ಗರ್ಭ ಧರಿಸಲು ಸಮಸ್ಯೆ ಆಗುತ್ತಿದೆಯೇ? ಹಾಗಿದ್ರೆ ಇದಕ್ಕೆ ಪಿಸಿಒಡಿ ಕಾರಣ !
ಗರ್ಭಧಾರಣೆಯ ವಿಳಂಬವು ಪಿಸಿಒಡಿಯ (PCOD) ಸಮಸ್ಯೆಯಿಂದಾಗಿಯೂ ಇರಬಹುದು. ನೀವು ಸರಿಯಾದ ಸಮಯದಲ್ಲಿ ಅದಕ್ಕೆ ಚಿಕಿತ್ಸೆ ಪಡೆದರೆ, ನೀವು ಬೇಗನೆ ಗರ್ಭಧರಿಸಬಹುದು. ಋತುಚಕ್ರದ ಅವಧಿ ಮುಗಿದ ನಂತರವೂ ಬರುವ ಕಲೆಗಳು ಸಹ ಪಿಸಿಒಡಿಯ ಲಕ್ಷಣವಾಗಿದೆ. ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಬಹಳಷ್ಟಿದೆ. ಅವುಗಳ ಬಗ್ಗೆ ತಿಳಿಯಿರಿ.
ಪಿಸಿಒಡಿ(PCOD) ಎಂಬುದು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದು ಋತುಚಕ್ರದಿಂದ ಗರ್ಭಧಾರಣೆಯವರೆಗೆ ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಗಳು ಉಂಟಾದರೆ, ಮುಟ್ಟಿನ ಸಮಯದಲ್ಲಿ ಕಡಿಮೆ ರಕ್ತಸ್ರಾವ, ಹೆಚ್ಚಾಗುವುದು, ಅಥವಾ ಋತುಚಕ್ರದ ನಂತರವೂ ಹಲವಾರು ದಿನಗಳವರೆಗೆ ಬರುವ ಕಲೆಗಳಂತಹ ಸಮಸ್ಯೆಗಳು ಇರಬಹುದು.
ವೈದ್ಯಕೀಯ ಪರಿಭಾಷೆಯಲ್ಲಿ, ಪಿಸಿಓಡಿ ಅಂದರೆ ಪಾಲಿಸಿಸ್ಟಿಕ್ ಓವರಿನ್ ಡಿಸೀಸ್, ಪಿಸಿಒ ಅಂದರೆ ಪಾಲಿಸಿಸ್ಟಿಕ್ ಓವರಿನ್ ಸಿಂಡ್ರೋಮ್ (Polysystic ovarian Syndrome)ಎಂದೂ ಕರೆಯಲಾಗುತ್ತದೆ. ಆದರೆ ಹೆಚ್ಚಿನ ಪರಿಭಾಷೆಯಲ್ಲಿ, ಪಿಸಿಒಡಿಯನ್ನು ಮಾತ್ರ ಬಳಸಲಾಗುತ್ತದೆ. ಪಿಸಿಒಡಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಾರ್ಗಗಳು ಇಲ್ಲಿವೆ...
ಪಿಸಿಒಡಿ ಬಗ್ಗೆ ನೀವು ನಿರ್ಲಕ್ಷ ಮಾಡದೇ ಇರುವುದು ಉತ್ತಮ. ಇದರ ಬಗ್ಗೆ ಗಮನ ಹರಿಸದಿದ್ದರೆ ಗರ್ಭಧಾರಣೆಗೆ(Pregnancy) ಸಮಸ್ಯೆ ಉಂಟಾಗಬಹುದು. ಇದರಿಂದ ಗರ್ಭಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
hair fall
ಪಿಸಿಒಡಿ ನಿಮ್ಮ ನೋಟದ ಮೇಲೂ ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆ(Hair fall), ಚರ್ಮದ ಸಮಸ್ಯೆಗಳು ಮತ್ತು ಕೊಬ್ಬಿನ ಬೆಳವಣಿಗೆಯಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ಶಾರೀರಿಕವಾಗಿ ನೀವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಹಾರ್ಮೋನುಗಳು(Harmone) ಯಾವಾಗಲೂ ಏರಿಳಿತಗೊಳ್ಳಬಹುದು, ಹಾರ್ಮೋನ್ ಸಮತೋಲನದಲ್ಲಿ ಇಲ್ಲದೇ ಇದ್ದರೆ ಅದರಿಂದ ಹಲವು ಸಮಸ್ಯೆಗಳು ಕಾಣುತ್ತವೆ. ಅವುಗಳಲ್ಲಿ ಮುಖ್ಯವಾದವು ಎಂದರೆ ಇದು ನಿದ್ರೆ, ಹಸಿವು ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯದ ಸಮಸ್ಯೆ ಹೆಚ್ಚುತ್ತದೆ.
ನೀವು ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದಿರಿ ಎಂದಾದರೇ ನಿಮಗೆ ರಕ್ತನಾಳಗಳ ಸಮಸ್ಯೆ ಇರಬಹುದು ಅಥವಾ ಹೃದಯ ಸಂಬಂಧಿ ಕಾಯಿಲೆಗಳು(Heart problems) ಕಾಡುವ ಸಾಧ್ಯತೆ ಹೆಚ್ಚಲಾಗಿರುತ್ತದೆ. ಅಲ್ಲದೆ ಆಯಾಸ ಮತ್ತು ಉಸಿರಾಟದ ತೊಂದರೆಗಳನ್ನೂ ಹೊಂದುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಪಿಸಿಒಡಿ ಏಕೆ ಸಂಭವಿಸುತ್ತದೆ?
