವೃತ್ತಿ ವಾಪಾಸ್ ಇಲ್ಲ
ಈ ಮೂಲಕ ಕೊಹ್ಲಿ ಟೆಸ್ಟ್ ನಿವೃತ್ತಿ ವಾಪಾಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ತವರಿನಲ್ಲಿ ಭಾರತಕ್ಕೆ ವೈಟ್‌ವಾಷ್ ಮುಖಭಂಗ
ರೋಹಿತ್ ಶರ್ಮಾ ಹಾಗೂ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ವೈಟ್ ವಾಷ್ ಅನುಭವಿಸಿದೆ. ಭಾರತ ಟೆಸ್ಟ್ ತಂಡದ ಸದ್ಯದ ಪ್ರದರ್ಶನ ಅಭಿಮಾನಿಗಳ ಕಳವಳಕ್ಕೆ ಕಾರಣವಾಗಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

