ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!

ಕಳೆದೊಂದು ದಶಕದಲ್ಲಿ ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಕ್ರಿಯೇಟ್ ಮಾಡಿದ ಇಂಪ್ಯಾಕ್ಟ್ ತರ ಬೇರೆ ಯಾರೂ ಮಾಡಿಲ್ಲ ಅನ್ಸುತ್ತೆ.. ಈಗ ಅವರು ಆರಿಸಿಕೊಂಡಿರೋ ದಾರಿಯೂ ವಿಭಿನ್ನ ಲೆಕ್ಕಾಚಾರಕ್ಕೆ ಕಾರಣವಾಗಿದೆ

Share this Video
  • FB
  • Linkdin
  • Whatsapp

ಇಡೀ ದೇಶದಲ್ಲೇ ಸಂಚಲನ ಮೂಡಿಸಿದ ಸಂಗತಿ ಇದು. ದಕ್ಷಿಣ ರಾಜ್ಯಗಳ ರಾಜಕಾರಣದಲ್ಲಂತೂ ಇದು ಸ್ಫೋಟಕ ಸುದ್ದಿ. ಅದೇ, ಅಣ್ಣಾಮಲೈ ರಾಜೀನಾಮೆ. ನೆಲೆಯೇ ಇಲ್ಲದ ಪಕ್ಷ ಸೇರ್ಕೊಂಡು, ಅದಕ್ಕೊಂದು ಬುನಾದಿ ಹಾಕಿಕೊಟ್ಟ ಅಣ್ಣಾಮಲೈ, ಅದೇ ರಾಜಕೀಯ ಪಕ್ಷದಿಂದ ಹೊರಬಂದಿದ್ದಾರೆ. ಈ ಒಂದು ಸಂಗತಿ, ಒಂದಷ್ಟು ಅನುಮಾಗಳಿಗೆ ಜನ್ಮ ನೀಡಿದೆ. ಆ ಅನುಮಾನಗಳೇನು? ಅದಕ್ಕೆ ಉತ್ತರವೇನು? ಈ ಸ್ಟೋರಿ ನೋಡಿ.

ಬಿಜೆಪಿ ಯಾರಿಂದ ತಮಿಳುನಾಡಲ್ಲಿ ಗೆಲುವಿಕ ಕಡೆ ಮುಖಮಾಡಿತ್ತೋ, ಆ ನಾಯಕರನ್ನೇ ಹೊರಗಿಟ್ಟಿದೆ. ಅಫ್ ಕೋರ್ಸ್, ಬಿಟ್ಟು ಹೋಗಿದ್ದು ಅಣ್ಣಾಮಲೈ ಅವರೇ ಆದ್ರೂ, ಹೋಗೋಕೆ ಬಾಗಿಲು ತೆಗೆದಿಟ್ಟಿದ್ದು ಮಾತ್ರ ಬಿಜೆಪಿನೇ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಒಂದ್ಕಡೆ ವೋಟ್ ಶೇರ್ ಜಾಸ್ತಿ ಆಗ್ತಿದ್ರೂ, ಇನ್ನೊಂದ್ಕಡೆ ದಿಲ್ಲಿಯ ಬಿಜೆಪಿ ಹೈಕಮಾಂಡ್ ಜೊತೆ ಅಣ್ಣಾಮಲೈ ಅವರ ರಿಲೇಶನ್‌ಶಿಪ್ ಒಳಗೊಳಗೇ ಒಡೆದ ಹಾಗೆ ಕಾಣ್ತಾ ಇತ್ತು. ಅದಕ್ಕೆ ಕಾರಣ ಏನು? 

Related Video