ಪಿಸಿಒಡಿ ಅಥವಾ ಪಿಸಿಒಎಸ್(PCOS) ಸಮಸ್ಯೆ ಕಾಡಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಮನೆಯಲ್ಲಿ ಯಾರಿಗಾದರೂ ಈ ಸಮಸ್ಯೆ ಇರೋದು. ಮನೆಯಲ್ಲಿ ತಾಯಿ ಅಥವಾ ಅಕ್ಕನಿಗೆ ಈ ಸಮಸ್ಯೆ ಇರುವ ಮಹಿಳೆಯರಿಗೆ ಈ ರೋಗ ಬರುವ ಸಾಧ್ಯತೆ ಹೆಚ್ಚು.
ಆಂಡ್ರೋಜೆನ್(Androgen)ಹಾರ್ಮೋನುಗಳ ಅತಿಯಾದ ಹೆಚ್ಚಳವು ಪಿಸಿಒಡಿಯ ಲಕ್ಷಣವಾಗಿರಬಹುದು. ಇದು ಪುರುಷರ ಹಾರ್ಮೋನ್ ಆಗಿದ್ದು, ಇದು ಮಹಿಳೆಯರ ದೇಹದಲ್ಲಿ ಕಡಿಮೆ ಮತ್ತು ಪುರುಷರ ದೇಹದಲ್ಲಿ ಹೆಚ್ಚು ರೂಪುಗೊಳ್ಳುತ್ತದೆ. ಮಹಿಳೆಯರ ದೇಹದಲ್ಲಿ ಇದು ಹೆಚ್ಚಾದರೆ ಸಮಸ್ಯೆಗಳು ಸಹ ಹೆಚ್ಚುತ್ತದೆ.
ಅಂಡಾಶಯದಲ್ಲಿ(Ovary) ಅಂದರೆ ಗರ್ಭದಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ಉಂಡೆಗಳು ರೂಪುಗೊಳ್ಳಬಹುದು. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದುದರಿಂದ ಈ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
ಪಿಸಿಒಡಿ ಏಕೆ ಸಂಭವಿಸುತ್ತದೆ?
ಪಿಸಿಒಡಿ ಅಥವಾ ಪಿಸಿಒಎಸ್ ಸಮಸ್ಯೆ ಕಾಡಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಮನೆಯಲ್ಲಿ ಯಾರಿಗಾದರೂ ಈ ಸಮಸ್ಯೆ ಇರೋದು. ಮನೆಯಲ್ಲಿ ತಾಯಿ ಅಥವಾ ಅಕ್ಕನಿಗೆ ಈ ಸಮಸ್ಯೆ ಇರುವ ಮಹಿಳೆಯರಿಗೆ(Women) ಈ ರೋಗ ಬರುವ ಸಾಧ್ಯತೆ ಹೆಚ್ಚು.
ಪಿಸಿಒಡಿಯ ಸಮಸ್ಯೆಯು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತದೆ. ಹಾರ್ಮೋನುಗಳ ಏರಿಳಿತಗಳು ಅನೇಕ ವಿಭಿನ್ನ ಕಾರಣಗಳಿಂದ ಉಂಟಾಗಬಹುದು. ಆದ್ದರಿಂದ, ಸರಿಯಾದ ಆಹಾರದ ಕೊರತೆ. ನಿಗದಿತ ಮಲಗುವ ಸಮಯ ಮತ್ತು ಎಚ್ಚರದ ಸಮಯವನ್ನು ಹೊಂದಿಲ್ಲದಿರುವುದು, ಅತಿಯಾದ ಆಲ್ಕೋಹಾಲ್(Alcohol) ಸೇವನೆ, ತಪ್ಪು ಔಷಧಿಗಳ ದೀರ್ಘಕಾಲೀನ ಸೇವನೆ, ಇತ್ಯಾದಿ.
ವೈದ್ಯಕೀಯ ಚಿಕಿತ್ಸೆ(Treatment)
ಸರಿಯಾದ ಚಿಕಿತ್ಸೆಯಿಂದ ಪಿಸಿಒಡಿಯ ಸಮಸ್ಯೆಯನ್ನು ನಿಯಂತ್ರಿಸಬಹುದು. ಚಿಕಿತ್ಸೆಯ ನಂತರ, ಗರ್ಭಧರಿಸುವಲ್ಲಿ ಯಾವುದೇ ಸಮಸ್ಯೆಯಿಲ್ಲ ಮತ್ತು ಅದೇ ಸಮಯದಲ್ಲಿ, ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಸಂಪೂರ್ಣವಾಗಿ ಗುಣಪಡಿಸಲಾಗುತ್ತದೆ. ಆದುದರಿಂದ ಈ ಬಗ್ಗೆ ಹೆಚ್ಚಿನ ಭಯ ಬೇಕಾಗಿಲ್ಲ.