MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
Teacher's Day Wishes 2026
ISRO GSLV F17 Launch
Bengaluru Suburban Rail
Bike Taxi Approval
Karnataka KPSC Scam
Bengaluru Airport Flyover
Mysuru Dasara 2026 Scehdule
Rohit Sharma Retirement Rumors
Gowri Ganesha Festival
Yeshwantpur Mangaluru Vande Bharat
India Iran Relationship
  • Home
  • News
  • World News
  • ಮೊದಲು ಧ್ವನಿ ಕೇಳಿತು, ನಂತರ ಜೀವ ಸಿಕ್ಕಿತು! ನೇಪಾಳ ಪ್ರವಾಹದಲ್ಲಿ 9 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ!

ಮೊದಲು ಧ್ವನಿ ಕೇಳಿತು, ನಂತರ ಜೀವ ಸಿಕ್ಕಿತು! ನೇಪಾಳ ಪ್ರವಾಹದಲ್ಲಿ 9 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ!

ನೇಪಾಳ: ನೇಪಾಳದಲ್ಲಿ ಕಂಡುಕೇಳರಿಯದ ಭೀಕರ ಪ್ರವಾಹ ಸಂಭವಿಸಿತು. ಪ್ರವಾಹದಲ್ಲಿ 9 ದಿನಗಳ ಕಾಲ ಕತ್ತಲ ಸುರಂಗದಲ್ಲಿ ಕಳೆದಿದ್ದ ಇಬ್ಬರು ಕಾರ್ಮಿಕರನ್ನ ಜೀವಂತವಾಗಿ ರಕ್ಷಿಸಿ ರಕ್ಷಣಾ ಸಿಬ್ಬಂದಿ ಹೊರತಂದಿದ್ದಾರೆ.

3 Min read
Author : Ravi Janekal
Published : Sep 04 2026, 01:34 PM IST
Share this Photo Gallery
  • FB
  • TW
  • Linkdin
  • Whatsapp
13
ನೇಪಾಳ ಪ್ರವಾಹ: 9 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದವರ ರಕ್ಷಣೆ!
Image Credit : Asianet News

ನೇಪಾಳ ಪ್ರವಾಹ: 9 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದವರ ರಕ್ಷಣೆ!

ನೇಪಾಳ: ನೇಪಾಳದಲ್ಲಿ ಕಂಡುಕೇಳರಿಯದ ಭೀಕರ ಪ್ರವಾಹ ಸಂಭವಿಸಿತು. ಪ್ರವಾಹ ಬಳಿಕ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರು ಬದುಕಿರಬಹುದೆಂಬ ನಿರೀಕ್ಶೆಯೇ ಯಾರಿಗೂ ಇರಲಿ, ಪ್ರವಾಹ ಅಷ್ಟು ಭೀಕರವಾಗಿತ್ತು. ಪವಾಡವೊಂಡು ನಡೆದಿದೆ. 9 ದಿನಗಳ ಕಾಲ ಕತ್ತಲ ಸುರಂಗದಲ್ಲಿ ಕಳೆದಿದ್ದ ಇಬ್ಬರು ಕಾರ್ಮಿಕರನ್ನ ಜೀವಂತವಾಗಿ ರಕ್ಷಿಸಿ ರಕ್ಷಣಾ ಸಿಬ್ಬಂದಿ ಹೊರತಂದಿದ್ದಾರೆ.

9 ದಿನಗಳ ಬಳಿಕ ಮೊದಲ ಯಶಸ್ಸು

ನೇಪಾಳದ ರಾಸುವಾ ಪ್ರದೇಶದಲ್ಲಿ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ತ್ರಿಶೂಲಿ-3 'ಎ' ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಪ್ರವಾಹದ ನೀರು, ಕೆಸರು ನುಗ್ಗಿದ್ದವು. ಹಲವು ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು. ಅವರು ಜೀವಂತಾಗಿದ್ದಾರೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೂ ಸಣ್ಣ ಭರವಸೆಯೊಂದಿಗೆ ಕಾರ್ಯಚರಣೆ ನಡೆದಿತ್ತು. ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ ನೇಪಾಳ ಸೇನೆಯ ಸಿಬ್ಬಂದಿ ಒಂದು ವಾರಕ್ಕೂ ಹೆಚ್ಚು ಕಾಲ ನಿರಂತರವಾಗಿ ಕಾರ್ಯಾಚರಣೆ ನಡೆಸಿದರು. ದಿನಗಳು ಕಳೆದಂತೆ ಕಾರ್ಮಿಕರು ಬದುಕಿರುವ ಸಾಧ್ಯತೆಯ ಬಗ್ಗೆ ಆತಂಕ ಹೆಚ್ಚಾಗಿತ್ತು. ಆದರೆ 9ನೇ ದಿನದ ಕಾರ್ಯಾಚರಣೆಯಲ್ಲಿ ಪವಾಡವೇ ನಡೆದಿದೆ. ಸುರಂಗದೊಳಗೆ ಆ ಧ್ವನಿ ಕೇಳಿ ರಕ್ಷಣಾ ಸಿಬ್ಬಂದಿಗೆ ಮಹತ್ವದ ಯಶಸ್ಸು ಸಿಕ್ಕಿದಂತಾಯ್ತು. ತಡಮಾಡದೇ. ಸುರಂಗದೊಳಗಿಂದ ಮೊದಲ ಕಾರ್ಮಿಕನನ್ನು ಹೆಗಲ ಮೇಲೆ ಹೊತ್ತು ಹೊರಗೆ ಕರೆತರಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಮೊದಲು ಹೊರಬಂದ ಸಂಜಯ್ ಶಾ ಯಾರು?
Image Credit : Asianet News

