ಸೌದಿ ಯುವಕರು ಪಾಕ್ ಸೇರಿದಂತೆ 4 ದೇಶದವರನ್ನು ಮದುವೆಯಾಗುವಂತಿಲ್ಲ, ಇದು ಕಠಿಣ ನಿಯಮ!
ಸೌದಿ ಅರೇಬಿಯಾ ಸರ್ಕಾರವು ತನ್ನ ದೇಶದ ಯುವಕರು ಮದುವೆಯಾಗಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ, 4 ದೇಶಗಳ ಯುವತಿಯರನ್ನು ವಿವಾಹವಾಗುವುದನ್ನು ನಿಷೇಧಿಸಲಾಗಿದೆ. ಬೇರೆ ದೇಶದವರನ್ನು ಮದುವೆಯಾಗುವುದಾದರೆ, ಸರ್ಕಾರದ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಸೌದಿ ಅರೇಬಿಯಾ ಸರ್ಕಾರದ ಮದುವೆ ನಿಯಮಗಳು
ಪ್ರೀತಿಗೆ ಯಾವುದೇ ಗಡಿ ಅನ್ನೋದೇ ಇಲ್ಲ. ಇತ್ತೀಚೆಗೆ ಪ್ರವಾಸಕ್ಕೆ ತೆರಳಿದಾಗ ಭಾರತದ ಯುವಕನೋರ್ವ, ವಿದೇಶಿ ಮಹಿಳೆಯರನ್ನು ಪ್ರೀತಿಸಿ ಇಬ್ಬರು ಜೊತೆಯಾಗಿದ್ದರು. ಆದ್ರೆ ಸೌದಿ ಅರೇಬಿಯಾದ ಯುವಕರು ಯಾರನ್ನೂ ಬೇಕಾದ್ರೂ ಮದುವೆಯಾಗುವಂತಿಲ್ಲ. ಸೌದಿ ಅರೇಬಿಯಾ ಸರ್ಕಾರ ಮದುವೆ ಸಂಬಂಧ ಕೆಲವೊಂದು ಕಠಿಣ ನಿಯಮಗಳನ್ನು ಹಾಕಿದೆ. ಇಲ್ಲಿಯ ಯುವಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ.
ನಾಲ್ಕು ದೇಶಗಳ ಮೇಲೆ ನಿರ್ಬಂಧ
ಸೌದಿ ಅರೇಬಿಯಾ ಸರ್ಕಾರದ ನಿಯಮಗಳ ಪ್ರಕಾರ, ಇಲ್ಲಿಯ ಯುವಕರು ನಾಲ್ಕು ದೇಶದ ಯುವತಿಯರನ್ನು ಮದುವೆಯಾಗುವಂತಿಲ್ಲ. ಈ ನಿಯಮ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದು, ಇಲ್ಲಿಯ ಜನರು ಇದನ್ನು ಪಾಲನೆ ಮಾಡಿಕೊಂಡು ಬಂದಿದ್ದಾರೆ. ಸೌದಿ ಅರೇಬಿಯಾ ನಿಷೇಧಿಸಿದ ದೇಶಗಳ ಪೈಕಿ ಮೂರು ನಮ್ಮ ಭಾರತದ ಅಕ್ಕ-ಪಕ್ಕದಲ್ಲಿವೆ.
ಸೌದಿ ಅರೇಬಿಯಾ ನಿಷೇಧಿತ ದೇಶಗಳು
ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್ ಮತ್ತು ಚಾಡ್ ಸೇರಿವೆ. ಪಾಕಿಸ್ತಾನ, ಬಾಂಗ್ಲಾದೇಶ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಗಾಗಿದ್ರೆ ಸೌದಿ ಅರೇಬಿಯಾ ಇವುಗಳ ಮೇಲೆ ನಿಷೇಧ ಹಾಕಿದೆ. ಸೌದಿ ಅರೇಬಿಯಾದ ಯುವಕರು ವಿದೇಶಿ ಮಹಿಳೆಯರನ್ನು ಮದುವೆಯಾಗೋದನ್ನು ತಡೆಯುವುದೇ ಈ ನಿಯಮದ ಉದ್ದೇಶ. ಒಂದು ವೇಳೆ ಸೌದಿ ಯುವಕರು, ವಿದೇಶಿಯರನ್ನು ಮದುವೆಯಾಗಬೇಕಾದ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಸರ್ಕಾರಕ್ಕೆ ದಾಖಲೆ ಸಲ್ಲಿಕೆ ಕಡ್ಡಾಯ
ವಿದೇಶಿ ಯುವತಿಯರನ್ನು ಮದುವೆಯಾಗುವ ಮುಂದೆ ಯುವಕರು ಸರ್ಕಾರಕ್ಕೆ ಸಂಬಂಧಿಸಿದ ಅಥವಾ ಸೂಚಿಸಿರುವ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಅನುಮತಿ ಸರ್ಕಾರದ ಅಧಿಕೃತ ಇಲಾಖೆಗಳಿಂದಲೇ ಪಡೆದುಕೊಳ್ಳಬೇಕಾಗುತ್ತದೆ. ನಿಯಮಗಳ ಉಲ್ಲಂಘನೆಗೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಎಲ್ಲವನ್ನೂ ಪರಿಶೀಲಿಸಿ ಅನುಮತಿ ನೀಡುವ ಸರ್ಕಾರ
ಈಗಾಗಲೇ ಮದುವೆಯಾಗಿರುವ ಅಥವಾ ವಿಚ್ಚೇದಿತ ಯುವಕರು ವಿದೇಶಿಯರನ್ನು ಮದುವೆಯಾಗುತ್ತಿದ್ರೆ ಇನ್ನೂ ಅಧಿಕ ನಿಯಮ ಪಾಲಿಸಬೇಕಾಗುತ್ತದೆ. ಮದುವೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ ಆರು ತಿಂಗಳು ಕಾಯಬೇಕಾಗುತ್ತದೆ. ಆರು ತಿಂಗಳದ ನಂತ್ರವೇ ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ಅನುಮತಿಯನ್ನು ನೀಡುತ್ತದೆ. ಈ ನಿಯಮದ ಮೂಲಕ ತನ್ನ ದೇಶದೊಳಗೆ ಬರೋ ಪ್ರತಿಯೊಬ್ಬರ ಮಾಹಿತಿಯನ್ನು ಸೌದಿ ಅರೇಬಿಯಾ ಸೂಕ್ಷ್ಮವಾಗಿ ಗಮನಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

