Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಯಂತೆ, 59 ವರ್ಷಗಳ ಸುದೀರ್ಘ ಸಶಸ್ತ್ರ ಹೋರಾಟದ ನಂತರ ಭಾರತ ಈಗ ಅಧಿಕೃತವಾಗಿ 'ನಕ್ಸಲ್ ಮುಕ್ತ' ರಾಷ್ಟ್ರವಾಗಿದೆ. ಸೇನಾ ಕಾರ್ಯಾಚರಣೆಗಳು ಮತ್ತು ಶರಣಾದ ನಕ್ಸಲರಿಗೆ ಮುಖ್ಯವಾಹಿನಿಯ ಬದುಕು ನೀಡುವ ಮೂಲಕ ಮೋದಿ ಸರ್ಕಾರ ಈ ಐತಿಹಾಸಿಕ ಸಾಧನೆ ಮಾಡಿದೆ.

Share this Video
  • FB
  • Linkdin
  • Whatsapp

ನವದೆಹಲಿ (ಏ.2): ಭಾರತಕ್ಕೆ ದಶಕಗಳ ಕಾಲ ಆಂತರಿಕ ಭದ್ರತೆಯ ಸವಾಲಾಗಿ ಕಾಡುತ್ತಿದ್ದ ನಕ್ಸಲ್ ವಾದಕ್ಕೆ ಕೊನೆಗೂ ಶಾಶ್ವತ ಅಂತ್ಯ ಸಿಕ್ಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದೆ ನೀಡಿದ್ದ ಗಡುವಿನಂತೆ, ದೇಶ ಈಗ ಅಧಿಕೃತವಾಗಿ 'ನಕ್ಸಲ್ ಮುಕ್ತ' ರಾಷ್ಟ್ರವಾಗಿದೆ. 59 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದ ಈ ಸಶಸ್ತ್ರ ಹೋರಾಟವನ್ನು ಮೋದಿ ಸರ್ಕಾರ ತನ್ನ ಇಚ್ಛಾಶಕ್ತಿಯ ಮೂಲಕ ಬುಡಮೇಲು ಮಾಡಿದೆ.

59 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!

ಮೋದಿ-ಶಾ ಜೋಡಿಯ ಆಪರೇಷನ್: ಕೇವಲ ಸೇನಾ ಕಾರ್ಯಾಚರಣೆ ಅಷ್ಟೇ ಅಲ್ಲದೆ, ಶರಣಾದ ನಕ್ಸಲರಿಗೆ ಮುಖ್ಯವಾಹಿನಿಯ ಬದುಕು ನೀಡುವ ಮೂಲಕ ಸರ್ಕಾರ ಈ ಸಾಧನೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ನಡೆದ ಸಮಗ್ರ ಕಾರ್ಯಾಚರಣೆಯ ಫಲವಾಗಿ, 2,218 ನಕ್ಸಲರ ಬಂಧನ ಮತ್ತು 4,839 ಮಂದಿ ಶರಣಾಗತಿಯಾಗಿದೆ. ಕೆಂಪು ಕಾರಿಡಾರ್ ಎಂದು ಗುರುತಿಸಲ್ಪಟ್ಟಿದ್ದ ಪ್ರದೇಶಗಳು ಇಂದು ನಕ್ಸಲ್ ಮುಕ್ತವಾಗಿವೆ.

ಕೆಂಪು ಸಾಮ್ರಾಜ್ಯದ ಪತನ: ಅಮಿತ್ ಶಾ ಅವರ 'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಮೂಲಕ ನಕ್ಸಲರ ನೆಲೆಗಳನ್ನು ಸಂಪೂರ್ಣ ನಾಶಪಡಿಸಲಾಗಿದೆ. ಯಾವುದೇ ಮ್ಯಾಜಿಕ್ ಇಲ್ಲದೆ, ದೀರ್ಘಕಾಲದ ಯೋಜಿತ ತಂತ್ರಗಾರಿಕೆಯಿಂದ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ. ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ ಈಗ ಶೂನ್ಯಕ್ಕೆ ತಲುಪಿದ್ದು, ದೇಶದ ಆಂತರಿಕ ಭದ್ರತೆಯಲ್ಲಿ ಇದು ಹೊಸ ಮೈಲಿಗಲ್ಲಾಗಿದೆ.

Related Video