ಮೊದಲು ಹೊರಬಂದ ಸಂಜಯ್ ಶಾ ಯಾರು?

ಸುರಂಗದಲ್ಲಿ ಬರೋಬ್ಬರಿ ಒಂಭತ್ತು ದಿನಗಳ ಕಾಲ ಸಿಲುಕಿಕೊಂಡಿದ್ದ ಕಾರ್ಮಿಕರಲ್ಲಿ ಮೊದಲಿಗೆ ರಕ್ಷಿಸಿದ್ದು ಸಂಜಯ್ ಶಾ. 30 ವರ್ಷದ ಸಂಜಯ್ ಶಾ. ಅವರು ನೇಪಾಳ ವಿದ್ಯುತ್ ಪ್ರಾಧಿಕಾರದಲ್ಲಿ ಮೆಕ್ಯಾನಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಜೀವಂತ ರಕ್ಷಿಸಿದ ಬಳಿಕ ಸಂಜಯ್ ಅವರನ್ನು ತಕ್ಷಣವೇ ತ್ರಿಶೂಲಿ ಸೇನಾ ಬ್ಯಾರಕ್‌ಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಅದಾದ ಬಳಿಕ 45 ವರ್ಷದ ಕಬೀರ್ ಮಹರ್ಜನ್ ಅವರನ್ನೂ ಸುರಂಗದಿಂದ ಸುರಕ್ಷಿತವಾಗಿ ಹೊರತರಲಾಯಿತು. ಅವರು ತ್ರಿಶೂಲಿ-3 'ಎ' ಜಲವಿದ್ಯುತ್ ಯೋಜನೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.

ಅಧಿಕಾರಿಗಳ ಪ್ರಕಾರ, ಇಬ್ಬರೂ ಸುರಂಗದ ಸುಮಾರು 170 ಮೀಟರ್ ಒಳಗೆ ಸಿಲುಕಿಕೊಂಡಿದ್ದರು ಎಂಬುದೇ ಅದೆಷ್ಟು ಭಯಾನಕ ಸೃಷ್ಟಿಯಾಗಿತ್ತು ಎಂಬುದು ಊಹಿಸಿ. ಭೀಕರ ಪ್ರವಾಹ, ಸುರಂಗದೊಳಗಿಂದ ಹೊರಬರಲಾಗದೆ ಮುಂದೇನು ಎಂಬ ಆತಂಕದ ನಡುವೆ ಒಂಭತ್ತು ದಿನಗಳ ಕಾಲ ಜೀವಂತವಾಗಿದ್ದರು.

ಈಗ ನನ್ನ ಹೃದಯ ಹಗುರವಾಗಿದೆ

ಸುರಂಗದೊಳಗೆ ಕೆಟ್ಟ ಅನುಭವ ನೆನೆದು ಕಾರ್ಮಿಕ ಕಬೀರ್ ಮಹರ್ಜನ್ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು ಕಬೀರ್ ಮಹರ್ಜನ್ ರಕ್ಷಿಸಲ್ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿತು. 'ನನಗೆ ತುಂಬಾ ಸಂತೋಷವಾಗಿದೆ. ನನ್ನ ಹೃದಯ ಹಗುರವಾಗಿದೆ' ಎಂದು ಕಬೀರ್ ಅವರ ಸಹೋದರ ಅಮೀರ್ ಮಹರ್ಜನ್ ಭಾವುಕರಾದರು. ಕಬೀರ್ ಅವರ ಪತ್ನಿ ಕೂಡ ಪತಿಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು, ಸುರಂಗದಿಂದ ಹೊರತೆಗೆದಾಗ ಅವರು ಪ್ರಜ್ಞೆಯಲ್ಲಿದ್ದರು. ಅವರನ್ನು ಕಠ್ಮಂಡುವಿನ ಛೌನಿ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಎಂದು ತಿಳಿಸಿದ್ದಾರೆ..

