ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಜೊತೆ 3 ಹೊಸ ಪ್ಲಾನ್ ನೀಡಿದ ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮೂರು ವಿಶೇಷ ಪ್ಲಾನ್‌ಗಳನ್ನು ಘೋಷಿಸಿದೆ. ₹949, ₹195, ಮತ್ತು ₹100 ಬೆಲೆಯ ಈ ಪ್ಲಾನ್‌ಗಳು ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಬರುತ್ತವೆ, ಜೊತೆಗೆ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ನೀಡುತ್ತವೆ.

ರಿಲಯನ್ಸ್ ಜಿಯೋ
ಭಾರತದ ಅತಿದೊಡ್ಡ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ವಿಶೇಷ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಘೋಷಿಸಿದೆ. ಈ ₹949, ₹195 ಮತ್ತು ₹100 ಬೆಲೆಯ ಮೂರು ಪ್ಲಾನ್ ಉಚಿತ ಜಿಯೋಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್ (Mobile/TV) ನೀಡುತ್ತಿದೆ. ಈ ಮೂರು ಪ್ಲಾನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Reliance Jio ₹949 Prepaid Plan
ರಿಲಯನ್ಸ್ ಜಿಯೋ ನೀಡುತ್ತಿರುವ 949 ರೂಪಾಯಿಯ ಪ್ಲಾನ್ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ಹೊಂದಿದೆ. ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಮತ್ತು ಉಚಿತವಾಗಿ 100 SMS ಕಳುಹಿಸಬಹುದು. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿರುತ್ತದೆ.
Reliance Jio ₹949 Prepaid Plan
ಇದರ ಜೊತೆ ಹೆಚ್ಚುವರಿಯಾಗಿ 949 ರೂಪಾಯಿಯ ಪ್ಲಾನ್, ಜಿಯೋ ಫೈನಾನ್ಸ್ ಜೊತೆ ಶೇ.1ರಷ್ಟು ಎಕ್ಸ್ಟ್ರಾ ಗೋಲ್ಡ್, ಹೊಸ ಕನೆಕ್ಷನ್ ಬಳಕೆದಾರರಿಗೆ ಎರಡು ತಿಂಗಳ ಜಿಯೋ ಹೋಮ್ ಫ್ರೀ ಟ್ರಯಲ್ ಸಿಗಲಿದೆ. ಮೂರು ತಿಂಗಳ ಉಚಿತ JioHotstar Mobile/TV subscription ಸಿಗಲಿದೆ. 18 ವರ್ಷ ಮೇಲ್ಪಟ್ಟ ಬಳಕೆದಾರರಿಗೆ 18 ತಿಂಗಳ Google Gemini Pro subscription ಲಭ್ಯವಾಗಲಿದೆ.
Reliance Jio ₹195 Data Plan
195 ರೂಪಾಯಿಯ ಪ್ಲಾನ್ ಇದು ಡೇಟಾ ವೋಚರ್ ಹೊಂದಿದ್ದು, ಸರ್ವಿಸ್ ವ್ಯಾಲಿಡಿಟಿಯನ್ನು ಒಳಗೊಂಡಿರಲ್ಲ. ಈ ವೋಚರ್ 90 ದಿನಗಳ ವ್ಯಾಲಿಡಿಟಿಯ 15GB ಡೇಟಾ ಪ್ಯಾಕ್ ಹೊಂದಿರುತ್ತದೆ. ಇದೇ ವ್ಯಾಲಿಡಿಟಿಗೆ JioHotstar Mobile/TV subscription ಸಿಗಲಿದೆ.
ಇದನ್ನೂ ಓದಿ: ಪಾಕಿಸ್ತಾನದ ಬೆನ್ನುಮೂಳೆ ಮುರಿದ ಬಲೂಚಿಸ್ತಾನ; 35 ಸಾವಿರ ಕೋಟಿ ಸಾಲ ಕೊಟ್ಟ ಅಮೆರಿಕಾಗೆ ಶಾಕ್
Reliance Jio ₹100 Data Plan
ಇದು ಸಹ ಡೇಟಾ ವೋಚರ್ ಪ್ಲಾನ್ ಆಗಿದ್ದು, 90 ದಿನಗಳ ವ್ಯಾಲಿಡಿಯ 5GB ಡೇಟಾ ಪ್ಯಾಕ್ ಹೊಂದಿರುತ್ತದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಗ್ರಾಹಕರಿಗೆ ಒಂದು ತಿಂಗಳ ಅವಧಿಗೆ JioHotstar Mobile/TV subscription ಸಿಗಲಿದೆ. ಬೇಸ್ ಪ್ಲಾನ್ ಆಕ್ಟಿವ್ ಇದ್ರೆ ಮಾತ್ರ ಈ ಪ್ಯಾಕ್ ಆಕ್ಟಿವೇಟ್ ಆಗುತ್ತದೆ.
ಇದನ್ನೂ ಓದಿ: ಏರ್‌ಟೆಲ್‌ನಿಂದ ವರ್ಷಪೂರ್ತಿ ನೆಮ್ಮದಿ ನೀಡುವ ಎರಡು ಹೊಸ ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