ಕೆಸರು ಮಣ್ಣಿನ ನಡುವೆ ಬದುಕುವ ಭರವಸೆ

ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಮನಕಲಕುವಂತಿದ್ದವು. ನೇಪಾಳ ಸೇನೆಯ ಸಿಬ್ಬಂದಿ ಸುರಂಗದಿಂದ ಹೊರಬರುವಾಗ ಕಾರ್ಮಿಕರು ಕೆಸರು ಮತ್ತು ಮಣ್ಣಿನಿಂದ ಸಂಪೂರ್ಣ ಮುಚ್ಚಿಕೊಂಡಿದ್ದರು. ಒಬ್ಬ ಕಾರ್ಮಿಕನನ್ನು ಸಿಬ್ಬಂದಿ ಹೆಗಲ ಮೇಲೆ ಹೊತ್ತು ತಂದರೆ, ಮತ್ತೊಬ್ಬರನ್ನು ಸ್ಟ್ರೆಚರ್‌ನಲ್ಲಿ ಹೊರಗೆ ತರಲಾಯಿತು. ಈ ದೃಶ್ಯಗಳು ಸುರಂಗದ ಆಳಕ್ಕೆ ರಕ್ಷಣಾ ತಂಡ ತಲುಪಿರುವುದನ್ನು ಮಾತ್ರವಲ್ಲ, ಅದರೊಳಗೆ ಸಿಲುಕಿದ್ದವರು ಇನ್ನೂ ಬದುಕಿರುವ ಸಾಧ್ಯತೆಯನ್ನೂ ಹೆಚ್ಚಿಸಿವೆ.

Related Articles

Related image1
ಭೀಕರ ಪ್ರವಾಹಕ್ಕೆ ಭಾರತ, ಚೀನಾ ಹೊಣೆ: ಪರಿಹಾರ ಕೋರಿದ ನೇಪಾಳ; 1000ರ ಗಡಿ ದಾಟಿದ ಸಾವಿನ ಸಂಖ್ಯೆ
Related image2
ನಿಜವಾಯ್ತು ಬಾಬ ವಂಗಾ ನುಡಿದ ನೇಪಾಳ ಪ್ರವಾಹ, ಸಾವು ನೋವಿನ ಭವಿಷ್ಯ, ಮುಂದೇನು ಕಾದಿದೆ?
33
ಇನ್ನು ಹಲವು ಕಾರ್ಮಿಕರು ಬದುಕಿರುವ ಸಾಧ್ಯತೆ?
Image Credit : Asianet News

ಇನ್ನು ಹಲವು ಕಾರ್ಮಿಕರು ಬದುಕಿರುವ ಸಾಧ್ಯತೆ?

ಸುರಂಗ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರೂ ಸಂಜಯ್ ಮತ್ತು ಕಬೀರ್ 9 ದಿನಗಳ ಕಾಲ ಬದುಕಿರುವುದು ರಕ್ಷಣಾ ತಂಡದಲ್ಲಿ ಹೊಸ ಭರವಸೆ ಮೂಡಿಸಿದೆ. ಸುರಂಗದೊಳಗೆ ಅಲ್ಲಲ್ಲಿ ಗಾಳಿಯ ಜಾಗಗಳು (Air Pockets) ಇದ್ದಿರಬಹುದು. ಅವುಗಳ ಕಾರಣದಿಂದ ಕಾರ್ಮಿಕರಿಗೆ ಇಷ್ಟು ದಿನ ಬದುಕಲು ಸಾಧ್ಯವಾಗಿರಬಹುದು ಎಂದು ರಕ್ಷಣಾ ತಂಡ ಅಂದಾಜಿಸಿದೆ. ಹೀಗಾಗಿ ಸುರಂಗದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಗಾಳಿಯ ಜಾಗಗಳಲ್ಲಿ ಮತ್ತಷ್ಟು ಕಾರ್ಮಿಕರು ಬದುಕಿರಬಹುದೆಂಬ ನಿರೀಕ್ಷೆ ಮೂಡಿದೆ.

ಅಂದು ನಡೆದಿದ್ದೇನು?

ಆಗಸ್ಟ್ 26ರಂದು ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ಕಣಿವೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು, ಕೆಸರು ಮತ್ತು ಅವಶೇಷಗಳು ನುಗ್ಗಿದ್ದವು. ಇದರಿಂದ ನದಿಯುದ್ದಕ್ಕೂ ಇದ್ದ ಹಲವು ಜಲವಿದ್ಯುತ್ ಯೋಜನೆಗಳು ತೀವ್ರವಾಗಿ ಹಾನಿಗೊಳಗಾದವು ಅಥವಾ ಸಂಪೂರ್ಣವಾಗಿ ನಾಶವಾದವು. ನೇಪಾಳ ಮತ್ತು ಚೀನಾ ನಿಯಂತ್ರಿತ ಟಿಬೆಟ್ ನಡುವಿನ ಗಡಿಯಲ್ಲಿರುವ ಹಿಮನದಿ ಕರಗುವಿಕೆಯಿಂದ ಉಂಟಾದ ಘಟನೆಯೇ ಈ ಭೀಕರ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ.

ಪ್ರವಾಹದ ಬಳಿಕ ಮಣ್ಣು ಮತ್ತು ಅವಶೇಷಗಳಿಂದ ಮುಚ್ಚಿಹೋಗಿರುವ ಜಲವಿದ್ಯುತ್ ಯೋಜನೆಗಳ ಸುರಂಗಗಳತ್ತ ರಕ್ಷಣಾ ತಂಡದ ಗಮನ ಕೇಂದ್ರೀಕೃತವಾಗಿದೆ. ವಿಶೇಷ ಉಪಕರಣಗಳ ನೆರವಿನಿಂದ ನೇಪಾಳ ಸೇನೆಯ ನೇತೃತ್ವದ ತಂಡಗಳು ಸುರಂಗದೊಳಗೆ ಸಿಲುಕಿರುವವರಿಗಾಗಿ ಹುಡುಕಾಟ ಮುಂದುವರಿಸಿವೆ. ಈವರೆಗೆ 270ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಮೊದಲು ಧ್ವನಿ ಕೇಳಿಸಿತು ನಂತರ ಸಿಕ್ಕಿತು ಜೀವ!

ಇಬ್ಬರು ಕಾರ್ಮಿಕರನ್ನು ರಕ್ಷಿಸುವ ಮುನ್ನವೇ ರಕ್ಷಣಾ ತಂಡಕ್ಕೆ ಮತ್ತೊಂದು ಮಹತ್ವದ ಸುಳಿವು ಸಿಕ್ಕಿತ್ತು. ಸುರಂಗದೊಳಗಿಂದ ಕೆಲವರ ಧ್ವನಿ ಕೇಳಿಸಿತ್ತು. ಸುರಂಗದೊಳಗೆ ಸಿಲುಕಿರುವವರೊಂದಿಗೆ ಸಂಪರ್ಕ ಸಾಧಿಸುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದರು. ಈ ಮಾಹಿತಿ ಹೊರಬಂದ ಬಳಿಕ ನೇಪಾಳ ಸೇನೆ ಮತ್ತು ಸಶಸ್ತ್ರ ಪೊಲೀಸ್ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿತು. 9ನೇ ದಿನದವರೆಗೆ ನಿರಾಸೆಯಲ್ಲಿದ್ದ ರಕ್ಷಣಾ ಕಾರ್ಯಾಚರಣೆ, ಇಬ್ಬರು ಕಾರ್ಮಿಕರು ಜೀವಂತವಾಗಿ ಹೊರಬಂದ ಬಳಿಕ ಭರವಸೆಯ ಕಥೆಯಾಗಿ ಬದಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ನೇಪಾಳ
ಪ್ರವಾಹ

Latest Videos
Recommended Stories
Recommended image1
ಸೌದಿ ಯುವಕರು ಪಾಕ್ ಸೇರಿದಂತೆ 4 ದೇಶದವರನ್ನು ಮದುವೆಯಾಗುವಂತಿಲ್ಲ, ಇದು ಕಠಿಣ ನಿಯಮ!
Recommended image2
"ನಾವೆಲ್ಲರೂ ಒಂದೇ ಕುಟುಂಬ..." ನೂರು ವರ್ಷಗಳಿಂದ ಉದ್ಯೋಗಿಗಳನ್ನು ವಜಾಗೊಳಿಸದ ವಿಶಿಷ್ಟ ಕಂಪನಿ ಇದು!
Recommended image3
ಮೀಸಲಾತಿಯನ್ನು ಬೆಂಬಲಿಸಿದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೇಟ್ಸ್​: ಆದ್ರೆ ಇಲ್ಲೊಂದಿದೆ ಸಕತ್​ ಟ್ವಿಸ್ಟ್​
Related Stories
Recommended image1
ಭೀಕರ ಪ್ರವಾಹಕ್ಕೆ ಭಾರತ, ಚೀನಾ ಹೊಣೆ: ಪರಿಹಾರ ಕೋರಿದ ನೇಪಾಳ; 1000ರ ಗಡಿ ದಾಟಿದ ಸಾವಿನ ಸಂಖ್ಯೆ
Recommended image2
ನಿಜವಾಯ್ತು ಬಾಬ ವಂಗಾ ನುಡಿದ ನೇಪಾಳ ಪ್ರವಾಹ, ಸಾವು ನೋವಿನ ಭವಿಷ್ಯ, ಮುಂದೇನು ಕಾದಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved